'RRR'ನಲ್ಲಿ ಒಬ್ಬರಿಗೆ ಹೆಚ್ಚು ಅವಕಾಶ, ಮತ್ತೊಬ್ಬರಿಗೆ ಕಮ್ಮಿ ಯಾಕೆ? ನೇರಾನೇರ ಪ್ರಶ್ನೆಗೆ ಮೌಳಿ ತಬ್ಬಿಬ್ಬು

ರಾಜಮೌಳಿ ನಿರ್ದೇಶನದ 'RRR'ತೆರೆಕಂಡು ಸೂಪರ್ ಹಿಟ್ ಆಗಿ 2 ವರ್ಷ ಕಳೆದಿದೆ. ಆದರೆ ಚಿತ್ರದಲ್ಲಿ ರಾಮ್‌ಚರಣ್ ಅಥವಾ ಜ್ಯೂ. ಎನ್‌ಟಿಆರ್‌, ಇಬ್ಬರಲ್ಲಿ ಯಾರಿಗೆ ಹೆಚ್ಚು ಮಹತ್ವ ಸಿಕ್ತು? ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಲೇ ಇದೆ. ಇದೇ ಪ್ರಶ್ನೆಯನ್ನು ಮಾಧ್ಯಮದವರು ರಾಜಮೌಳಿ ಮುಂದೆ ಇಟ್ಟಿದ್ದಾರೆ.

'ಬಾಹುಬಲಿ' ಸರಣಿ ಬ್ಲಾಕ್‌ಬಸ್ಟರ್ ಹಿಟ್ ಆಗಿದ್ದು ಗೊತ್ತೇಯಿದೆ. ಈ ಚಿತ್ರವನ್ನು ಕೂಡ ಜಕ್ಕಣ್ಣ ಕಟ್ಟಿಕೊಟ್ಟಿದ್ದರು. ಸದ್ಯ ಈ ಚಿತ್ರದ ಕಥೆಯನ್ನು ಆನಿಮೇಟೆಡ್ ವೆಬ್ ಸೀರಿಸ್‌ ಆಗಿ ಜನರ ಮುಂದೆ ತರಲಾಗುತ್ತಿದೆ. 'ಬಾಹುಬಲಿ ಕ್ಲೌನ್ ಆಫ್ ಬ್ಲಡ್' ಹೆಸರಿನಲ್ಲಿ ಈ ಆನಿಮೇಷನ್ ಸರಣಿಯ ಮೊದಲ ಭಾಗ ಬಿಡುಗಡೆಗೆ ಸಜ್ಜಾಗಿದೆ. ಈ ಸರಣಿ ಪ್ರಚಾರದ ವೇಳೆ ಮೌಳಿ ಮಾಧ್ಯಮಗಳ ಮುಂದೆ ಬಂದಿದ್ದರು.

Rajamouli refuse to answer why Ram Charan got more screen time than Jr NTR in RRR

ರಾಮ್‌ಚರಣ್ ಹಾಗೂ ಜ್ಯೂ. ಎನ್‌ಟಿಆರ್‌ ನಟನೆಯ ಮಲ್ಟಿಸ್ಟಾರರ್‌ 'RRR' ಸಿನಿಮಾ ಕೂಡ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. 1200 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿತ್ತು. ಹಾಲಿವುಡ್ ಮಂದಿ ಕೂಡ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು. ಈ ಸಿನಿಮಾ ಬಳಿಕ ರಾಜಮೌಳಿ ಪ್ಯಾನ್ ವರ್ಲ್ಡ್ ಸಿನಿಮಾ ಪ್ಲ್ಯಾನ್ ಮಾಡುತ್ತಿದ್ದಾರೆ. ಮಹೇಶ್ ಬಾಬು ಹೀರೊ ಆಗಿ ಆ ಚಿತ್ರದಲ್ಲಿ ನಟಿಸುತ್ತಿದ್ದಾರೆ.

'RRR' ಚಿತ್ರದಲ್ಲಿ ಇಬ್ಬರು ನಾಯಕರನ್ನು ಸಮಾನವಾಗಿ ತೋರಿಸಿಲ್ಲ ಎಂದು ಅಭಿಮಾನಿಗಳು ಹೇಳುತ್ತಲೇ ಬರುತ್ತಿದ್ದಾರೆ. ರಾಮ್ ಚರಣ್‌ ಮಾಡಿದ್ದ ಅಲ್ಲೂರಿ ಸೀತಾರಾಮರಾಜು ಪಾತ್ರಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಿ ತಾರಕ್ ಮಾಡಿದ್ದ ಕೊಮುರಂ ಭೀಮ್ ಪಾತ್ರವನ್ನು ತಗ್ಗಿಸಿ ಪೋಷಕ ಪಾತ್ರದ ರೀತಿ ತೋರಿಸಿದ್ದಾರೆ ಎನ್ನುವುದು ಕೆಲವರ ವಾದ. ಈ ಬಗ್ಗೆ ಪದೇ ಪದೇ ಟ್ರೋಲ್‌ ನಡೆಯುತ್ತಲೇ ಇರುತ್ತದೆ. ಮೆಗಾ ಫ್ಯಾನ್ಸ್ ಈ ಬಗ್ಗೆ ನಂದಮೂರಿ ಫ್ಯಾನ್ಸ್‌ನ ಕೆಣಕುತಲೇ ಇರುತ್ತಾರೆ.

ಸಿನಿಮಾ ಬಂದುಹೋಗಿ ಎರಡು ವರ್ಷಗಳ ಬಳಿಕ ರಾಜಮೌಳಿ ಮಾಧ್ಯಮಗಳ ಎದುರು ಬಂದಿದ್ದರು. 'ಬಾಹುಬಲಿ ಕ್ಲೌನ್ ಆಫ್ ಬ್ಲಡ್' ವೆಬ್ ಸೀರಿಸ್ ಪತ್ರಿಕಾಗೋಷ್ಠಿಯಲ್ಲಿ ರಾಜಮೌಳಿಗೆ ಶಾಕಿಂಗ್ ಪ್ರಶ್ನೆಗಳು ಎದುರಾಗಿತ್ತು. 'ಬಾಹುಬಲಿ' ಸರಣಿ ಸಿನಿಮಾ ಸೂಪರ್ ಹಿಟ್ ಆಗಿತ್ತು. ಆದರೆ ಆನಿಮೇಷನ್ ಸರಣಿ ಮಾಡಿ ನಿಮ್ಮ ಬಾಹುಬಲಿಯನ್ನು ನೀವೇ ಕೊಂದುಬಿಟ್ಟಂತೆ ಅನ್ನಿಸುತ್ತಿಲ್ಲವೇ ಎನ್ನುವ ಪ್ರಶ್ನೆ ಎದುರಾಗಿತ್ತು. ಅದನ್ನೆ ರಾಜಮೌಳಿ "ಆ ರೀತಿ ಇಲ್ಲ. ಅನಿಮೇಷನ್ ಸೀರಿಸ್ ಚೆನ್ನಾಗಿದೆ. ಜನ ಇಷ್ಟಪಡುತ್ತಾರೆ ಎಂದಿದ್ದಾರೆ.

Rajamouli refuse to answer why Ram Charan got more screen time than Jr NTR in RRR

ಬಳಿಕ 'RRR' ಸಿನಿಮಾ ಕುರಿತ ಪ್ರಶ್ನೆ ಎದುರಾಯಿತು. ಚಿತ್ರಲ್ಲಿ ಒಬ್ಬ ನಾಯಕನನ್ನು ಹೆಚ್ಚು ಮಾಡಿ ಮತ್ತೊಬ್ಬ ನಾಯಕನನ್ನು ಕಡಿಮೆ ಮಾಡಲಾಗಿದೆ ಎಂಬ ಟೀಕೆಗಳು ಬಂದಿದ್ದವು. ಈ ಬಗ್ಗೆ ಏನು ಹೇಳುತ್ತೀರಿ? ಎಂಬ ಪ್ರಶ್ನೆಗೆ ಉತ್ತರಿಸಲು ರಾಜಮೌಳಿ ಹಿಂದೇಟು ಹಾಕಿದರು. ಉತ್ತರಿಸಿದ ನುಣುಚಿಕೊಂಡರು. ಆ ಪ್ರಶ್ನೆಗೆ ಉತ್ತರಿಸಲು ಇದು ಸಂದರ್ಭವಲ್ಲ, ಸಮಯವಲ್ಲ, ವೇದಿಕೆಯೂ ಅಲ್ಲ ಎಂದು ಹೇಳಿ ರಾಜಮೌಳಿ ಜಾರಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ.

ರಾಜಮೌಳಿ ಈ ಪ್ರಶ್ನೆಯನ್ನು ನಿರೀಕ್ಷಿಸಿರಲಿಲ್ಲ. ಈ ಪ್ರಶ್ನೆಗೆ ಹೇಗೆ ಉತ್ತರ ಕೊಟ್ಟರೂ ಸುಖಾ ಸುಮ್ಮನೆ ಟೀಕೆ, ಟ್ರೋಲ್ ಎದುರಾಗುತ್ತದೆ. ಎನ್‌ಟಿಆರ್ ಫ್ಯಾನ್ಸ್ ಅಥವಾ ಮೆಗಾ ಫ್ಯಾನ್ಸ್ ಗರಂ ಆಗುತ್ತಾರೆ. ಹಾಗಾಗಿ ಸುಮ್ಮನೆ ಯಾಕೆ ರಗಳೆ ಎಂದು ಜಕ್ಕಣ್ಣ ಹೀಗೆ ನುಣುಚಿಕೊಂಡಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಸುದ್ದಿಗೋಷ್ಠಿಗೆ ತಡವಾಗಿ ಬಂದಿದ್ದಕ್ಕೆ ಮಾಧ್ಯಮಗಳ ಕ್ಷಮೆಯನ್ನು ಮೌಳಿ ಕೇಳಿದ್ದಾರೆ.

More from Filmibeat

English summary
Director Rajamouli reaction to a controversial question about RRR movie Hero
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X