ಆರ್ ಆರ್ ಆರ್ ಚಿತ್ರದ ಪವರ್ ಫುಲ್ ಡೈಲಾಗ್ ರಿವೀಲ್ ಮಾಡಿದ ರಾಜಮೌಳಿ

ಬಹುನಿರೀಕ್ಷಿತ 'ಆರ್ ಆರ್ ಆರ್' ಚಿತ್ರದ ಪ್ರಮೋಷನ್ ಈವೆಂಟ್ ಗಳಲ್ಲಿ ನಿರ್ದೇಶಕ ರಾಜಮೌಳಿ ಸಿಕ್ಕಾಪಟ್ಟೆ ಬಿಜಿಯಾಗಿದ್ದಾರೆ. ಈಗಾಗಲೇ ಚಿತ್ರದ 45 ಸೆಕೆಂಡ್ ಟೀಸರ್ ಬಿಡುಗಡೆ ಆಗಿದ್ದು, ಅದಕ್ಕೆ ಸಿಕ್ಕಾಪಟ್ಟೆ ರೆಸ್ಪಾನ್ಸ್ ಬಂದಿದೆ. ಅಲ್ಲದೆ ನಾಳೆ ( ನವೆಂಬರ್ 10) ಜೂನಿಯರ್ ಎನ್ ಟಿ ಆರ್ ರಾಮ್ ಚರಣ್ ತೇಜ ಒಟ್ಟಿಗೆ ಸ್ಟೆಪ್ಸ್ ಹಾಕಿರುವ ಹಾಡಿನ ಬಿಡುಗಡೆ ಕೂಡ ಆಗುತ್ತಿದೆ. ಜನವರಿ 7ರಂದು ವಿಶ್ವದಾದ್ಯಂತ ಭಾರಿ ಸ್ಕೇಲ್ ನಲ್ಲಿ ಬಿಡುಗಡೆಗೆ ಸಿದ್ಧಗೊಳ್ಳುತ್ತಿರುವ 'ಆರ್ ಆರ್ ಆರ್' ಚಿತ್ರದ ಪ್ರಮೋಷನ್ ಈವೆಂಟ್ ಕಾರ್ಯಕ್ರಮಗಳು ಜೋರಾಗಿ ನಡೆಯುತ್ತಿವೆ. ಈಗ ಇದರ ಮುಂದುವರಿದ ಭಾಗವಾಗಿಯೇ ಹೊಸ, ಹೊಸ ಆಲೋಚನೆಗಳೊಂದಿಗೆ ರಾಜಮೌಳಿ ಈವೆಂಟ್ ಮತ್ತು ಪಬ್ಲಿಸಿಟಿ ಅನ್ನು ಬೆಳೆಸುತ್ತಿದ್ದಾರೆ.

ಇದಕ್ಕೂ ಮುನ್ನ ಕೇವಲ 45 ಸೆಕೆಂಡ್‌ನ ಈ ವಿಡಿಯೋ ತುಣುಕು ಸಿನಿಮಾದಲ್ಲಿನ ಅದ್ಭುತ ಆಕ್ಷನ್ ದೃಶ್ಯಗಳ ಕಿರು ಪರಿಚಯ ನೀಡಿದ್ದ ಚಿತ್ರ ತಂಡ ವಿಡಿಯೋದ ಕೊನೆಯಲ್ಲಿ ಭಾರತೀಯ ಸಿನಿಮಾದ ವೈಭವವನ್ನು ಮತ್ತೆ ಮರುಕಳಿಸಲು ಸಿನಿಮಾವು ಜನವರಿ 07ಕ್ಕೆ ಚಿತ್ರಮಂದಿರಗಳಿಗೆ ಅಪ್ಪಳಿಸಲಿದೆ ಎಂಬ ಸುಳಿವು ನೀಡಿತ್ತು.

ವಿಡಿಯೋದ ಆರಂಭದಲ್ಲಿಯೇ ಜೂ ಎನ್‌ಟಿಆರ್ ಕಣ್ಣ ಮೇಲಿಂದ ನೆತ್ತರು ಜಾರಿದರೆ ರಾಮ್ ಚರಣ್ ಕಣ್ಣ ಮುಂದೆ ಅಗ್ನಿ ನರ್ತಿಸುತ್ತದೆ ಆ ನಂತರದ ವಿಡಿಯೋ ರೋಲರ್‌ಕೋಸ್ಟರ್ ರೈಡ್. ಅದ್ಭುತ ಗ್ರಾಫಿಕ್ಸ್, ಫೈಟ್ ದೃಶ್ಯಗಳು, ಅದ್ಧೂರಿತನ, ಸಿನಿಮಾಗಳ ಪ್ರಮುಖ ಪಾತ್ರಗಳ ಝಲಕ್ ಎಲ್ಲವೂ ಈ 45 ಸೆಕೆಂಡ್‌ನ ವಿಡಿಯೋನಲ್ಲಿ ಅಡಕವಾಗಿತ್ತು.

ಬಾಹುಬಲಿ ನಂತರ ಬರುತ್ತಿರುವ ಚಿತ್ರ

ಬಾಹುಬಲಿ ನಂತರ ಬರುತ್ತಿರುವ ಚಿತ್ರ

ಅದ್ಧೂರಿ ಬಜೆಟ್‌ನ 'ಆರ್‌ಆರ್‌ಆರ್‌' ಚಿತ್ರಕ್ಕೆ ಪ್ಯಾನ್ ಇಂಡಿಯಾ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. 'ಬಾಹುಬಲಿ' ನಂತರ ರಾಜಮೌಳಿ ನಿರ್ದೇಶನದ ಮುಂಬರುವ ಚಿತ್ರಕ್ಕಾಗಿ ದಕ್ಷಿಣ ಭಾರತ ಸಿನಿಮಾರಂಗ ಮಾತ್ರವಲ್ಲದೆ, ಬಾಲಿವುಡ್ ಮಂದಿ ಕೂಡ ಕಾತುರದಿಂದ ಎದುರು ನೋಡುತ್ತಿದ್ದಾರೆ. ಸೂಪರ್ ಸ್ಟಾರ್ ಗಳ ನಟಿಸಿರುವುದರಿಂದ ಕಲೆಕ್ಷನ್ ವಿಚಾರದಲ್ಲಿ ಸಿನಿಮಾ ಯಾವ ರೀತಿಯ ಸೆನ್ಸೇಷನ್ ಉಂಟುಮಾಡಲಿದೆ ಅಂತ ಟ್ರೇಡ್ ಪಂಡಿತರು ಲೆಕ್ಕ ಹಾಕುತ್ತಿದ್ದಾರೆ. ಭಾರೀ ಕುತೂಹಲ ಮೂಡಿಸಿರುವ ಈ ಸಿನಿಮಾ ಮುಂದಿನ ವರ್ಷ ಜನವರಿ 7ರಂದು ಬಿಡುಗಡೆಯಾಗಲಿದೆ. ಅಲ್ಲಿಯವರೆಗೂ ನಿರಂತರವಾಗಿ ಚಿತ್ರದ ಪ್ರಚಾರಕ್ಕೆ
ಪಬ್ಲಿಸಿಟಿ ಈವೆಂಟ್ ಗಳನ್ನು ಮಾಡುವ ವಿಚಾರದಲ್ಲಿ ರಾಜಮೌಳಿ ಭಾರೀ ಪ್ಲಾನ್ ಮಾಡಿಕೊಂಡಿದ್ದಾರೆ.

ರಾಜಮೌಳಿ ರಿವೀಲ್ ಮಾಡಿದ ಡೈಲಾಗ್

ರಾಜಮೌಳಿ ರಿವೀಲ್ ಮಾಡಿದ ಡೈಲಾಗ್

ಚಿತ್ರದ ಟೀಸರ್, ಹಾಡುಗಳು ಈಗಾಗಲೇ ಬಿಡುಗಡೆಯಾಗಿವೆ. ಆದರೆ ಚಿತ್ರಕ್ಕೆ ಸಂಬಂಧಿಸಿದ ಯಾವುದೇ ಡೈಲಾಗ್ ಇದುವರೆಗೂ ಹೊರಗೆ ಬಂದಿಲ್ಲ. ಆದರೆ ಇತ್ತೀಚೆಗಷ್ಟೇ ಚಿತ್ರದ ಡೈಲಾಗ್ ರಿವೀಲ್ ಆಗಿದೆ. ಡೈಲಾಗ್ ನ್ನು ರಿವೀಲ್ ಮಾಡಿರುವುದು ಬೇರೆ ಯಾರು ಅಲ್ಲ ಚಿತ್ರದ ನಿರ್ದೇಶಕ ರಾಜಮೌಳಿ ಅವರೇ "Yuddhani Vetukuntoo Ayudhalu Ave Vastayi. Adi Dharma Yudhamaite" "ಯುದ್ಧವನ್ನು ಹುಡುಕಿಕೊಂಡು ಆಯುಧಗಳು ತಮಗೆ ತಾವೇ ಬರುತ್ತವೆ. ಆದರೆ ಅದು ಧರ್ಮ ಯುದ್ಧವಾದರೆ...."ಅಂತ ಚಿತ್ರದ ಯುದ್ಧಕ್ಕೆ ಸಂಬಂಧಪಟ್ಟ ಡೈಲಾಗ್ ರಾಜಮೌಳಿ ಅವರೇ ಖುದ್ದು ಹೇಳಿದ್ದಾರೆ. ಮೆಗಾ ಅಭಿಮಾನಿಗಳು ಮತ್ತು ನಂದಮೂರಿ ಅಭಿಮಾನಿಗಳ ಪಾತ್ರವನ್ನು ಹೈಲೈಟ್ ಮಾಡುವ ಉದ್ದೇಶದಿಂದ ಡೈಲಾಗ್ ಅನ್ನು ಅವರು ಕಾರ್ನೇಷನ್ ಮಾಡಿದ್ದಾರೆ.

ನ.10ಕ್ಕೆ ಮತ್ತೊಂದು ಹಾಡು ಬಿಡುಗಡೆ

ನ.10ಕ್ಕೆ ಮತ್ತೊಂದು ಹಾಡು ಬಿಡುಗಡೆ

ಈಗಾಗಲೇ ಬಿಡುಗಡೆಯಾಗಿರುವ ಟೀಸರ್, ಹಾಡುಗಳು ಮತ್ತು ಗ್ಲಿಂಪ್ಸ್‌ಗಳಿಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮತ್ತೊಂದು ಹಾಡು ಬಿಡುಗಡೆಗೆ ಸಿದ್ಧವಾಗಿದೆ. ಈ ಹಾಡಿನಲ್ಲಿ ರಾಮ್ ಚರಣ್ ಮತ್ತು ಎನ್ಟಿಆರ್ ಒಟ್ಟಿಗೆ ಡ್ಯಾನ್ಸ್ ಮಾಡುವುದನ್ನು ನೋಡಬಹುದು. ನಾಳೆ ಬೆಳಗ್ಗೆ 11 ಗಂಟೆಗೆ ಪೂರ್ಣ ಹಾಡು ಬಿಡುಗಡೆಯಾಗಲಿದೆ. ಖಂಡಿತಾ ಅಭಿಮಾನಿಗಳಿಗೆ ಕಿಕ್ ಕೊಡುವ ಹಾಡು ಇದಾಗುವುದರಲ್ಲಿ ಅನುಮಾನವಿಲ್ಲ ಅಂತ ಚಿತ್ರತಂಡ ಹೇಳಿಕೊಂಡಿದೆ.

ಇಬ್ಬರು ಕ್ರಾಂತಿಕಾರಿಗಳ ಜೀವನ ಆಧಾರಿತ ಚಿತ್ರ

ಇಬ್ಬರು ಕ್ರಾಂತಿಕಾರಿಗಳ ಜೀವನ ಆಧಾರಿತ ಚಿತ್ರ

ಚಿತ್ರದಲ್ಲಿ ಬಾಲಿವುಡ್ ತಾರೆಯರಾದ ಅಲಿಯಾ ಭಟ್, ಅಜಯ್ ದೇವಗನ್, ಶ್ರಿಯಾ ಶರಣ್, ಸಮುದ್ರ ಖನಿ, ರೇ ಸ್ಟೀವನ್ಸನ್, ಅಲಿಸನ್ ಡೂಡಿ, ಒಲಿವಿಯಾ ಮೋರಿಸ್ ಜೊತೆಗೆ ಎನ್‌ಟಿಆರ್ ಮತ್ತು ರಾಮ್ ಚರಣ್ ತೇಜ ನಟಿಸಿದ್ದಾರೆ. 400 ಕೋಟಿ ಬಜೆಟ್‌ನಲ್ಲಿ ಡಿವಿವಿ ದಾನಯ್ಯ ಈ ಪ್ಯಾನ್ ಇಂಡಿಯಾ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಸದ್ಯ ನಿರ್ಮಾಣದ ನಂತರದ ಚಟುವಟಿಕೆಗಳು ಭರದಿಂದ ಸಾಗುತ್ತಿವೆ. ಇದು 1920 ರ ದಶಕದಲ್ಲಿ ನಡೆದ ಕಾಲ್ಪನಿಕ ಅವಧಿಯ ಫಿಲಿಮ್ ಡ್ರಾಮಾ ಇದಾಗಿದೆ. ಇದರಲ್ಲಿ ರಾಮಚರಣ್ ಅಲ್ಲೂರಿ ಸೀತಾರಾಮರಾಜನ ಪಾತ್ರದಲ್ಲಿ ಕಾಣಿಸಿಕೊಂಡರೆ, ಎನ್ ಟಿಆರ್ ಕೊಮುರಂ ಭೀಮನಾಗಿ ಕಾಣಿಸಿಕೊಳ್ಳಲಿದ್ದಾರೆ. "ಇತಿಹಾಸದ ಪ್ರಕಾರ, ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಇಬ್ಬರು ಹುತಾತ್ಮರು ಎಂದಿಗೂ ಭೇಟಿಯಾಗಿರಲಿಲ್ಲ. ಆದಾಗಿಯೂ ಇವರಿಬ್ಬರು ಒಟ್ಟಿಗೆ ಸೇರಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದಿದ್ದರೆ ಹೇಗಿರುತ್ತಿತ್ತು ಪರಿಸ್ಥಿತಿ ಎಂಬ ಅಂಶವನ್ನು ಕಲ್ಪಿಸಿಕೊಂಡು ಸಿನಿಮಾ ಮಾಡಲಾಗಿದೆ "ಎಂದು ರಾಜಮೌಳಿ ಹೇಳಿದ್ದಾರೆ.

More from Filmibeat

English summary
Rajamouli Reveals a Dialogue from RRR, The film, which stars NTR Ramacharan Teja together, is being released on January 7,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X