ಬಿಡುಗಡೆಯಾಯ್ತು ಪ್ರೀತಿತುಂಬಿದ 'ರಾಧೆ-ಶ್ಯಾಮ್' ಟೀಸರ್: ಸಿನಿಮಾ ಬಿಡುಗಡೆ ದಿನಾಂಕವೂ ಪ್ರಕಟ
ಪ್ರಭಾಸ್-ಪೂಜಾ ಹೆಗ್ಡೆ ನಟನೆಯ 'ರಾಧೆ-ಶ್ಯಾಮ್' ಸಿನಿಮಾದ ಟೀಸರ್ ಪ್ರೇಮಿಗಳ ದಿನದಂದು ಬಿಡುಗಡೆ ಮಾಡಲಾಗಿದೆ. ಪ್ರೇಮಮಯ ಸಿನಿಮಾದ ಟೀಸರ್ ಅನ್ನು ಬಿಡುಗಡೆ ಗೊಳಿಸಲು ಇದಕ್ಕಿಂತಲೂ ಪ್ರಶಸ್ತ್ಯವಾದ ದಿನ ಇರಲಿಕ್ಕಿಲ್ಲ.
ಕೆಲವೇ ಸೆಂಕೆಂಡುಗಳ ದೃಶ್ಯಗಳನ್ನು ಒಳಗೊಂಡ ಟೀಸರ್ ಇದಾಗಿದೆಯಾದರೂ ಸಿನಿಮಾದಲ್ಲಿನ ಶ್ರೀಮಂತಿಕೆ, ನಾಯಕ-ನಾಯಕಿ ನಡುವಿನ ಪ್ರೀತಿ, ಕೆಮಿಸ್ಟ್ರಿ , ಹಳೆಯ ಸುಂದರ ಪ್ಯಾರಿಸ್ ಇನ್ನೂ ಹಲವು ವಿಷಯಗಳನ್ನು ಸಿನಿಮಾದಿಂದ ನಿರೀಕ್ಷಿಸಬಹುದು ಎಂಬುದು ಗೊತ್ತಾಗುತ್ತಿದೆ.
ಟೀಸರ್‌ನಲ್ಲಿ ಪ್ಯಾರಿಸ್‌ನ ಹಳೆಯ ರೈಲ್ವೆ ಸ್ಟೇಷನ್‌ನಲ್ಲಿ ಪ್ರಭಾಸ್ ತಮ್ಮ ಪ್ರೇಯಸಿಗಾಗಿ ಹುಡುಕುತ್ತಿದ್ದಾರೆ. ಫ್ರೆಂಚ್‌ನಲ್ಲಿ ಪ್ರೇಮಮಯ ಡೈಲಾಗ್ ಹೊಡೆಯುತ್ತಿದ್ದಾರೆ. ಆದರೆ ಪ್ರೇಯಸಿಯು 'ನೀನೇನು ರೋಮಿಯೋ ನಾ?' ಎಂಬ ಪ್ರೇಯಸಿಯ ಪ್ರಶ್ನೆಗೆ, 'ಅವನು ಪ್ರೀತಿಗಾಗಿ ಜೀವನನ್ನೇ ಕೊಟ್ಟ, ಖಂಡಿತ ನಾನು ರೋಮಿಯೋ ಅಲ್ಲ' ಎಂದು ರೊಮ್ಯಾಂಟಿಕ್ ಆಗಿ ಹೇಳಿದ್ದಾರೆ ಪ್ರಭಾಸ್.

ಈ ಸುಂದರ ಪ್ರೇಮಕತಾ ಸಿನಿಮಾ ಜುಲೈ 30 ರಂದು ಬಿಡುಗಡೆ ಆಗಲಿದೆ. ಈ ವಿಷಯವನ್ನು ಪ್ರಭಾಸ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
'ರಾಧೆ-ಶ್ಯಾಮ್' ಸಿನಿಮಾದಲ್ಲಿ ನಾಯಕಿಯಾಗಿ ಪೂಜಾ ಹೆಗ್ಡೆ ನಟಿಸಿದ್ದು, ಸಿನಿಮಾದ ಬಹುತೇಕ ಚಿತ್ರೀಕರಣ ಪ್ಯಾರಿಸ್‌ನಲ್ಲಿ ನಡೆದಿದ್ದು. ಸಿನಿಮಾವು 'ಪೀರಿಯಡ್ ಲವ್ ಸ್ಟೋರಿ' ಆಗಿದ್ದು, ಕೆಲವು ದಶಕಗಳ ಹಿಂದೆ ಪ್ಯಾರಿಸ್‌ನಲ್ಲಿ ಯುವಕ-ಯುವತಿಯ ನಡುವೆ ನಡೆವ ಪ್ರೇಮಕತೆಯಾಗಿದೆ.
Recommended Video
ಸಿನಿಮಾವನ್ನು ರಾಧಾ ಕೃಷ್ಣ ಕುಮಾರ್ ನಿರ್ದೇಶಿಸಿದ್ದು, ಸಿನಿಮಾದಲ್ಲಿ ಕೃಷ್ಣಂ ರಾಜು, ಸಚಿನ್ ಖೇಡ್ಕರ್, ಪ್ರಿಯದರ್ಶಿನಿ ಪುಲಿಕೊಂಡ ನಟಿಸಿದ್ದಾರೆ. ಸಿನಿಮಾವನ್ನು ನಿರ್ಮಿಸಿರುವುದು ಭೂಷಣ್ ಕುಮಾರ್, ವಂಶಿ ಪ್ರಮೋದ್. ಸಂಗೀತ ನೀಡಿರುವುದು ಜಸ್ಟಿನ್ ಪ್ರಭಾಕರ್.


Click it and Unblock the Notifications











