RRR: ಸೆನ್ಸಾರ್ ಪಾಸ್, ಕಟ್ಸ್ ಎಷ್ಟು? ಮ್ಯೂಟ್ಸ್ ಎಷ್ಟು?

ಟಾಲಿವುಡ್‌ನಲ್ಲಿ ಅದೆಷ್ಟೋ ಮಂದಿ 'ಆರ್‌ಆರ್‌ಆರ್‌' ಸಿನಿಮಾವನ್ನು ಕಣ್ತುಂಬಿಕೊಳ್ಳಲು ಕಾತುರರಾಗಿದ್ದಾರೆ. ಟಾಲಿವುಡ್‌ನಲ್ಲಿ ಮಾತ್ರವಲ್ಲದೆ ರಾಜಮೌಳಿ ಅಭಿಮಾನಿಗಳು ಸೇರಿದಂತೆ ದೇಶದಾದ್ಯಂತ ಹಲವರು ಈ ಚಿತ್ರವನ್ನು ನಿರೀಕ್ಷಿಸುತ್ತಿದ್ದಾರೆ.

ಹೀಗಾಗಿ ಈ ಸಿನಿಮಾ ಈ ಹಿಂದೆ ಮಾರ್ಚ್ 18ರಂದು ತೆರೆಗೆ ಬರೋದಾಗಿ ಅನೌನ್ಸ್ ಮಾಡಿಕೊಂಡಿತ್ತು. ಬಳಿಕ ಅಪ್ಪು ಮೇಲಿನ ಅಭಿಮಾನದಿಂದ ಚಿತ್ರವನ್ನು ಪೋಸ್ಟ್ ಪೋನ್ ಮಾಡಲಾಗಿತ್ತು.

ತದನಂತರದಲ್ಲಿ ಮಾರ್ಚ್ 25ಕ್ಕೆ ತನ್ನ ರಿಲೀಸ್ ದಿನಾಂಕವನ್ನು ಅನೌನ್ಸ್ ಮಾಡಿತ್ತು ಚಿತ್ರತಂಡ. ಅದರಂತೆ ಅದ್ಧೂರಿಯಾಗಿ ಚಿತ್ರ ರಿಲೀಸ್ ಆಗಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಇದೀಗ ಚಿತ್ರಕ್ಕೆ ಸೆನ್ಸಾರ್ ಕೂಡ ಆಗಿದ್ದು ಅಭಿಮಾನಿಗಳು ಫುಲ್ ಖುಷ್ ಆಗಿದ್ದಾತೆ.

ಭಾರಿ ಸಂಚಲನ ಮೂಡಿಸಿರುವ ಸಿನಿಮಾ RRR

ಭಾರಿ ಸಂಚಲನ ಮೂಡಿಸಿರುವ ಸಿನಿಮಾ RRR

ಟಾಲಿವುಡ್‌ನ ಬಹುನಿರೀಕ್ಷಿತ ಚಿತ್ರಗಳಲ್ಲಿ 'ಆರ್‌ಆರ್‌ಆರ್‌' ಸಿನಿಮಾ ಕೂಡ ಒಂದು. ಚಿತ್ರ ಸೆಟ್ಟೇರಿದಾಗಿನಿಂದಲೂ ಚಿತ್ರದ ಪ್ರತಿಯೊಂದು ಅಪ್‌ಡೇಟ್ಸ್ ಕೂಡ ಭಾರಿ ಸಂಚಲನ ಮೂಡಿಸುತ್ತಿದೆ. ಅದರಲ್ಲೂ ಸಿನಿಮಾವನ್ನು ಬಾಹುಬಲಿ ಖ್ಯಾತಿಯ ನಿರ್ದೇಶಕ ರಾಜಮೌಳಿ ಡೈರೆಕ್ಟ್ ಮಾಡಿರೋದು ಜನರಲ್ಲಿ ಸಿನಿಮಾದ ಬಗ್ಗೆ ಮತ್ತಷ್ಟು ನಿರೀಕ್ಷೆ ಮೂಡಿಸುತ್ತಿದೆ. ಸದ್ಯ ರಿಲೀಸ್‌ಗೆ ಸಜ್ಜಾಗಿರೋ ಈ ಸಿನಿಮಾ ಸೆನ್ಸಾರ್‌ನಿಂದ ಪಾಸ್ ಆಗಿ ಹೊರಬಂದಿದೆ. ಯಾವುದೇ ಕಟ್ಸ್, ಮ್ಯೂಟ್ಸ್ ಇಲ್ಲದೇ ಚಿತ್ರ ರಿಲೀಸ್‌ಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ.

RRR ಚಿತ್ರಕ್ಕೆ U/A ಸರ್ಟಿಫಿಕೇಟ್

RRR ಚಿತ್ರಕ್ಕೆ U/A ಸರ್ಟಿಫಿಕೇಟ್

'ಆರ್‌ಆರ್‌ಆರ್‌' ಸಿನಿಮಾ ಈಗಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ತನ್ನ ಟೀಸರ್ , ಟ್ರೇಲರ್ ಮೂಲಕವೇ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಅದರಲ್ಲೂ ರಾಜಮೌಳಿ ನಿರ್ದೇಶನದ ಸಿನಿಮಾ ಅಂದರೇ ಅಲ್ಲಿ ಈ ಕ್ರೇಜ್, ಜೋಶ್ ಇರೋದು ಕಾಮನ್. ಅದರಂತೆ 'ಆರ್‌ಆರ್‌ಆರ್‌' ಸಿನಿಮಾ ಮಾರ್ಚ್ 25ಕ್ಕೆ ತೆರೆಕಾಣುತ್ತಿದ್ದು, ಸೆನ್ಸಾರ್ ಬೋರ್ಡ್‌ ಚಿತ್ರಕ್ಕೆ U/A ಸರ್ಟಿಫಿಕೇಟ್ ನೀಡಿದೆ. 186 ನಿಮಿಷವಿರುವ 'ಆರ್‌ಆರ್‌ಆರ್‌' ಸಿನಿಮಾ ಸೆನ್ಸಾರ್ ಪರೀಕ್ಷೆಯನ್ನು ಎದುರಿಸಿ, ಇದೀಗ ಪಾಸ್‌ ಆಗಿ ಬಂದು ನಿಂತಿದೆ. ಈ ಸುದ್ದಿ ತಿಳಿದು ಫ್ಯಾನ್ಸ್ ಸಂತಸ ವ್ಯಕ್ತಪಡಿಸಿದ್ದಾರೆ.

ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ಸಿನಿಮಾ 'RRR'

ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ಸಿನಿಮಾ 'RRR'

'ಆರ್‌ಆರ್‌ಆರ್‌' ಸಿನಿಮಾ ಕನ್ನಡ, ಹಿಂದಿ,ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ರಿಲೀಸ್‌ ಆಗುತ್ತಿದ್ದು, 'ಆರ್‌ಆರ್‌ಆರ್‌' ಚಿತ್ರದ ಕರ್ನಾಟಕ ಡಿಸ್ಟ್ರಿಬ್ಯೂಷನ್ ಹಕ್ಕನ್ನು ಖ್ಯಾತ ನಿರ್ಮಾಣ ಸಂಸ್ಥೆ ಕೆವಿಎನ್ ಪಡೆದುಕೊಂಡಿದೆ. ಈಗಾಗಲೇ ಚಿತ್ರದ ಟೀಸರ್, ಪೋಸ್ಟರ್, ಮೇಕಿಂಗ್ ರಿಲೀಸ್ ಆಗಿದ್ದು, ಚಿತ್ರದ ಬಗ್ಗೆ ಸಿನಿ ಪ್ರೇಮಿಗಳು ಕುತೂಹಲ ಭರಿತರಾಗಿದ್ದಾರೆ. ಅಷ್ಟೆ ಅಲ್ಲದೇ ಭಾರಿ ಮೊತ್ತಕ್ಕೆ 'RRR' ಚಿತ್ರದ ವಿತರಣೆ ಹಕ್ಕು ಸೇಲ್ ಆಗಿದೆ ಅನ್ನೋ ಬಗ್ಗೆ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ.

ಬಹಳ ದೊಡ್ಡ ಮಟ್ಟದಲ್ಲಿ ಪ್ರೀ-ರಿಲೀಸ್ ಈವೆಂಟ್

ಬಹಳ ದೊಡ್ಡ ಮಟ್ಟದಲ್ಲಿ ಪ್ರೀ-ರಿಲೀಸ್ ಈವೆಂಟ್

ಇನ್ನು ಕೆವಿಎನ್‌ ವತಿಯಿಂದಲೇ ಕರ್ನಾಟಕದಲ್ಲಿ 'RRR' ಸಿನಿಮಾದ ಪ್ರೀ -ರಿಲೀಸ್ ಕಾರ್ಯಕ್ರಮ ಆಯೋಜನೆಗೊಳ್ಳುತ್ತಿದೆ. ಚಿಕ್ಕಬಳ್ಳಾಪುರ ಆಂಧ್ರ, ತಮಿಳುನಾಡು ರಾಜ್ಯಗಳ ಗಡಿಗೆ ಬಹಳ ಹತ್ತಿರವಿರುವ ಕಾರಣ 'ಆರ್‌ಆರ್‌ಆರ್' ಪ್ರೀ- ರಿಲೀಸ್ ಕಾರ್ಯಕ್ರಮಕ್ಕೆ ಮೂರೂ ರಾಜ್ಯದಿಂದ ಜನರು ಬರುವ ನಿರೀಕ್ಷೆಯಿದೆ. ಈ ಕಾರ್ಯಕ್ರಮಕ್ಕೆ ಕರ್ನಾಟಕ ಮುಖ್ಯಮಂತ್ರಿ ‌ಬಸವರಾಜ್‌ ಬೊಮ್ಮಾಯಿ, ಕನ್ನಡ‌ದ ಕೆಲ ಸಿನಿಮಾ ತಾರೆಯರು ಆಗಮಿಸುವ ನಿರೀಕ್ಷೆಯಿದೆ. 'RRR' ಸಿನಿಮಾ ಸ್ಟಾರ್‌ಗಳಾದ ಜೂ.ಎನ್‌ಟಿಆರ್, ರಾಮ್‌ ಚರಣ್, ನಿರ್ದೇಶಕ ರಾಜಮೌಳಿ ಇನ್ನ ಹಲವು ತಾರೆಗಳು ಕಾರ್ಯಕ್ರಮದಲ್ಲಿ ಹಾಜರಿರಲಿದ್ದಾರೆ. ಅತಿಥಿಗಳು ಆಗಮಿಸಲು, ನಿರ್ಗಮಿಸಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.

More from Filmibeat

English summary
RRR movies censor has been completed and got a U/A certificate from the CBFC. It is also revealed that the movie has a lengthy run time of 186 minutes.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X