ರಾಜಮೌಳಿ 'RRR' ಸಿನಿಮಾದಿಂದ ಅಭಿಮಾನಿಗಳಿಗೆ ಮತ್ತೆ ಬೇಸರ

ದಕ್ಷಿಣ ಭಾರತದ ಬಹುನಿರೀಕ್ಷೆಯ ಸಿನಿಮಾಗಳಲ್ಲಿ ಖ್ಯಾತ ನಿರ್ದೇಶಕ ರಾಜಮೌಳಿ ಸಾರಥ್ಯದಲ್ಲಿ ಮೂಡಿಬರುತ್ತಿರುವ ಆರ್ ಆರ್ ಆರ್ ಸಿನಿಮಾ ಕೂಡ ಒಂದು. ಅಂದುಕೊಂಡಂತೆ ಆಗಿದ್ದರೆ ಸಿನಿಮಾ ಈಗಾಗಲೇ ಬಿಡುಗಡೆಯಾಗಬೇಕಿತ್ತು. ಆದರೆ ಕೊರೊನಾ ಹಾವಳಿಯ ಪರಿಣಾಮ ತಡವಾಗುತ್ತಿದೆ.

ಈ ವರ್ಷವಾದರೂ ಆರ್ ಆರ್ ಆರ್ ನೋಡಿ ಕಣ್ತುಂಬಿಕೊಳ್ಳೊಣ ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ ಮತ್ತೆ ನಿರಾಸೆಯ ಸುದ್ದಿ ಕೇಳಿಬರುತ್ತಿದೆ. ಸದ್ಯ ಹೆಚ್ಚಾಗಿರುವ ಕೊರೊನಾದಿಂದ ಜನ ಬದುಕಿಗಾಗಿ ಪರದಾಡುತ್ತಿದ್ದಾರೆ. ಜೀವ ಉಳಿಸಿಕೊಳ್ಳಲು ಆಸ್ಪತ್ರೆ, ಆಕ್ಸಿಜನ್ ಅಂತ ಒದ್ದಾಡುತ್ತಿದ್ದಾರೆ. ಭೀಕರವಾಗಿರುವ ಕೊರೊನಾದಿಂದ ಸಿನಿ ಮಂದಿಯ ಲೆಕ್ಕಾಚಾರ ಕೂಡ ತೆಲೆಕೆಳಗಾಗಿದೆ. ಮುಂದೆ ಓದಿ...

ಅಂದುಕೊಂಡ ದಿನಾಂಕಕ್ಕೆ RRR ರಿಲೀಸ್ ಅನುಮಾನ

ಅಂದುಕೊಂಡ ದಿನಾಂಕಕ್ಕೆ RRR ರಿಲೀಸ್ ಅನುಮಾನ

ಈ ವರ್ಷ ಬಿಡುಗಡೆಗೆ ಸಾಲು ಸಾಲು ಸಿನಿಮಾಗಳು ತಯಾರಾಗಿದ್ದವು. ದಿನಾಂಕ ಕೂಡ ಘೋಷಣೆ ಮಾಡಿ, ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದ್ದರು. ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾ ಕೂಡ ಇದೇ ವರ್ಷ ಅಕ್ಟೋಬರ್ 13ಕ್ಕೆ ತೆರೆಗೆ ಬರಲು ಸಿದ್ಧವಾಗಿತ್ತು. ಆದರೀಗ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ಸಿನಿಮಾ ಅಕ್ಟೋಬರ್ ನಲ್ಲಿ ಬಿಡುಗೆಯಾಗುವುದು ಅನುಮಾನ ಎಂದು ಹೇಳಲಾಗುತ್ತಿದೆ.

ಚಿತ್ರೀಕರಣ ಇನ್ನೂ ಸಾಕಷ್ಟು ಬಾಕಿ ಇದೆ

ಚಿತ್ರೀಕರಣ ಇನ್ನೂ ಸಾಕಷ್ಟು ಬಾಕಿ ಇದೆ

ಚಿತ್ರದ ಚಿತ್ರೀಕರಣ ಸಾಕಷ್ಟು ಬಾಕಿ ಇದ್ದು ರಾಮ್ ಚರಣ್ ಮತ್ತು ಜೂ.ಎನ್ ಟಿ ಆರ್ ಭಾಗದ ಚಿತ್ರೀಕರಣ ಇನ್ನು ಇದೆಯಂತೆ. ಈ ವರ್ಷ ರಾಮ್ ಚರಣ್ ಹೆಚ್ಚಾಗಿ ಚಿತ್ರೀಕರಣದಲ್ಲಿ ಭಾಗಿಯಾಗಿಲ್ಲ. ಯಾಕೆಂದರೆ ತಮ್ಮ ನಿರ್ಮಾಣದ ಆಚಾರ್ಯ ಸಿನಿಮಾದಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿದ್ದರು ಎಂದು ಹೇಳಲಾಗುತ್ತಿದೆ.

ಜುಲೈನಲ್ಲಿ ಚಿತ್ರೀಕರಣ ಮುಗಿಸುವ ಪ್ಲಾನ್ ಮಾಡಿತ್ತು ತಂಡ

ಜುಲೈನಲ್ಲಿ ಚಿತ್ರೀಕರಣ ಮುಗಿಸುವ ಪ್ಲಾನ್ ಮಾಡಿತ್ತು ತಂಡ

ಜುಲೈಯೊಳಗೆ ಚಿತ್ರೀಕರಣ ಪೂರ್ಣಗೊಳಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸ ಪ್ರಾರಂಭ ಮಾಡುವ ಲೆಕ್ಕಾಚಾರದಲ್ಲಿದ್ದರು ಆರ್ ಆರ್ ಆರ್ ತಂಡ. ಈಗಾಗಲೇ ಬಾಲಿವುಡ್ ನಟಿ ಆಲಿಯಾ ಭಟ್ ಮತ್ತು ಅಜಯ್ ದೇವಗನ್ ಭಾಗದ ಚಿತ್ರೀಕರಣ ಮುಕ್ತಾಯಗೊಳಿಸಿದ್ದಾರೆ.

Recommended Video

ಇಪ್ಪತ್ತೊಂದು ದಿನ ಅನುಭವಿಸಿದ ಕೊರೊನಾ ಕರಾಳತೆ ಬಿಚ್ಚಿಟ್ಟ ಶ್ವೇತಾ ಚಂಗಪ್ಪ | Filmibeat Kannada
ಮುಂದಿನ ವರ್ಷ ಬೇಸಿಗೆಗೆ ಆರ್ ಆರ್ ಆರ್?

ಮುಂದಿನ ವರ್ಷ ಬೇಸಿಗೆಗೆ ಆರ್ ಆರ್ ಆರ್?

ಆದರೀಗ ಎಲ್ಲಾ ತಲೆಕೆಳಗಾಗಿದೆ. ಸದ್ಯ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ಆರ್ ಆರ್ ಆರ್ ಮುಂದಿನ ವರ್ಷ 2022 ಬೇಸಿಗೆ ರಜೆಯ ಸಮಯದಲ್ಲಿ ಬಿಡುಗಡೆ ಮಾಡಲು ನಿರ್ಧರಿಸುತ್ತಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಸದ್ಯಕ್ಕೆ ಈಗಿನ ಕೊರೊನಾ ಪರಿಸ್ಥಿತಿಯಲ್ಲಿ ಯಾವ ನಿರ್ಧಾರಕ್ಕೂ ಬರಲಾಗದೆ ನಿರ್ಮಾಪಕರು ಗೊಂದಲದಲ್ಲಿದ್ದಾರೆ.

More from Filmibeat

English summary
Rajamouli's RRR likely to postponed, Makers planning to release in 2022 summer.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X