ಬಹುನಿರೀಕ್ಷಿತ 'RRR' ಚಿತ್ರದ ರನ್ ಟೈಮ್ ಲಾಕ್ ಮಾಡಿದ ರಾಜಮೌಳಿ

ಹೈವೋಲ್ಟೇಜ್ ವಾರ್ ಡ್ರಾಮಾ, ಪಿರಿಯಾಡಿಕ್ ಎಪಿಕ್, ಭಾರತೀಯ ಸಿನಿಮಾ ರಂಗದ ದಿಗ್ದರ್ಶಕ, ಬಹುಕೋಟಿ ವೆಚ್ಚದ, ಬಹುತಾರಾಗಣದ ಚಿತ್ರವೆಂದೇ ವಿಶ್ವದ ಗಮನ ಸೆಳೆದಿರುವ 'RRR' ಚಿತ್ರ ಜನವರಿ 7ರಂದು ವಿಶ್ವದಾದ್ಯಂತ ಬಿಡುಗಡೆಗೆ ಸನ್ನದ್ಧವಾಗಿದೆ. ಪ್ರಸ್ತುತ ಶರವೇಗದಲ್ಲಿ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದೆ. ಜೊತೆಗೆ ಚಿತ್ರದ ಬಿಡುಗಡೆಯ ಸಮಯ ಹತ್ತಿರವಾಗುತ್ತಿದ್ದಂತೆ, ನಿರ್ದೇಶಕ ಎಸ್ ಎಸ್ ರಾಜಮೌಳಿ ಚಿತ್ರದ ಭರ್ಜರಿ ಪ್ರಮೋಶನ್ ಮೇಲೆ ಕೂಡ ಫೋಕಸ್ ನೆಟ್ಟಿದ್ದಾರೆ. ಇದೇ ಹಿನ್ನೆಲೆಯಲ್ಲಿ ಚಿತ್ರದ ಟ್ರೈಲರ್ ಅನ್ನು ಕೂಡ ಬಹಳ ಜಾಗ್ರತೆಯಿಂದ ಸಿದ್ಧಪಡಿಸುತ್ತಿದ್ದಾರೆ ಎನ್ನಲಾಗುತ್ತಿದೆ.

ರಾಜಮೌಳಿ ಮೇಲಿದೆ ಭಾರಿ ಒತ್ತಡ

'RRR' ಚಿತ್ರದ ಆತ್ಮವೇ ರಾಜಮೌಳಿ. ಇದರಲ್ಲಿರುವ ನಟ- ನಟಿಯರು ತಾಂತ್ರಿಕ ವರ್ಗಕ್ಕಿಂತ ಹೆಚ್ಚಾಗಿ ಜನರ ಗಮನ ಸೆಳೆದಿರುವುದು 'RRR' ಎಸ್.ಎಸ್. ರಾಜಮೌಳಿ ಚಿತ್ರವೆಂದು. ಅದರಲ್ಲೂ ಭಾರತೀಯ ಸಿನಿಮಾರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಿ, 2,000 ಕೋಟಿ ಕಲೆಕ್ಷನ್ ಮಾಡಿದ 'ಬಾಹುಬಲಿ-2' ನಂತರ ಬರುತ್ತಿರುವ ಚಿತ್ರ. ಹೀಗಾಗಿ ಸಹಜವಾಗಿಯೇ 400 ಕೋಟಿ ವೆಚ್ಚದಲ್ಲಿ ತಯಾರಾಗಿರುವ 'RRR' ಮೇಲೆ ಸಾಕಷ್ಟು ಒತ್ತಡಗಳಿವೆ.

'RRR' ಚಿತ್ರದ ಟ್ರೈಲರ್ ಮೇಲೆ ರಾಜಮೌಳಿ ಫೋಕಸ್

'RRR' ಚಿತ್ರದ ಟ್ರೈಲರ್ ಮೇಲೆ ರಾಜಮೌಳಿ ಫೋಕಸ್

'ಕೆಜಿಎಫ್- 2' ಚಿತ್ರತಂಡ ಪ್ರತಿ ಭಾಷೆಗೂ ಒಂದೊಂದು ಅದರದೇ ಭಾಷೆಯ ಟ್ರೈಲರ್ ಕಟ್ ಮಾಡದೆ ಎಲ್ಲಾ ಭಾಷೆಗೂ ಅನ್ವಯಿಸುವಂತೆ ಒಂದೇ ಟ್ರೈಲರ್ ಕಟ್ ಮಾಡಿ ಬಿಡುಗಡೆ ಮಾಡಿದ ಕಾರಣ 24ಗಂಟೆಯಲ್ಲಿ 64 M ವಿವ್ಸ್‌ ಪಡೆದು ಹೊಸ ಇತಿಹಾಸ ಸೃಷ್ಟಿ ಮಾಡಿತು. ಇದೇ ಕ್ರಮದಲ್ಲಿ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರ ಪ್ರಭಾಸ್ ಅವರ 'ರಾಧೇಶ್ಯಾಮ್' ಚಿತ್ರತಂಡ ಕೂಡ ಎಲ್ಲಾ ಭಾಷೆಗೂ ಒಂದೇ ಟೀಸರ್ ಕಟ್ ಮಾಡಿ ಪ್ರಭಾಸ್ ಹುಟ್ಟುಹಬ್ಬದ ಸಂದರ್ಭದಲ್ಲಿ ವಿಕ್ರಮಾದಿತ್ಯ ಪಾತ್ರವನ್ನು ರಿವೀಲ್ ಮಾಡಿತ್ತು. ಹೀಗಾಗಿ ಈ ಟೀಸರ್ ಕೂಡ 24ಗಂಟೆಯಲ್ಲಿ ಬರೋಬ್ಬರಿ 62 M (ಮಿಲಿಯನ್) ದಕ್ಕಿಸಿಕೊಳ್ಳಲು ಯಶಸ್ವಿಯಾಗಿದೆ. ಹೀಗಾಗಿ ಇವೆರಡನ್ನು ಗಮನಿಸಿರುವ ರಾಜಮೌಳಿ ಅವರು ಕೂಡ ಇದೇ ಹಾದಿಯಲ್ಲಿ 'RRR' ಚಿತ್ರದ ಟ್ರೈಲರ್ ಅನ್ನು ಎಲ್ಲಾ ಭಾಷೆಗಳಿಗೂ ಅನ್ವಯಿಸುವಂತೆ ಒಂದೇ ಟ್ರೈಲರ್ ಗ್ರಾಂಡ್ ಸ್ಕೇಲ್ ನಲ್ಲಿ ಬಿಡುಗಡೆ ಮಾಡಲು ಪ್ಲಾನಿಂಗ್ ಮಾಡ್ತಾ ಇದ್ದಾರೆ ಅಂತ ಕೇಳಿಬರುತ್ತಿದೆ.

ಚಿತ್ರದ ರನ್ ಟೈಮ್ ಕೂಡ ಲಾಕ್ ಮಾಡಲಾಗಿದೆ.

ಚಿತ್ರದ ರನ್ ಟೈಮ್ ಕೂಡ ಲಾಕ್ ಮಾಡಲಾಗಿದೆ.

ಎನ್ ಟಿ ಆರ್, ರಾಮ್ ಚರಣ್ ತೇಜ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಬಾಲಿವುಡ್ ನಟ ಅಜಯ್ ದೇವಗನ್ ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಬಾಲಿವುಡ್ ನಟಿ ಆಲಿಯಾ ಭಟ್ ಕೂಡ ಇದರಲ್ಲಿ ನಟಿಸುತ್ತಿದ್ದಾರೆ. ಇನ್ನು 'RRR' ಚಿತ್ರದ ಮೇಜರ್ ಅಟ್ರಾಕ್ಷನ್ ಅಂದರೆ ಕ್ಲೈಮ್ಯಾಕ್ಸ್ ನ ವಾರ್ ಎಪಿಸೋಡ್ ಅಂತ ಹೇಳಲಾಗುತ್ತಿದೆ. ಇಂತಹ ವಾರ್ ಎಪಿಸೋಡ್ ಭಾರತೀಯ ಸಿನಿಮಾ ರಂಗದಲ್ಲಿ ಇದುವರೆಗೂ ಎಂದು ನೋಡಿರಲು ಸಾಧ್ಯವಿಲ್ಲ, ಅಷ್ಟೊಂದು ಅದ್ಭುತವಾಗಿ ನಿರ್ದೇಶಕ ರಾಜಮೌಳಿ ಅವರು ವಾರ್ ಎಪಿಸೋಡ್ ಚಿತ್ರಿಸಿದ್ದಾರೆ ಅಂತ ಹೇಳಲಾಗುತ್ತಿದೆ. ಬಹುತಾರಾಗಣದ, ಬಹುವೆಚ್ಚದ, ಬಹುಭಾಷೆಯಲ್ಲಿ ಬಿಡುಗಡೆಯಾಗುತ್ತಿರುವ ಈ ಚಿತ್ರದ ರನ್ನಿಂಗ್ ಟೈಮ್ ಅನ್ನ 165 ನಿಮಿಷಕ್ಕೆ (2. 45 ನಿಮಿಷ) ನಿರ್ದೇಶಕರು ಲಾಕ್ ಮಾಡಿದ್ದಾರೆ ಅಂತ ಚಿತ್ರತಂಡದ ಮೂಲಗಳಿಂದ ತಿಳಿದು ಬರುತ್ತಿದೆ. ಚಿತ್ರ 2 ಗಂಟೆ 45 ನಿಮಿಷಗಳ ಸುದೀರ್ಘ ಅವಧಿಯನ್ನು ಹೊಂದಿದ್ದರು, ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಎಲ್ಲಾ ಅಂಶಗಳು ಇದರಲ್ಲಿದೆ. ರಾಜಮೌಳಿ ಚಲನಚಿತ್ರಗಳು ಮುಖ್ಯವಾಗಿ ಭಾವನೆಗಳ ಮೇಲೆ ನಡೆಯುತ್ತವೆ ಮತ್ತು 'RRR' ಇದಕ್ಕೆ ಹೊರತಾಗಿಲ್ಲ. ಮನಸ್ಸಿಗೆ ಮುದ ನೀಡುವ ಇಂಟರ್ವಲ್ ಬ್ಲಾಕ್ ಮತ್ತು ಆಕ್ಷನ್-ಆಧಾರಿತ ಕ್ಲೈಮ್ಯಾಕ್ಸ್‌ನೊಂದಿಗೆ, ರಾಜಮೌಳಿ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸುತ್ತಾರೆ. RRR ನ ಕೊನೆಯ 30 ನಿಮಿಷಗಳು ಆಕ್ಷನ್ ಸೀಕ್ವೆನ್ಸ್‌ಗಳಿಂದ ತುಂಬಿರುತ್ತವೆ ಎಂದು ವರದಿಗಳು ಹೇಳುತ್ತಿವೆ.

ವಿಶ್ವದ ಗಮನ ಸೆಳೆಯಲು ದುಬೈನಲ್ಲಿ ಅದ್ಧೂರಿ ಕಾರ್ಯಕ್ರಮ

ವಿಶ್ವದ ಗಮನ ಸೆಳೆಯಲು ದುಬೈನಲ್ಲಿ ಅದ್ಧೂರಿ ಕಾರ್ಯಕ್ರಮ

ತೆಲುಗಿನ ಇಬ್ಬರು ಸೂಪರ್ ಸ್ಟಾರ್ ಗಳ ಜೊತೆಯಲ್ಲಿ ರಾಜಮೌಳಿ ನಿರ್ದೇಶಿಸಿರುವ 'RRR' ಜನವರಿ 7, 2022 ರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ.

ಇನ್ನು ಸಿನಿಮಾ ಬಿಡುಗಡೆ ಹತ್ತಿರವಾಗುತ್ತಿದ್ದಂತೆ, ರಾಜಮೌಳಿ ಪ್ರಚಾರತಂತ್ರಗಳನ್ನು ಚುರುಕುಗೊಳಿಸಿದ್ದಾರೆ. ಇದೇ ಕ್ರಮದಲ್ಲಿ ದುಬೈನಲ್ಲಿ 'RRR' ಪ್ರಿ-ರಿಲೀಸ್ ಸಮಾರಂಭ ಅದ್ಧೂರಿಯಾಗಿ ನಡೆಯಲಿದೆ. ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ನಟರು ಹಾಗೂ ತಂತ್ರಜ್ಞರು ಭಾಗವಹಿಸುವ 'RRR' ಪ್ರೀ ರಿಲೀಸ್ ಕಾರ್ಯಕ್ರಮವನ್ನು ಅದ್ದೂರಿಯಾಗಿ ಮಾಡಲು ಜಕ್ಕಣ್ಣ (ರಾಜಮೌಳಿ) ಮುಂದಾಗಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ದುಬೈಯಂತಹ ಅಂತಾರಾಷ್ಟ್ರೀಯ ನಗರದಲ್ಲಿ 'RRR' ಪ್ರೀ-ರಿಲೀಸ್ ಸಮಾರಂಭ ನಡೆಸುವ ಮೂಲಕ ವಿಶ್ವ ಗಮನ ಸೆಳೆಯಲು ಚಿತ್ರತಂಡ ಪ್ಲಾನ್ ಮಾಡ್ತಾ ಇದೆ ಅಂತೆ. ಆದರೆ ಇದಕ್ಕೆ ಸಂಬಂಧಿಸಿದಂತೆ ಯಾವುದೇ ಮಾಹಿತಿಯನ್ನು ಸದ್ಯಕ್ಕೆ ಚಿತ್ರತಂಡ ಬಿಟ್ಟುಕೊಡಲು ಸಿದ್ಧವಿಲ್ಲವಂತೆ.

PVR ಮಲ್ಟಿಪ್ಲೆಕ್ಸ್ ಚೈನ್ 'RRR'

PVR ಮಲ್ಟಿಪ್ಲೆಕ್ಸ್ ಚೈನ್ 'RRR'

ಚಿತ್ರತಂಡದ ಜೊತೆ ಕೈಜೋಡಿಸಿ ತನ್ನ ಎಲ್ಲಾ PVR ಫ್ರಾಂಚೈಸಿಗಳನ್ನು 'PVRRR' ಅಂತ ಬದಲಾಯಿಸಿದೆ. ಅಂದರೆ PVR- RRR' ಜಾಯಿಂಟ್ ಆಗಿ PVRRR ಅಂತ ಹೇಳಿ ಚಿತ್ರದ ಪ್ರಚಾರ ಸರಣಿಯನ್ನು ಚುರುಕುಗೊಳಿಸಿದೆ. ಜನವರಿ 7ರಂದು PVR ಮಲ್ಟಿಪ್ಲೆಕ್ಸುಗಳಲ್ಲಿ PRR ದೊಡ್ಡ ಹವಾ ಉಂಟುಮಾಡುವ ವಿಶ್ವಾಸವನ್ನು PVR Cinema's ವಿಶ್ವಾಸ ವ್ಯಕ್ತಪಡಿಸಿದೆ. ಅಲ್ಲದೆ RRR ಅಂತಹ ದೊಡ್ಡ Epic ಚಿತ್ರದ ಜೊತೆಯಲ್ಲಿ ಹೀಗೆ ಕೈಜೋಡಿಸಿರುವುದಕ್ಕೆ ಅತೀವ ಸಂತಸವಾಗಿದೆ ಅಂತ ಅದು ಹೇಳಿಕೊಂಡಿದೆ. ಇನ್ನು ರಾಜಮೌಳಿ ಅವರು "ಆರ್ ಆರ್ ಆರ್ ಅಂತಹ ಸಿನಿಮಾವನ್ನು ನೀವು ಬೆಳ್ಳಿತೆರೆಯಲ್ಲಿ ನೋಡಿದರೆ ಮಾತ್ರ ಅನುಭವಕ್ಕೆ ದೊರೆಯುತ್ತದೆ. ಗ್ರಾಂಡ್ ಸ್ಕೇಲ್ ನಲ್ಲಿ ಮಾಡುವ ಪ್ರತಿ ಸಿನಿಮಾ ನೋಡಲು ನಿಮಗೆ ಥಿಯೇಟರ್ ನಲ್ಲಿ ಮಜಾ ಸಿಗುವುದು. ಥಿಯೇಟರ್ ಗೆ ಬಂದಾಗ 'RRR' ಚಿತ್ರದ ನಿಜವಾದ ಎಕ್ಸ್ಪೀರಿಯನ್ಸ್ ನಿಮಗಾಗುತ್ತದೆ" ಅಂತ ಹೇಳಿದ್ದಾರೆ. ಒಟ್ಟಿನಲ್ಲಿ ಜನವರಿ 7ರಂದು ಬಿಡುಗಡೆಯಾಗುತ್ತಿರುವ ಚಿತ್ರಕ್ಕೆ ಈಗಾಗಲೇ ಭರ್ಜರಿ ಪ್ರಚಾರ ಆರಂಭಿಸಿರುವುದು ಮಾತ್ರ ದಿಟ.

More from Filmibeat

English summary
Rajamouli has locked the run time of the much anticipated RRR movie. The total duration of the film now is 165 minutes.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X