ರಶ್ಮಿಕಾಳಿಗೆ ಫಲ ತಂದುಕೊಟ್ಟ ರಾಜಶ್ಯಾಮಲಾ ಭಗಳಮುಖಿ ಪೂಜೆ!
ಕನ್ನಡದ 'ಕಿರಿಕ್ ಪಾರ್ಟಿ' ಇಂದ ಮೊದಲುಗೊಂಡು ಇತ್ತೀಚಿನ ಬಿಡುಗಡೆಗೊಂಡ 'ಪುಷ್ಪ' ವರಿಗೂ ರಶ್ಮಿಕಾ ಮಂದಣ್ಣ ನಿರ್ಮಾಪಕರ ಮತ್ತು ನಿರ್ದೇಶಕ ಮತ್ತು ನಟರ ಪಾಲಿಗೂ ಅದೃಷ್ಟ ದೇವತೆಯಾಗಿ ಒಲಿದುಕೊಂಡು ಬಂದಿದ್ದಾಳೆ. ಇವಳ ಅದೃಷ್ಟವೋ ಅಥವಾ ಇವಳು ಮಾಡುತ್ತಿರುವ ಸಿನಿಮಾಗಳ ಅದೃಷ್ಟವೋ ಒಟ್ಟಾರೆ ಸಿನಿಮಾಗಳು ದಾಖಲೆಯ ಗೆಲುವನ್ನು ಕಾಣುತ್ತಿವೆ. ಹೀಗಾಗಿಯೇ ಈ ಕೊಡಗಿನ ಕುವರಿ ಈಗ ನ್ಯಾಷನಲ್ ಸೆನ್ಸೇಷನ್ ಆಗಿ ಬೆಳೆದು ನಿಂತಿದ್ದಾಳೆ. ಪ್ರಸ್ತುತ ದಕ್ಷಿಣ ಭಾರತ ಸಿನಿಮಾರಂಗದಲ್ಲಿ ನಂಬರ್ ಒನ್ ಸ್ಥಾನದಲ್ಲಿ ರಶ್ಮಿಕಾ ವಿರಾಜಮಾನಳಾಗಿದ್ದಾಳೆ. ಅದೃಷ್ಟ ದೇವತೆ ಇವಳ ಪಕ್ಕದಲ್ಲಿ ಕೂತಿರುವಂತೆ ಕಾಣುತ್ತೆ ಹೀಗಾಗಿಯೇ ಯಶಸ್ಸು, ಹಣ, ಕೀರ್ತಿ ಇದೆಲ್ಲವನ್ನು ಕೂಡ ಕೆಲವೇ ಕೆಲವು ವರ್ಷಗಳಲ್ಲಿ ರಶ್ಮಿಕಾ ಮಂದಣ್ಣ ತನ್ನದಾಗಿಸಿಕೊಂಡಿದ್ದಾಳೆ. ಅದೃಷ್ಟ ದೇವತೆಯನ್ನು ಗಟ್ಟಿಯಾಗಿ ಇಟ್ಟುಕೊಂಡಿರಬೇಕು ಎಂದರೆ ದೈವದ ಬೆಂಬಲ ಬೇಕು. ಹೀಗಾಗಿ ದಿನದಿಂದ ದಿನಕ್ಕೆ ಹೆಸರು ಕೀರ್ತಿ ಹಣಗಳಿಸುತ್ತಿರುವ ರಶ್ಮಿಕಾ ದೈವಕ್ಕೆ ಮೊರೆಹೋಗಿದ್ದಾಳೆ.

'ಕಿರಿಕ್ ಪಾರ್ಟಿ' ಇಂದ 'ಪುಷ್ಪ' ವರೆಗೆ
ರಶ್ಮಿಕಾ ಮಂದಣ್ಣ ಸದ್ಯಕ್ಕೆ ಮುಟ್ಟಿದ್ದೆಲ್ಲ ಚಿನ್ನ ಎಂಬ ಮಾತಿನಂತೆ ಮಾಡಿದ ಸಿನಿಮಾಗಳೆಲ್ಲಾ ಸೂಪರ್ ಹಿಟ್ ಎನಿಸಿಕೊಳ್ಳುತ್ತಿದೆ. ಹೀಗಾಗಿಯೇ ಆರಂಭದಲ್ಲಿ ಕೆಲವೇ ಲಕ್ಷಗಳನ್ನು ಕೇಳುತ್ತಿದ್ದ ರಶ್ಮಿಕಾ ಈಗ ಮೂರರಿಂದ ಐದು ಕೋಟಿ ಮಾಡುತ್ತಿದ್ದಾಳೆ. ಕನ್ನಡದ 'ಕಿರಿಕ್ ಪಾರ್ಟಿ' ಸಿನಿಮಾ ಮೂಲಕ ಪಡ್ಡೆಗಳ ನಿದ್ದೆಗೆಡಿಸಿದ ಈ ಚೆಲುವೆ ನಂತರ 'ಚಲೋ' ಚಿತ್ರದ ಮೂಲಕ ತೆಲುಗಿಗೆ ಎಂಟ್ರಿ ಕೊಟ್ಟಿತ್ತು. ಚಿತ್ರವೂ ಹಿಟ್ ಆಗಿದ್ದರಿಂದ ರಶ್ಮಿಕಾ ಕ್ರೇಜ್ ಹೆಚ್ಚಾಯಿತು. ಮತ್ತು ಅದೃಷ್ಟ ಕೂಡಿ ಬಂದಿದ್ದರಿಂದ ರಶ್ಮಿಕಾ ಕಡಿಮೆ ಅವಧಿಯಲ್ಲಿ ಸ್ಟಾರ್ ಹೀರೋಯಿನ್ ರೇಂಜ್ ತಲುಪಿದ್ದರು. ಸೂಪರ್ ಸ್ಟಾರ್ ಮಹೇಶ್ ಬಾಬು ಜೊತೆ 'ಸರಿಲೇರು ನೀಕೆವ್ವರು' ಚಿತ್ರದಲ್ಲಿ ನಟಿಸಿ ಟಾಪ್ ಹೀರೋಯಿನ್‌ಗಳ ಸಾಲಿಗೆ ಸೇರ್ಪಡೆಯಾದರು. 'ಪುಷ್ಪ'- ದಿ ರೈಸ್ ಚಿತ್ರದಲ್ಲಿ ಅಲ್ಲು ಅರ್ಜುನ್ ಜೊತೆ ನಟಿಸುವ ಮೂಲಕ ದೇಶದ ಗಮನ ಸೆಳೆದಳು. 'ಪುಷ್ಪ' -ದಿ ರೈಸ್ ಪ್ಯಾನ್ ಇಂಡಿಯಾ ರೇಂಜ್ ಸಿನಿಮಾ ಆಗುತ್ತಿದ್ದಂತೆ ರಶ್ಮಿಕಾ ಮಂದಣ್ಣ ಕ್ರೇಜ್ ಇನ್ನಷ್ಟು ಹೆಚ್ಚಾಯಿತು. ಪ್ರಸ್ತುತ ತೆಲುಗು ಚಿತ್ರಗಳ ಜೊತೆಗೆ ಹಿಂದಿಯಲ್ಲಿ ಕೂಡ ಸಿಕ್ಕಾಪಟ್ಟೆ ಕ್ರೇಜ್ ಪಡೆದುಕೊಂಡಿರುವ ರಶ್ಮಿಕಾ ತಮಿಳಿನಲ್ಲಿ ಏಕಾಏಕಿಯಾಗಿ ವಿಜಯ್ ಜೊತೆ ನಟಿಸುವ ಅವಕಾಶವನ್ನು ಪಡೆದುಕೊಂಡಿದ್ದಾಳೆ.

ಮುಂಬರುವ ರಶ್ಮಿಕಾ ಬಾಲಿವುಡ್ ಚಿತ್ರಗಳು
ತೆಲುಗಿನಲ್ಲಿ ಟಾಪ್ ಒನ್ ನಟಿ ಎನಿಸಿಕೊಂಡಿರುವ ರಶ್ಮಿಕಾ ತಮಿಳು ಚಿತ್ರರಂಗದ ಮೇಲೆ ಕೂಡ ತನ್ನ ಫೋಕಸ್ ನೆಟ್ಟಿದ್ದಾಳೆ. ಹಾಗಂತ ಆಕೆ ತಮಿಳಿನಲ್ಲಿ ಎಲ್ಲಾ ಚಿತ್ರಗಳಿಗೂ ಒಪ್ಪಿಗೆ ಕೊಡುತ್ತಿಲ್ಲ. ಕೇವಲ ಅಲ್ಲಿನ ಸೂಪರ್ ಸ್ಟಾರ್‌ಗಳ ಚಿತ್ರಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತಿದ್ದಾಳೆ. ತೆಲುಗಿನಲ್ಲಿ ತನ್ನ ಸ್ಥಾನವನ್ನು ಗಟ್ಟಿಮಾಡಿಕೊಂಡೆ ಹಿಂದಿ ಮೇಲೆ ಕೂಡ ಫೋಕಸ್ ಮಾಡಿದ್ದಾಳೆ. ಈಗಾಗಲೇ ಎರಡು ಚಿತ್ರಗಳಲ್ಲಿ ಬಾಲಿವುಡ್ ಚಿತ್ರಗಳಲ್ಲಿ ನಟಿಸುತ್ತಿದ್ದಾಳೆ.
ಅದರಲ್ಲಿ 'ಮಿಷನ್ ಮಜ್ನು' ಸಿನಿಮಾ ಕೂಡ ಒಂದು. ಸಿದ್ಧಾರ್ಥ್ ಮಲ್ಹೋತ್ರಾ ನಾಯಕನಾಗಿ ಶಾಂತಿನ್ ಭಾಗಿ ನಿರ್ದೇಶನದ ಈ ಚಿತ್ರ ನೈಜ ಘಟನೆಯನ್ನು ಆಧರಿಸಿದೆ. ಪಾಕಿಸ್ತಾನವು ಪರಮಾಣು ಶಸ್ತ್ರಾಸ್ತ್ರಗಳನ್ನು ತಯಾರಿಸುತ್ತಿದೆಯೇ ಎಂದು ಕಂಡುಹಿಡಿಯಲು ಭಾರತದ ಅತಿದೊಡ್ಡ ರಹಸ್ಯ ಕಾರ್ಯಾಚರಣೆಯನ್ನು ಆಧರಿಸಿದ ಚಲನಚಿತ್ರವು ಮುಂದಿನ ವರ್ಷ ಮೇ 13 ರಂದು ಬಿಡುಗಡೆಯಾಗಲಿದೆ. ಇದರ ಜೊತೆಗೆ, ಅವರು ಬಾಲಿವುಡ್ ಸೂಪರ್‌ಸ್ಟಾರ್ ಅಮಿತಾಬ್ ಬಚ್ಚನ್ ಅವರೊಂದಿಗೆ 'ಗುಡ್‌ಬೈ' ಎಂಬ ಮತ್ತೊಂದು ಚಿತ್ರದಲ್ಲಿ ನಟಿಸುತ್ತಿದ್ದಾಳೆ. ವಿಕಾಸ್ ಭಾಯ್ಲ್ ನಿರ್ದೇಶನದ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಅಮಿತಾಭ್ ಮಗಳ ಪಾತ್ರ ಮಾಡಲಿದ್ದಾರೆ. ಚಿತ್ರವೂ ಶೂಟಿಂಗ್ ಹಂತದಲ್ಲಿದೆ. ಮುಂದಿನ ವರ್ಷದ ದ್ವಿತೀಯಾರ್ಧದಲ್ಲಿ ಗುಡ್ ಬೈ ಸಿನಿಮಾ ಬಿಡುಗಡೆಯಾಗಲಿದೆ.

ಜಾತಿ ರತ್ನಲು ನಿರ್ದೇಶಕನ ಚಿತ್ರಕ್ಕೆ ಸಹಿ
ತಾನು ಮಾಡುವ ಪ್ರತಿಯೊಂದು ಸಿನಿಮಾದಲ್ಲೂ ತನ್ನ ಪಾತ್ರವನ್ನು ವಿಶಿಷ್ಟವಾಗಿಸಲು ಆಯ್ದ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುವ ರಶ್ಮಿಕಾ ಇತ್ತೀಚೆಗಷ್ಟೇ ಮತ್ತೊಂದು ಬಿಗ್ ಬಜೆಟ್ ಕಾಮಿಡಿ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ತಮಿಳಿನ ಹೀರೋ ಶಿವ ಕಾರ್ತಿಕೇಯನ್ ನೇರ ತೆಲುಗು ಸಿನಿಮಾ ಮಾಡಲಿದ್ದಾರೆ. 'ಜಾತಿ ರತ್ನಲು' ಬ್ಲಾಕ್‌ಬಸ್ಟರ್ ಚಿತ್ರದ ಮೂಲಕ ಗಮನ ಸೆಳೆದಿದ್ದ ನಿರ್ದೇಶಕ ಅನುದೀಪ್ ಕೆ.ವಿ ಅವರ ಮುಂದಿನ ಚಿತ್ರದಲ್ಲಿ ಶಿವಕಾರ್ತಿಕೇಯನ್‌ಗೆ ಜೋಡಿಯಾಗಿ ರಶ್ಮಿಕಾ ನಟಿಸುತ್ತಿದ್ದಾಳೆ.
ಶ್ರೀ ವೆಂಕಟೇಶ್ವರ ಸಿನಿಮಾಸ್ ಎಲ್ ಎಲ್ ಪಿ, ಶಾಂತಿ ಟಾಕೀಸ್ ಮತ್ತು ಸುರೇಶ್ ಪ್ರೊಡಕ್ಷನ್ಸ್ ಬ್ಯಾನರ್ ನಡಿಯಲ್ಲಿ ನಾರಾಯಣದಾಸ್ ನಾರಂಗ್, ಸುರೇಶ್ ಬಾಬು, ಪುಸ್ಕುರ್ ರಾಮಮೋಹನ್ ರಾವ್ ಮತ್ತು ಅರುಣಾ ವಿಶ್ವ ನಿರ್ಮಿಸಲಿದ್ದಾರೆ. ಈ ದ್ವಿಭಾಷಾ ಚಿತ್ರದಲ್ಲಿ ನಾಯಕಿಯಾಗಿ ರಶ್ಮಿಕಾ ಅವರನ್ನು ಅಂತಿಮಗೊಳಿಸಲಾಗಿದೆ. ಅಲ್ಲದೆ ಈ ಚಿತ್ರಕ್ಕಾಗಿ ರಶ್ಮಿಕಾ ಭಾರಿ ಸಂಭಾವನೆ ಕೂಡ ಪಡೆಯುತ್ತಿದ್ದಾಳೆ ಎಂಬ ಸುದ್ದಿ ಕೂಡ ಕೇಳಿ ಬರುತ್ತಿದೆ.

ರಾಜಶ್ಯಾಮಲಾ ಭಗಳಮುಖಿ ಪೂಜೆ ಮಾಡಿಸಿದ ವೇಣು ಸ್ವಾಮಿ
ಆಂಧ್ರ ಮತ್ತು ತೆಲಂಗಾಣದ ರಾಜಕಾರಣಿಗಳು ಮತ್ತು ಸಿನಿತಾರೆಯರು, ಉದ್ಯಮಪತಿಗಳು ಅತಿಯಾಗಿ ವಿಶ್ವಾಸ ಇರಿಸಿಕೊಂಡಿರುವ ಜ್ಯೋತಿಷಿಗಳಾದ ವೇಣು ಸ್ವಾಮಿ ಹಿಂದೆ ಸಮಂತಾ ನಾಗಚೈತನ್ಯ ವಿಚ್ಛೇದನ ಪಡೆಯುವ ಸಂಗತಿಯನ್ನು ಹೇಳಿದ್ದರು. ಅವರು ಹೇಳಿದಂತೆ ಇವರಿಬ್ಬರು ವಿಚ್ಛೇದನ ಪಡೆದುಕೊಂಡರು. ಹೀಗಾಗಿಯೇ ವೇಣು ಸ್ವಾಮಿ ಏನು ಹೇಳುತ್ತಾರೆ ಅದು ನಿಖರವಾಗಿರುತ್ತದೆ ಎಂಬ ಭಾವನೆ ಸಿನಿಮಾ ಮಂದಿಯಲ್ಲಿದೆ.
ಕೆಲವು ತಿಂಗಳ ಹಿಂದೆ ಇದೆ ವೇಣು ಸ್ವಾಮಿಯವರು ರಶ್ಮಿಕಾಳ ಜಾತಕ ರೀತ್ಯ ವಿಶೇಷವಾದ ಪೂಜೆ ಒಂದನ್ನು ಮಾಡಿಸಿದ್ದಾರೆ. ಈ ಪೂಜೆಯಲ್ಲಿ ರಶ್ಮಿಕಾಳ ಜೊತೆಗೆ ಅವರ ಇಡೀ ಕುಟುಂಬದ ಸದಸ್ಯರು ಕೂಡ ಭಾಗಿಯಾಗಿದ್ದಾರೆ. ಆದರೆ ಅದು ಯಾವ ಪೂಜೆ, ಯಾವ ಉದ್ದೇಶಕ್ಕಾಗಿ ನಡೆಯುತ್ತಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಯಾರಿಗೂ ಇರಲಿಲ್ಲ. ಆದರೆ ಆಗ ನಡೆದಿರುವ ಪೂಜೆ ರಾಜಶ್ಯಾಮಲಾ ಶಾಮಲಾ ಭಗಳಮುಖಿ ಎಂದು ಹೇಳಲಾಗುತ್ತಿದ್ದು, ಈಗ ಆ ಪೂಜೆ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಒಲಿದು ಬಂದ ಅದೃಷ್ಟ
ಕಳೆದ ಕೆಲವು ತಿಂಗಳ ಹಿಂದೆ ವೇಣು ಸ್ವಾಮಿ ರಶ್ಮಿಕಾಳ ಕೈಯಲ್ಲಿ ವಿಶೇಷವಾದ ಪೂಜೆ ಮಾಡಿಸಿದರು. ಆದರೆ ಆ ಸಮಯದಲ್ಲಿ ಇದನ್ನು ಯಾರು ಹೆಚ್ಚಿಗೆ ಪರಿಗಣನೆಗೆ ತೆಗೆದುಕೊಂಡಿರಲಿಲ್ಲ. ಆದರೆ ಯಾವಾಗ 'ಪುಷ್ಪ' ಚಿತ್ರ ಭಾರಿ ಗೆಲುವು ದಾಖಲಿಸುವುದರ ಜೊತೆಗೆ ರಶ್ಮಿಕಾಗೆ ದೊಡ್ಡ ಹೆಸರನ್ನು ತಂದುಕೊಟ್ಟಿತು. ಸಾಲುಸಾಲು ಹಿಂದಿ ಚಿತ್ರಗಳಲ್ಲಿ ಅವಕಾಶ, ತಮಿಳು ಸೂಪರ್ ಸ್ಟಾರ್ ವಿಜಯ್ ಚಿತ್ರದಲ್ಲಿ ನಟಿಸುವ ಅವಕಾಶ ಜೊತೆಗೆ ನಿರ್ಮಾಪಕರು ಭಾರೀ ಸಂಭಾವನೆ ಕೊಟ್ಟು ತಮ್ಮ ಮುಂದಿನ ಚಿತ್ರಗಳಿಗೆ ಈಕೆಯನ್ನು ನಿರ್ಮಾಪಕರು ಭಾರೀ ಸಂಭಾವನೆ ಕೊಟ್ಟು ತಮ್ಮ ಮುಂದಿನ ಚಿತ್ರಗಳಿಗೆ ಈಕೆಯನ್ನು ಆಯ್ಕೆ ಮಾಡಿಕೊಳ್ಳುತ್ತಿರುವುದನ್ನು ಗಮನಿಸುತ್ತಿರುವ ಟಾಲಿವುಡ್ ಮಂದಿ ವೇಣು ಸ್ವಾಮಿ ಮಾಡಿಸಿದ ಪೂಜಾಫಲ ಈಗ ರಶ್ಮಿಕಾಗಳಿಗೆ ದೊಡ್ಡಮಟ್ಟದಲ್ಲಿ ಸಿಗುತ್ತಿದೆ ಅಂತ ಮಾತನಾಡಿಕೊಳ್ಳುತ್ತಿದ್ದಾರೆ. ಅಲ್ಲದೆ ಆಗ ನಡೆಸಿದ್ದ ಪೂಜೆಯ ವಿಡಿಯೋಗಳು ಕೂಡ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಪೂಜೆಯಿಂದ ದೊರೆಯುವ ಫಲಗಳೇನು?
ರಾಜಶ್ಯಾಮಲಾ ಭಗಳಮುಖಿ ಪೂಜೆಯನ್ನು ಮಾಡಿಸಿದ್ದ ವೇಣು ಸ್ವಾಮಿಯವರು ಈಗ ಈ ಬಗ್ಗೆ ಪ್ರತಿಕ್ರಿಯಿಸಿದ್ದು " ಈ ಪೂಜೆಯಿಂದ ವಿಶೇಷವಾದ ಫಲಗಳು ದೊರೆಯುತ್ತದೆ, ಅದರಲ್ಲೂ ಯಶಸ್ಸು ಎಂಬುದು ಈ ಪೂಜೆಯಿಂದ ಕಟ್ಟಿಟ್ಟಬುತ್ತಿ" ಅಂತ ಹೇಳುತ್ತಾರೆ.ಒಟ್ಟಲ್ಲಿ ಸಿನಿಮಾ ನಿರ್ಮಾಪಕರ ಪಾಲಿಗೆ ಅದೃಷ್ಟ ದೇವತೆಯಂತೆ ಒಲಿದು ಬರುತ್ತಿರುವ ರಶ್ಮಿಕಾ, ಅದೃಷ್ಟದ ಲಕ್ಷ್ಮಿಯನ್ನು ತನ್ನ ಜೊತೆಯಲ್ಲೇ ಹಿಡಿದುಕೊಂಡು ಸದ್ಯಕ್ಕೆ ನಡೆಯುತ್ತಿದ್ದಾಳೆ.


Click it and Unblock the Notifications











