ಮುಂಬೈನಲ್ಲಿ ರಾಕಿಭಾಯ್‌ ಮೀರಿಸಿದ ದೇವ: ಮೌಳಿ ಖರೀದಿಸಿದ 'ಸಲಾರ್' ಟಿಕೆಟ್ ಬೆಲೆ ಎಷ್ಟು?

ಪ್ರಭಾಸ್ ನಟನೆಯ 'ಸಲಾರ್' ರಿಲೀಸ್ ಡೇಟ್ ಹತ್ತಿರವಾಗುತ್ತಿದಂತೆ ಪ್ರಮೋಷನ್ ಜೋರಾಗುತ್ತಿದೆ. ನಿರ್ದೇಶಕ ರಾಜಮೌಳಿ ಚಿತ್ರತಂಡದ ಸಂದರ್ಶನ ಮಾಡಿದ್ದಾರೆ. ಮೊದಲ ಟಿಕೆಟ್ ಅನ್ನು ಕೂಡ ಖರೀದಿಸಿದ್ದಾರೆ. ಇನ್ನು 'ಸಲಾರ್' ಅಡ್ವಾನ್ಸ್ ಬುಕ್ಕಿಂಗ್‌ಗೆ ಸಖತ್ ರೆಸ್ಪಾನ್ಸ್ ಸಿಕ್ತಿದೆ.

ಡಿಸೆಂಬರ್ 22ಕ್ಕೆ 'ಸಲಾರ್' ಪಾರ್ಟ್‌-1 ವಿಶ್ವದಾದದ್ಯಂತ ತೆರೆಗಪ್ಪಳಿಸುತ್ತಿದೆ. ಹೊಂಬಾಳೆ ಸಂಸ್ಥೆ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಮಾಡಿದೆ. ಅಷ್ಟೇ ಜೋರಾಗಿ ಪ್ರಮೋಷನ್, ರಿಲೀಸ್ ಪ್ಲ್ಯಾನ್ ನಡೀತಿದೆ. ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಪ್ರಭಾಸ್ ನಟನೆ ನೋಡಲು ಸಿನಿರಸಿಕರು ಕಾಯುತ್ತಿದ್ದಾರೆ. ಈಗಾಗಲೇ ಕೆಲವರು ಫಸ್ಟ್ ಡೇ ಟಿಕೆಟ್ ಬುಕ್ ಮಾಡಿಕೊಂಡಿದ್ದಾರೆ.

Rajamouli buys the first ticket of Salaar, 120 feet Prabhas cutout in Mumbai

ಹೈವೋಲ್ಟೇಜ್ 'ಸಲಾರ್' ಚಿತ್ರದಲ್ಲಿ ದೇವ ಹಾಗೂ ವರದರಾಜ್ ಮನ್ನಾರ್ ಸ್ನೇಹದ ಕಥೆಯನ್ನು ಪ್ರಶಾಂತ್ ನೀಲ್ ಹೇಳುತ್ತಿದ್ದಾರೆ. ಈಗಾಗಲೇ ಚಿತ್ರದ ಪೋಸ್ಟರ್ಸ್, ಟೀಸರ್, ಟ್ರೈಲರ್, ಒಂದು ಸಾಂಗ್ ರಿಲೀಸ್ ಆಗಿ ಹಿಟ್ ಆಗಿದೆ. ಮತ್ತೊಂದು ಟ್ರೈಲರ್ ರಿಲೀಸ್ ಪ್ಲ್ಯಾನ್ ನಡೀತಿದೆ. ದೇಶ ವಿದೇಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದ್ದು ಭರ್ಜರಿ ಪ್ರಚಾರ ನಡೀತಿದೆ.

ಖ್ಯಾತ ನಿರ್ದೇಶಕ ಎಸ್. ಎಸ್ ರಾಜಮೌಳಿ ಚಿತ್ರತಂಡದ ಸಂದರ್ಶನ ಮಾಡಿದ್ದಾರೆ. ಪ್ರಭಾಸ್, ಪೃಥ್ವಿರಾಜ್, ಪ್ರಶಾಂತ್‌ ನೀಲ್ ಜೊತೆ ಮಾತುಕತೆ ನಡೆಸಿದ್ದಾರೆ. ಅದು ಶೀಘ್ರದಲ್ಲೇ ರಿಲೀಸ್ ಆಗಲಿದೆ. ಇನ್ನು ಚಿತ್ರದ ಮೊದಲ ಟಿಕೆಟ್ ಅನ್ನು ಸಹ ರಾಜಮೌಳಿ ಖರೀದಿಸಿದ್ದಾರೆ. ಹೈದರಾಬಾದ್ ಸಂಧ್ಯಾ ಚಿತ್ರಮಂದಿರಲ್ಲಿ ಶುಕ್ರವಾರ ಬೆಳಗ್ಗೆ 7 ಗಂಟೆಗೆ ಜಕ್ಕಣ್ಣ ಸಿನಿಮಾ ವೀಕ್ಷಿಸಲಿದ್ದಾರೆ.

ಅಡ್ವಾನ್ಸ್ ಬುಕ್ಕಿಂಗ್ ಆರಂಭವಾಗುವುದಕ್ಕು ಮುನ್ನ ಮೌಳಿ ಟಿಕೆಟ್ ಖರೀದಿಸಿದ್ದಾರೆ. ಹಾಗಾಗಿ ಈ ಟಿಕೆಟ್ ಬೆಲೆ 10, 116 ರೂ. ಎನ್ನುವ ಚರ್ಚೆ ನಡೀತಿದೆ. ಇದೆಲ್ಲಾ ಸಿನಿಮಾ ಪ್ರಚಾರಕ್ಕಾಗಿ ಮಾಡುತ್ತಿರುವುದು ಅನ್ನೋದು ಬಿಡಿಸಿ ಹೇಳಬೇಕಾಗಿಲ್ಲ. ಇನ್ನು ಈ ಹಿಂದೆ 'ರಾಧೆಶ್ಯಾಮ್' ಸಿನಿಮಾ ರಿಲೀಸ್ ಸಂದರ್ಭದಲ್ಲೂ ಮೌಳಿ, ಪ್ರಭಾಸ್ ಸಂದರ್ಶನ ನಡೆಸಿದ್ದರು.

ಇನ್ನು ಥಿಯೇಟರ್‌ಗಳ ಮುಂದೆ 'ಸಲಾರ್' ಕಟೌಟ್‌ಗಳು ಎದ್ದು ನಿಲ್ತಿವೆ. ಮುಂಬೈನ ಮಾಲ್‌ವೊಂದರ ಮುಂದೆ 120 ಅಡಿ ಎತ್ತರದ 'ಸಲಾರ್' ಪ್ರಭಾಸ್ ಕಟೌಟ್‌ ನಿಲ್ಲಿಸಲಾಗಿದೆ. ಈ ಹಿಂದೆ 'KGF-2' ಸಿನಿಮಾ ರಿಲೀಸ್ ವೇಳೆ ಮುಂಬೈನಲ್ಲಿ ರಾಕಿಭಾಯ್ 100 ಅಡಿ ಕಟೌಟ್ ನಿಲ್ಲಿಸಿದ್ದು ದೊಡ್ಡ ಸುದ್ದಿಯಾಗಿತ್ತು.

Rajamouli buys the first ticket of Salaar, 120 feet Prabhas cutout in Mumbai

ಹಲವೆಡೆ 'ಸಲಾರ್' ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರುವಾಗಿದೆ. ಕರ್ನಾಟಕದಲ್ಲೂ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಕೇವಲ ಬೆಂಗಳೂರಿನಲ್ಲೇ 150ಕ್ಕೂ ಅಧಿಕ ಶೋಗಳ ಟಿಕೆಟ್ ಮಾರಾಟ ಆರಂಭವಾಗಿದೆ. ಅಭಿಮಾನಿಗಳು ಈಗಾಗಲೇ ಟಿಕೆಟ್ ಕಾಯ್ದಿರಿಸುತ್ತಿದ್ದಾರೆ. ಕನ್ನಡಕ್ಕೆ ಸದ್ಯ 8 ಶೋಗಳನ್ನು ಮಾತ್ರ ಕೊಡಲಾಗಿದೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ.

ಒಂದೇ ದಿನದಲ್ಲಿ ಕರ್ನಾಟಕದಲ್ಲಿ 20 ಸಾವಿರ ಟಿಕೆಟ್ ಬುಕ್ ಆಗಿದೆ ಎನ್ನಲಾಗ್ತಿದೆ. ಈಗಾಗಲೇ ಅಡ್ವಾನ್ಸ್ ಬುಕ್ಕಿಂಗ್‌ನಿಂದಲೇ 1 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಆಗಿರುವ ಸಾಧ್ಯತೆಯಿದೆ. ಊರ್ವಶಿ ಸೇರಿದಂತೆ ಹಲವು ಚಿತ್ರಮಂದಿರಗಳ ಬುಕ್ಕಿಂಗ್ ಶುರುವಾಗಿಲ್ಲ. ಇನ್ನು ಬೆಳ್ಳಬೆಳಗ್ಗೆ 5 ಗಂಟೆಗೆ ಹಲವೆಡೆ ಶೋಗಳು ಆರಂಭವಾಗಿದೆ. ಬಹುತೇಕ ಥಿಯೇಟರ್‌ನಲ್ಲಿ ಅರ್ಲಿ ಮಾರ್ನಿಂಗ್ ಶೋ ಟಿಕೆಟ್ಸ್ ಸೋಲ್ಡ್‌ಔಟ್ ಆಗೋಗಿದೆ.

'ಸಲಾರ್' ಜೊತೆಗೆ ಶಾರುಖ್ ಖಾನ್ ನಟನೆಯ 'ಡಂಕಿ' ಸಿನಿಮಾ ಕೂಡ ತೆರೆಗೆ ಬರ್ತಿದೆ. ಹಾಗಾಗಿ ಎರಡೂ ಸಿನಿಮಾಗಳ ನಡುವೆ ಬಾಕ್ಸಾಫೀಸ್‌ನಲ್ಲಿ ಭಾರೀ ಪೈಪೋಟಿ ಏರ್ಪಡುವ ಸುಳಿವು ಸಿಗುತ್ತಿದೆ. ಥಿಯೇಟರ್‌ಗಳು, ಶೋಗಳ ವಿಚಾರದಲ್ಲೂ ಎರಡೂ ಸಿನಿಮಾಗಳ ಮಧ್ಯೆ ಸೆಣಸಾಟ ನಡೆಯಲಿದೆ. ಉತ್ತರ ಭಾರತದಲ್ಲಿ 'ಡಂಕಿ' ಸಿನಿಮಾ ಹೆಚ್ಚು ಸ್ಕ್ರೀನ್‌ಗಳಲ್ಲಿ ಪ್ರದರ್ಶನ ಕಂಡರೆ ದಕ್ಷಿಣದಲ್ಲಿ 'ಸಲಾರ್' ಕೈ ಮೇಲಾಗುವ ಸುಳಿವು ಸಿಗುತ್ತಿದೆ.

More from Filmibeat

English summary
Rajamouli Bought Salaar's First Ticket for whopping price;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X