'ವಾರಣಾಸಿ' ಚಿತ್ರದಲ್ಲಿ ಬೌಂಟಿ ಹಂಟರ್ ಆಗಿ ಮಹೇಶ್ ಬಾಬು; ಥೇಟ್ 'ಕಲ್ಕಿ 2898AD' ಕಥೆನಾ?

ರಾಜಮೌಳಿ ನಿರ್ದೇಶನದ 'ವಾರಣಾಸಿ' ಸಿನಿಮಾ ಭರದಿಂದ ಸಾಗುತ್ತಿದೆ. ಸಿನಿಮಾ ಬಿಡುಗಡೆಗೆ ಇನ್ನೊಂದು ವರ್ಷ ಕಾಯಬೇಕಿದೆ. ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಈ ಸಿನಿಮಾ ತೆರೆಗೆ ಬರ್ತಿದೆ. ಸದ್ಯ ಚಿತ್ರದಲ್ಲಿ ಮಹೇಶ್ ಬಾಬು ಪಾತ್ರದ ಬಗ್ಗೆ ಮಾಹಿತಿ ಬಹಿರಂಗವಾಗಿದೆ. ಇದನ್ನು ಕೇಳಿ ಸಿನಿಮಾ ಕಥೆಯನ್ನು ಪ್ರಭಾಸ್ ನಟನೆಯ 'ಕಲ್ಕಿ 2898AD' ಕಥೆ ಜೊತೆಗೆ ಅಭಿಮಾನಿಗಳು ಹೋಲಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಇದು ಭಾರೀ ಚರ್ಚೆ ಹುಟ್ಟಾಕ್ಕಿದೆ.

'ವಾರಣಾಸಿ' ಚಿತ್ರದಲ್ಲಿ ರುದ್ರ ಎನ್ನುವ ಬೌಂಟಿ ಹಂಟರ್ ಪಾತ್ರದಲ್ಲಿ ಮಹೇಶ್ ಬಾಬು ನಟಿಸುತ್ತಿದ್ದಾರೆ ಎನ್ನಲಾಗ್ತಿದೆ. 'ಕಲ್ಕಿ 2898AD' ಪ್ರಭಾಸ್ ಕೂಡ ಬೌಂಟಿ ಹಂಟರ್ ಭೈರವ ಆಗಿ ನಟಿಸಿದ್ದರು. ಕೊನೆಗೆ ಆತ ಕರ್ಣನ ಪುನರ್ಜನ್ಮ ಎನ್ನುವಂತೆ ತೋರಿಸಲಾಗಿತ್ತು. 'ವಾರಣಾಸಿ' ಚಿತ್ರದಲ್ಲಿ ತ್ರೇತಾಯುಗದ ಕಥೆ ಕೂಡ ಇದೆ. ಶ್ರೀರಾಮನ ಅವತಾರದಲ್ಲಿ ಕೆಲವೊತ್ತು ಮಹೇಶ್ ಬಾಬು ತೆರೆಮೇಲೆ ದರ್ಶನ ಕೊಡಲಿದ್ದಾರೆ. ಈ ವಿಚಾರವನ್ನು ಸ್ವತಃ ರಾಜಮೌಳಿ ಬಹಿರಂಗಪಡಿಸಿದ್ದಾರೆ.

Rajamouli Varanasi film Mahesh Babu as bounty hunter Rudra sparks Kalki 2898 AD comparisons

'ಕಲ್ಕಿ 2898AD' ಚಿತ್ರದಲ್ಲಿ ಕರ್ಣನ ಪುನರ್ಜನ್ಮದಲ್ಲಿ ಭೈರವನಾಗಿ ಪ್ರಭಾಸ್ ನಟಿಸಿದಂತೆ 'ವಾರಣಾಸಿ' ಚಿತ್ರದಲ್ಲಿ ಶ್ರೀರಾಮದ ಪುನರ್ಜನ್ಮದಲ್ಲಿ ರುದ್ರನಾಗಿ ಮಹೇಶ್ ಬಾಬು ನಟಿಸಿದ್ದಾರಾ? ಎನ್ನುವ ಊಹಾಪೋಹ ಶುರುವಾಗಿದೆ. ಕೇಳುವುದಕ್ಕೆ ಇದು ಸಖತ್ ಇಂಟ್ರೆಸ್ಟಿಂಗ್ ಎನಿಸುತ್ತಿದೆ. ಹಣಕ್ಕಾಗಿ ಸರ್ಕಾರ ಅಥವಾ ಪೊಲೀಸರಿಗೆ ಸಹಾಯ ಮಾಡುವ, ಹಣಕ್ಕಾಗಿ ಯಾವುದೇ ಕೆಲಸ ಮಾಡುವವನು ಬೌಂಟಿ ಹಂಟರ್. ಹಾಲಿವುಡ್ ಸಿನಿಮಾಗಳಲ್ಲಿ ಇಂತಹ ಪಾತ್ರಗಳನ್ನು ಹೆಚ್ಚು ಕಟ್ಟಿಕೊಡಲಾಗುತ್ತದೆ. ನಾಗ್‌ ಅಶ್ವಿನ್ 'ಕಲ್ಕಿ 2898AD' ಚಿತ್ರದಲ್ಲಿ ಪ್ರಭಾಸ್ ಅವರನ್ನು ಹೀಗೆ ತೋರಿಸಿದ್ದರು.

ವಾರಣಾಸಿ ಗ್ಲೋಬ್ ಟ್ರಾಟರ್ ಸಿನಿಮಾ. ಟೈಮ್ ಟ್ರಾವಲ್ ಸಿನಿಮಾ. ವಾರಣಾಸಿಯ ಬೌಂಟಿ ಹಂಟರ್ ರುದ್ರ ಅದೊಂದು ಕಾರಣಕ್ಕೆ ದೇಶ ವಿದೇಶಗಳಿಗೆ ಒಂದು ಯುಗದಿಂದ ಮತ್ತೊಂದು ಯುಗಕ್ಕೆ ನಡೆಸುವ ಜರ್ನಿ ಕಥೆ ಚಿತ್ರದಲ್ಲಿದೆ. ಮಂದಾಕಿನಿಯಾಗಿ ಪ್ರಿಯಾಂಕ ಚೋಪ್ರಾ ಸಾಥ್ ಕೊಟ್ಟಿದ್ದಾರೆ. ಖಡಕ್ ವಿಲನ್ ಕುಂಭ ಪಾತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್ ನಟಿಸಿದ್ದಾರೆ. 1000 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗ್ತಿದೆ.

ತೆಲುಗು ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ಏಕಕಾಲಕ್ಕೆ 'ವಾರಣಾಸಿ' ಸಿನಿಮಾ ಕಟ್ಟಿಕೊಡಲಾಗ್ತಿದೆ. ಐಮ್ಯಾಕ್ಸ್ ಸ್ಕ್ರೀನ್‌ಗಳಿಗಾಗಿ ಸಿನಿಮಾ ಮಾಡ್ತಿದ್ದೀವಿ ಎಂದು ರಾಜಮೌಳಿ ಘೋಷಿಸಿದ್ದಾರೆ. ವರ್ಷಕ್ಕೂ ಮುನ್ನ ಹಾಲಿವುಡ್ ಮಾಧ್ಯಮಗಳಿಗೆ ಸಂದರ್ಶನ ನೀಡಿ ಸಿನಿಮಾ ಪ್ರಚಾರ ಆರಂಭಿಸಿದ್ದಾರೆ. ಗ್ಲೋಬಲ್ ಸ್ಟಾರ್ ಪ್ರಿಯಾಂ ಚೋಪ್ರಾ ತಾರಾಗಣದಲ್ಲಿರುವುದು ಹಾಲಿವುಡ್ ಮಟ್ಟದಲ್ಲಿ ಚಿತ್ರಕ್ಕೆ ಕ್ರೇಜ್ ಸೃಷ್ಟಿಸಲಿದೆ. ರಾಮನವಮಿ ಸಂಭ್ರಮದಲ್ಲಿ 'ವಾರಣಾಸಿ' ಚಿತ್ರತಂಡದಿಂದ ಏನಾದ್ರೂ ಸರ್‌ಪ್ರೈಸ್ ಸಿಗುತ್ತಾ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಚಿತ್ರದಲ್ಲಿ ಮಹೇಶ್ ಬಾಬು ಶ್ರೀರಾಮನ ಅವತಾರದಲ್ಲಿ ಪೋಸ್ಟರ್, ಟೀಸರ್ ಬಿಡ್ತಾರಾ? ಎಂದು ನಿರೀಕ್ಷಿಸುತ್ತಿದ್ದಾರೆ.

ನಾಗ್‌ ಅಶ್ವಿನ್ ನಿರ್ದೇಶನದಲ್ಲಿ 'ಕಲ್ಕಿ 2898AD' ಚಿತ್ರದ ಎರಡನೇ ಭಾಗದ ಚಿತ್ರೀಕರಣ ನಡೀತಿದೆ. ಕಮಲ್ ಹಾಸನ್ ಹಾಗೂ ಅಮಿತಾಬ್ ಬಚ್ಚನ್ ಕಾಣಿಸಿಕೊಂಡಿರುವ ದೃಶ್ಯಗಳನ್ನು ಸೆರೆ ಹಿಡಿಯಲಾಗ್ತಿದೆ. ಶೀಘ್ರದಲ್ಲೇ ಪ್ರಭಾಸ್ ಕೂಡ ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ. ವೈಜಯಂತಿ ಮೂವೀಸ್ ಬ್ಯಾನರ್ ಅಡಿಯಲ್ಲಿ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗ್ತಿದೆ.

ದೀಪಿಕಾ ಪಡುಕೋಣೆ ಚಿತ್ರದಿಂದ ಹೊರ ಬಂದಿದ್ದಾರೆ. ಹಾಗಾಗಿ ಸಾಯಿ ಪಲ್ಲವಿ ಆ ಪಾತ್ರ ಮಾಡುವ ಸಾಧ್ಯತೆ ದಟ್ಟವಾಗಿದೆ. ಸೀಕ್ವೆಲ್‌ನಲ್ಲಿ ಮಹಾಭಾರತ ಪ್ರಸ್ತಾಪ ಜಾಸ್ತಿಯಿದೆ ಎನ್ನಲಾಗ್ತಿದೆ. 'ಕಲ್ಕಿ 2898AD' ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಮಹಾಭಾರತದ ಕರ್ಣನ ಅವತಾರದಲ್ಲಿ ಪ್ರಭಾಸ್ ಸಣ್ಣ ಝಲಕ್ ತೋರಿಸಲಾಗಿತ್ತು. ಮುಂದಿನ ಭಾಗದಲ್ಲಿ 20 ನಿಮಿಷ ಮಹಾಭಾರತದ ದೃಶ್ಯಗಳು ಇರುತ್ತವೆ ಎನ್ನಲಾಗ್ತಿದೆ.

More from Filmibeat

Read more about: mahesh babu prabhas varanasi
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X