ಆ ತೆಲುಗು ಸಿನಿಮಾದಲ್ಲಿ ನಟಿಸಿ ತಪ್ಪು ಮಾಡಿದೆ: ರಾಧಿಕಾ ಆಪ್ಟೆ

ನಟಿ ರಾಧಿಕಾ ಆಪ್ಟೆ ಭಾರತೀಯ ಸಿನಿಮಾ ರಂಗದ ಉತ್ತಮ ನಟಿಯರಲ್ಲೊಬ್ಬರು. ತಮಿಳು, ತೆಲುಗು, ಹಿಂದಿ, ಇಂಗ್ಲೀಷ್‌ ಸಿನಿಮಾಗಳಲ್ಲಿಯೂ ನಟಿಸಿರುವ ರಾಧಿಕಾ ಬಹಳ ಭಿನ್ನ-ಭಿನ್ನ ಪಾತ್ರಗಳಲ್ಲಿ ನಟಿಸುವ ಮೂಲಕ ತಮ್ಮದೇ ಆದ ಅಭಿಮಾನಿ ವರ್ಗವನ್ನು ಪಡೆದುಕೊಂಡಿದ್ದಾರೆ.

ಹಲವು ಸಿನಿಮಾ ರಂಗದಲ್ಲಿ ರಜನೀಕಾಂತ್, ಬಾಲಕೃಷ್ಣ, ಸೈಫ್ ಅಲಿ ಖಾನ್, ನವಾಜುದ್ಧೀನ್ ಸಿದ್ಧಿಕಿ ಇನ್ನೂ ಹಲವಾರು ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡಿರುವ ರಾಧಿಕಾ ಆಪ್ಟೆಗೆ ಒಂದು ತೆಲುಗು ಸಿನಿಮಾದಲ್ಲಿ ತಾನು ನಟಿಸಬಾರದಿತ್ತು ಎಂದು ಈಗಲೂ ಎನಿಸುತ್ತದೆಯಂತೆ.

ರಾಧಿಕಾ ಆಪ್ಟೆಗೆ ಅವಕಾಶಗಳ ಮೇಲೆ ಅವಕಾಶಗಳು ಸಿಗುತ್ತಿರುವ ಸಮಯದಲ್ಲಿ ರಾಮ್ ಗೋಪಾಲ್ ವರ್ಮಾ ನಿರ್ದೇಶಿಸಿದ್ದ ಕನ್ನಡ, ತೆಲುಗು, ತಮಿಳಿನ ಸ್ಟಾರ್ ನಟರು ಒಟ್ಟಿಗೆ ನಟಿಸಿದ್ದ 'ರಕ್ತ ಚರಿತ್ರ' ಸಿನಿಮಾದಲ್ಲಿ ರಾಧಿಕಾ ಆಪ್ಟೆ ನಾಯಕಿಯಾಗಿ ನಟಿಸಿದ್ದರು. ಆ ಸಿನಿಮಾದಲ್ಲಿ ನಟಿಸಿ ತಪ್ಪು ಮಾಡಿದೆ ಎಂದು ಇತ್ತೀಚಿಗಿನ ತಮ್ಮ ಸಂದರ್ಶನದಲ್ಲಿ ರಾಧಿಕಾ ಹೇಳಿಕೊಂಡಿದ್ದಾರೆ.

'ರಕ್ತ ಚರಿತ್ರೆ' ಸಿನಿಮಾದಲ್ಲಿ ನಟಿಸಬೇಕಾದರೆ ನಾನು ಶೋಷಣೆಗೆ ಒಳಗಾದೆ. ಸಿನಿಮಾಕ್ಕೆ ಮುಂಚೆ ನನಗೆ ಹೇಳಿದ್ದಿದ್ದು ಒಂದು ಆ ನಂತರ ಅವರು ಮಾಡಿದ್ದು ಇನ್ನೊಂದು. ನಾನು ಅನ್ಯಾಯಕ್ಕೊಳಪಟ್ಟಂತೆ ಆ ಸಿನಿಮಾದಲ್ಲಿ ನಟಿಸುವಾಗ ನನಗೆ ಅನ್ನಿಸಿತು' ಎಂದಿದ್ದಾರೆ ರಾಧಿಕಾ ಆಪ್ಟೆ.

'ಒಂದು ಸಿನಿಮಾ ಎಂದು ಹೇಳಿ ಎರಡು ಸಿನಿಮಾ ಮಾಡಿಸಿದರು'

'ಒಂದು ಸಿನಿಮಾ ಎಂದು ಹೇಳಿ ಎರಡು ಸಿನಿಮಾ ಮಾಡಿಸಿದರು'

ನನಗೆ ಆ ಸಿನಿಮಾಕ್ಕೆ ಬಹಳ ಕಡಿಮೆ ಸಂಭಾವನೆ ಕೊಡಲಾಯಿತು. ನನಗೆ ಹೇಳಿದ್ದು ಒಂದು ಸಿನಿಮಾ ಎಂದು ಆದರೆ ತೆಲುಗು, ತಮಿಳು ಎರಡೂ ಸಿನಿಮಾಗಳನ್ನು ಒಮ್ಮೆಲೆ ಚಿತ್ರೀಕರಣ ಮಾಡಿದರು. ಆದರೆ ನನಗೆ ಬಹಳ ಸಂಭಾವನೆಯನ್ನು ಆ ಸಿನಿಮಾದ ನಿರ್ಮಾಪಕರು ನೀಡಿದರು ಎಂದಿದ್ದಾರೆ ರಾಧಿಕಾ ಆಪ್ಟೆ.

'ಒಂದು ದಿನವೂ ಸಮಯಕ್ಕೆ ಸರಿಯಾಗಿ ಚಿತ್ರೀಕರಣ ಪ್ರಾರಂಭವಾಗಲಿಲ್ಲ'

'ಒಂದು ದಿನವೂ ಸಮಯಕ್ಕೆ ಸರಿಯಾಗಿ ಚಿತ್ರೀಕರಣ ಪ್ರಾರಂಭವಾಗಲಿಲ್ಲ'

'ಆ ಸಿನಿಮಾದಲ್ಲಿ ದೊಡ್ಡ-ದೊಡ್ಡ ನಟರು ಇದ್ದರು. ಸಿನಿಮಾದ ಚಿತ್ರೀಕರಣ ಒಂದು ದಿನವೂ ನಿಗದಿತ ಸಮಯಕ್ಕೆ ಪ್ರಾರಂಭವಾಗುತ್ತಿರಲಿಲ್ಲ. ನಾನು ಕೆಲಕ್ಕಾಗಿ ಎಂದೂ ನಿರೀಕ್ಷಿಸಿದವಳಲ್ಲ. ನನ್ನ ಸಮಯ, ಪ್ರತಿಭೆಯನ್ನು ಹೀಗೆ ಸೆಟ್‌ನಲ್ಲಿ ಕುಳಿತು ವ್ಯರ್ಥ ಮಾಡುವುದು ನನಗೆ ಸ್ವಲ್ಪವೂ ಇಷ್ಟವಾಗುತ್ತಿರಲಿಲ್ಲ' ಎಂದಿದ್ದಾರೆ ರಾಧಿಕಾ.

ಆ ಸಿನಿಮಾದಿಂದ ಹಲವು ಪಾಠ ಕಲಿತೆ: ರಾಧಿಕಾ

ಆ ಸಿನಿಮಾದಿಂದ ಹಲವು ಪಾಠ ಕಲಿತೆ: ರಾಧಿಕಾ

'ನಾನು ರಾಮ್‌ಗೋಪಾಲ್ ವರ್ಮಾ ಅವರ ಅಭಿಮಾನಿಯಾಗಿದ್ದೆ. ಅವರಿಂದ ಸಾಕಷ್ಟು ಕಲಿಯಲು ಸಿಗುತ್ತದೆ ಎಂಬ ಕಾರಣಕ್ಕೆ 'ರಕ್ತ ಚರಿತ್ರ'ದಲ್ಲಿ ನಟಿಸಲು ಒಪ್ಪಿಕೊಂಡೆ. ಒಂದು ತಂಡವಾಗಿ ಆ ಸಿನಿಮಾದ ಚಿತ್ರೀಕರಣ ಮಜವಾಗಿಯೇ ಇತ್ತು. ನಾಯಕ ಪ್ರಧಾನತೆ, ನಾಯಕಿಯರ ಶೋಷಣೆ ಆ ಸಮಯದಲ್ಲಿ ಸಾಮಾನ್ಯ ಎಂಬಂತಾಗಿಬಿಟ್ಟಿತ್ತು. ಹಾಗಾಗಿ ನಾನೂ ಸಹ ಅದರ ಬಗ್ಗೆ ಆಗ ಹೆಚ್ಚು ಮಾತನಾಡಲಿಲ್ಲ. ಆದರೆ ಆ ಸಿನಿಮಾದಲ್ಲಿ ಕಲಿತ ಪಾಠ ಬಹಳಷ್ಟಿದೆ. ನನ್ನ ಸಮಯಕ್ಕೆ ನಾನು ಮಹತ್ವ ಕೊಡುವುದನ್ನು ಕಲಿತುಕೊಂಡೆ' ಎಂದಿದ್ದಾರೆ ರಾಧಿಕಾ.

Recommended Video

ಬೆತ್ತಲೆ ವಿಡಿಯೋ ಲೀಕ್ ಆದ್ಮೇಲೆ 4 ದಿನ ಮನೆಯೊಳಗಿದ್ದ Radhika Apte | Filmibeat Kannada
ಆಂಧ್ರದ ರಕ್ತ-ಸಿಕ್ತ ರಾಜಕೀಯದ ಕತೆ

ಆಂಧ್ರದ ರಕ್ತ-ಸಿಕ್ತ ರಾಜಕೀಯದ ಕತೆ

'ರಕ್ತ ಚರಿತ್ರ' ಸಿನಿಮಾವು ಪೆರಿಟಾಲ ರವಿ ಹಾಗೂ ಮದ್ದಲಚೆರುವು ಸೂರಿ ವೈರತ್ವ ಹಾಗೂ ಆಂಧ್ರದ ರಕ್ತ ಸಿಕ್ತ ರಾಜಕೀಯ ಕುರಿತಾದ ಸಿನಿಮಾ ಆಗಿತ್ತು. ಸಿನಿಮಾವು ಎರಡು ಭಾಗಗಳಲ್ಲಿ ಬಿಡುಗಡೆ ಆಯ್ತು. ಸಿನಿಮಾದಲ್ಲಿ ಹಿಂದಿಯ ವಿವೇಕ್ ಒಬೆರಾಯ್ ಪೆರಿಟಾಲ ರವಿ ಆಗಿ, ತಮಿಳಿನ ಸೂರ್ಯಾ ಮದ್ದಲಚೆರುವು ಸೂರಿ ಆಗಿ ನಟಿಸಿದ್ದರು. ಕನ್ನಡದ ನಟ ಸುದೀಪ್ ಪವರ್‌ಫುಲ್ ಪೊಲೀಸ್ ಪಾತ್ರದಲ್ಲಿ ನಟಿಸಿದ್ದರು. ಸಿನಿಮಾ ಭರ್ಜರಿ ಹಿಟ್ ಆಗಿತ್ತು.

More from Filmibeat

English summary
Actress Radhika Apte said I felt exploited while acting in Rakta Charitra movie. They paid me very less and they wasted by time.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X