Sapta Sagaralu Dhaati response: ಮಾಸ್ ಪ್ರಿಯರಿಗೆ ನೋವಿನ ಪ್ರೇಮಕತೆ ಇಷ್ಟ ಆಯ್ತಾ? ತೆಲುಗು ಪ್ರೇಕ್ಷಕರು ಏನಂದ್ರು?

ಕನ್ನಡದಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ 'ಸಪ್ತಸಾಗರದಾಚೆ ಎಲ್ಲೋ' ಸಿನಿಮಾ ಈಗ ತೆಲುಗಿಗೂ ಡಬ್ ಆಗಿ ರಿಲೀಸ್ ಆಗಿದೆ. ರಕ್ಷಿತ್ ಶೆಟ್ಟಿ ಬಹಳ ಮುತುವರ್ಜಿ ವಹಿಸಿ ಚಿತ್ರದ ಪ್ರಮೋಷನ್ ಮಾಡಿ ತೆಲುಗು ಪ್ರೇಕ್ಷಕರ ಮುಂದೆ ಸಿನಿಮಾ ಇಟ್ಟಿದ್ದಾರೆ. ಒಳ್ಳೆ ಸಿನಿಮಾಗಳನ್ನು ಟಾಲಿವುಡ್ ಮಂದಿ ಎಂದು ಕೈ ಬಿಟ್ಟಿಲ್ಲ. ಹಾಗಾಗಿ ಈ ಸಿನಿಮಾ ರಿಸಲ್ಟ್ ಏನಾಗುತ್ತೋ ಎನ್ನುವ ಕುತೂಹಲ ಇದೆ.

ಹೇಮಂತ್ ರಾವ್ ನಿರ್ದೇಶನದ ಈ ರೊಮ್ಯಾಂಟಿಕ್ ಲವ್‌ ಸ್ಟೋರಿಯಲ್ಲಿ ರಕ್ಷಿತ್ ಶೆಟ್ಟಿ ಜೋಡಿಯಾಗಿ ರುಕ್ಮಿಣಿ ವಸಂತ್ ಮಿಂಚಿದ್ದಾರೆ. ಚಿತ್ರದಲ್ಲಿ ಇವರಿಬ್ಬರ ಕೆಮೆಸ್ಟ್ರಿ ಸಖತ್ ಆಗಿ ವರ್ಕೌಟ್ ಆಗಿದೆ. ಅದರಲ್ಲೂ ರುಕ್ಕು ನಟನೆ ಬಗ್ಗೆ ಕೊಂಚ ಹೆಚ್ಚೇ ಮೆಚ್ಚುಗೆ ಮಾತುಗಳು ಕೇಳಿಬಂದಿದೆ. ರಕ್ಷಿತ್ ಶೆಟ್ಟಿ ಸ್ವತಃ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. 'ಸಪ್ತ ಸಾಗರಾಲು ದಾಟಿ' ಹೆಸರಿನಲ್ಲಿ ಸಿನಿಮಾ ಈಗ ಆಂಧ್ರ, ತೆಲಂಗಾಣದಲ್ಲಿ ರಿಲೀಸ್ ಆಗಿದೆ.

Sapta-Sagaralu-Dhaati-telugu-Public-Talk

2 ಭಾಗಗಳಾಗಿ ಈ ನೋವಿನ ಪ್ರೇಮಕತೆಯನ್ನು ಹೇಳಲಾಗ್ತಿದೆ. ಬಹಳ ಕಾವ್ಯಾತ್ಮಕವಾಗಿ ಮನು- ಪ್ರಿಯಾ ಪ್ರೇಮಕತೆ ಪ್ರೇಕ್ಷಕರ ಮುಂದೆ ಬಂದಿದೆ. ಕರ್ನಾಟಕದಲ್ಲಿ ಸಿನಿಮಾ 20 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ. ಸಿನಿಮಾ ನೋಡಿದ ತೆಲುಗು ಪ್ರೇಕ್ಷಕರು ಏನಂದ್ರು? ಬನ್ನಿ ನೋಡೋಣ.

ಸಿನಿಮಾ ಸಖತ್ ಆಗಿದೆ

'ಸಪ್ತ ಸಾಗರಾಲು ದಾಟಿ' ಸಿನಿಮಾ ನೋಡಿ ಥಿಯೇಟರ್‌ಗಳಿಂದ ಹೊರಬಂದ ಪ್ರೇಕ್ಷಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. "ನನಗೂ ಒಬ್ಬ ಲವರ್ ಇದ್ದರೆ ಅಕ್ಟೋಬರ್ 27ರ ಒಳಗೆ ಆಕೆಯನ್ನು ಗಟ್ಟಿಯಾಗಿ ಬಿಗಿದಪ್ಪಿ ಅಳಬೇಕು ಅನಿಸುತ್ತದೆ. ಅಷ್ಟರಮಟ್ಟಿಗೆ ಸಿನಿಮಾ ಸಖತ್ ಆಗಿದೆ. ನಾನು ಈಗಾಗಲೇ ಕನ್ನಡದಲ್ಲಿ ನೋಡಿದ್ದೀನಿ. ಮತ್ತೆ ಬಂದು ತೆಲುಗಿನಲ್ಲಿ ನೋಡಿದೆ" ಎಂದು ಪ್ರೇಕ್ಷಕರೊಬ್ಬರು ಹೇಳಿದ್ದಾರೆ.

ನಮ್ಮ ನೇಟಿವಿಟಿಗೆ ಸ್ವಲ್ಪ ಕಷ್ಟ

"ಸಿನಿಮಾ ಚೆನ್ನಾಗಿದೆ. ಆದರೆ ನಮ್ಮ ತೆಲುಗು ಪ್ರೇಕ್ಷಕರಿಗೆ ಇದು ಕನೆಕ್ಟ್ ಆಗುವುದು ಕೊಂಚ ಕಷ್ಟ. ನಮ್ಮ ನೇಟಿವಿಟಿಗೆ ಸ್ವಲ್ಪ ಕಷ್ಟನೇ, ಆದರೆ ಸಿನಿಮಾ ಚೆನ್ನಾಗಿದೆ. ಬಿಜಿಎಂ, ರಕ್ಷಿತ್ ಶೆಟ್ಟಿ, ನಾಯಕಿ ಎಲ್ಲರೂ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಆದರೆ ಕೊಂಚ ಸ್ಲೋ ಆಗಿ ಇರೋದು, ನಮ್ಮ ಪ್ರೇಕ್ಷಕರಿಗೆ ಇಷ್ಟವಾಗುತ್ತಾ? ಅನ್ನೋದು ಗೊತ್ತಿಲ್ಲ. 2ನೇ ಭಾಗ ಖಡಕ್ ಆಗಿ ಇರುವಂತಿದೆ. ಯಾಕಂದರೆ ಹೀರೊ ಗ್ಯಾಂಗ್‌ಸ್ಟರ್ ಆಗ್ತಾನೆ ಅನ್ನೋತರ ಇದೆ. 2ನೇ ಭಾಗಕ್ಕೂ ಕಾಯ್ತಿದ್ದೇನೆ" ಎಂದು ಮತ್ತೊಬ್ಬರು ಹೇಳಿದ್ದಾರೆ.

Sapta-Sagaralu-Dhaati-telugu-Public-Talk

'ಸೀತಾರಾಮಂ' ಕೂಡ ಸ್ಲೋ

ಇನ್ನೊಬ್ಬ ಪ್ರೇಕ್ಷಕ ಬಹಳ ಹೊತ್ತು ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. "ಬೇಗ ಜೀವನದಲ್ಲಿ ಸೆಟ್ಲ್ ಆಗಬೇಕು ಎಂದು ತಪ್ಪುಗಳನ್ನು ಮಾಡುತ್ತಿರುವ ಪ್ರತಿ ಯುವಕ, ಯುವತಿ ನೋಡಬೇಕಾದ ಸಿನಿಮಾ ಇದು. ಇಂತಹ ಸಿನಿಮಾಗಳು ರೆಗ್ಯುಲರ್ ಆಗಿ ಬರಲ್ಲ. ಸೀತಾರಾಮಂ ಬಳಿಕ ನಾನು ಅಷ್ಟರಮಟ್ಟಿಗೆ ಕಣ್ಣೀರು ಹಾಕಿದ ಸಿನಿಮಾ ಇದು"

"ಕೆಲ ಸಿನಿಮಾಗಳನ್ನು ನಾವು ಥಿಯೇಟರ್‌ನಿಂದ ಹೊರಗೆ ತೆಗೆದುಕೊಂಡು ಹೋಗುತ್ತೇವೆ. ಅದರಲ್ಲಿ ಇದೂ ಒಂದು. ರಕ್ಷಿತ್ ಶೆಟ್ಟಿ ಹಾಗೂ ನಾಯಕಿ ನಟನೆ ಸೂಪರ್. 2ನೇ ಭಾಗ ಕೂಡ ನೋಡಬೇಕು. ಇತ್ತೀಚಿನ ದಿನಗಳಲ್ಲಿ ಒಳ್ಳೆ ಲವ್ ಡ್ರಾಮಾ. 'ಬೇಬಿ' ಚಿತ್ರಕ್ಕೆ ತೆಲುಗು ಪ್ರೇಕ್ಷಕರು ಕನೆಕ್ಟ್ ಆದಂತೆ ಅದಕ್ಕಿಂತ ಒಳ್ಳೆ ಸಿನಿಮಾ ಕೊಟ್ಟಿದ್ದಾರೆ. ನಾಯಕಿ ಪಾತ್ರ ಚೆನ್ನಾಗಿದೆ. ಬಿಜಿಎಂನಲ್ಲೇ ಅಳಿಸಿಬಿಡ್ತಾರೆ. ಕಂಪ್ಲೀಟ್ ಸಿನಿಮಾ ಎಂಜಾಯ್ ಮಾಡ್ತೀರಾ. ಕಮರ್ಷಿಯಲ್ ಅಂಶ ಇಲ್ಲ. ಆದರೆ ಒಳ್ಳೆ ಸಿನಿಮಾ."

"ಸೀತಾರಾಮಂ ಕೂಡ ಸ್ಲೋ ನರೇಶನ್. ಹಿಟ್ ಆಯ್ತು ಅಲ್ವಾ? ಒಂದೊಂದು ಸಿನಿಮಾ ಒಂದೊಂದು ರೀತಿ ಇರುತ್ತದೆ. ಸಾಂಬಾರ್ ಟೇಸ್ಟ್ ಸಾಂಬಾರ್‌ದು, ಕಿಚಡಿ ಟೇಸ್ಟ್ ಕಿಚಡಿದು. ಅದೇ ರೀತಿ ಎರಡೂ ಚೆನ್ನಾಗಿರುತ್ತೆ. ಮ್ಯೂಸಿಕ್ ಚೆನ್ನಾಗಿದೆ. ಈ ಚಿತ್ರಕ್ಕೆ ಮ್ಯೂಸಿಕ್ ಜೀವಾಳ. ಯಾವುದೇ ಬೋಲ್ಡ್ ಸೀನ್, ಕೆಟ್ಟ ಡೈಲಾಗ್‌ ಇಲ್ದೆ 2 ಗಂಟೆ 22 ನಿಮಿಷ ನಿಮ್ಮನ್ನು ಸಿನಿಮಾ ನೋಡಿಸಿಕೊಳ್ಳುತ್ತದೆ" ಎಂದಿದ್ದಾರೆ.

More from Filmibeat

English summary
Rakshith shetty' Sapta Sagaralu Dhaati Movie telugu audience Review
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X