SSMB29: ಅರ್ಧಂಬರ್ಧ ಪೋಸ್ಟರ್ ಬಿಟ್ಟ ರಾಜಮೌಳಿ; ಮಹೇಶ್ ಬಾಬು ಪಾತ್ರ ರಿವೀಲ್

ಸೂಪರ್ ಸ್ಟಾರ್ ಮಹೇಶ್ ಬಾಬು ಹುಟ್ಟುಹಬ್ಬದ ಸಂಭ್ರಮದಲ್ಲಿದೆ. 50ನೇ ವಸಂತಕ್ಕೆ ಕಾಲಿಟ್ಟಿರುವ ಟಾಲಿವುಡ್ ಪ್ರಿನ್ಸ್‌ಗೆ ಅಭಿಮಾನಿಗಳು, ಆಪ್ತರು ಹುಟ್ಟುಹಬ್ಬದ ಶುಭಾಶಯ ಕೋರುತ್ತಿದ್ದಾರೆ. ಇನ್ನು ಇದೇ ಸಂಭ್ರಮದಲ್ಲಿ SSMB29 ಅಪ್‌ಡೇಟ್ ಸಿಗುತ್ತದೆ ಎಂದು ಕಾಯುತ್ತಿದ್ದವರಿಗೆ ಕೊಂಚ ನಿರಾಸೆಯಾಗಿದೆ.

ರಾಜಮೌಳಿ ನಿರ್ದೇಶನದ SSMB29 ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡಿದೆ. ಬಹಳ ದೊಡ್ಡಮಟ್ಟದಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಯಾವುದೇ ಸುಳಿವು ಬಿಟ್ಟುಕೊಡದೇ ಸಿನಿಮಾ ಚಿತ್ರೀಕರಣ ನಡೆಸಲಾಗುತ್ತಿದೆ. ಮಹೇಶ್ ಬಾಬು ಹುಟ್ಟುಹಬ್ಬದ ಸಂಭ್ರಮದಲ್ಲಿ ಚಿತ್ರದ ಟೀಸರ್, ಕೊನೆ ಪಕ್ಷ ಪೋಸ್ಟರ್ ಆದರೂ ಬಿಡುಗಡೆ ಆಗುತ್ತದೆ ಎಂದು ಅಭಿಮಾನಿಗಳು ಭಾವಿಸಿದ್ದರು. ಆದರೆ ಅದು ಸುಳ್ಳಾಗಿದೆ. ಆದರೆ ನಿಮ್ಮ ಕಾಯುವಿಕೆಗೆ ತಕ್ಕ ಪ್ರತಿಫಲ ಗ್ಯಾರಂಟಿ ಎಂದು ಜಕ್ಕಣ್ಣ ಪೋಸ್ಟ್ ಮಾಡಿದ್ದಾರೆ.

Rajamouli Promises SSMB29 First Look in November as Mahesh Babu Turns 50

ನವೆಂಬರ್‌ನಲ್ಲಿ ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡುತ್ತೇವೆ ಎಂದು ರಾಜಮೌಳಿ ಮಾಹಿತಿ ನೀಡಿದ್ದಾರೆ. ಚಿತ್ರದ ನಾಯಕ(ಮಹೇಶ್ ಬಾಬು) ಧರಿಸಿರುವ ಲಾಕೆಟ್ ಹೈಲೆಟ್ ಮಾಡಿ ಪೋಸ್ಟರ್ ಗ್ಲಿಂಪ್ಸ್ ಹಂಚಿಕೊಂಡಿದ್ದಾರೆ. "ಪ್ರಪಂಚದಾದ್ಯಂತದ ಇರುವ ಸಿನಿಪ್ರೇಮಿಗಳೇ ಹಾಗೂ ಮಹೇಶ್ ಬಾಬು ಅಭಿಮಾನಿಗಳೇ,
ನಾವು ಚಿತ್ರೀಕರಣ ಪ್ರಾರಂಭಿಸಿ ಸ್ವಲ್ಪ ಸಮಯವಾಗಿದೆ. ಚಿತ್ರದ ಬಗ್ಗೆ ತಿಳಿದುಕೊಳ್ಳುವ ನಿಮ್ಮ ಉತ್ಸಾಹವನ್ನು ನಾವು ಪ್ರಶಂಸಿಸುತ್ತೇವೆ. ಆದಾಗ್ಯೂ, ಈ ಚಿತ್ರದ ಕಥೆ ಮತ್ತು ವ್ಯಾಪ್ತಿ ತುಂಬಾ ವಿಸ್ತಾರವಾಗಿದ್ದು, ಅದನ್ನು ಕೇವಲ ಪೋಸ್ಟರ್ ಅಥವಾ ಪತ್ರಿಕಾಗೋಷ್ಠಿಯಲ್ಲಿ ಹೇಳುವಂತಹದ್ದಲ್ಲ." ಎಂದು ರಾಜಮೌಳಿ ಪೋಸ್ಟ್ ಆರಂಭಿಸಿದ್ದಾರೆ.

"ನಾವು ಪ್ರಸ್ತುತ ಅದ್ಭುತ ಪ್ರಪಂಚ ಸೃಷ್ಟಿಸುವ ಕೆಲಸ ಮಾಡುತ್ತಿದ್ದೇವೆ. ಇದನ್ನು ನವೆಂಬರ್ 2025 ರಲ್ಲಿ ಅನಾವರಣಗೊಳಿಸಲಾಗುವುದು. ಹಿಂದೆದೂ ಮಾಡಿರದ ರೀತಿ ನಾನು ಅದನ್ನು ನಿಮ್ಮ ಮುಂದೆ ತರುತ್ತೇವೆ. ನಿಮ್ಮೆಲ್ಲರ ತಾಳ್ಮೆಗೆ ಧನ್ಯವಾದಗಳು" ಎಂದು ಬರೆದುಕೊಂಡಿದ್ದಾರೆ. ಇನ್ನು ರಾಜಮೌಳಿ ಹಂಚಿಕೊಂಡಿರುವ ಪೋಸ್ಟರ್‌ ಗಮನಿಸಿದರೆ ಶಿವ ಭಕ್ತನಾಗಿ ಮಹೇಶ್ ಬಾಬು ಈ ಚಿತ್ರದಲ್ಲಿ ಕಾಣಿಸಿಕೊಳ್ಳುವುದು ಗೊತ್ತಾಗುತ್ತಿದೆ.

ಈ ಹಿಂದೆ 'ಬಾಹುಬಲಿ' ಚಿತ್ರದ ಬಗ್ಗೆಯೂ ಕೂಡ ಇದೇ ರೀತಿ ಅರ್ಧಬರ್ಧ ಪೋಸ್ಟರ್ ಬಿಟ್ಟು ರಾಜಮೌಳಿ ಕುತೂಹಲ ಮೂಡಿಸಿದ್ದರು. ಆ ಸಿನಿಮಾ ಇತಿಹಾಸ ನಿರ್ಮಿಸಿದ್ದು ಗೊತ್ತೇಯಿದೆ. ಅದೇ ರೀತಿ SSMB29 ಸಿನಿಮಾ ಕೂಡ ದಾಖಲೆ ಬರೆಯುತ್ತದೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಸಿನಿಮಾ ಅಪ್‌ಡೇಟ್‌ಗಾಗಿ ಇನ್ನು 4 ತಿಂಗಳು ಕಾಯಬೇಕಾ? ಎಂದು ಕೆಲವರು ಬೇಸರ ವ್ಯಕ್ತಪಡಿಸುತ್ತಿದ್ಧಾರೆ.

'RRR' ಬಳಿಕ ರಾಜಮೌಳಿ ನಿರ್ದೇಶನ ಮಾಡುತ್ತಿರುವ ಸಿನಿಮಾ ಇದು. 'ಗುಂಟೂರು ಖಾರಂ' ಚಿತ್ರದ ಬಳಿಕ ಮಹೇಶ್ ಈ ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ. ವರ್ಷದ ಆರಂಭದಲ್ಲೇ ಹೈದರಾಬಾದ್‌ ಸ್ಟುಡಿಯೋದಲ್ಲಿ ಚಿತ್ರದ ಮುಹೂರ್ತ ನಡೆದಿತ್ತು. ಬಳಿಕ ಒರಿಸ್ಸಾದಲ್ಲಿ ಒಂದು ಶೆಡ್ಯೂಲ್ ಚಿತ್ರೀಕರಣ ಮಾಡಿದ್ದರು. ಆ ಬಳಿಕ ಚಿತ್ರದ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಪ್ರಿಯಾಂಕಾ ಚೋಪ್ರಾ, ಪೃಥ್ವಿರಾಜ್‌ ಸುಕುಮಾರನ್ ಕೂಡ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.

500 ಕೋಟಿ ರೂ.ಗೂ ಅಧಿಕ ಬಜೆಟ್‌ನಲ್ಲಿ ಹಾಲಿವುಡ್ ರೇಂಜ್‌ನಲ್ಲಿ ಜಕ್ಕಣ್ಣ ಈ ಸಿನಿಮಾ ಕಟ್ಟಿಕೊಡುತ್ತಿದ್ದಾರೆ. ಹಾಲಿವುಡ್ ತಂತ್ರಜ್ಞರು ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ದೇಶ ವಿದೇಶಗಳಲ್ಲಿ ನಡೆಯುವ ಕಥೆ ಇದು. ಗ್ಲೋಬ್‌ಟ್ರಾಟರ್ ಸಿನಿಮಾ ಎಂದು ಚಿತ್ರತಂಡ ಹೇಳುತ್ತಾ ಬರ್ತಿದೆ. ಹಾಲಿವುಡ್ ಸಂಸ್ಥೆ ಈ ಕೂಡ SSMB 29 ಸಿನಿಮಾ ನಿರ್ಮಾಣಕ್ಕೆ ಕೈ ಜೋಡಿಸುತ್ತಿದೆ.

ದೇಶ ವಿದೇಶದ ಭಾಷೆಗಳಿಗೆ ಸಿನಿಮಾ ಡಬ್ ಮಾಡಿ ಬಿಡುಗಡೆ ಮಾಡುವ ಲೆಕ್ಕಾಚಾರ ನಡೀತಿದೆ. 'ಟಾಕ್ಸಿಕ್' ರೀತಿ ಏಕಕಾಲಕ್ಕೆ ತೆಲುಗು ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ಸಿನಿಮಾ ನಿರ್ಮಾಣವಾಗ್ತಿದೆ ಎನ್ನಲಾಗ್ತಿದೆ. ಆದರೆ ಅಧಿಕೃತವಾಗಿ ಚಿತ್ರತಂಡ ಯಾವುದೇ ಮಾಹಿತಿ ನೀಡಿಲ್ಲ.

More from Filmibeat

English summary
Rajamouli announced ssmb 29 film first look will arrive in November 2025
Read more about: rajamouli mahesh babu tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X