ಆಫ್ರಿಕಾದಲ್ಲಿ ನಿರ್ದೇಶಕ ರಾಜಮೌಳಿ; ಸೀಕ್ರೆಟ್ ರಿವೀಲ್ ಮಾಡಿದ ಪ್ರಿಯಾಂಕಾ

ಮಹೇಶ್ ಬಾಬು ನಿರ್ದೇಶನದ ಚಿತ್ರಕ್ಕೆ ರಾಜಮೌಳಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸದ್ದಿಲ್ಲದೇ ಸಿನಿಮಾ ಚಿತ್ರೀಕರಣ ಮಾಡ್ತಾ ಬರ್ತಿದೆ ಚಿತ್ರತಂಡ. ನವೆಂಬರ್‌ನಲ್ಲಿ ಟೀಸರ್ ರಿಲೀಸ್ ಮಾಡುವುದಾಗಿ ಜಕ್ಕಣ್ಣ ಹೇಳಿದ್ದಾರೆ. ಇನ್ನುಳಿದಂತೆ SSMB29 ಸಿನಿಮಾ ಬಗ್ಗೆ ಯಾವುದೇ ಅಪ್‌ಡೇಟ್ ಇಲ್ಲ. ಸದ್ಯ ಮೌಳಿ ಸೀಕ್ರೆಟ್ ಅನ್ನು ಪ್ರಿಯಾಂಕ ಬಯಲು ಮಾಡಿದ್ದಾರೆ.

'RRR' ಬಳಿಕ ಬಹಳ ಗ್ಯಾಪ್ ತಗೊಂಡು ಮೌಳಿ ಹೊಸ ಸಿನಿಮಾ ಆರಂಭಿಸಿದ್ದರು. ಈ ವರ್ಷ ಆರಂಭದಲ್ಲೇ ಸದ್ದಿಲ್ಲದೇ ಮುಹೂರ್ತ ನೆರವೇರಿಸಿದ್ದರು. ಬಳಿಕ ಒರಿಸ್ಸಾದಲ್ಲಿ ಒಂದು ಶೆಡ್ಯೂಲ್ ಚಿತ್ರೀಕರಣ ಮುಗಿಸಿ ಬಂದಿದ್ದರು. ಬಳಿಕ ಹೈದರಾಬಾದ್ ಸ್ಟುಡಿಯೋದಗಳಲ್ಲಿ ಚಿತ್ರೀಕರಣ ನಡೀತಿದೆ ಎನ್ನುವ ಗುಸುಗುಸು ಕೇಳಿಬಂದಿತ್ತು. ಆದರೆ ಯಾವುದೇ ಸುಳಿವು ಸಿಗಲಿಲ್ಲ.

Rajamouli Mahesh Babu s SSMB29 Priyanka Chopra Hints at Africa Shoot Teaser Coming in November

SSMB29 ಸಿನಿಮಾ ಬಗ್ಗೆ ಯಾವುದೇ ಸುಳಿವು ಬಿಟ್ಟುಕೊಡದೇ ಜಕ್ಕಣ್ಣ ಚಿತ್ರೀಕರಣ ನಡೆಸುತ್ತಿದ್ದಾರೆ. ಮಹೇಶ್ ಬಾಬು ನಟಿಸುತ್ತಿರುವುದು ಬಿಟ್ಟು ಸಿನಿಮಾ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ಸಿಕ್ಕಿಲ್ಲ. ಗ್ಲೋಬಲ್ ತಾರೆ ಪ್ರಿಯಾಂಕಾ ಚೋಪ್ರಾ ಹಾಗೂ ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಸಹ ತಂಡ ಸೇರಿಕೊಂಡಿದ್ದಾರೆ. ಆದರೆ ಈ ಬಗ್ಗೆ ಕೂಡ ಅಧಿಕೃತ ಮಾಹಿತಿ ಸಿಕ್ಕಿಲ್ಲ.

ಮಹೇಶ್ ಬಾಬು ಕಾಂಬಿನೇಷನ್‌ನಲ್ಲಿ ಗ್ಲೋಬ್ ಟ್ರೋಟಿಂಗ್ ಅಡ್ವೆಂಚರಸ್ ಸಿನಿಮಾ ಮಾಡುತ್ತಿದ್ದಾರೆ ರಾಜಮೌಳಿ. ದೇಶ ವಿದೇಶಗಳಲ್ಲಿ ಸಿನಿಮಾ ಕಥೆ ನಡೆಯಲಿದೆ. ಅದಕ್ಕೆ ತಕ್ಕಂತೆ ವಿದೇಶಗಳಲ್ಲಿ ಚಿತ್ರೀಕರಣ ನಡೆಯುತ್ತಿದೆ. ಬಹಳ ಹಿಂದೆಯೇ ಆಫ್ರಿಕಾಗೆ ತೆರಳಿ ಲೊಕೇಶನ್‌ಗಳನ್ನು ನೋಡಿ ಬಂದಿದ್ದರು. ತಿಂಗಳ ಹಿಂದೆಯೇ ಚಿತ್ರತಂಡ ಅಲ್ಲಿಗೆ ತೆರಳುತ್ತದೆ ಎನ್ನಲಾಗಿತ್ತು. ಆದರೆ ಸಾಧ್ಯವಾಗಲಿಲ್ಲ. ಸದ್ದಿಲ್ಲದೇ ಈಗ ತಂಡ ಆಫ್ರಿಕಾದಲ್ಲಿ ಲ್ಯಾಂಡ್ ಆಗಿದೆ.

ಆಫ್ರಿಕಾದಲ್ಲಿ SSMB29 ಸಿನಿಮಾ ಚಿತ್ರೀಕರಣದ ಬಗ್ಗೆ ಯಾವುದೇ ಅಪ್‌ಡೇಟ್ ಸಿಕ್ಕಿಲ್ಲ. ಆದರೆ ನಾಯಕಿ ಪ್ರಿಯಾಂಕ ಚೋಪ್ರಾ ಈ ಬಗ್ಗೆ ಸುಳಿವು ಕೊಟ್ಟಿದ್ದಾರೆ. ತಂಡ ಈಗಾಗಲೇ ಚಿತ್ರೀಕರಣಕ್ಕಾಗಿ ಕೀನ್ಯಾಗೆ ತೆರಳಿದೆ. ಪ್ರಿಯಾಂಕಾ ಚೋಪ್ರಾ ಇನ್‌ಸ್ಟಾಗ್ರಾಮ್‌ನಲ್ಲಿ ಒಂದಷ್ಟು ಫೋಟೊಗಳನ್ನು ಹಂಚಿಕೊಂಡಿದ್ದು ಇದು SSMB29 ಸಿನಿಮಾ ಶೂಟಿಂಗ್ ಲೊಕೇಶನ್ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.

ಬಹಳ ಹಿಂದೆ ಮಹೇಶ್ ಬಾಬು ಹಾಗೂ ರಾಜಮೌಳಿ ಒಟ್ಟಿಗೆ ಸಿನಿಮಾ ಮಾಡಬೇಕಿತ್ತು. ಈ ಬಗ್ಗೆ ಜಕ್ಕಣ್ಣ ಟ್ವೀಟ್ ಸಹ ಮಾಡಿದ್ದರು. ಆದರೆ ಅದು ಸಾಧ್ಯವಾಗಿರಲಿಲ್ಲ. ಇಬ್ಬರೂ ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರು. ಅಂತೂ ಇಂತೂ ಈಗ ಒಟ್ಟಿಗೆ ಕೈ ಜೋಡಿಸಿದ್ದಾರೆ. ಇತ್ತೀಚೆಗೆ ಮಹೇಶ್ ಬಾಬು ಹುಟ್ಟುಹಬ್ಬಕ್ಕೆ ಸಿನಿಮಾ ಅಪ್‌ಡೇಟ್ ಸಿಗುತ್ತೆ ಎಂದು ಭಾವಿಸಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿತ್ತು.

ನವೆಂಬರ್‌ನಲ್ಲಿ SSMB29 ಸಿನಿಮಾ ಅಪ್‌ಡೇಟ್ ಎಂದು ಮೌಳಿ ಟ್ವೀಟ್ ಮಾಡಿದ್ದರು. ಶಿವನ ಲಾಕೆಟ್ ಇರುವ ಚೈನ್ ಕುತ್ತಿಗೆಯಲ್ಲಿ ಹಾಕಿಕೊಂಡಿರುವ ಮಹೇಶ್ ಬಾಬು ಪೋಸ್ಟರ್ ಮಾತ್ರ ಹಂಚಿಕೊಂಡಿದ್ದರು. ಅದರಲ್ಲಿ ನಾಯಕನ ಎದೆ ಭಾಗ ಮಾತ್ರ ತೋರಿಸಲಾಗಿತ್ತು. ಮುಖ ಕಾಣಿಸದಂತೆ ಎಚ್ಚರಿಕೆ ವಹಿಸಿತ್ತು ಚಿತ್ರತಂಡ. ಆ ಪೋಸ್ಟರ್‌ಗೆ ಅಭಿಮಾನಿಗಳಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು.

ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ SSMB29 ಸಿನಿಮಾ ನಿರ್ಮಾಣ ಆಗ್ತಿದೆ. ತೆಲುಗು ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ಏಕಕಾಲಕ್ಕೆ ಚಿತ್ರೀಕರಣ ನಡೆಯುತ್ತಿದೆ. ಹಾಲಿವುಡ್ ನಿರ್ದೇಶಕ ಜೇಮ್ಸ್ ಕ್ಯಾಮರೂನ್ ಚಿತ್ರದ ಟೀಸರ್ ರಿಲೀಸ್ ಮಾಡ್ತಾರೆ ಎನ್ನಲಾಗ್ತಿದೆ. 500 ಕೋಟಿ ರೂ.ಗೂ ಅಧಿಕ ಬಜೆಟ್‌ನಲ್ಲಿ ಈ ಸಿನಿಮಾ ತಯಾರಾಗುತ್ತಿದೆ. ದೇಶ ವಿದೇಶದ ಲೊಕೇಶನ್‌ಗಳು ಮಾತ್ರವಲ್ಲ, ಅದ್ಧೂರಿ ಸೆಟ್‌ಗಳನ್ನು ನಿರ್ಮಿಸಿ ಚಿತ್ರೀಕರಣ ನಡೆಸಲಾಗುತ್ತಿದೆ.

More from Filmibeat

English summary
Mahesh Babu pan-world movie, Rajamouli globe-trotting adventure, SSMB29 Kenya shooting, SSMB29 budget 500 crore
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X