twitter
    For Quick Alerts
    ALLOW NOTIFICATIONS  
    For Daily Alerts

    'RRR' ಸಿನಿಮಾದಲ್ಲಿ ಕತ್ತರಿಸಲ್ಪಟ್ಟ ದೃಶ್ಯಗಳದೆಷ್ಟೋ? ಇಲ್ಲಿದೆ ಮಾಹಿತಿ

    |

    ರಾಜಮೌಳಿ ನಿರ್ದೇಶಿಸಿರುವ 'RRR' ಸಿನಿಮಾ ಬರೋಬ್ಬರಿ 3 ಗಂಟೆ 2 ನಿಮಿಷ ಉದ್ದವಿದೆ. ಸಿನಿಮಾದ ಉದ್ದ ಹೆಚ್ಚಾಯಿತು ಎಂದು ಕೆಲವು ವಿಮರ್ಶಕರು ಗುರುತಿಸಿದ್ದಾರೆ. ಆದರೆ ಅಸಲಿಗೆ ಸಿನಿಮಾದ ಉದ್ದ ಇನ್ನೂ ಬಹಳ ಉದ್ದ ಇತ್ತು.

    ರಾಜಮೌಳಿ ತೆಗೆದಿರುವ ಎಲ್ಲ ದೃಶ್ಯಗಳನ್ನು ಜೋಡಿಸಿದರೆ ಸಿನಿಮಾ ನಾಲ್ಕು ಗಂಟೆಗಿಂತಲೂ ಹೆಚ್ಚು ಉದ್ದವಾಗುತ್ತದೆಯಂತೆ. ಆದರೆ ಹಲವಾರು ದೃಶ್ಯಗಳನ್ನು ಕತ್ತರಿಸಿದ ಬಳಿಕ ಸಿನಿಮಾ ಮೂರು ಗಂಟೆಗೆ ಇಳಿದಿದೆ.

    Alia Bhatt: ರಾಜಮೌಳಿ ವಿರುದ್ಧ ಮುನಿಸು? RRR ಪೋಸ್ಟ್ ಡಿಲೀಟ್ ಮಾಡಿದ್ದಕ್ಕೆ ಕಾರಣ ಕೊಟ್ಟ ಆಲಿಯಾAlia Bhatt: ರಾಜಮೌಳಿ ವಿರುದ್ಧ ಮುನಿಸು? RRR ಪೋಸ್ಟ್ ಡಿಲೀಟ್ ಮಾಡಿದ್ದಕ್ಕೆ ಕಾರಣ ಕೊಟ್ಟ ಆಲಿಯಾ

    ಆದರೆ ಸಿನಿಮಾದಲ್ಲಿ ಹಲವಾರು ದೃಶ್ಯಗಳಿಗೆ ಕತ್ತರಿ ಹಾಕಲಾಗಿದೆ. ಈ ಬಗ್ಗೆ ನಟರುಗಳು ಒಬ್ಬೊಬ್ಬರಾಗಿ ಮಾತನಾಡುತ್ತಿದ್ದಾರೆ. ಮೊದಲಿಗೆ ಆಲಿಯಾ ಭಟ್ ತಮ್ಮ ಪಾತ್ರಕ್ಕೆ ತಕ್ಕರಿ ಹಾಕಿದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು, ನಂತರ ಇದೀಗ ನಟ ಮಕರಂದ್ ದೇಶಪಾಂಡೆ ತಮ್ಮ ಪಾತ್ರಕ್ಕೆ ಕತ್ತರಿಸಿರುವ ಬಗ್ಗೆ ಮಾತನಾಡಿದ್ದಾರೆ.

    ಮಕರಂದ್ ದೇಶಪಾಂಡೆಗೆ ಎರಡೇ ಸಣ್ಣ ದೃಶ್ಯ

    ಮಕರಂದ್ ದೇಶಪಾಂಡೆಗೆ ಎರಡೇ ಸಣ್ಣ ದೃಶ್ಯ

    ಮಕರಂದ್ ದೇಶಪಾಂಡೆ ಬಾಲಿವುಡ್‌ನ ಜನಪ್ರಿಯ ಪೋಷಕ ನಟ, 'RRR' ಸಿನಿಮಾದಲ್ಲಿ ಅವರದ್ದು ಕೇವಲ ಒಂದು ದೃಶ್ಯವಷ್ಟೆ ಇದೆ. ಜೂ ಎನ್‌ಟಿಆರ್‌ ಅನ್ನು ಹುಲಿ ಅಟ್ಟಿಸಿಕೊಂಡು ಬರುವಾಗ ಮೇಲೆ ಕುಳಿತ ಮಕರಂದ್, ತೋಳವಲ್ಲ ಹುಲಿ ಬರ್ತಿದೆ ಎಂಬ ಡೈಲಾಗ್ ಹೇಳುತ್ತಾರೆ. ಹುಲಿಯನ್ನು ವಶಪಡಿಸಿಕೊಂಡ ಬಳಿಕ ಜೂ ಎನ್‌ಟಿಆರ್ ಜೊತೆ ಕುಳಿತುಕೊಂಡಿರುವ ದೃಶ್ಯವೊಂದು ಇದೆ. ಕೇವಲ ಇಷ್ಟು ದೃಶ್ಯಕ್ಕೆ ಮಕರಂದ್ ದೇಶಪಾಂಡೆಯನ್ನು ರಾಜಮೌಳಿ ಬಳಸಿಕೊಂಡಿದ್ದಾರೆ.

    ಜೂ ಎನ್‌ಟಿಆರ್ ಪಾತ್ರದ ಹುಟ್ಟು, ಬಾಲ್ಯದ ದೃಶ್ಯಗಳು ಇದ್ದವಂತೆ

    ಜೂ ಎನ್‌ಟಿಆರ್ ಪಾತ್ರದ ಹುಟ್ಟು, ಬಾಲ್ಯದ ದೃಶ್ಯಗಳು ಇದ್ದವಂತೆ

    ಆದರೆ ಮಕರಂದ್ ದೇಶಪಾಂಡೆ ಅವರೇ ಹೇಳಿರುವಂತೆ ತಮ್ಮ ಪಾತ್ರ ಇನ್ನೂ ಇತ್ತಂತೆ. ಜೂ ಎನ್‌ಟಿಆರ್ ಹುಟ್ಟಿದಾಗ ಹೆಸರಿಡುವ ದೃಶ್ಯ, ಅವನ ಬೆಳವಣಿಗೆ ಗಮನಿಸಿ, ಅವನ ಶಕ್ತಿಯನ್ನು ಗುರುತಿಸುವ ಕೆಲವು ದೃಶ್ಯಗಳನ್ನು ಚಿತ್ರೀಕರಿಸಲಾಗಿತ್ತಂತೆ ಆದರೆ ಸಿನಿಮಾ ಉದ್ದವಾದ ಕಾರಣ ಅವುಗಳನ್ನು ತೆಗೆದು ಹಾಕಲಾಯ್ತಂತೆ. ಅಷ್ಟೇ ಅಲ್ಲ, ಬ್ರಿಟೀಷರು ಗೋಂಡ ಬಾಲಕಿ ಮಲ್ಲಿಯನ್ನು ಎಳೆದೊಯ್ದ ಬಳಿಕ ಜೂ ಎನ್‌ಟಿಆರ್ ಬಳಿ ಮಲ್ಲಿಯ ತಂದೆ ದೂರು ಹೇಳುವ ಮಗಳನ್ನು ಮರಳಿ ತಂದುಕೊಡೆಂದು ಕೇಳುವ ದೃಶ್ಯಗಳೂ ಸಹ ಚಿತ್ರೀಕರಿಸಲಾಗಿತ್ತಂತೆ ಆದರೆ ಅವೆಲ್ಲ ಯಾವುದೂ ಇಲ್ಲ.

    ಆಲಿಯಾ ಭಟ್ ವಿಷಯದಲ್ಲಿ ಹೀಗೆ ಆಗಿದೆ

    ಆಲಿಯಾ ಭಟ್ ವಿಷಯದಲ್ಲಿ ಹೀಗೆ ಆಗಿದೆ

    ಆಲಿಯಾ ಭಟ್ ವಿಷಯದಲ್ಲಿಯೂ ಹೀಗೆಯೇ ಆಗಿದೆ. ಆಲಿಯಾ ಭಟ್‌ ಇದ್ದ ಹಲವು ದೃಶ್ಯಗಳನ್ನು ರಾಜಮೌಳಿ ಚಿತ್ರೀಕರಿಸಿದ್ದರು. ಆಲಿಯಾ ಭಟ್ ಹಾಗೂ ರಾಮ್ ಚರಣ್ ಮಧ್ಯೆ ಹಾಡೊಂದು ಸಹ ಇತ್ತು ಎನ್ನಲಾಗಿದೆ. ಆದರೆ ಅದೆಲ್ಲದಕ್ಕೂ ರಾಜಮೌಳಿ ಕತ್ತರಿ ಹಾಕಿದ್ದಾರೆ. ಸೀತಾ ಎಷ್ಟು ಗಟ್ಟಿ ಮನಸ್ಸಿನ ದೇಶಪ್ರೇಮಿ ಹುಡುಗಿ ಎಂಬುದನ್ನು ತೋರಿಸಲು ಹಳ್ಳಿಯವರೊಟ್ಟಿಗೆ ರಾಜಮೌಳಿ ಕೆಲವು ದೃಶ್ಯಗಳನ್ನು ಚಿತ್ರೀಕರಿಸಿಕೊಂಡಿದ್ದರು ಆದರೆ ಅವನ್ನು ಸಹ ಎಡಿಟ್ ಮಾಡಲಾಗಿದೆ.

    ಕತ್ತರಿಸಿರುವ ದೃಶ್ಯಗಳ ಜೋಡಣೆ

    ಕತ್ತರಿಸಿರುವ ದೃಶ್ಯಗಳ ಜೋಡಣೆ

    'RRR' ಸಿನಿಮಾದಲ್ಲಿ ಇನ್ನೂ ಹಲವಾರು ದೃಶ್ಯಗಳನ್ನು ಎಡಿಟ್ ಮಾಡಲಾಗಿದೆ. ಸಿನಿಮಾದ ಉದ್ದ ಕಡಿಮೆ ಮಾಡಲೆಂದು ಈ ಕಾರ್ಯ ಮಾಡಲಾಗಿದೆ. ಆದರೆ ಸಿನಿಮಾವು ಒಟಿಟಿಗೆ ಬಿಡಗುಡೆ ಆದಾಗ ಈ ಕತ್ತರಿಸಿದ ದೃಶ್ಯಗಳನ್ನೆಲ್ಲ ಒಟ್ಟಿಗೆ ಸೇರಿಸಿ ಬಿಡುಗಡೆ ಮಾಡಲಾಗುತ್ತದೆ ಎನ್ನಲಾಗುತ್ತಿದೆ. ಚಿತ್ರೀಕರಿಸಿದ ಎಲ್ಲ ದೃಶ್ಯಗಳನ್ನು ಸೇರಿಸಿದೇ ಇದ್ದರೂ ಆಲಿಯಾ ಭಟ್‌ ಅವರ ದೃಶ್ಯಗಳನ್ನಾದರೂ ಒಟಿಟಿಯಲ್ಲಿ ಬಿಡುಗಡೆ ಆಗುವ ಕಾಪಿಗೆ ಸೇರಿಸಲಾಗುತ್ತದೆ ಎನ್ನಲಾಗುತ್ತಿದೆ.

    English summary
    Director Rajamouli edited many scenes from RRR movie. He shot many scenes of Alia Bhat, Makarand Deshpande and others.
    Saturday, April 2, 2022, 17:58
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X