ದುಬೈನಲ್ಲಿ RRR ಪ್ರೀ ರಿಲೀಸ್ ಕಾರ್ಯಕ್ರಮ: ಸಲ್ಮಾನ್ ಖಾನ್‌ಗೆ ರಾಜಮೌಳಿ ಆಹ್ವಾನ?

ಭಾರತೀಯ ಸಿನಿಮಾರಂಗದ ಹೆಸರಾಂತ ನಿರ್ದೇಶಕ ಎಸ್‌ಎಸ್ ರಾಜಮೌಳಿ ಇತ್ತೀಚೆಗೆ ಮುಂಬೈಗೆ ಭೇಟಿ ನೀಡಿದ್ದರು. ಆದರೆ ಅವರು ಮುಂಬೈಗೆ ಭೇಟಿ ನೀಡಿದ್ದು ವಿಶೇಷ ಆಗಿರಲಿಲ್ಲ. ಬದಲಿಗೆ ಮುಂಬೈನಲ್ಲಿ ಅವರು ಸಲ್ಮಾನ್‌ ಖಾನ್ ಅವರನ್ನು ಭೇಟಿ ಮಾಡಿದ್ದು ಅತ್ಯಂತ ವಿಶೇಷ.

ಇವರ ಭೇಟಿಯಿಂದ ಚಿತ್ರರಂಗದಲ್ಲಿ ಸಂಚಲನವೇ ಹುಟ್ಟಿಕೊಂಡಿತ್ತು. ಅಷ್ಟಕ್ಕೂ ರಾಜಮೌಳಿ ಯಾಕೆ ಈಗ ದಿಢೀರನೆ ಸಲ್ಮಾನ್‌ ಖಾನ್ ಅವರನ್ನು ಭೇಟಿ ಮಾಡಿದ್ದಾರೆ. ಈ ಭೇಟಿಯ ರಹಸ್ಯ ಏನು ಎನ್ನುವ ಸುದ್ದಿ ಸಾಕಷ್ಟು ಹರಿದಾಡಿತ್ತು.

ಇದೀಗ ಸಲ್ಲು ಭಾಯ್ ಅವರನ್ನು ರಾಜಮೌಳಿ ಭೇಟಿ ಆಗಿದ್ದಾರೆ ಎನ್ನುವ ಬಗ್ಗೆ ಬಾಲಿವುಡ್ ಮತ್ತು ಟಾಲಿವುಡ್‌ನಲ್ಲಿ ಹೊಸ ಸುದ್ದಿ ಕೇಳಿ ಬರುತ್ತಿದೆ.

ಸಲ್ಲು-ರಾಜಮೌಳಿ ಭೇಟಿ ರಹಸ್ಯ ಬಯಲು!

ಸಲ್ಲು-ರಾಜಮೌಳಿ ಭೇಟಿ ರಹಸ್ಯ ಬಯಲು!

ನಿರ್ದೇಶಕ ರಾಜಮೌಳಿ ಮುಂಬೈನಲ್ಲಿ ಸಲ್ಮಾನ್‌ ಖಾನ್‌ ಜೊತೆಗೆ ಪ್ರತ್ಯಕ್ಷ ಆದ ಕೂಡಲೇ, ಈ ಬಗ್ಗೆ ಹಲವಾರು ಊಹಾಪೋಹಗಳು ಹಬ್ಬಿವೆ. ಆದರೆ ಅದಕ್ಕೆಲ್ಲಾ ಈಗ ಉತ್ತರ ಸಿಕ್ಕಂತಾಗಿದೆ. ರಾಜಮೌಳಿ ಯಾಕೆ ಮುಂಬೈಗೆ ಹೋಗಿದ್ದರು. ಅಲ್ಲಿ ಸಲ್ಮಾನ್ ಖಾನ್‌ ಅವರನ್ನು ಯಾಕೆ ಭೇಟಿ ಮಾಡಿದ್ದಾರೆ ಎನ್ನುವ ಬಗ್ಗೆ ಹೊಸ ಸುದ್ದಿ ಬಂದಿದೆ.

ಆದರೆ ಈಗ ಬಾಹುಬಲಿ ನಿರ್ದೇಶಕ ರಾಜಮೌಳಿ ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್‌ ಅವರನ್ನು ಭೇಟಿ ಆಗಲು ಕಾರಣ RRR ಚಿತ್ರ. ಹೌದು ಈ ಚಿತ್ರದ ಪೂರ್ವ ಬಿಡುಗಡೆ ಕಾರ್ಯಕ್ರಮಕ್ಕೆ ಸಲ್ಮಾನ್‌ ಖಾನ್‌ ಅವರನ್ನು ಆಹ್ವಾನಿಸಲು ರಾಜಮೌಳಿ ಮುಂಬೈಗೆ ಹೋಗಿದ್ದರು ಎನ್ನಲಾಗುತ್ತಿದೆ.

RRR ಚಿತ್ರದ ಪ್ರೀ-ರಿಲೀಸ್‌ ಕಾರ್ಯಕ್ರಮಕ್ಕೆ ಸಲ್ಲು ಮುಖ್ಯ ಅತಿಥಿ!

RRR ಚಿತ್ರದ ಪ್ರೀ-ರಿಲೀಸ್‌ ಕಾರ್ಯಕ್ರಮಕ್ಕೆ ಸಲ್ಲು ಮುಖ್ಯ ಅತಿಥಿ!

ರಾಜಮೌಳಿ ಏಕಾಏಕಿ ಸಲ್ಮಾನ್ ಅವರನ್ನು ಭೇಟಿಯಾಗಿರುವುದು RRR ಚಿತ್ರದ ಕಾರ್ಯಕ್ರಮ ಕಾರಣ. RRR ಚಿತ್ರದ ಪ್ರೀ-ರಿಲೀಸ್‌ ಕಾರ್ಯಕ್ರಮ ಕಾರ್ಯಕ್ರಮವನ್ನು ದುಬೈನಲ್ಲಿ ನಡೆಸಲು ಚಿತ್ರತಂಡ ಯೋಜನೆ ರೂಪಿಸಿದೆ. ಈ ಕಾರ್ಯಕ್ರಮಕ್ಕೆ ಸಲ್ಮಾನ್ ಮುಖ್ಯ ಅತಿಥಿಯಾಗಿ ಆಗಮಿಸಬೇಕೆಂದು ರಾಜಮೌಳಿ ತಂಡ ಬಯಸಿದೆ. ಅದಕ್ಕಾಗಿಯೇ ಅವರು ಸಲ್ಮಾನ್‌ ಖಾನ್ ಅವರನ್ನು ಭೇಟಿಯಾಗಿ, ಆತ್ಮೀಯವಾಗಿ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರಂತೆ.

ಸಲ್ಮಾನ್‌ ಖಾನ್‌ ಅವರಿಗೆ ಇರುವ ಸ್ಟಾರ್‌ ಕ್ರೇಜ್‌ನಿಂದ ಹೆಚ್ಚಿನ ಜನರನ್ನು ತಲುಪಬಹುದು. ಹಾಗಾಗಿ ಈ ಕಾರ್ಯಕ್ರಮಕ್ಕೆ ಸಲ್ಲು ಅವರನ್ನು ಆಹ್ವಾನಿಸಲಾಗಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಚಿತ್ರ ತಂಡ ಅಧಿಕೃತ ಹೇಳಿಕೊಂಡಿಲ್ಲ. ಆದರೆ ಬಾಲಿವುಡ್‌ ಮತ್ತು ಟಾಲಿವುಡ್‌ನಲ್ಲಿ ಈ ಬಗ್ಗೆ ಸುದ್ದಿ ಹಬ್ಬಿದೆ. ದುಬೈನಲ್ಲಿ ನಡೆಯಲಿರುವ ಆರ್‌ ಆರ್‌ ಆರ್ ಚಿತ್ರದ ಕಾರ್ಯಕ್ರಮಕ್ಕೆ ಸಲ್ಮಾನ್‌ ಖಾನ್‌ ಮುಖ್ಯ ಅತಿಥಿ ಎಂದು ಹೇಳಲಾಗುತ್ತಿದೆ.

ದುಬೈನಲ್ಲಿ RRR ಅದ್ಧೂರಿ ಕಾರ್ಯಕ್ರಮ!

ದುಬೈನಲ್ಲಿ RRR ಅದ್ಧೂರಿ ಕಾರ್ಯಕ್ರಮ!

ತ್ರಿಬಲ್‌ ಆರ್ ಸಿನಿಮಾ 2022 ಜನವರಿ 7ರಂದು ತೆರೆಗ ಬರಲಿದೆ. ಈ ದಿನಕ್ಕಾಗಿ ಆರ್‌ಆರ್‌ಆರ್‌ ಸಿನಿಮಾದ ಸಹಸ್ರಾರು ಅಭಿಮಾನಿಗಳು ಕಾಯುತ್ತಿದ್ದಾರೆ. . ಅದಕ್ಕೂ ಮುನ್ನ ದುಬೈನಲ್ಲಿ RRR ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಹಲವು ಸಿನಿಮಾ ರಂಗದ ಗಣ್ಯರು ಸಾಕ್ಷಿ ಆಗಲಿದ್ದಾರೆ.

ಈ ಕಾರ್ಯಕ್ರಮವನ್ನು ಅದ್ಧೂರಿ, ಬಹಳ ದೊಡ್ಡದಾಗಿ ಮಾಡಲು ಚಿತ್ರತಂಡ ಯೋಜನೆ ರೂಪಿಸುತ್ತಿದೆಂತೆ. ಹಾಗಾಗಿ ಈ ಕಾರ್ಯಕ್ರಮ ಚಿತ್ರರಂಗದ ಕೆಲವರಿಗೆ ಮಾತ್ರ ಅಥವಾ ಚಿತ್ರ ತಂಡಕ್ಕೆ ಮಾತ್ರ ಸೀಮಿತ ಆಗಿರುವುದಿಲ್ಲ. ಬದಲಿಗೆ ಹಲವು ಚಿತ್ರ ರಂಗದ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರೆ. ಇದೇ ನಿಟ್ಟಿನಲ್ಲಿ ಮೊದಲ ಆಮಂತ್ರಣ ಸಲ್ಮಾನ್‌ ಖಾನ್‌ ಅವರಿಗೆ ಹೋಗಿದೆ. ಕಾರ್ಯಕ್ರಮದ ಮುಖ್ಯ ಅತಿಥಿ ಆಗಿ ಸಲ್ಮಾನ್‌ ಖಾನ್‌ ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರೆ.

ಸಲ್ಮಾನ್‌ ಖಾನ್‌- ರಾಜಮೌಳಿ ಚಿತ್ರ ಯಾವಾಗ?

ಸಲ್ಮಾನ್‌ ಖಾನ್‌- ರಾಜಮೌಳಿ ಚಿತ್ರ ಯಾವಾಗ?

ಇನ್ನೂ ಈ ಹಿಂದೆ 'ಭಜರಂಗಿ ಭಾಯ್‌ಜಾನ್' ಸಿನಿಮಾ ಬಂದ ಸಮಯದಲ್ಲಿ ಸಲ್ಮಾನ್ ಹಾಗೂ ರಾಜಮೌಳಿ ಒಟ್ಟಿಗೆ ಸಿನಿಮಾ ಮಾಡ ಬೇಕಿತ್ತು. ಆದರೆ ಆ ಸಮಯದಲ್ಲಿ ರಾಜಮೌಳಿ ಸಲ್ಮಾನ್‌ ಖಾನ್ ಜೊತೆಗೆ ಸಿನಿಮಾ ಮಾಡುವ ಅವಕಾಶವನ್ನು ನಿರಾಕರಿಸಿದರು. ಆದರೆ ಈಗ ಸ್ವತಃ ರಾಜಮೌಳಿಯೇ ಹೋಗಿ ಸಲ್ಮಾನ್ ಖಾನ್ ಅನ್ನು ಭೇಟಿಯಾಗಿದ್ದಾರೆ. ಹಾಗಾಗಿ ಒಂದು ಕಡೆ ಇದು ಆರ್‌ಆರ್‌ಆರ್‌ ಮಾತ್ರ ಸೀಮಿತ ಆಗದೆ ಮುಂದೆ ಈ ಜೋಡಿ ಸಿನಿಮಾ ಮಾಡುತ್ತದೆ ಎನ್ನುವ ಸೂಚನೆಯೂ ಸಿಕ್ಕಿದೆ. ರಾಜಮೌಳಿ ನಿರ್ದೇಶನದಲ್ಲಿ ನಟ ಸಲ್ಮಾನ್‌ ಖಾನ್‌ ಅಭಿನಯಿಸಬೇಕು ಎನ್ನುವುದು ಸಿನಿಮಾ ಪ್ರಿಯರ ಇಂಗಿತ.

More from Filmibeat

English summary
Rajamouli Invites Salman Khan For RRR Pre Release Event Which will Take Place In Dubai,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X