For Quick Alerts
  ALLOW NOTIFICATIONS  
  For Daily Alerts

  ಬಾಹುಬಲಿ 'ಮೀರಿಸಲಿರುವ' ಪ್ರಭಾಸ್ ಸಿನಿಮಾ ಬಗ್ಗೆ ರಾಜಮೌಳಿ ಕಮೆಂಟ್ಸ್

  |

  'ಬಾಹುಬಲಿ' ಭಾರತ ಸಿನಿಮಾ ಇತಿಹಾಸದಲ್ಲಿ ತನ್ನದೇ ಆದ ಸ್ಥಾನ ಸಂಪಾದಿಸಿದ್ದಾಗಿದೆ. ಮೇಕಿಂಗ್, ದೊಡ್ಡ ಬಜೆಟ್, ಕತೆ ಹೀಗೆ ಹಲವು ಕಾರಣಕ್ಕೆ ಸಿನಿಮಾ ಬಹುವಿಶೇಷ.

  Ayogya ಸಿನಿಮಾದಲ್ಲಿ Satish Neenasam ಕೆಂಡದ ಮೇಲೆ ಓಡಿದ್ದು ಹೇಗೆ ನೋಡಿ|Ayogya song Making| Oneindia Kannada

  ಬಾಹುಬಲಿ ಪ್ರಭಾಸ್ ಅವರೇ ನಾಯಕರಾಗಿ ನಟಿಸುತ್ತಿರುವ ಮತ್ತೊಂದು ಪೌರಾಣಿಕ ಐತಿಹ್ಯ ಸಿನಿಮಾವೊಂದು ತೆರೆಗೆ ಬರಲು ಸಜ್ಜಾಗಿದೆ. ಈ ಸಿನಿಮಾ ಗುಣಮಟ್ಟದಲ್ಲಿ ಬಾಹುಬಲಿಯನ್ನು ಮೀರಿಸುತ್ತದೆಯೋ ಇಲ್ಲವೋ ಎಂಬುದನ್ನು ಕಾಲವೇ ಹೇಳಬೇಕಿದೆ. ಆದರೆ ಬಜೆಟ್‌ನಲ್ಲಿಯಂತೂ ಬಾಹುಬಲಿಯನ್ನು ಮೀರಿಸಲಿದೆ.

  'ಆದಿಪುರುಷ' ಹೆಸರಿಗೂ ಮುಂಚೆ ಪ್ರಭಾಸ್ ಚಿತ್ರಕ್ಕೆ ಇನ್ನೊಂದು ಟೈಟಲ್ ಇಡಲಾಗಿತ್ತು!'ಆದಿಪುರುಷ' ಹೆಸರಿಗೂ ಮುಂಚೆ ಪ್ರಭಾಸ್ ಚಿತ್ರಕ್ಕೆ ಇನ್ನೊಂದು ಟೈಟಲ್ ಇಡಲಾಗಿತ್ತು!

  ಪ್ರಭಾಸ್ ನಟಿಸಲಿರುವ 'ಆದಿಪುರುಷ್' ಸಿನಿಮಾ ಈಗಾಗಲೇ ಬಜೆಟ್ ಕಾರಣಕ್ಕೆ ಸಖತ್ ಸದ್ದು ಮಾಡುತ್ತಿದೆ. ವಿಎಫ್‌ಎಕ್ಸ್ ಒಂದಕ್ಕೇ 250 ಕೋಟಿ ಹಣ ಖರ್ಚು ಮಾಡಲಾಗುತ್ತಿದೆ. ಈ ಸಿನಿಮಾದ ಬಗ್ಗೆ ಬಾಹುಬಲಿ ನಿರ್ದೇಶಕ, ಪ್ರಭಾಸ್ ಸ್ನೇಹಿತರೂ ಆಗಿರುವ ರಾಜಮೌಳಿ ಆಸಕ್ತಿದಾಯಕ ಹೇಳಿಕೆಗಳನ್ನು ನೀಡಿದ್ದಾರೆ.

  'ಆದಿಪುರುಷ' ಚಿತ್ರದ ಬಜೆಟ್, VFX ಖರ್ಚು ಕೇಳಿ ದಂಗಾದ ಭಾರತ ಚಿತ್ರರಂಗ'ಆದಿಪುರುಷ' ಚಿತ್ರದ ಬಜೆಟ್, VFX ಖರ್ಚು ಕೇಳಿ ದಂಗಾದ ಭಾರತ ಚಿತ್ರರಂಗ

  'ಆದಿಪುರುಷ್' ಬಗ್ಗೆ ಸಕಾರಾತ್ಮಕ ಮಾತು

  'ಆದಿಪುರುಷ್' ಬಗ್ಗೆ ಸಕಾರಾತ್ಮಕ ಮಾತು

  'ಎಲ್ಲರ ಮಿತ್ರ' ಎಂದು ಕರೆಸಿಕೊಳ್ಳುವ ರಾಜಮೌಳಿ, ಪ್ರಭಾಸ್ ನಟಿಸುತ್ತಿರುವ 'ಆದಿಪುರುಷ್' ಸಿನಿಮಾದ ಬಗ್ಗೆ ಸಕಾರಾತ್ಮಕ ಹೇಳಿಕೆಯನ್ನೇ ನೀಡಿದ್ದಾರೆ. 'ಆದಿಪುರುಶ್ ಸಿನಿಮಾ ಘೋಷಣೆ ಆಗುವ ಮುನ್ನವೇ ನನಗೆ ಸಿನಿಮಾ ಬಗ್ಗೆ ತಿಳಿದಿತ್ತು' ಎಂದಿದ್ದಾರೆ ರಾಜಮೌಳಿ.

  ರಾಮನ ಕುರಿತಾದ ಸಿನಿಮಾಕ್ಕೆ ಸೂಕ್ತ ಸಮಯ: ರಾಜಮೌಳಿ

  ರಾಮನ ಕುರಿತಾದ ಸಿನಿಮಾಕ್ಕೆ ಸೂಕ್ತ ಸಮಯ: ರಾಜಮೌಳಿ

  'ರಾಮನ ಕುರಿತಾದ ಸಿನಿಮಾ ಮಾಡಲು ಇದು ಸೂಕ್ತ ಸಮಯ. ಈ ಸಿನಿಮಾ ಪ್ರಭಾಸ್ ಕೆರಿಯರ್‌ ಗೆ ದೊಡ್ಡ ತಿರುವು ನೀಡಲಿದೆ. ವೃತ್ತಿ ಜೀವನದ ಟಾಪ್‌ನಲ್ಲಿರುವ ಪ್ರಭಾಸ್‌ ಈ ಸಿನಿಮಾದ ಮೂಲಕ ಇನ್ನೂ ದೊಡ್ಡ ಸ್ಟಾರ್ ಆಗಿ ಮಿಂಚಲಿದ್ದಾರೆ' ಎಂದಿದ್ದಾರೆ ರಾಜಮೌಳಿ.

  ನಟ ಪ್ರಭಾಸ್ ಅವರ ಈ ನಿರ್ಧಾರದಿಂದ ಅಸಮಾಧಾನಗೊಂಡಿರುವ ಕರಣ್ ಜೋಹರ್ನಟ ಪ್ರಭಾಸ್ ಅವರ ಈ ನಿರ್ಧಾರದಿಂದ ಅಸಮಾಧಾನಗೊಂಡಿರುವ ಕರಣ್ ಜೋಹರ್

  ಪೋಸ್ಟರ್ ನೋಡಿದ್ದಾರಂತೆ ರಾಜಮೌಳಿ

  ಪೋಸ್ಟರ್ ನೋಡಿದ್ದಾರಂತೆ ರಾಜಮೌಳಿ

  'ಆದಿಪುರುಷ್' ಸಿನಿಮಾದ ಪೋಸ್ಟರ್ ಇನ್ನೂ ಬಿಡುಗಡೆ ಆಗಿಲ್ಲ. ಆದರೆ ರಾಜಮೌಳಿ ಈಗಾಗಲೇ ಪೋಸ್ಟರ್ ಅನ್ನು ನೋಡಿದ್ದಾರಂತೆ. ಪ್ರಭಾಸ್ ರಾಮನಾಗಿ ಅದ್ಭುತವಾಗಿ ಕಾಣುತ್ತಿದ್ದಾರೆ. ಸಿನಿಮಾದ ಫರ್ಸ್ ಲುಕ್ ಬಿಡುಗಡೆ ಆದಾಗ ಪ್ರಭಾಸ್ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಲಿದ್ದಾರೆ ಎಂದಿದ್ದಾರೆ ರಾಜಮೌಳಿ. ಅಭಿಮಾನಿಯೊಬ್ಬ ಮಾಡಿರುವ ಪೋಸ್ಟರ್ ಒಂದು ಇದೀಗ ವೈರಲ್ ಆಗಿದೆ.

  500 ಕೋಟಿ ಬಜೆಟ್‌ನ ಸಿನಿಮಾ

  500 ಕೋಟಿ ಬಜೆಟ್‌ನ ಸಿನಿಮಾ

  ಭೂಷಣ್ ಕುಮಾರ್ ನಿರ್ಮಿಸುತ್ತಿರುವ ಶ್ರೀರಾಮನ ಕತೆ ಆಧರಿತ 'ಆದಿಪುರುಷ್' ಸಿನಿಮಾದ ಬಜೆಟ್ 500 ಕೋಟಿ ಎನ್ನಲಾಗಿದೆ. ಬಾಹುಬಲಿ ಎರಡೂ ಸಿನಿಮಾ ಸಿನಿಮಾಕ್ಕೆ ಖರ್ಚಾಗಿದ್ದಿದ್ದು 430 ಕೋಟಿ. ಆದಿಪುರುಶ್ ಭಾರತದ ಅತಿ ಹೆಚ್ಚು ಬಜೆಟ್‌ನ ಸಿನಿಮಾಗಳಲ್ಲಿ ಒಂದಾಗಲಿದೆ. ಪ್ರಸ್ತುತ ಮೊದಲ ಸ್ಥಾನದಲ್ಲಿ ರಜನೀಕಾಂತ್‌ ಅಭಿನಯದ ರೋಬೋಟ್ 2.0 (570 ಕೋಟಿ) ಇದೆ.

  ಪ್ರಭಾಸ್ ಏಕೆ ನನ್ನ ಆತ್ಮೀಯ ಗೆಳೆಯ: ರಾಜಮೌಳಿ ನೀಡಿದ ಕಾರಣಗಳುಪ್ರಭಾಸ್ ಏಕೆ ನನ್ನ ಆತ್ಮೀಯ ಗೆಳೆಯ: ರಾಜಮೌಳಿ ನೀಡಿದ ಕಾರಣಗಳು

  English summary
  Rajamouli made interesting comments on Prabhas's big budget movie Adipurush. He said it will be career hit movie for Prabhas.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X