'ಠಾಗೂರ್' ಹಾಗೂ 'ಜಂಟಲ್‌ಮನ್' ಚಿತ್ರಗಳಲ್ಲಿ ನಾನು ಹೀರೊ ಆಗಿ ನಟಿಸ್ಬೇಕಿತ್ತು; ರಾಜಶೇಖರ್
ಯಾರೋ ಮಾಡಬೇಕಿದ್ದ ಸಿನಿಮಾ ಮತ್ಯಾರೋ ಮಾಡುವುದು ಚಿತ್ರರಂಗದಲ್ಲಿ ಹೊಸದೇನು ಅಲ್ಲ. ಸಿನಿಮಾ ಗೆದ್ದಾಗ ಮಾತ್ರ ಎಲ್ಲರೂ ಆ ಬಗ್ಗೆ ಮಾತನಾಡುತ್ತಾರೆ. ಸೋತುಬಿಟ್ಟರೆ ಸುಮ್ಮನಾಗುತ್ತಾರೆ. ತೆಲುಗು ನಟ ರಾಜಶೇಕರ್ ಇತ್ತೀಚೆಗೆ ಅಷ್ಟಾಗಿ ಸಿನಿಮಾಗಳಲ್ಲಿ ನಟಿಸ್ತಿಲ್ಲ. 'ಬೈಕರ್' ಎಂಬ ತೆಲುಗು ಚಿತ್ರದ ಪೋಷಕ ಪಾತ್ರದಲ್ಲಿ ಮಿಂಚಿದ್ದಾರೆ.
ಒಂದ್ಕಾಲದಲ್ಲಿ ಹೀರೊ ಆಗಿ ಆಂಗ್ರಿ ಯಂಗ್‌ಮ್ಯಾನ್ ಪಾತ್ರಗಳಲ್ಲಿ ರಾಜಶೇಖರ್ ಪ್ರೇಕ್ಷಕರನ್ನು ರಂಜಿಸಿದ್ದರು. 90ರ ದಶಕದಲ್ಲಿ ವಿಭಿನ್ನ ಸಿನಿಮಾಗಳ ಮೂಲಕ ಸದ್ದು ಮಾಡಿದ್ದರು. ಎಂಬಿಬಿಎಸ್ ಮಾಡಿದ್ದ ಅವರು ಇಷ್ಟಪಟ್ಟು ಚಿತ್ರರಂಗ ಪ್ರವೇಶಿಸಿದ್ದರು. ಚಿರಂಜೀವಿ ನಟಿಸಿದ 'ಠಾಗೂರ್' ಚಿತ್ರದಲ್ಲಿ ನಾನೇ ನಟಿಸಬೇಕಿತ್ತು ಎಂದು ಅವರು ಫಿಲ್ಮಿ ಫೋಕಸ್ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಹೇಳಿರುವುದು ಈಗ ವೈರಲ್ ಆಗ್ತಿದೆ.

ತಮಿಳಿನ 'ರಮಣ' ಸಿನಿಮಾ ರೀಮೆಕ್ 'ಠಾಗೂರ್' ತೆಲುಗಿನಲ್ಲಿ ಸೂಪರ್ ಹಿಟ್ ಆಗಿತ್ತು. ಇದೇ ಚಿತ್ರವನ್ನು ಕನ್ನಡದಲ್ಲಿ ವಿಷ್ಣುಸೇನಾ ಹೆಸರಿಯಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ನಟಿಸಿದ್ದರು. ಭ್ರಷ್ಟಾಚಾರ ವಿರುದ್ಧ ನಾಯಕ ಹೋರಾಡುವ ಸಿನಿಮಾ ಕಥೆ ಪ್ರೇಕ್ಷಕರ ಮನ ಗೆದ್ದಿತ್ತು. ಆ ಸಿನಿಮಾ ರೀಮೆಕ್ ರೈಟ್ಸ್ ನಾನು ಕೊಂಡುಕೊಳ್ಳಲು ಮಾತುಕತೆ ಮಾಡಿ ಅಡ್ವಾನ್ಸ್ ಮಾಡಿದ್ದೆ ಎಂದು ರಾಜಶೇಖರ್ ಹೇಳಿದ್ದಾರೆ.
'ರಮಣ' ಸಿನಿಮಾ ಇಷ್ಟುಪಟ್ಟು ರೀಮೆಕ್ ಮಾಡೋಣ ಎಂದು ರೈಟ್ಸ್ ಪಡೆದುಕೊಳ್ಳಲು ಮುಂದಾಗಿದ್ದೆ. ಮಾತುಕತೆ ನಡೆದಿತ್ತು. ನಿರ್ಮಾಪಕರು ಸ್ನೇಹಿತರು ಎನ್ನುವ ಕಾರಣಕ್ಕೆ ಅಡ್ವಾನ್ಸ್ ಕೊಟ್ಟಿದ್ದೆ. ಆದರೆ ಯಾವುದೇ ಅಗ್ರಿಮೆಂಟ್ ಮಾಡಿಕೊಂಡಿರಲಿಲ್ಲ. ಆದರೆ ನಿರ್ಮಾಪಕ ಮಧು ಅವರು ಹೋಗಿ ನನಗಿಂತ ಹೆಚ್ಚು ಹಣ ಕೊಟ್ಟು ರೈಟ್ಸ್ ಕೊಂಡುಕೊಂಡು ಬಂದಿದ್ದಾರೆ. ಬಳಿಕ ಚಿರಂಜೀವಿ ಆ ಚಿತ್ರದಲ್ಲಿ ನಟಿಸುವಂತಾಯಿತು ಎಂದು ರಾಜಶೇಖರ್ ಹೇಳಿದ್ದಾರೆ.
ತಮಿಳಿನಲ್ಲಿ ಅರ್ಜುನ್ ಸರ್ಜಾ ನಟಿಸಿದ್ದ 'ಜಂಟಲ್‌ಮನ್' ಸಿನಿಮಾ ಗೆದ್ದಿತ್ತು. ಶಂಕರ್ ನಿರ್ದೇಶನದ ಸಿನಿಮಾವನ್ನು ಬಳಿಕ ಹಿಂದಿಯಲ್ಲಿ ಚಿರಂಜೀವಿ ಹೀರೊ ಆಗಿ ರೀಮೆಕ್ ಮಾಡಿದ್ದರು. ಶಂಕರ್ ನಿರ್ದೇಶನದ ಈ ಚಿತ್ರದಲ್ಲಿ ಭ್ರಷ್ಟಾಚಾರದ ವಿರುದ್ಧ ಹೋರಾಟದ ಕಥೆ ಇತ್ತು. 'ಜಂಟಲ್‌ಮನ್' ಚಿತ್ರದಲ್ಲಿ ನನ್ನನ್ನು ನಟಿಸುವಂತೆ ಕೇಳಿದ್ದರು. ಅಡ್ವಾನ್ಸ್ ಹಿಡ್ದು ನನ್ನ ಸುತ್ತಾ ಸುತ್ತಾಡಿದ್ದರು. ಆದರೆ ಆಗ ನಾನು 'ಅಲ್ಲರಿ ಪ್ರಿಯುಡು' ಚಿತ್ರದಲ್ಲಿ ನಟಿಸ್ತಿದ್ದೆ. ಅದೇ ಡೇಟ್ಸ್ ಕೇಳಿದ್ರು. ಹಾಗಾಗಿ ನಾನು ನಟಿಸೋಕೆ ಸಾಧ್ಯವಾಗಲಿಲ್ಲ ಎಂದಿದ್ದಾರೆ.
ತಮಿಳಿನ 'ಸೇತು' ಚಿತ್ರವನ್ನು ತೆಲುಗಿನಲ್ಲಿ 'ಶೇಷು' ಹೆಸರಿನಲ್ಲಿ ರಾಜಶೇಖರ್ ರೀಮೆಕ್ ಮಾಡಿದ್ದರು. ಆದರೆ ಸಿನಿಮಾ ಹೀನಾಯವಾಗಿ ಸೋತಿತ್ತು. ಸಿನಿಮಾ ಕ್ಲೈಮ್ಯಾಕ್ಸ್ ಸರಿ ಇರಲಿಲ್ಲ. ಹೊಸ ಕಲಾವಿದ ನಟಿಸಿದ್ದರೆ ಜನ ಒಪ್ಪುತ್ತಿದ್ದರು. ನನ್ನನ್ನು ಆ ರೀತಿ ನೋಡಲು ಇಷ್ಟಪಡಲಿಲ್ಲ. ಕ್ಲೈಮ್ಯಾಕ್ಸ್ ಬದಲಿಸೋಣ ಅಂತ ನಾನು ಹೇಳಿದ್ದೆ. ಆದರೆ ಸಾಧ್ಯವಾಗಲಿಲ್ಲ. ಮೊದಲ ದಿನವೇ ಸಿನಿಮಾ ಸೋತಿತ್ತು ಗೊತ್ತಾಗಿತ್ತು ಎಂದು ರಾಜಶೇಖರ್ ತಿಳಿಸಿದ್ದಾರೆ. ಇದೇ ಚಿತ್ರವನ್ನು ಕನ್ನಡದಲ್ಲಿ 'ಹುಚ್ಚ' ಹೆಸರಿನಲ್ಲಿ ರೀಮೆಕ್ ಮಾಡಿ ಸುದೀಪ್ ಗೆದ್ದಿದ್ದರು.


Click it and Unblock the Notifications