'ಸರ್ ಇದು ನಮ್ಮ ದಸರಾ ತಂಡದ ಆಸ್ಕರ್'; ಟಾಪ್ ನಿರ್ದೇಶಕನ ಟ್ವೀಟ್‌ಗೆ ನಾನಿ ಖುಷ್

ಸದ್ಯ ಭಾರತದ ಬಾಕ್ಸ್ ಆಫೀಸ್‌ನಲ್ಲಿ ದಸರಾ ಅಬ್ಬರ ಜೋರಾಗಿದೆ. ಚಿತ್ರ ಬಿಡುಗಡೆಯಾಗಿ ಇಂದಿಗೆ ಆರು ದಿನಗಳಾಗಿದ್ದು, ಐದು ದಿನಗಳಲ್ಲಿ 92 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿ ಬಾಕ್ಸ್ ಆಫೀಸ್ ಧೂಳ್ ಎಬ್ಬಿಸಿದೆ. ನೂರು ಕೋಟಿ ಸನಿಹದಲ್ಲಿರುವ ದಸರಾ ನಾನಿ ಸಿನಿ ಕೆರಿಯರ್‌ನ ಮೊದಲ ನೂರು ಕೋಟಿ ಚಿತ್ರವಾಗಲಿದ್ದು, ಸಾಲು ಸಾಲು ಸೋಲಿನಿಂದ ಕಂಗೆಟ್ಟಿದ್ದ ನಟನಿಗೆ ಕಮ್ ಬ್ಯಾಕ್ ಸಿನಿಮಾ ಸಹ ಆಗಿದೆ.

ಹೌದು, ನಾನಿ ನಟನೆಯ ಕಳೆದ ನಾಲ್ಕೈದು ಚಿತ್ರಗಳು ನಿರೀಕ್ಷಿಸಿದ ಯಶಸ್ಸು ಸಾಧಿಸುವಲ್ಲಿ ವಿಫಲ ಹೊಂದಿ ಹಿನ್ನಡೆ ಅನುಭವಿಸಿದ್ದವು. ಮೂವತ್ತರಿಂದ ನಲವತ್ತು ಕೋಟಿ ಕಲೆಕ್ಷನ್ ಮಾಡುವುದರಲ್ಲಿ ಸುಸ್ತಾಗುತ್ತಿದ್ದ ನಾನಿ ಸಿನಿಮಾ ಈ ಬಾರಿ ಮೊದಲ ದಿನವೇ 38 ಕೋಟಿ ಗಳಿಸಿ ಅಬ್ಬರಿಸಿದೆ.

Rajamouli watched and praised Dasara movie and Nani calls it as Oscar

ಇನ್ನು ಚಿತ್ರ ಊಹಿಸಬಹುದಾದಂತಹ ರಿವೇಂಜ್ ಕಥೆಯನ್ನು ಹೊಂದಿದ್ದು ರಿಚ್ ಮೇಕಿಂಗ್, ಛಾಯಾಗ್ರಹಣ, ಬ್ಯಾಕ್‌ಗ್ರೌಂಡ್ ಮ್ಯೂಸಿಕ್, ಸಂಕಲನ ಹಾಗೂ ಮುಖ್ಯವಾಗಿ ಕಲಾವಿದರ ಅದ್ಭುತ ನಟನೆಯಿಂದಾಗಿ ಜಯಭೇರಿ ಬಾರಿಸಿ ಪ್ರೇಕ್ಷಕರಿಂದ ಫುಲ್ ಮಾರ್ಕ್ಸ್ ಗಿಟ್ಟಿಸಿಕೊಂಡಿದೆ.

ಹೀಗೆ ಪ್ರೇಕ್ಷಕರಿಂದ ಭರ್ಜರಿ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿರುವ ದಸರಾ ಚಿತ್ರವನ್ನು ಸಿನಿ ಮಂದಿ ಸಹ ಮೆಚ್ಚಿಕೊಂಡಿದ್ದಾರೆ. ತೆಲುಗು ಚಿತ್ರರಂಗದ ಸ್ಟಾರ್ ನಟರಾದ ಮಹೇಶ್ ಬಾಬು ಹಾಗೂ ಪ್ರಭಾಸ್ ಸೇರಿದಂತೆ ಹಲವಾರು ನಟರು ದಸರಾ ಚಿತ್ರವನ್ನು ವೀಕ್ಷಿಸಿ ಸಾಮಾಜಿಕ ಜಾಲತಾಣದ ತಮ್ಮ ಅಧಿಕೃತ ಖಾತೆಗಳಲ್ಲಿ ಚಿತ್ರದ ಬಗ್ಗೆ ಬರೆದುಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈಗ ಈ ಸಾಲಿಗೆ ಆರ್ ಆರ್ ಆರ್ ತಂಡ ಸಹ ಸೇರಿಕೊಂಡಿದೆ.

ಖ್ಯಾತ ನಿರ್ದೇಶಕ ಎಸ್ ಎಸ್ ರಾಜಮೌಳಿ ಸಹ ದಸರಾ ಚಿತ್ರವನ್ನು ವೀಕ್ಷಿಸಿ ಚಿತ್ರ ಹೇಗಿದೆ ಎಂಬುದನ್ನು ಬರೆದುಕೊಂಡಿದ್ದಾರೆ. ಚಿತ್ರದ ಪಾತ್ರಗಳು ರಗಡ್ ಆಗಿದ್ದು, ಶ್ರೀಕಾಂತ್ ಒಡೆಲಾ ಮನ ಮುಟ್ಟುವ ಪ್ರೇಮಕಥೆಯನ್ನು ಹೆಣೆದಿದ್ದಾರೆ. ನಾನಿ ತಮ್ಮ ವೃತ್ತಿ ಜೀವನದ ಅತ್ಯುತ್ತಮ ನಟನೆ ಮಾಡಿದ್ದಾರೆ, ಕೀರ್ತಿ ಸುರೇಶ್ ತನ್ನ ಪಾತ್ರದಲ್ಲಿ ಲೀಲಾಜಾಲವಾಗಿ ನಟಿಸಿದ್ದಾಳೆ. ಚಿತ್ರದ ಎಲ್ಲಾ ಕಲಾವಿದರ ನಟನೆ ಸಹ ನೆನಪಿನಲ್ಲಿ ಉಳಿಯುವಂತಹದ್ದಾಗಿದೆ. ಛಾಯಾಗ್ರಹಣ ಫಸ್ಟ್ ಕ್ಲಾಸ್. ಬ್ಯಾಕ್‌ಗ್ರೌಂಡ್ ಮ್ಯೂಸಿಕ್ ಅತ್ಯದ್ಭುತ. ಇಂತಹ ಗೆಲುವು ಸಾಧಿಸಿರುವ ದಸರಾ ತಂಡಕ್ಕೆ ಶುಭಾಶಯಗಳು ಎಂದು ರಾಜಮೌಳಿ ಟ್ವೀಟ್ ಮಾಡಿದ್ದಾರೆ.

Rajamouli watched and praised Dasara movie and Nani calls it as Oscar

ರಾಜಮೌಳಿ ಮಾಡಿರುವ ಈ ಟ್ವೀಟ್ ಕಂಡು ಖುಷಿ ವ್ಯಕ್ತಪಡಿಸಿರುವ ನಾನಿ 'ಸರ್... ಇದು ನಮ್ಮ ದಸರಾ ತಂಡದ ಆಸ್ಕರ್' ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಈ ಮೂಲಕ ನಿಮ್ಮಂತಹ ದೊಡ್ಡ ನಿರ್ದೇಶಕರು ಚಿತ್ರವನ್ನು ಹೊಗಳಿದ್ದೇ ನಮಗೆ ಆಸ್ಕರ್ ಎಂದು ನಾನಿ ತಿಳಿಸಿದ್ದಾರೆ.

ದಸರಾ ಕಲೆಕ್ಷನ್: ದಸರಾ ಮೊದಲ ದಿನ ವಿಶ್ವದಾದ್ಯಂತ ಬರೋಬ್ಬರಿ 38 ಕೋಟಿ ರೂಪಾಯಿ ಗಳಿಕೆ ಮಾಡುವ ಮೂಲಕ ಭರ್ಜರಿ ಆರಂಭ ಪಡೆದುಕೊಂಡಿತ್ತು. ಇದು ನಾನಿ ಸಿನಿ ಕೆರಿಯರ್‌ನಲ್ಲೇ ಬಿಗ್ಗೆಸ್ಟ್ ಓಪನಿಂಗ್ ಆಗಿತ್ತು. ಹೀಗೆ ಮೊದಲ ದಿನ ಭರ್ಜರಿ ಕಲೆಕ್ಷನ್ ಮಾಡಿದ ದಸರಾ ಎರಡನೇ ದಿನ 15 ಕೋಟಿ ರೂಪಾಯಿಗಳನ್ನು ಗಳಿಸಿತು, ಮೂರನೇ ದಿನ 18 ಕೋಟಿ ರೂಪಾಯಿಗಳನ್ನು ಗಳಿಸಿತು, ನಾಲ್ಕನೇ ದಿನ 16 ಕೋಟಿ ರೂಪಾಯಿಗಳನ್ನು ಗಳಿಸಿತು ಹಾಗು ಐದನೇ ದಿನ 5 ಕೋಟಿ ಗಳಿಸಿದೆ. ಈ ಮೂಲಕ ದಸರಾ ಐದು ದಿನಗಳಲ್ಲಿ ಒಟ್ಟು 92 ಕೋಟಿ ಗಳಿಕೆ ಮಾಡಿದ್ದು, ಒಟ್ಟು 92 ಕೋಟಿ ರೂಪಾಯಿಗಳನ್ನು ಗಳಿಸಿದೆ.

More from Filmibeat

English summary
Rajamouli watched and praised Dasara movie and Nani calls it as Oscar. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X