"ಟಾಲಿವುಡ್‌ನಲ್ಲಿ ಅವ್ರದ್ದೇ ಪಾರುಪತ್ಯ, ನಟಿಯರನ್ನು ಕೆಟ್ಟದಾಗಿ ನಡೆಸಿಕೊಳ್ತಾರೆ"; ರಾಧಿಕಾ ಆಪ್ಟೆ
ಬಾಲಿವುಡ್ ಬೆಡಗಿ ರಾಧಿಕಾ ಆಪ್ಟೆ ಸೌತ್ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ತೆಲುಗು, ತಮಿಳು ಸಿನಿಮಾಗಳಲ್ಲಿ ಸ್ಟಾರ್ ನಟರೊಟ್ಟಿಗೆ ಬಣ್ಣ ಹಚ್ಚಿದ್ದಾರೆ. ಬಾಲಿವುಡ್‌ನಲ್ಲಿ ಅಂತೂ ಬೋಲ್ಡ್ ದೃಶ್ಯಗಳಲ್ಲಿ ನಟಿಸಿ ಎಲ್ಲರ ಹುಬ್ಬೇರಿಸಿದ್ದರು. ಇದೀಗ ತೆಲುಗು ಇಂಡಸ್ಟ್ರಿ ಬಗ್ಗೆ ಆಕೆಯ ಕಾಮೆಂಟ್ಸ್ ವೈರಲ್ ಆಗುತ್ತಿದೆ.
ಬಾಲಿವುಡ್ ಬೋಲ್ಡ್ ನಟಿಯರಲ್ಲಿ ರಾಧಿಕಾ ಆಪ್ಟೆ ಒಬ್ಬರು. ತೆರೆಮೇಲೆ ಬೆತ್ತಲಾಗಿ ಕೂಡ ಆಕೆ ನಟಿಸಿದ್ದಾರೆ. ಆದರೆ ಸ್ಟಾರ್ ನಟರ ಜೊತೆ ಆಕೆ ನಟಿಸಿದ್ದರು ಕಮ್ಮಿ. ಇತ್ತೀಚೆಗೆ ಹೆಚ್ಚು ಅವಕಾಶಗಳು ಸಿಗುತ್ತಿಲ್ಲ. ಕೊನೆಯದಾಗಿ ವಿಜಯ್ ಸೇತುಪತಿ ಹಾಗೂ ಕತ್ರೀನಾ ಕೈಫ್ ನಟನೆಯ 'ಮೆರಿ ಕ್ರಿಸ್‌ಮಸ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

2010ರಲ್ಲಿ ರಾಮ್‌ಗೋಪಾವ್ ವರ್ಮಾ ನಿರ್ದೇಶನದ 'ರಕ್ತಚರಿತ್ರ' ಸಿನಿಮಾ ಮೂಲಕ ರಾಧಿಕಾ ಆಪ್ಟೆ ಸೌತ್ ಸಿನಿ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದರು. ಬಳಿಕ ತಮಿಳಿನ 'ಧೋನಿ' ಎನ್ನುವ ಚಿತ್ರದಲ್ಲಿ ಮಿಂಚಿದ್ದರು. ತಮಿಳುನಾಡಿನಲ್ಲಿ ಹುಟ್ಟಿದ ರಾಧಿಕಾ ಪುಣೆಯಲ್ಲಿ ಓದಿ ಬೆಳೆದಾಕೆ. ಹಾಗಾಗಿ ಮರಾಠಿ ಸಿನಿಮಾಗಳಲ್ಲಿ ಸಹ ಬಣ್ಣ ಹಚ್ಚಿದ್ದಾರೆ.
ಮರಾಠಿ ಬಳಿಕ ಹಿಂದಿ, ಬೆಂಗಾಲಿ, ಮಲಯಾಳಂ ಮಾತ್ರವಲ್ಲದೇ ಇಂಗ್ಲೀಷ್ ಸಿನಿಮಾಗಳಲ್ಲಿ ಕೂಡ ರಾಧಿಕಾ ಆಪ್ಟೆ ಅಭಿನಯಿಸಿದ್ದಾರೆ. ತೆಲುಗಿನಲ್ಲಿ ಬಾಲಕೃಷ್ಣ ಜೋಡಿಯಾಗಿ 'ಲೆಜೆಂಡ್' ಹಾಗೂ 'ಲಯನ್' ಸಿನಿಮಾಗಳಲ್ಲಿ ಆಕೆ ಕಾಣಿಸಿಕೊಂಡಿದ್ದರು. ಇನ್ನು ತಮಿಳಿನಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಜೊತೆ 'ಕಬಾಲಿ' ಚಿತ್ರದಲ್ಲಿ ನಟಿಸಿ ಗೆದ್ದಿದ್ದಾರೆ.
ಮದುವೆ ಬಳಿಕ ರಾಧಿಕಾ ಆಪ್ಟೆ ಪಾತ್ರಗಳ ಆಯ್ಕೆಯಲ್ಲಿ ಬಹಳ ಚ್ಯೂಸಿ ಆಗಿಬಿಟ್ಟರು. ಆಗೊಂದು ಈಗೊಂದು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಬೋಲ್ಡ್ ಪಾತ್ರಗಳಿಂದ ಭಾರೀ ಟೀಕೆ ಎದುರಿಸಿರುವುದು ಇದೆ. ರಂಗಭೂಮಿ ಹಿನ್ನೆಲೆಯಿಂದ ಬಂದ ಚೆಲುವೆ ಸಾಕಷ್ಟು ನಾಟಕ, ವೆಬ್ ಸೀರಿಸ್, ಶಾರ್ಟ್ ಫಿಲ್ಮ್‌ಗಳಲ್ಲಿ ನಟಿಸಿದ್ದಾರೆ. ಉತ್ತಮ ಅಭಿನಯಕ್ಕಾಗಿ ಒಂದಷ್ಟು ಪ್ರಶಸ್ತಿಗಳು ಆಕೆಯನ್ನು ಅರಸಿ ಬಂದಿವೆ.
ಹಳೇ ಸಂದರ್ಶನವೊಂದರಲ್ಲಿ ಟಾಲಿವುಡ್ ಬಗ್ಗೆ ರಾಧಿಕಾ ಆಪ್ಟೆ ಮಾತನಾಡಿರುವ ವಿಡಿಯೋ ಈಗ ವೈರಲ್ ಆಗ್ತಿದೆ. "ತೆಲುಗು ಚಿತ್ರರಂಗದಲ್ಲಿ ನಾನು ಸಾಕಷ್ಟು ಸಮಸ್ಯೆ ಎದುರಿಸಿದೆ. ಅಲ್ಲಿ ನಟಿಯರನ್ನು ನೋಡುವ ದೃಷ್ಟಿಕೋನ ಬೇರೆ ರೀತಿ ಇರುತ್ತದೆ. ಟಾಲಿವುಡ್‌ನಲ್ಲಿ ನಟಿಯರ ಪಾತ್ರಗಳಿಗೆ ಹೆಚ್ಚು ಸ್ಕೋಪ್ ಇರಲ್ಲ. ಸೆಟ್‌ನಲ್ಲಿ ಯಾರೋ ಮೂರನೇ ವ್ಯಕ್ತಿ ಎನ್ನುವಂತೆ ನೋಡಲಾಗುತ್ತದೆ. ಮುಖ್ಯವಾಗಿ ತೆಲುಗಿನಲ್ಲಿ ಪುರುಷ ಅಧಿಪತ್ಯ ಹೆಚ್ಚು. ಕೆಲವೊಮ್ಮೆ ಇತರ ನಟ-ನಟಿಯರನ್ನು ಕೇಳದೇ ಅವರಿಗೆ ಇಷ್ಟ ಬಂದಾಗ ಶೂಟಿಂಗ್ ಕ್ಯಾನ್ಸಲ್ ಮಾಡಿಬಿಡುತ್ತಾರೆ. ಈ ರೀತಿ ನಾನು ಸಾಕಷ್ಟು ಬಾರಿ ಸಮಸ್ಯೆ ಎದುರಿಸಿದೆ. ಆದರೆ ಅದಕ್ಕೆ ಅಲ್ಲಿಗೆ ಎಂಡ್ ಕಾರ್ಡ್ ಬಿತ್ತು. ಅಲ್ಲಿಗೆ ನನ್ನ ಅವಸರ ಅಷ್ಟೇ ಅಂತ ನಾನು ಗ್ರಹಿಸಿದೆ" ಎಂದಿದ್ದಾರೆ.
ಸದ್ಯ ರಾಧಿಕಾ ಆಪ್ಟೆ ಹೇಳಿಕೆ ಸಖತ್ ವೈರಲ್ ಆಗುತ್ತಿದೆ. ಆಕೆ ತೆಲುಗಿನಲ್ಲಿ ಮಾಡಿರುವುದೇ ಮೂರು ಮತ್ತೊಂದು ಸಿನಿಮಾ. ಎರಡು ಸಿನಿಮಾಗಳಲ್ಲಿ ಬಾಲಯ್ಯಗೆ ಜೋಡಿಯಾಗಿದ್ದರು. ಹಾಗಾಗಿ ಅದೇ ಸಿನಿಮಾ ಸೆಟ್‌ನಲ್ಲಿ ಇಂತಹ ಕಹಿ ಅನುಭವ ಆಗಿತ್ತಾ? ಎನ್ನುವ ಚರ್ಚೆ ಶುರುವಾಗಿದೆ. ಈ ಬಗ್ಗೆ ನಟ ನಂದಮೂರಿ ಬಾಲಕೃಷ್ಣನ ಟ್ರೋಲ್ ಮಾಡುತ್ತಿದ್ದಾರೆ.
ಬಾಲಯ್ಯ ಅಭಿಮಾನಿಗಳು ಇದಕ್ಕೆ ತಿರುಗೇಟು ಕೊಡುತ್ತಿದ್ದಾರೆ. ಈ ಹಿಂದೆ ಸಂದರ್ಶನವೊಂದರಲ್ಲಿ ಬಾಲಯ್ಯ ಜೊತೆ ನಟಿಸಿದ ಬಗ್ಗೆ ರಾಧಿಕಾ ಆಪ್ಟೆ ಹಾಡಿ ಕೊಂಡಾಡಿರುವ ವಿಡಿಯೋ ವೈರಲ್ ಮಾಡುತ್ತಿದ್ದಾರೆ. ಆವಾಗ ಒಂದು, ಈವಾಗ ಒಂದು ಮಾತನಾಡುತ್ತಿದ್ದೀರಾ? ಎಂದು ಕೇಳುತ್ತಿದ್ದಾರೆ. ಸದ್ಯ 'ಸಿಸ್ಟಮ್ ಮಿಡ್‌ನೈಟ್' ಎನ್ನುವ ಒಂದು ಇಂಗ್ಲೀಷ್ ಸಿನಿಮಾಗಳಲ್ಲಿ ಆಕೆ ನಟಿಸಿದ್ದಾರೆ.


Click it and Unblock the Notifications











