ರಾಜಮೌಳಿ 'ರಿಯಲ್ ಮ್ಯಾನ್' ಚಾಲೆಂಜ್: ರಾಮ್ ಚರಣ್ ಮತ್ತು ಜೂ.ಎನ್ ಟಿ ಆರ್ ಗೆ ಸವಾಲು

ಲಾಕ್ ಡೌನ್ ಹಿನ್ನಲ್ಲೆ ಎಲ್ಲರೂ ಮನೆಯಲ್ಲಿಯೇ ಕಾಲಕಳೆಯುತ್ತಿದ್ದಾರೆ. ಇದಕ್ಕೆ ಸೆಲೆಬ್ರಿಟಿಗಳೇನು ಹೊರತಾಗಿಲ್ಲ. ಶೂಟಿಂಗ್ ಇಲ್ಲದೆ ಮನೆಯಲ್ಲಿಯೆ ಇರುವ ಸಿನಿಮಾ ಸೆಲೆಬ್ರಿಟಿಗಳು ಆಗಾಗ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ದರ್ಶನ ನೀಡುತ್ತಿದ್ದಾರೆ.

ಸಾಕಷ್ಟು ನಟ-ನಟಿಯರು ಮನೆಗೆಲಸ ಮಾಡುವ ಮೂಲಕ ಕುಟುಂಬಕ್ಕೆ ಸಹಾಯ ಮಾಡುತ್ತಿದ್ದಾರೆ. ತೆಲುಗು ಸಿನಿ ನಟರು ಮತ್ತು ನಿರ್ದೇಶಕರು ಈಗ ಮನೆಗೆಲಸ ಮಾಡುವುದನ್ನೆ ಟ್ರೆಂಡ್ ಮಾಡಿದ್ದಾರೆ. ಹೌದು, ಮನೆಗೆಲಸ ಮಾಡಿ ವಿಡಿಯೋವನ್ನು ಪೋಸ್ಟ್ ಮಾಡುವ ಮೂಲಕ ಮತ್ತೊಬ್ಬ ನಟ ಅಥವ ನಿರ್ದೇಶಕರಿಗೆ ಸವಾಲು ಹಾಕುತ್ತಿದ್ದಾರೆ. ಮುಂದೆ ಓದಿ...

ಅರ್ಜುನ್ ರೆಡ್ಡಿ ನಿರ್ದೇಶಕನ ಮನೆಗೆಲಸದ ಚಾಲೆಂಜ್

ಅರ್ಜುನ್ ರೆಡ್ಡಿ ಖ್ಯಾತಿಯ ನಿರ್ದೇಶಕ ಸಂದೀಪ್ ರೆಡ್ಡಿ ವಾಂಗ, ಮನೆಯಲ್ಲಿ ಪಾತ್ರೆ ತೊಳೆದು, ಕಸ ಗುಡಿಸಿ ಇಡೀ ಮನೆಯನ್ನು ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಇಷ್ಟಕ್ಕೆ ಸುಮ್ಮನಾಗದೆ "ಬಿ ದಿ ರಿಯಲ್ ಮ್ಯಾನ್" ಎಂದು ಹ್ಯಾಶ್ ಟ್ಯಾಗ್ ಬಳಸಿ ನಿರ್ದೇಶಕ ರಾಜಮೌಳಿ ಅವರಿಗೆ ಸವಾಲು ಹಾಕಿದ್ದಾರೆ.

ಚಾಲೆಂಗ್ ಸ್ವೀಕರಿಸಿದ ರಾಜಮೌಳಿ

ಚಾಲೆಂಗ್ ಸ್ವೀಕರಿಸಿದ ರಾಜಮೌಳಿ

ಬಾಹುಬಲಿ ನಿರ್ದೇಶಕ ರಾಜಮೌಳಿ, ಅರ್ಜುನ್ ರೆಡ್ಡಿ ಖ್ಯಾತಿಯ ಸಂದೀಪ್ ಹಾಕಿರುವ ಚಾಲೆಂಜ್ ಅನ್ನು ಸ್ವೀಕರಿಸಿ ಪ್ರತಿಕ್ರಿಯೆ ನೀಡಿದ್ದರು. "ನಾವು ಮನೆಯಲ್ಲಿ ಕೆಲಸ ಹೊರೆ ಹಂಚಿಕೊಳ್ಳುವುದು ಬಹಳ ಮುಖ್ಯ. ನನ್ನ ಮನೆಗೆಲಸದ ವಿಡಿಯೋವನ್ನು ನಾನು ಸಹ ಪೋಸ್ಟ್ ಮಾಡುತ್ತೇನೆ" ಎಂದು ಹೇಳಿದ್ದರು.

ಮನೆಗೆಲಸದ ವಿಡಿಯೋ ಹಂಚಿಕೊಂಡಿರುವ ರಾಜಮೌಳಿ

ಸಂದೀಪ್ ರೆಡ್ಡಿ ವಾಂಗ ಹಾಕಿದ ಸಲಾಲು ಸ್ವೀಕರಿಸಿ ರಾಜಮೌಳಿ ಮನೆಗೆಲಸ ಮಾಡಿದ್ದಾರೆ. ಗುಡಿಸಿ, ನೆಲ ಒರೆಸಿ, ಇಡೀ ಮನೆ ಸ್ವಚ್ಛಗೊಳಿಸುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಚಾಲೆಂಜ್ ಸ್ವೀಕರಿಸಿ ಮನೆಗೆಲಸದಲ್ಲಿ ಪತ್ನಿಗೂ ಸಹಾಯ ಮಾಡಿದ್ದಾರೆ.

ಜೂ.ಎನ್ ಟಿ ಆರ್ ಮತ್ತು ರಾಮ್ ಚರಣ್ ಗೆ ಸವಾಲು

ಜೂ.ಎನ್ ಟಿ ಆರ್ ಮತ್ತು ರಾಮ್ ಚರಣ್ ಗೆ ಸವಾಲು

ಚಾಲೆಂಜ್ ಸ್ವೀಕಾರಮಾಡಿ ರಾಜಮೌಳಿ ಜೂ.ಎನ್ ಟಿ ಆರ್ ಮತ್ತು ರಾಮ್ ಚರಣ್ ಗೆ ಸವಾಲು ಹಾಕಿದ್ದಾರೆ. ಆರ್ ಆರ್ ಆರ್ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿರುವ ಇವರು ಈಗ ರಾಜಮೌಳಿ ಹಾಕಿದ ಹೊಸ ಚಾಲೆಂಜ್ ಸ್ವೀಕರಿಸಿ ಮನೆ ಸ್ವಚ್ಛಗೊಳಿಸಿ ರಿಯಲ್ ಮ್ಯಾನ್ ಆಗ್ತಾರಾ ಕಾದುನೋಡಬೇಕು.

More from Filmibeat

English summary
Director Rajamouli accept be the realman Challenge and Nominates to Ram Charan And Jr.NTR.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X