Baahubali The Epic; ಮತ್ತೆ ಅಬ್ಬರಿಸಲು 'ಬಾಹುಬಲಿ' ಸಿದ್ಧ, ಸೆನ್ಸಾರ್ ಕಂಪ್ಲೀಟ್; ಬಾಕ್ಸಾಫೀಸ್ ಬೇಟೆ ಶುರು

ಎಸ್‌. ಎಸ್ ರಾಜಮೌಳಿ ನಿರ್ದೇಶನ 'ಬಾಹುಬಲಿ' ಸರಣಿ ಸಿನಿಮಾಗಳು ಒಂದೇ ಚಿತ್ರವಾಗಿ ಮತ್ತೆ ತೆರೆಗೆ ಬರ್ತಿದೆ. ಎರಡೂ ಸಿನಿಮಾಗಳನ್ನು ಒಂದಾಗಿ ಎಡಿಟ್ ಮಾಡಿ ಪ್ರೇಕ್ಷಕರ ಮುಂದಿಡುವ ಅಪರೂಪದ ಪ್ರಯತ್ನ ಇದು. ಅಕ್ಟೋಬರ್ 31ರಂದು ಸಿನಿಮಾ ವಿಶ್ವದಾದ್ಯಂತ ಬಿಡುಗಡೆ ಆಗಲಿದೆ.

'ಬಾಹುಬಲಿ ದಿ ಎಪಿಕ್' ಹೆಸರಿನಲ್ಲಿ ಸಿನಿಮಾ ಪ್ರೇಕ್ಷಕರ ಮುಂದೆ ಬರ್ತಿದೆ. ಮತ್ತೆ ಬಾಹುಬಲಿ, ಬಲ್ಲಾಳದೇವನ ನಡುವಿನ ಕಾದಾಟ ನೋಡಲು ಸಿನಿರಸಿಕರು ಕಾಯ್ತಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ಹೊಸ ಇತಿಹಾಸ ನಿರ್ಮಿಸಿ, ಪ್ಯಾನ್ ಇಂಡಿಯಾ ಟ್ರೆಂಡ್ ಹುಟ್ಟಾಕ್ಕಿದ ಸಿನಿಮಾ ಇದು. ಮಹೇಶ್ ಬಾಬು ಸಿನಿಮಾ ತೆರೆಗೆ ತರುವ ಪ್ರಯತ್ನದಲ್ಲಿರುವ ಜಕ್ಕಣ್ಣ ಅದಕ್ಕೂ ಮುನ್ನ ಈ ಚಿತ್ರವನ್ನು ವಿಶ್ವದಾದ್ಯಂತ ಪ್ರೇಕ್ಷಕರ ಮುಂದೆ ತರುತ್ತಿದ್ದಾರೆ. ಮುಖ್ಯವಾಗಿ ಓವರ್‌ಸೀಸ್ ಮಾರ್ಕೆಟ್‌ನಲ್ಲಿ ಸಿನಿಮಾ ಹೆಚ್ಚು ತಲುಪುವತೆ ನೋಡಿಕೊಳ್ಳುತ್ತಿದ್ದಾರೆ.

Rajamouli s Baahubali The Epic Breaks Records with Strong Advance Bookings in the USA

ಮಹೇಶ್ ಬಾಬು ಜೊತೆಗಿನ ಚಿತ್ರವನ್ನು ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ತೆರೆಗೆ ತರುವ ಪ್ರಯತ್ನ ನಡೀತಿದೆ. ಈಗಾಗಲೇ 'RRR' ಸಿನಿಮಾ ಮೂಲಕ ಹಾಲಿವುಡ್ ವೇದಿಕೆಗಳಲ್ಲಿ ರಾಜಮೌಳಿ ತಾಖತ್ತು ಏನು ಎನ್ನುವುದನ್ನು ಪ್ರದರ್ಶಿಸಲಾಗಿದೆ. ನವೆಂಬರ್ 15ಕ್ಕೆ SSMB29 ಸಿನಿಮಾ ಟೀಸರ್ ರಿಲೀಸ್ ಪ್ಲ್ಯಾನ್ ನಡೀತಿದೆ. ಜೇಮ್ಸ್ ಕ್ಯಾಮರೂನ್ ಟೀಸರ್ ರಿಲೀಸ್ ಮಾಡುವ ಸಾಧ್ಯತೆಯಿದೆ. ಹಾಗಾಗಿ ಅದಕ್ಕೂ ಮುನ್ನ 'ಬಾಹುಬಲಿ ದಿ ಎಪಿಕ್' ಚಿತ್ರವನ್ನು ಹಾಲಿವುಡ್ ಭಾಗಗಳಲ್ಲಿ ರೀಚ್ ಮಾಡಿಸುವ ಪ್ರಯತ್ನ ಮಾಡ್ತಿದ್ದಾರೆ.

ಈಗಾಗಲೇ ಸೆನ್ಸಾರ್ ಕೆಲಸಗಳನ್ನೆಲ್ಲಾ ಮುಗಿಸಿ ಸಿನಿಮಾ ಬಿಡುಗಡೆಗೆ ಸಜ್ಜಾಗಿ ನಿಂತಿದೆ. 2 ಚಿತ್ರಗಳನ್ನು ಸೇರಿಸಿ 3 ಗಂಟೆ 44 ನಿಮಿಷಕ್ಕೆ ಇಳಿಸಲಾಗಿದೆ. 'ಕನ್ನ ನಿದುರಿಂಚರಾ' ಸಾಂಗ್ ಸೇರಿದಂತೆ ಒಂದಷ್ಟು ಸನ್ನಿವೇಶಗಳನ್ನು ಸನ್ನಿವೇಶಗಳನ್ನು ಕತ್ತರಿಸಿದ್ದಾರೆ. ಆದರೆ ಒಂದಷ್ಟು ಡಿಲೀಟೆಡ್ ಸೀನ್‌ಗಳನ್ನು ಸೇರಿಸಿ ಪ್ರೇಕ್ಷಕರಿಗೆ ಸರ್‌ಪ್ರೈಸ್ ನೀಡಲು ಜಕ್ಕಣ್ಣ ಮುಂದಾಗಿದ್ದಾರೆ. ಖುದ್ದು ರಾಜಮೌಳಿ ಮುಂದೆ ನಿಂತು ಸಿನಿಮಾಗಳನ್ನು ಎಡಿಟ್ ಮಾಡಿಸಿದ್ದಾರೆ.

Rajamouli s Baahubali The Epic Breaks Records with Strong Advance Bookings in the USA

15 ದಿನ ಮುನ್ನ ವಿದೇಶಗಳಲ್ಲಿ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರುವಾಗಿದ್ದು ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಯುಎಸ್‌ಎನಲ್ಲಿ 107 ಶೋಗಳಲ್ಲಿ ಸಿನಿಮಾ ಬಿಡುಗಡೆ ಖಚಿತವಾಗಿದೆ. ಪ್ರೇಕ್ಷಕರು ಟಿಕೆಟ್ ಬುಕ್ ಮಾಡಲು ಮುಗಿಬಿದ್ದಿದ್ದು ಕಲೆಕ್ಷನ್ ಜೋರಾಗಿದೆ. 13 ದಿನ ಮುನ್ನ ಅಲ್ಲಿ ಅಂದಾಜು 90 ಲಕ್ಷ ರೂ. ಕಲೆಕ್ಷನ್ ಮಾಡಿದೆ. ಇದು ಸಹಜವಾಗಿಯೇ ಚಿತ್ರತಂಡದ ಸಂತಸಕ್ಕೆ ಕಾರಣವಾಗಿದೆ. ಶೀಘ್ರದಲ್ಲೇ ಭಾರತದಲ್ಲಿ ಕೂಡ ಸಿನಿಮಾ ಅಡ್ವಾನ್ಸ್ ಬುಕ್ಕಿಂಗ್ ಆರಂಭವಾಗಲಿದೆ. ಬಾಹುಬಲಿ ಸರಣಿ ಸಿನಿಮಾಗಳು ಬಂದಾಗ ಕರ್ನಾಟಕದಲ್ಲಿ ಡಬ್ಬಿಂಗ್ ಸಿನಿಮಾ ಪ್ರದರ್ಶನಕ್ಕೆ ಅವಕಾಶ ಇರಲಿಲ್ಲ. ಹಾಗಾಗಿ ಆಗ ಕನ್ನಡಕ್ಕೆ ಡಬ್ ಆಗಿರಲಿಲ್ಲ. ಇದೇ ಕಾರಣಕ್ಕೆ ಈಗ ಕೂಡ ಕನ್ನಡದಲ್ಲಿ ಸಿನಿಮಾ ಬಿಡುಗಡೆ ಆಗುವುದು ಅನುಮಾನ.

ಭಾರತದಲ್ಲಿ ದೊಡ್ಡ ದೊಡ್ಡ ಸಂಸ್ಥೆಗಳಿಗೆ ಸಿನಿಮಾ ವಿತರಣೆ ಹಕ್ಕುಗಳನ್ನು ನೀಡಲಾಗಿದೆ. ಹೊಸ ಸಿನಿಮಾ ಬಿಡುಗಡೆ ರೀತಿಯಲ್ಲೇ 'ಬಾಹುಬಲಿ ದಿ ಎಪಿಕ್' ಸಿನಿಮಾ ರೀ ರಿಲೀಸ್ ಆಗುತ್ತಿದೆ. ಅಭಿಮಾನಿಗಳು ಕೂಡ ಫಸ್ಟ್ ಡೇ ಸಿನಿಮಾ ವೀಕ್ಷಿಸಲು ಕಾಯುತ್ತಿದ್ದಾರೆ. ಒಟ್ಟಾರೆ 'ಬಾಹುಬಲಿ ದಿ ಬಿಗಿನಿಂಗ್' ಹಾಗೂ 'ಬಾಹುಬಲಿ ದಿ ಕನ್‌ಕ್ಲ್ಯೂಷನ್' ಸಿನಿಮಾಗಳನ್ನು ಬೇರೆ ಬೇರೆಯಾಗಿ ಚಿತ್ರಮಂದಿರದಲ್ಲಿ ನೋಡಿರಬಹುದು, ಅಥವಾ ಓಟಿಟಿ, ಟಿವಿಯಲ್ಲಿ ಕೂಡ ವೀಕ್ಷಿಸಿರಬಹುದು. ಆದರೆ ಎರಡನ್ನು ಸೇರಿ ಒಮ್ಮೆಲೆ ದೊಡ್ಡಪರದೆಯಲ್ಲಿ ನೋಡುವುದು ಹೊಸ ಅನುಭವ ನೀಡುವ ಸಾಧ್ಯತೆಯಿದೆ.

ಶೀಘ್ರದಲ್ಲೇ ಚಿತ್ರತಂಡ ಪ್ರಚಾರ ಮಾಡಲು ಮುಂದಾಗಲಿದೆ. ಪ್ರಭಾಸ್, ರಾಣಾ ದಗ್ಗುಬಾಟಿ ಕೂಡ ಸಂದರ್ಶನಗಳಲ್ಲಿ ಭಾಗಿ ಆಗಿ ಸಿನಿಮಾ ಬಗ್ಗೆ ಮಾತನಾಡುವ ಸಾಧ್ಯತೆಯಿದೆ. ಮತ್ತೊಮ್ಮೆ ಬಾಹುಬಲಿ ಮೇಕಿಂಗ್ ಅನುಭವ ತೆರೆದಿಡಲಿದ್ದಾರೆ.

More from Filmibeat

Read more about: baahubali prabhas rajamouli
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X