'RRR' ಘರ್ಜನೆ: ರಾಜಮೌಳಿ ಕಡೆಯಿಂದ ಅಭಿಮಾನಿಗಳಿಗೆ ಸಿಕ್ತಿದೆ ಭರ್ಜರಿ ಗಿಫ್ಟ್
ಭಾರತದ ಬಹುನಿರೀಕ್ಷೆಯ ಸಿನಿಮಾಗಳಲ್ಲಿ ಖ್ಯಾತ ನಿರ್ದೇಶಕ ರಾಜಮೌಳಿ ಸಾರಥ್ಯದಲ್ಲಿ ಮೂಡಿಬರುತ್ತಿರುವ RRR ಸಿನಿಮಾ ಕೂಡ ಒಂದು. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿರುವ ಸಿನಿಮಾತಂಡ ಸದ್ಯ ಕೊನೆ ಹಂತದ ಚಿತ್ರೀಕರಣದಲ್ಲಿ ನಿರತವಾಗಿದೆ. ಕೊರೊನಾ 2ನೇ ಅಲೆ ಮುಗಿಸಿ ಇತ್ತೀಚಿಗಷ್ಟೆ ಚಿತ್ರೀಕರಣ ಪ್ರಾರಂಭ ಮಾಡಿದ್ದ ಸಿನಿಮಾತಂಡ ಅಭಿಮಾನಿಗಳಿಗೆ ಥ್ರಿಲ್ಲಿಂಗ್ ಸುದ್ದಿ ನೀಡಿದೆ.
ಸುಮಾರು 3 ವರ್ಷಗಳಿಂದ ಚಿತ್ರೀಕರಣದಲ್ಲಿ ನಿರತವಾಗಿರುವ ಆರ್ ಆರ್ ಆರ್ ಸಿನಿಮಾತಂಡ ಜುಲೈ 15ಕ್ಕೆ ಭರ್ಜರಿ ಗಿಫ್ಟ್ ನೀಡಲು ಮುಂದಾಗಿದೆ. ಇದುವರೆಗೂ ಸಿನಿಮಾದಿಂದ ಪೋಸ್ಟರ್ಸ್ ಮತ್ತು ರಾಮ್ ಚರಣ್ ಹಾಗೂ ಜೂ.ಎನ್ ಟಿ ಆರ್ ಟೀಸರ್ ಬಿಟ್ಟರೆ ಬೇರೆ ಏನು ಬಿಡುಗಡೆ ಮಾಡಿರಲಿಲ್ಲ. ಇದೀಗ ಮೇಕಿಂಗ್ ವಿಡಿಯೋ ರಿಲೀಸ್ ಮಾಡಲು ಸಜ್ಜಾಗಿದೆ.

ಜುಲೈ 15ಕ್ಕೆ ಮೇಕಿಂಗ್ ವಿಡಿಯೋ
ಜುಲೈ15ರಂದು ಬಹುನಿರೀಕ್ಷೆಯ ಆರ್ ಆರ್ ಆರ್ ಸಿನಿಮಾ ಮೇಕಿಂಗ್ ವಿಡಿಯೋ ಬಿಡುಗಡೆ ಮಾಡುವುದಾಗಿ ಸಿನಿಮಾತಂಡ ಅನೌನ್ಸ್ ಮಾಡಿದೆ. ಈ ಮೂಲಕ ಚಿತ್ರದ ಪ್ರಮೋಷನ್ ಕೆಲಸವನ್ನು ಪ್ರಾರಂಭ ಮಾಡುತ್ತಿದೆ ಸಿನಿಮಾತಂಡ. ಈ ಬಗ್ಗೆ ಮಾಹಿತಿ ನೀಡಿರುವ RRR ತಂಡ ಜುಲೈ 15 ಬೆಳಗ್ಗೆ 11 ಗಂಟೆಗೆ ವಿಕಿಂಗ್ ವಿಡಿಯೋ ಬಿಡುಗಡೆಯಾಗಲಿದೆ ಎಂದು ಘೋಷಿಸಿದ್ದಾರೆ.

ಮೇಕಿಂಗ್ ವಿಡಿಯೋಗೆ RRR ಘರ್ಜನೆ ಎಂದು ಹೆಸರು
ಚಿತ್ರದಿಂದ ಹೊರಬರುತ್ತಿರುವ ಮೊದಲ ಮೆಕಿಂಗ್ ವಿಡಿಯೋಗೆ 'ಆರ್ ಆರ್ ಆರ್ ಘರ್ಜನೆ' ಎಂದು ಹೆಸರಿಡಲಾಗಿದೆ. 'ಬಾಹುಬಲಿ' ಸಿನಿಮಾ ಬಳಿಕ ರಾಜಮೌಳಿ ಮತ್ತೊಂದು ಅದ್ದೂರಿ, ಬಿಗ್ ಬಜೆಟ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಸುಮಾರು 3 ವರ್ಷಗಳಿಂದ ಚಿತ್ರಕ್ಕಾಗಿ ಶ್ರಮವಹಿಸಲಾಗಿದ್ದು, ಅಂತಿಮವಾಗಿ ಫಲ ಸಿಗುವ ಸಮಯ ಹತ್ತಿರಬರುತ್ತಿದೆ.

ಟ್ರೆಂಡಿಂಗ್ ನಲ್ಲಿ 'ಆರ್ ಆರ್ ಆರ್'
ಸಿನಿಮಾತಂಡ ಮೇಕಿಂಗ್ ವಿಡಿಯೋ ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡುತ್ತಿದ್ದಂತೆ RRR ಸಿನಿಮಾ ಟ್ವಿಟ್ಟರ್ ಟ್ರೆಂಡಿಂಗ್ ನಲ್ಲಿದೆ. ಮೇಕಿಂಗ್ ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಸುಮಾರು 3 ವರ್ಷಗಳ ಚಿತ್ರತಂಡದ ಶ್ರಮವನ್ನು ನೋಡಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.

ಎರಡು ಭಾಷೆಯ ಡಬ್ಬಿಂಗ್ ಮುಗಿಸಿರುವ Jr.NTR- ರಾಮ್
ಅಂದಹಾಗೆ ಆರ್ ಆರ್ ಆರ್ ಸಿನಿಮಾ ಎರಡು ಹಾಡನ್ನು ಹೊರತುಪಡಿಸಿ ಚಿತ್ರದ ಟಾಕಿ ಭಾಗದ ಚಿತ್ರೀಕರಣ ಶೀಘ್ರದಲ್ಲೇ ಮುಕ್ತಾಯವಾಗಲಿದೆ ಎಂದು ಇತ್ತೀಚಿಗಷ್ಟೆ ಬಹಿರಂಗ ಪಡಿಸಿದ್ದರು. ಜೊತೆಗೆ ಜೂ.ಎನ್ ಟಿ ಆರ್ ಮತ್ತು ರಾಮ್ ಚರಣ್ ಇಬ್ಬರು ಎರಡು ಭಾಷೆಯ ಡಬ್ಬಿಂಗ್ ಕೆಲಸವನ್ನು ಮುಗಿಸಿರುವುದಾಗಿಯೂ ಚಿತ್ರತಂಡ ಮಾಹಿತಿ ಹಂಚಿಕೊಂಡಿತ್ತು.
Recommended Video

ಅಕ್ಟೋಬರ್ ನಲ್ಲಿ ತೆರೆಗೆ ಬರುತ್ತಾ ಸಿನಿಮಾ?
ಪ್ಯಾನ್ ಇಂಡಿಯಾ ಸಿನಿಮಾ RRR ತೆಲುಗು ಜೊತೆಗೆ ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಸೇರಿದಂತೆ ಇನ್ನು ಅನೇಕ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಡಿವಿವಿ ಎಂಟರ್ ಟೈನ್ ಮೆಂಟ್ ಬ್ಯಾನರ್ ನಲ್ಲಿ ತಯಾರಾಗುತ್ತಿರುವ ಈ ಸಿನಿಮಾ 450 ಕೋಟಿ ರೂ.ಗೂ ಹೆಚ್ಚಿನ ಬಜೆಟ್ ನಲ್ಲಿ ನಿರ್ಮಾಣವಾಗುತ್ತಿದೆ. ಇನ್ನು ಅಂದುಕೊಂಡಂತೆ ಆಗಿದ್ದರೆ ಸಿನಿಮಾ ಅಕ್ಟೋಬರ್ 13ರಂದು ಸಿನಿಮಾ ತೆರೆಗೆ ಬರಬೇಕಿತ್ತು. ಆದರೆ ಕೊರೊನಾ ಕಾರಣದಿಂದ ಬಿಡುಗಡೆ ದಿನಾಂಕ ಮತ್ತೆ ಮುಂದೆ ಹೋಗುತ್ತಾ ಅಥವಾ ಅಕ್ಟೋಬರ್ ನಲ್ಲಿ ಬಿಡುಗಡೆಯಾಗಲಿದೆಯಾ ಎಂದು ಕಾದು ನೋಡಬೇಕು.


Click it and Unblock the Notifications











