ಲೀಕ್.. ಅಫೀಷಿಯಲ್..; SSMB29 ಫಸ್ಟ್ ಸಾಂಗ್ ಬಿಟ್ಟು ರಾಜಮೌಳಿ ಹೊಸ ವರಸೆ

ರಾಜಮೌಳಿ ಹಾಗೂ ಮಹೇಶ್ ಬಾಬು ಕಾಂಬಿನೇಷನ್ ಸಿನಿಮಾ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದೆ. ಈಗಾಗಲೇ ಫಸ್ಟ್ ಲುಕ್, ಫಸ್ಟ್ ಸಾಂಗ್ ರಿಲೀಸ್ ಮಾಡಿ ನಿರೀಕ್ಷೆ ಹೆಚ್ಚಿಸಿದ್ದಾರೆ. ಇದೇ ಶನಿವಾರ(ನೆಂಬರ್ 15) ಅದ್ಧೂರಿ ಈವೆಂಟ್ ಮಾಡಿ ಟೀಸರ್ ರಿಲೀಸ್ ಪ್ಲ್ಯಾನ್ ಮಾಡಿದ್ದಾರೆ. ರಾಮೋಜಿ ಫಿಲ್ಮ್‌ಸಿಟಿಯಲ್ಲಿ ದೊಡ್ಡಮಟ್ಟದಲ್ಲಿ ಈವೆಂಟ್ ನಡೆಯಲಿದೆ.

ಖ್ಯಾತ ನಿರ್ದೇಶಕ ರಾಜಮೌಳಿ ಅದ್ಧೂರಿಯಾಗಿ ಸಿನಿಮಾ ಮಾಡುವುದು ಮಾತ್ರವಲ್ಲ, ಅಷ್ಟೇ ಚೆನ್ನಾಗಿ ಪ್ರಮೋಷನ್ ಮಾಡ್ತಾರೆ. ರಿಲೀಸ್ ಡೇಟ್ ಹತ್ತಿರವಾಗುತ್ತಿದ್ದಂತೆ ಕುತೂಹಲ ಹೆಚ್ಚಿಸುತ್ತಾ ಹೋಗುತ್ತಾರೆ. ಗ್ಲೋಬ್‌ಟ್ರಾಟರ್ ಸಿನಿಮಾ ಕೂಡ ಪ್ರೇಕ್ಷಕರ ನಿರೀಕ್ಷೆ ಮೀರಿ ತೆರೆಗೆ ಬರಲಿದೆ. ಮಹೇಶ್ ಬಾಬು ಜೊತೆ ಪ್ರಿಯಾಂಕ ಚೋಪ್ರಾ ಹಾಗೂ ಪೃಥ್ವಿರಾಜ್ ಸುಕುಮಾರನ್ ಚಿತ್ರದಲ್ಲಿ ನಟಿಸಿದ್ದಾರೆ. ಸದ್ದಿಲ್ಲದೇ ಒಂದಷ್ಟು ಚಿತ್ರೀಕರಣ ಮಾಡಿ ಮುಗಿಸಿದ್ದಾರೆ.

Rajamouli Mahesh Babu s Globetrotter Theme Song Sanchari Sets the Stage for Grand Teaser Launch

ಬಹಳ ದಿನಗಳಿಂದ ಅಭಿಮಾನಿಗಳು ಚಿತ್ರದ ಫಸ್ಟ್ ಲುಕ್, ಟೈಟಲ್ ಏನು ಎಂದು ಕೇಳುತ್ತಲೇ ಇದ್ದರು. ನವೆಂಬರ್‌ನಲ್ಲಿ ಅಪ್‌ಡೇಟ್ ಕೊಡುವುದಾಗಿ ಹೇಳ್ತಾ ಬಂದಿದ್ದರು. ಅದರಂತೆ ಭರ್ಜರಿ ಈವೆಂಟ್ ಪ್ಲ್ಯಾನ್ ಮಾಡಿದ್ದಾರೆ. ಜಿಯೋ ಹಾಟ್‌ಸ್ಟರ್‌ನಲ್ಲಿ ಈ ಕಾರ್ಯಕ್ರಮ ಸ್ಟ್ರೀಮಿಂಗ್ ಆಗಲಿದೆ. ಟೀಸರ್ ರಿಲೀಸ್ ಜೊತೆಗೆ ಮ್ಯೂಸಿಕ್ ಕಾನ್ಸರ್ಟ್ ಕೂಡ ಆಯೋಜಿಸಲಾಗಿದೆ. ಇಡೀ ಚಿತ್ರತಂಡ ಅಂದು ವೇದಿಕೆ ಏರಲಿದೆ. ಸಾಕಷ್ಟು ಸರ್‌ಪ್ರೈಸ್‌ಗಳು ಅಭಿಮಾನಿಗಳಿಗೆ ಕಾದಿದೆ. ಈಗಾಗಲೇ ಒಂದೊಂದೇ ಸರ್‌ಪ್ರೈಸ್ ರಿವೀಲ್ ಆಗ್ತಿದೆ.

ಚಿತ್ರದಲ್ಲಿರ ಪೃಥ್ವಿರಾಜ್ ಸುಕುಮಾರನ್ ವಿಲನ್ ಆಗಿ ನಟಿಸುತ್ತಿದ್ದಾರೆ. ಕುಂಭ ಆಗಿ ಆತನ ಪಾತ್ರ ಪರಿಚಯದ ಪೋಸ್ಟರ್ ಇತ್ತೀಚೆಗೆ ಬಿಡುಗಡೆ ಆಗಿತ್ತು. ಅದಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿತ್ತು. ಇದೀಗ ಚಿತ್ರದ ಫಸ್ಟ್ ಸಾಂಗ್ ಕೂಡ ರಿಲೀಸ್ ಆಗಿದೆ. ಅರೇ ಮಹೇಶ್ ಬಾಬು ಫಸ್ಟ್‌ ಲುಕ್ ಮುನ್ನ ಸಾಂಗ್ ಬಂದುಬಿಡ್ತಾ ಎನ್ನುವ ಅಚ್ಚರಿ ಮೂಡುವುದು ಸಹಜ. ಆದರೂ ಇದು ನಿಜ.

ಸಾಮಾನ್ಯವಾಗಿ ಸಾಂಗ್ ಈಗ ರಿಲೀಸ್ ಆಗುತ್ತೆ ಆಗ ರಿಲೀಸ್ ಆಗುತ್ತೆ ಎಂದೇ ಪೋಸ್ಟ್ ಮಾಡಿ ಹೈಪ್ ಕ್ರಿಯೇಟ್ ಮಾಡುತ್ತಾರೆ. ಆದರೆ SSMB29 ಚಿತ್ರದ ವಿಚಾರದಲ್ಲಿ ರಾಜಮೌಳಿ ತಮ್ಮ ವರಸೆ ಬದಲಿಸಿದ್ದಾರೆ. ಸದ್ಯ ಗ್ಲೋಬ್‌ಟ್ರಾಟರ್ ಚಿತ್ರದ ಥೀಮ್ ಸಾಂಗ್ ರಿಲೀಸ್ ಆಗಿದ್ದು ಎಂ ಎಂ ಕೀರವಾಣಿ ಸಂಗೀತವಿದೆ. ಶೃತಿ ಹಾಸನ್ ಹಾಗೂ ಕಾಲಭೈರವ ಹಾಡನ್ನು ಹಾಡಿದ್ದಾರೆ.

ಮೊದಲಿಗೆ ಸಾಂಗ್ ಲೀಕ್ ಆಗಿದ್ದಾಗಿ ಸುದ್ದಿ ಆಗಿತ್ತು. ಕೆಲವರು ಇದು ಫ್ಯಾನ್ ಮೇಡ್ ಅಂತ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಸುತ್ತಿದ್ದರು. ಸಾಂಗ್ ಚೆನ್ನಾಗಿದೆ, ಚೆನ್ನಾಗಿಲ್ಲ ಎನ್ನುವ ಚರ್ಚೆ ನಡೆಯುತ್ತಿದ್ದಂತೆ ಅಧಿಕೃತವಾಗಿ ಟೀ-ಸೀರಿಸ್ ಯೂಟ್ಯೂಬ್‌ ಚಾನಲ್‌ನಲ್ಲಿ ಸಾಂಗ್ ಅಪ್‌ಲೋಡ್ ಆಗಿತ್ತು. ಮಹೇಶ್ ಬಾಬು, ರಾಜಮೌಳಿ ಎಲ್ಲರೂ ಸಾಂಗ್ ಲಿಂಕ್ ಶೇರ್ ಮಾಡಿ ಅಚ್ಚರಿ ಮೂಡಿಸಿದ್ದರು.

'ಸಂಚಾರಿ.. ಸಂಚಾರಿ' ಎಂದು ಶುರುವಾಗುವ ಹಾಡು ನಾಯಕನ ಕಥೆ, ಗುರಿ, ಸಾಧನೆ ಬಗ್ಗೆ ಸಾರಿ ಹೇಳುವಂತಿದೆ. ಈ ಹಾಡು ಸಿನಿಮಾದಲ್ಲಿ ಇರುತ್ತಾ ಅಥವಾ ಬರೀ ಪ್ರಮೋಷನ್‌ಗಾಗಿ ಮಾಡಿದ್ದಾರಾ? ಎನ್ನುವುದು ಸದ್ಯಕ್ಕೆ ಗೊತ್ತಿಲ್ಲ. ರಾಜಮೌಳಿ ಈ ಚಿತ್ರಕ್ಕಾಗಿ ತಮ್ಮ ಪ್ರಚಾರ ವೈಖರಿಯನ್ನು ಬದಲಿಸಿದಂತೆ ಕಾಣ್ತಿದೆ. ಮುಂದೆ ಇನ್ನು ಏನೆಲ್ಲಾ ಸರ್‌ಪ್ರೈಸ್‌ಗಳಿಗೆ ಎನ್ನುವುದನ್ನು ಕಾದು ನೋಡಬೇಕಿದೆ.

ಶೀಘ್ರದಲ್ಲೇ ಪ್ರಿಯಾಂಕ ಚೋಪ್ರಾ ಫಸ್ಟ್ ಲುಕ್ ರಿವೀಲ್ ಆಗುವ ಸಾಧ್ಯತೆಯಿದೆ. ಶನಿವಾರವೇ ಮಹೇಶ್ ಬಾಬು ಲುಕ್ ಗೊತ್ತಾಗಲಿದೆ. ಅದಕ್ಕೂ ಮುನ್ನ ರಾಜಮೌಳಿ ಏನೆಲ್ಲಾ ಸರ್‌ಪ್ರೈಸ್ ಕೊಡ್ತಾರೆ ನೋಡಬೇಕಿದೆ. ಇನ್ನು ಈ ಬಾರಿ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಸಿನಿಮಾ ತೆರೆಗೆ ಬರಲಿದೆ. ಹಾಲಿವುಡ್ ಕಲಾವಿದರು, ತಂತ್ರಜ್ಞರು ಚಿತ್ರದ ಭಾಗವಾಗಲಿದ್ದಾರೆ.

More from Filmibeat

Read more about: rajamouli mahesh babu
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X