'ರಾಜಶೇಖರ್ ಬಹಳ ಅಪಾಯದಲ್ಲಿದ್ದರು, ಈಗಿಲ್ಲ': ಪತ್ನಿ ಜೀವಿತಾ

ತೆಲುಗು ಹಿರಿಯ ನಟ ರಾಜಶೇಖರ್ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ಎರಡು ವಾರದಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟ ಆರೋಗ್ಯ ಬಹಳ ಗಂಭೀರವಾಗಿದೆ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ನಂತರ ಈ ಕುರಿತು ರಾಜಶೇಖರ್ ಮಗಳು ಶಿವಾತ್ಮಿಕ ಸ್ಪಷ್ಟನೆ ಸಹ ನೀಡಿದ್ದರು. ''ಅಪ್ಪ ಕೊರೊನಾ ವೈರಸ್‌ಗೆ ತುತ್ತಾಗಿದ್ದರು. ಕೊರೊನಾ ಜೊತೆ ಕಠಿಣ ಹೋರಾಟ ಮಾಡುತ್ತಿದ್ದಾರೆ. ನಿಮ್ಮ ಪ್ರಾರ್ಥನೆ ಅಗತ್ಯ'' ಎಂದು ಟ್ವೀಟ್ ಮಾಡಿದ್ದರು. ಇದು ಸಹಜವಾಗಿ ಎಲ್ಲರಿಗೂ ಆತಂಕ ಮೂಡಿಸಿತ್ತು. ಇದೀಗ, ರಾಜಶೇಖರ್ ಪತ್ನಿ ಜೀವಿತಾ ತಮ್ಮ ಪತಿ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ. ಮುಂದೆ ಓದಿ....

ಅಪಾಯದಿಂದ ಪಾರು

ಅಪಾಯದಿಂದ ಪಾರು

''ರಾಜಶೇಖರ್ ಅವರು ಬಹಳ ಚೆನ್ನಾಗಿ ಚೇತರಿಕೆ ಕಾಣುತ್ತಿದ್ದಾರೆ. ಅವರ ಆರೋಗ್ಯ ಸುಧಾರಿಸಿದೆ. ಸಿಎನ್‌ಸಿ ಆಸ್ಪತ್ರೆಯ ವೈದ್ಯರು ಬಹಳ ಸೂಕ್ಷ್ಯವಾಗಿ ಅವರ ಆರೋಗ್ಯದ ಬಗ್ಗೆ ನಿಗಾ ವಹಿಸಿ ಚಿಕಿತ್ಸೆ ನೀಡಿದ್ದಾರೆ. ಅಪಾಯದ ಸ್ಥಿತಿಯಲ್ಲಿದ್ದವರು ಈಗ ಅದರಿಂದ ಹೊರಗೆ ಬರುವಷ್ಟು ಸುಧಾರಿಸಿಕೊಂಡಿದ್ದಾರೆ'' ಎಂದು ಜೀವಿತಾ ರಾಜಶೇಖರ್ ಮಾಹಿತಿ ನೀಡಿದ್ದಾರೆ.

ವೆಂಟಿಲೇಟರ್‌ನಲ್ಲಿ ರಾಜಶೇಖರ್ ಇಲ್ಲ

ವೆಂಟಿಲೇಟರ್‌ನಲ್ಲಿ ರಾಜಶೇಖರ್ ಇಲ್ಲ

''ರಾಜಶೇಖರ್ ಅವರು ಬಹಳ ಗಂಭೀರ ಪರಿಸ್ಥಿತಿಗೆ ತಲುಪಿದ್ದರು. ಐಸಿಯುನಲ್ಲಿ ಚಿಕಿತ್ಸೆ ಪಡೆದಯುತ್ತಿದ್ದರೂ ಸಹ ಒಂಮದು ದಿನವೂ ವೆಂಟಿಲೇಟರ್ ಸಹಾಯ ಪಡೆದಿಲ್ಲ. ಈಗಲೂ ಅವರು ವೆಂಟಿಲೇಟರ್‌ನಲ್ಲಿ ಇಲ್ಲ. ಇದು ಕೇವಲ ವದಂತಿ. ಆದಷ್ಟೂ ಬೇಗ ಐಸಿಯುನಿಂದ ಹೊರಬರ್ತಾರೆ'' ಎಂದು ಜೀವಿತಾ ಸ್ಪಷ್ಟನೆ ನೀಡಿದ್ದಾರೆ.

ಕುಟುಂಬದ ಎಲ್ಲರಿಗೂ ಕೊರೊನಾ!

ಕುಟುಂಬದ ಎಲ್ಲರಿಗೂ ಕೊರೊನಾ!

ಅಂದ್ಹಾಗೆ, ರಾಜಶೇಖರ್ ಕುಟುಂಬದ ಎಲ್ಲ ಸದಸ್ಯರಿಗೂ ಕೊರೊನಾ ವೈರಸ್ ತಗುಲಿತ್ತು. ಜೀವಿತಾ ಹಾಗೂ ಇಬ್ಬರು ಮಕ್ಕಳಾದ ಶಿವಾನಿ ಮತ್ತು ಶಿವಾತ್ಮಿಕ ಸೇರಿದಂತೆ ರಾಜಶೇಖರ್‌ಗೂ ಕೊರೊನಾ ಅಂಟಿಕೊಂಡಿತ್ತು. ನಂತರ, ರಾಜಶೇಖರ್ ಹೊರತುಪಡಿಸಿ ಉಳಿದವರು ಗುಣಮುಖರಾಗಿದ್ದರು.

Recommended Video

ಅಣ್ಣನನ್ನು ನೆನೆದು ವೇದಿಕೆ ಮೇಲೆ ಕಣ್ಣೀರಿಟ್ಟ Jote Joteyali ಅನು | Filmibeat Kannada
ಮಾನಸಿಕ ಖಿನ್ನತೆ ಅನುಭವಿಸಿದ್ದರು!

ಮಾನಸಿಕ ಖಿನ್ನತೆ ಅನುಭವಿಸಿದ್ದರು!

ರಾಜಶೇಖರ್ ಅವರ ಮಾನಸಿಕ ಖಿನ್ನತೆಗೆ ಒಳಪಟ್ಟಿದ್ದರು ಎಂಬ ಮಾತುಗಳು ಸಹ ಇತ್ತು. ಈ ಹಿಂದೆ ಮಧ್ಯರಾತ್ರಿ ಹೈದರಾಬಾದ್‌ನಲ್ಲಿ ಕಾರು ಅಪಘಾತ ಮಾಡಿಕೊಂಡಿದ್ದರು. ತೆಲುಗು ಕಲಾವಿದರ ಸಂಘದ ಕಚೇರಿ ಉದ್ಘಾಟನೆಯಲ್ಲಿ ಬಹಿರಂಗವಾಗಿ ಚಿರಂಜೀವಿ ವಿರುದ್ಧ ವೇದಿಕೆಯಲ್ಲಿ ಮಾತನಾಡಿ ಕೆಂಗಣ್ಣಿಗೆ ಗುರಿಯಾಗಿದ್ದರು.

More from Filmibeat

English summary
Telugu actor Rajasekhar Wife Jeevitha has gives clarity about rajasekhar health condition.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X