'RRR' ಚಿತ್ರಕ್ಕೆ ಅಲಿಯಾ ಭಟ್ ಆಯ್ಕೆಯ ಕಾರಣ ಬಹಿರಂಗ ಪಡಿಸಿದ ರಾಜಮೌಳಿ
ತೆಲುಗಿನ ಖ್ಯಾತ ನಿರ್ದೇಶಕ ಎಸ್ ಎಸ್ ರಾಜಮೌಳಿ ಸದ್ಯ ಆರ್ ಆರ್ ಆರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸೂಪರ್ ಹಿಟ್ ಬಾಹುಬಲಿ ಸಿನಿಮಾದ ನಂತರ ರಾಜಮೌಳಿ ನಿರ್ದೇಶನ ಮಡುತ್ತಿರುವ ಸಿನಿಮಾ ಇದಾಗಿದ್ದು, ಇಡೀ ಭಾರತವೆ ಆರ್ ಆರ್ ಆರ್ ಸಿನಿಮಾಗಾಗಿ ಎದುರು ನೋಡುತ್ತಿದೆ.
Recommended Video
ಆರ್ ಆರ್ ಆರ್ ಸಿನಿಮಾ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತೆ. ಇತ್ತೀಚಿಗಷ್ಟೆ ನಟಿ ಅಲಿಯಾ ಭಟ್ ಸಂಭಾವನೆ ವಿಚಾರ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಈಗ ನಿರ್ದೇಶಕ ರಾಜಮೌಳಿ ಬಾಲಿವುಡ್ ಸುಂದರಿ ಅಲಿಯಾ ಆಯ್ಕೆ ವಿಚಾರವನ್ನು ಬಹಿರಂಗವಾಗಿದೆ. ಈ ಬಗ್ಗೆ ನಿರ್ದೇಶಕ ರಾಜಮೌಳಿ ಹೇಳಿದ್ದು ಹೀಗೆ. ಮುಂದೆ ಓದಿ..

10 ದಿನಕ್ಕೆ ಕೋಟಿ ಕೋಟಿ ಸಂಭಾವನೆ
ಅಲಿಯಾ ಭಟ್ ಆರ್ ಆರ್ ಆರ್ ಸಿನಿಮಾದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರಕ್ಕಾಗಿ ಅಲಿಯಾ ಕಾಲ್ ಶೀಟ್ ನೀಡಿದ್ದು ಕೇವಲ 10 ದಿನಗಳು ಮಾತ್ರ. ಆದರೆ ಈ 10 ದಿನಕ್ಕೆ ಅಲಿಯಾ ಬರೋಬ್ಬರಿ 5 ಕೋಟಿ ಸಂಭಾವನೆ ಪಡೆಯುತ್ತಿದ್ದಾರಂತೆ. ಅಂದರೆ ದಿನಕ್ಕೆ 50 ಲಕ್ಷ ಸಂಭಾವನೆ ತೆಗೆದುಕೊಳ್ಳುತ್ತಿದ್ದಾರೆ ಅಲಿಯಾ. ಅಲಿಯಾ ಸಂಭಾವನೆ ವಿಚಾರ ಟಾಲಿವುಡ್ ನಲ್ಲಿ ಚರ್ಚೆಯಾಗುತ್ತಿದೆ.

ಹೆಚ್ಚು ಸಂಭಾವನೆ ನೀಡಿ ಅಲಿಯಾ ಕರೆತಂದ ಕಾರಣವೇನು?
ಇತ್ತೀಚಿಗೆ ನಿರ್ದೇಶಕ ರಾಜಮೌಳಿ ಇಂಗ್ಲೀಷ್ ಪೋರ್ಟಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಆಲಿಯಾ ಆಯ್ಕೆ ಬಗ್ಗೆ ಮಾತನಾಡಿದ್ದಾರೆ. ಟಲಿವುಡ್ ನಲ್ಲಿ ಸ್ಟಾರ್ ನಟಿಯರಿದ್ದರು, ಬಾಲಿವುಡ್ ಬೆಡಗಿಯನ್ನೆ ಆರ್ ಆರ್ ಆರ್ ಸಿನಿಮಾಗೆ ಆಯ್ಕೆ ಮಾಡಲು ಕಾರಣವೇನು ಎನ್ನುವದನ್ನು ರಿವೀಲ್ ಮಾಡಿದ್ದಾರೆ.

ಪ್ರತಿಭಾವಂತ ನಾಯಕರ ಜೊತೆ ನಿಲ್ಲುವಂತಹ ನಟಿ ಬೇಕು
ಆರ್ ಆರ್ ಆರ್ ಸಿನಿಮಾಗೆ ನಟಿ ಅಲಿಯಾರನ್ನ ಆಯ್ಕೆ ಮಾಡಿದ್ದು, ರಾಮ್ ಚರಣ್ ಮತ್ತು ಜೂ. ಎನ್ ಟಿ ಆರ್ ಅಂತಹ ಇಬ್ಬರು ನಟರ ಮುಂದೆ ನಿಲ್ಲುವಂತಹ ನಟಿ ಬೇಕು. ಇಬ್ಬರು ಸಹ ಅತ್ಯಂತ ಪ್ರತೀಭವಂತರು. ಅಲಿಯಾ ಮುಗ್ಧರಾಗಿ ಕಂಡರು, ಪಾತ್ರವನ್ನು ಧೈರ್ಯವಾಗಿ ನಿಭಾಯಿಸುತ್ತಾರೆ. ಇಬ್ಬರ ನಡುವೆ ದುರ್ಬಲರಾಗಿ ಕಾಣುವುದಿಲ್ಲ, ಹಾಗಾಗಿಯೆ ಅಲಿಯಾರನ್ನು ಆಯ್ಕೆ ಮಾಡಿದ್ದು" ಎಂದು ರಾಜಮೌಳಿ ಹೇಳಿದ್ದಾರೆ.

ಇದು ತ್ರಿಕೋನ ಪ್ರೇಮಕಥೆಯಲ್ಲ
ಈ ಸಿನಿಮಾದಲ್ಲಿ ಇಬ್ಬರು ನಾಯಕರು, ಒಬ್ಬಳು ನಾಯಕಿ ಅಂತ ಬಂದಾಗ ತ್ರಿಕೋನ ಪ್ರೇಮಕಥೆ ಇರಬಹುದಾ ಎನ್ನುವ ಅನುಮಾನ ಎಲ್ಲರನ್ನು ಕಾಡುತ್ತೆ. ಅಲ್ಲದೆ ರಾಮ್ ಚರಣ್ ಗೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗತ್ತು. ಆದರೆ ಬಗ್ಗೆ ಸ್ಪಷ್ಟಪಡಿಸಿದ ರಾಜಮೌಳಿ "ಇದು ತ್ರಿಕೋನ ಪ್ರೇಮ ಕಥೆಯ ಸಿನಿಮಾವಲ್ಲ. ಅಲಿಯಾ ಇಬ್ಬರೂ ನಾಯಕರ ಜೊತೆಯೂ ಕಾಣಿಸಿಕೊಳ್ಳುವುದಿಲ್ಲ." ಎಂದು ಹೇಳಿದ್ದಾರೆ.

ಇಬ್ಬರಿಗೂ ಸಮಾನ ಅವಕಾಶವಿದೆ
ಚಿತ್ರದಲ್ಲಿ ಬಾಲಿವುಡ್ ಸ್ಟಾರ್ ಅಲಿಯಾ ಮತ್ತು ಅಜಯ್ ದೇವಗನ್ ಇಬ್ಬರು ಕಣಿಸಿಕೊಂಡಿದ್ದಾರೆ. "ದೊಡ್ಡ ಪ್ರಮಾಣದ ಸಿನಿಮಾ ಮಾಡುವಾಗ ಇಲ್ಲಿ ಕಲೆ ಮತ್ತು ಕಮರ್ಷಿಯಲ್ ಎರಡೂ ಅಂಶ ಮುಖ್ಯವಾಗುತ್ತೆ. ಒಂದರ ಸಲುವಾಗಿ ಮತ್ತೊಂದನ್ನು ತ್ಯಾಗ ಮಾಡಲು ಸಾಧ್ಯವಿಲ್ಲ. ಪ್ಯಾನ್ ಇಂಡಿಯ ಸಿನಿಮಾವಾದರಿಂದ್ದ ಈ ಅಂಶ ತುಂಬ ಮುಖ್ಯವಾಗುತ್ತೆ". ಎಂದು ರಾಜಮೌಳಿ ಹೇಳಿದ್ದಾರೆ.


Click it and Unblock the Notifications











