ಅಸುರನ್ ತೆಲುಗು ರೀಮೇಕ್‌ನಲ್ಲಿ ವೆಂಕಟೇಶ್ ಎದುರು ಕನ್ನಡಿಗ ವಿಲನ್

ಕನ್ನಡದ ಹಲವು ನಟರು ತಮ್ಮ ಪ್ರತಿಭೆಯಿಂದ ನೆರೆಯ ಸಿನಿಮಾ ರಂಗಗಳಲ್ಲಿಯೂ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ.

ಸುದೀಪ್, ಕಿಶೋರ್, ಅಚ್ಯುತ್ ಕುಮಾರ್, ಡಾಲಿ ಧನಂಜಯ್ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಪಟ್ಟಿಗೆ ಹೊಸದಾಗಿ ಸೇರ್ಪಡೆ ಆಗಿದ್ದಾರೆ ರಾಜ್ ದೀಪಕ್ ಶೆಟ್ಟಿ.

ಕಟ್ಟುಮಸ್ತು ಮೈಕಟ್ಟಿನ, ಅಷ್ಟೆ ಅಚ್ಚುಕಟ್ಟಾದ ಅಭಿನಯದ ರಾಜ್ ದೀಪಕ್ ಶೆಟ್ಟಿ, ನೆರೆಯ ಆಂಧ್ರ-ತಮಿಳುನಾಡುಗಳಲ್ಲಿ ನಿರ್ದೇಶಕರ ಮೆಚ್ಚಿನ ವಿಲನ್. ಕಟ್ಟು ಮಸ್ತಾದ ದೇಹದ ಜೊತೆಗೆ ಎಲ್ಲ ರೀತಿಯ ಪಾತ್ರಗಳಿಗೂ ಹೊಂದುವ ಮುಖಭಾವ ಹೊಂದಿರುವ ರಾಜ್ ದೀಪಕ್ ಶೆಟ್ಟಿಗೆ ತೆಲುಗು ಸಿನಿಮಾರಂಗದಲ್ಲಿ ಅವಕಾಶಗಳ ಸುರಿಮಳೆಯೇ ಆಗುತ್ತಿದೆ.

ನಾರಪ್ಪ ಸಿನಿಮಾದಲ್ಲಿ ರಾಜ್ ದೀಪಕ್ ಶೆಟ್ಟಿ ವಿಲನ್

ನಾರಪ್ಪ ಸಿನಿಮಾದಲ್ಲಿ ರಾಜ್ ದೀಪಕ್ ಶೆಟ್ಟಿ ವಿಲನ್

ದೊಡ್ಡ ಸ್ಟಾರ್ ನಟರ ಸಿನಿಮಾಗಳಿಗೆ ರಾಜ್ ದೀಪಕ್ ಶೆಟ್ಟಿ ವಿಲನ್ ಆಗುತ್ತಿದ್ದಾರೆ. ಈ ಹಿಂದೆ ಈಸ್ಮಾರ್ಟ್ ಶಂಕರ್ ಸಿನಿಮಾದಲ್ಲಿ ನಟಿಸಿದ್ದ ರಾಜ್, ಈಗ ವಿಕ್ಟರಿ ವೆಂಕಟೇಶ್ ಅವರ ಹೊಸ ಸಿನಿಮಾಕ್ಕೆ ವಿಲನ್ ಆಗಿದ್ದಾರೆ.

ವೆಂಕಟೇಶ್ ಸಿನಿಮಾದಲ್ಲಿ ರಾಜ್ ದೀಪಕ್ ಶೆಟ್ಟಿ ವಿಲನ್

ವೆಂಕಟೇಶ್ ಸಿನಿಮಾದಲ್ಲಿ ರಾಜ್ ದೀಪಕ್ ಶೆಟ್ಟಿ ವಿಲನ್

ತಮಿಳಿನಲ್ಲಿ ಸೂಪರ್ ಹಿಟ್ ಆಗಿದ್ದ 'ಅಸುರನ್' ಸಿನಿಮಾವನ್ನು ತೆಲುಗಿಗೆ 'ನಾರಪ್ಪ' ಹೆಸರಿನಲ್ಲಿ ರೀಮೇಕ್ ಮಾಡಲಾಗುತ್ತಿದ್ದು, ವೆಂಕಟೇಶ್ ಹಾಗೂ ಪ್ರಿಯಾಮಣಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ವಿಲನ್ ಪಾತ್ರಧಾರಿ ರಾಜ್ ದೀಪಕ್ ಶೆಟ್ಟಿ.

ರೆಟ್ರೊ ಲುಕ್‌ನಲ್ಲಿ ರಾಜ್ ದೀಪಕ್ ಶೆಟ್ಟಿ

ರೆಟ್ರೊ ಲುಕ್‌ನಲ್ಲಿ ರಾಜ್ ದೀಪಕ್ ಶೆಟ್ಟಿ

70-80 ರ ದಶಕದಲ್ಲಿ ನಡೆವ ನಾರಪ್ಪ ಸಿನಿಮಾದಲ್ಲಿ ರೆಟ್ರೊ ಲುಕ್‌ನಲ್ಲಿ ಖಡಕ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ ರಾಜ್ ದೀಪಕ್ ಶೆಟ್ಟಿ. ಅವರ ಲುಕ್‌ನ ಕೆಲವು ಪೋಸ್ಟರ್‌ಗಳು ಬಿಡುಗಡೆ ಆಗಿದ್ದು, ರೆಟ್ರೋ ಲುಕ್‌ನಲ್ಲಿ ಸಖತ್ ಆಗಿ ಕಾಣುತ್ತಿದ್ದಾರೆ ರಾಜ್ ದೀಪಕ್ ಶೆಟ್ಟಿ.

Recommended Video

Vijay Deverakonda ತಮ್ಮನಿಗೋಸ್ಕರ ಸಾಲು ಸಾಲು ಟ್ವೀಟ್ ಮಾಡಿದ Rashmika | Filmibeat Kannada
ಇತ್ತೀಚೆಗಷ್ಟೆ ಮದುವೆಯಾಗಿದ್ದಾರೆ ರಾಜ್

ಇತ್ತೀಚೆಗಷ್ಟೆ ಮದುವೆಯಾಗಿದ್ದಾರೆ ರಾಜ್

ರಾಜ್ ದೀಪಕ್ ಶೆಟ್ಟಿ ಇತ್ತೀಚೆಗಷ್ಟ ವಿವಾಹ ಬಂಧನಕ್ಕೆ ಕಾಲಿಟ್ಟಿದ್ದಾರೆ. ಸೋನಿಯಾ ಅವರೊಂದಿಗೆ ಹಿಂದು ಮತ್ತು ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆಯಾಗಿದ್ದಾರೆ ಈ ನಟ. ಸದ್ಯಕ್ಕೆ ತೆಲುಗಿನ ವಿರಾಟ ಪರ್ವಂ, ತಮಿಳಿನ ಬ್ಯಾಟರಿ ಸಿನಿಮಾಗಳಲ್ಲಿ ರಾಜ್ ದೀಪಕ್ ಶೆಟ್ಟಿ ನಟಿಸುತ್ತಿದ್ದಾರೆ.

More from Filmibeat

English summary
Actor Raj Deepak Shetty playing vilain character in Venkatesh next movie 'Narappa' in Telugu.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X