ಪ್ರಭಾಸ್ 'ಕಲ್ಕಿ 2898 AD' ಸಿನಿಮಾ ನೋಡಿ ಸ್ಟಾರ್ ನಟರು ಬಹುಪರಾಕ್

ನಾಗ್‌ ಅಶ್ವಿನ್ ಕಲ್ಪನೆಯ 'ಕಲ್ಕಿ 2898 AD' ಚಿತ್ರಕ್ಕೆ ಅದ್ಭುತ ಪ್ರತಿಕ್ರಿಯೆ ಸಿಕ್ತಿದೆ. ಪ್ರೇಕ್ಷಕರಿಂದ ಮಿಶ್ರಪ್ರತಿಕ್ರಿಯೆ ವ್ಯಕ್ತವಾದರೂ ಸಿನಿಮಾ ತಾರೆಯರು ಮೆಚ್ಚಿ ಕೊಂಡಾಡುತ್ತಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್, ರಾಕಿಂಗ್ ಸ್ಟಾರ್ ಯಶ್, ಎಸ್‌. ಎಸ್‌ ರಾಜಮೌಳಿ ಸೂರ್ಯ, ಮೋಹನ್ ಬಾಬು ಸೇರಿದಂತೆ ಹಲವರು ಚಿತ್ರತಂಡಕ್ಕೆ ಶ್ರಮಕ್ಕೆ ಬಹುಪರಾಕ್‌ ಎಂದಿದ್ದಾರೆ.

ಬಹುಕೋಟಿ ವೆಚ್ಚದ ಸೈನ್ಸ್‌ ಫಿಕ್ಷನ್ ಪ್ಯಾಂಟಸಿ ಎಂಟರ್‌ಟೈನರ್ 'ಕಲ್ಕಿ 2898 AD' ಚಿತ್ರದಲ್ಲಿ ಪ್ರಭಾಸ್ ಹೀರೊ ಆಗಿ ನಟಿಸಿದ್ದಾರೆ. ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ, ಕಮಲ್ ಹಾಸನ್‌ರಂತಹ ಘಟಾನುಘಟಿ ಕಲಾವಿದರು ತಾರಾಗಣದಲ್ಲಿದ್ದಾರೆ. ಅದ್ಧೂರಿ ಮೇಕಿಂಗ್, ಗ್ರಾಫಿಕ್ಸ್, ಆಕ್ಷನ್ ದೃಶ್ಯಗಳಿಂದ ಸಿನಿಮಾ ಮೋಡಿ ಮಾಡುತ್ತದೆ. ಫಸ್ಟ್ ಹಾಫ್ ನಿರಾಸೆ ಮೂಡಿಸಿದರೂ ಸೆಕೆಂಡ್ ಹಾಫ್ ಗಮನ ಸೆಳೆಯುತ್ತದೆ.

Rajinikanth yash rajamouli Celebrities Praise prabhas kalki 2898 Ad

ಸೂಪರ್ ಸ್ಟಾರ್ ರಜನಿಕಾಂತ್ ಸಿನಿಮಾ ವೀಕ್ಷಿಸಿ "ಕಲ್ಕಿ ಸಿನಿಮಾ ನೋಡಿದೆ.. ವಾವ್! ಇದೊಂದು ಅದ್ಬುತ ಸಿನಿಮಾ. ನಾಗ್ ಅಶ್ವಿನ್ ಭಾರತೀಯ ಚಿತ್ರರಂಗವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದ್ದಾರೆ. ಇಂತಹ ಸಿನಿಮಾ ಮಾಡಿದ್ದಕ್ಕೆ ನನ್ನ ಸ್ನೇಹಿತ ಅಶ್ವಿನಿ ದತ್ ಅವರಿಗೆ ಅಭಿನಂದನೆಗಳು. ಜೊತೆಗೆ ಅಮಿತಾಬ್ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ ಪ್ರಭಾಸ್ ಸೇರಿದಂತೆ ಕಲ್ಕಿಯ ಇಡೀ ತಂಡಕ್ಕೆ ಅಭಿನಂದನೆಗಳು. ಭಾಗ- 2 ನೋಡಲು ಕಾತರದಿಂದ ಕಾಯುತ್ತಿದ್ದೇನೆ. ಎಂದು ರಜನಿಕಾಂತ್ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್‌ಗೆ ಉತ್ತರಿಸಿದ ನಿರ್ದೇಶಕ ನಾಗ್ ಅಶ್ವಿನ್, "ಸರ್ ನಾನು ಮೂಕನಾಗಿದ್ದೇನೆ, ನೀವು ಆಶೀರ್ವದಿಸಿದ್ದೀರಿ" ಎಂದು ರಿಪ್ಲೇ ಮಾಡಿದ್ದಾರೆ.

ನಟ ಯಶ್ ಟ್ವೀಟ್ ಮಾಡಿ "ಕಣ್ಣಿಗೆ ಹಬ್ಬ ಎನ್ನುವಂತಹ ಅದ್ಭುತ ದೃಶ್ಯಗಳನ್ನು ಕಟ್ಟಿಕೊಟ್ಟಿರುವ 'ಕಲ್ಕಿ 2898 ಎಡಿ' ತಂಡಕ್ಕೆ ಅಭಿನಂದನೆ. ಈ ಸಿನಿಮಾವು ಹೆಚ್ಚು ಸೃಜನಶೀಲವಾಗಿ ಕತೆಗಳನ್ನು ಹೇಳಲು ದಾರಿ ತೋರಿಸಿಕೊಟ್ಟಿದೆ. ನಿರ್ದೇಶಕ ನಾಗ್ ಅಶ್ವಿನ್ ಮತ್ತು ನಿರ್ಮಾಣ ಸಂಸ್ಥೆ ವೈಜಯಂತಿ ಮೂವೀಸ್, ಸಿನಿಮಾ ಮಂದಿ ದೊಡ್ಡದಾಗಿ ಕನಸು ಕಂಡು ದೊಡ್ಡ ಹೆಜ್ಜೆಗಳನ್ನು ಇಡಲು ಧೈರ್ಯ ಕೊಟ್ಟಿದೆ. ಡಾರ್ಲಿಂಗ್ ಪ್ರಭಾಸ್, ಅಮಿತಾಬ್ ಬಚ್ಚನ್ ಸರ್, ಕಮಲ್ ಹಾಸನ್ ಸರ್ ಮತ್ತು ದೀಪಿಕಾ ಪಡುಕೋಣೆ ಹಾಗೂ ಕೆಲವು ಸರ್ಪ್ರೈಸಿಂಗ್ ಕ್ಯಾಮಿಯೋ ಒಟ್ಟಿಗೆ ನೋಡುವುದು ಅದ್ಭುತ ಅನುಭವ. ಇಂತಹ ಅದ್ಭುತವಾದ ಸಿನಿಮಾ ಪ್ರೇಕ್ಷಕರ ಎದುರು ತಂದ ಇತಂಡಕ್ಕೆ ಅಭಿನಂದನೆಗಳು, ಈ ಸಿನಿಮಾ ನಿಜಕ್ಕೂ ಬೆಳ್ಳಿತೆರೆಯನ್ನು ಬೆಳಗಿಸುತ್ತಿದೆ" ಎಂದಿದ್ದಾರೆ.

"ಕಲ್ಕಿ 2898 AD ಒಂದು ಸಂಪೂರ್ಣ ಹೊಸ ಪ್ರಪಂಚ. ಈ ದೃಶ್ಯಗಳನ್ನು ನೋಡುವಾಗ, ನಾನು ಎಲ್ಲೋ ಹೋಗಿದ್ದೀನಿ ಎಂದು ನನಗೆ ಅನಿಸಿತು. ಡಾರ್ಲಿಂಗ್ ತನ್ನ ಟೈಮಿಂಗ್ ಹಾಗೂ ಈಸ್‌ನಿಂದ ಕಮಾಲ್ ಮಾಡಿದ್ದಾನೆ. ಪ್ರಭಾಸ್‌ಗೆ ಅಮಿತಾಬ್ ಜಿ, ಕಮಲ್ ಸರ್, ದೀಪಿಕಾ ಉತ್ತಮ ಬೆಂಬಲ ನೀಡಿದ್ದಾರೆ. ಕೊನೆಯ 30 ನಿಮಿಷಗಳು ನನ್ನನ್ನು ಬೇರೆ ಲೋಕಕ್ಕೆ ಕೊಂಡೊಯ್ದಿದ್ದು, ಈ ರೀತಿಯ ಸಿನಿಮಾ ಮಾಡಲು ಶ್ರಮಿಸಿದ ನಾಗಿ ಸೇರಿದಂತೆ ಇಡೀ ತಂಡಕ್ಕೆ ಹ್ಯಾಟ್ಸ್ ಆಫ್" ಎಂದು ರಾಜಮೌಳಿ ಬರೆದುಕೊಂಡಿದ್ದಾರೆ.

ರಶ್ಮಿಕಾ ಟ್ವೀಟ್ ಮಾಡಿ "ವಾಹ್ ಅದ್ಭುತ. ನಾಗ್‌ ಅಶ್ವಿನ್ ನೀವು ಅದ್ಭುತ ಪ್ರತಿಭೆ!..ನಂಬಲಸಾಧ್ಯ!! ಅಭಿನಂದನೆಗಳು ಕಲ್ಕಿ ತಂಡಕ್ಕೆ. ಈ ಚಿತ್ರವು ಎಲ್ಲಾ ಪ್ರೀತಿ ಮತ್ತು ಹೆಚ್ಚಿನದಕ್ಕೆ ಅರ್ಹವಾಗಿದೆ. ನಮ್ಮ ಪರದೆಯ ಮೇಲೆ ನಮ್ಮ ಪೌರಾಣಿಕ ದೇವರುಗಳು ಜೀವಂತವಾಗಿರುವುದನ್ನು ನೋಡುವುದು ನನಗೆ ಇಷ್ಟವಾಯಿತು. ದೇವರೇ!! ಎಂಥಾ ಚಿತ್ರ" ಎಂದು ಪೋಸ್ಟ್ ಮಾಡಿದ್ದಾರೆ. ನಾಗಾರ್ಜುನ, ಮೋಹನ್ ಬಾಬು, ಸೂರ್ಯ ಸೇರಿದಂತೆ ಹಲವರು ಟ್ವೀಟ್ ಮಾಡಿ ಕೊಂಡಾಡಿದ್ದಾರೆ.

More from Filmibeat

English summary
Yash to mohan babu Celebrities who Praise kalki 2898 Ad
Read more about: rajinikanth yash prabhas
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X