For Quick Alerts
  ALLOW NOTIFICATIONS  
  For Daily Alerts

  'ರಾಧೆ-ಶ್ಯಾಮ್' ಸಿನಿಮಾ ಸೆಟ್‌ ಖರ್ಚಾಗಿದ್ದು ಎಷ್ಟು ಕೋಟಿ?

  |

  ಪ್ರಭಾಸ್, ಪೂಜಾ ಹೆಗ್ಡೆ ನಟನೆಯ 'ರಾಧೆ-ಶ್ಯಾಮ್' ಸಿನಿಮಾ ತೆಲುಗಿನ ಭಾರಿ ಬಜೆಟ್ ಸಿನಿಮಾಗಳಲ್ಲಿ ಒಂದು. ಬಹುತೇಕ ವಿದೇಶದಲ್ಲಿಯೇ ಚಿತ್ರೀಕರಣ ಆಗಿರುವ ಈ ಸಿನಿಮಾಕ್ಕೆ ಹಲವು ದುಬಾರಿ ಸೆಟ್‌ಗಳನ್ನೂ ಸಹ ಹಾಕಲಾಗಿದೆ.

  'ರಾಧೆ-ಶ್ಯಾಮ್' ಸಿನಿಮಾ ಯೂರೋಪ್‌ನಲ್ಲಿ 1960-70 ರ ಸಮಯದಲ್ಲಿ ನಡೆವ ಕತೆಯನ್ನು ಹೊಂದಿದೆ. ಆ ಕಾಲದ ಸನ್ನಿವೇಶಗಳನ್ನು, ಸ್ಥಳಗಳನ್ನು ಮರುಸೃಷ್ಟಿಸಲು ಕೋಟ್ಯಂತರ ಹಣ ಖರ್ಚು ಮಾಡಿ ಸೆಟ್‌ಗಳನ್ನು ಹಾಕಲಾಗಿದೆ.

  ಸಿನಿಮಾ ಚಿತ್ರೀಕರಣಕ್ಕೆಂದು ಒಟ್ಟು 26 ಸೆಟ್‌ಗಳನ್ನು ಈವರೆಗೆ ಹಾಕಲಾಗಿದ್ದು ಈ 26 ಸೆಟ್‌ಗಳ ನಿರ್ಮಾಣಕ್ಕೆ ಖರ್ಚು ಮಾಡಿರುವುದು ಬರೋಬ್ಬರಿ 106 ಕೋಟಿ!

  ಸೆಟ್‌ಗಳು ಮಾತ್ರವೇ ಅಲ್ಲದೆ ವಿದೇಶದಲ್ಲಿ ಹಲವು ಕಡೆ ಹೊರಾಂಗಣ ಚಿತ್ರೀಕರಣ ಮಾಡಲಾಗಿದೆ. ಕೊರೊನಾ ಕಾರಣದಿಂದ ಚಿತ್ರತಂಡವು ನಿರೀಕ್ಷಿಸಿದಷ್ಟು ಸಮಯ ಹೊರದೇಶಗಳಲ್ಲಿ ಚಿತ್ರೀಕರಣ ಮಾಡಲಾಗಿಲ್ಲ. ಹಾಗಾಗಿಯೇ ಹೈದರಾಬಾದ್‌ನಲ್ಲಿಯೇ ಸೆಟ್ ನಿರ್ಮಿಸಿ ಚಿತ್ರೀಕರಣ ಮಾಡಲಾಗಿದೆ.

  'ರಾಧೆ-ಶ್ಯಾಮ್' ಸಿನಿಮಾದ ಇನ್ನು ಕೆಲವೇ ದೃಶ್ಯಗಳ ಚಿತ್ರೀಕರಣ ಬಾಕಿ ಇದ್ದು, ದೃಶ್ಯಕ್ಕೆ ಬೇಕಾಗಿರುವ ಕಲಾವಿದರು, ವಿದೇಶಿ ಕಲಾವಿದರು ಹೈದರಾಬಾದ್‌ಗೆ ಬರಲು ಸಾಧ್ಯವಾದ ಕೂಡಲೇ ಚಿತ್ರೀಕರಣ ಪ್ರಾರಂಭಿಸಿ ಅಷ್ಟೇ ಶೀಘ್ರವಾಗಿ ಮುಗಿಸಲಾಗುತ್ತದೆ.

  ಜುಲೈ 30 ರಂದು 'ರಾಧೆ-ಶ್ಯಾಮ್' ಸಿನಿಮಾ ಬಿಡುಗಡೆ ಮಾಡಲಾಗುತ್ತದೆ ಎಂದು ನಿರ್ಮಾಪಕರು ಈಗಾಗಲೇ ಘೋಷಿಸಿದ್ದಾರೆ. ಆದರೆ ಸಿನಿಮಾದ ಬಿಡುಗಡೆ ಇನ್ನಷ್ಟು ಮುಂದಕ್ಕೆ ಹೋಗುವ ಸಾಧ್ಯತೆ ಸಹ ಇದೆ.

  'ರಾಧೆ-ಶ್ಯಾಮ್' ಸಿನಿಮಾವನ್ನು ರಾಧಾ ಕೃಷ್ಣ ಕುಮಾರ್ ನಿರ್ದೇಶನ ಮಾಡಿದ್ದಾರೆ. ಸಿನಿಮಾ ನಿರ್ಮಾಣ ಮಾಡಿರುವುದು ಟಿ-ಸೀರೀಸ್‌ನ ಭೂಷಣ್ ಕುಮಾರ್, ವಂಶಿ, ಪ್ರಮೋದ್ ಮತ್ತು ಪ್ರಸಾದ್. ಸಿನಿಮಾವು ತೆಲುಗು, ಕನ್ನಡ, ಮಲಯಾಳಂ, ತಮಿಳು, ಹಿಂದಿ ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.

  ಇಂದಿರಾಗಾಂಧಿ ಕುರಿತ ಚಿತ್ರವನ್ನು ನನ್ನಷ್ಟು ಯಾರೂ ಚೆನ್ನಾಗಿ ಡೈರೆಕ್ಟ್ ಮಾಡಲ್ಲ | Filmibeat Kannada

  'ರಾಧೆ-ಶ್ಯಾಮ್' ಬಳಿಕ ಪ್ರಭಾಸ್ ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ರಾಮಾಯಣ ಕತೆ ಆಧರಿತ 'ಆದಿಪುರುಷ್' ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ.

  English summary
  Prabhas starrer 'Radhe-Shyam' movie producer spent 106 crore rs for 26 sets. Movie will release on July 30.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X