For Quick Alerts
  ALLOW NOTIFICATIONS  
  For Daily Alerts

  ಐಷಾರಾಮಿ ಕಾರು ಬಿಟ್ಟು ಸೈಕಲ್ ಏರಿದ್ದೇಕೆ ನಟಿ ರಕುಲ್ ಪ್ರೀತ್ ಸಿಂಗ್?

  |

  ಡ್ರಗ್ಸ್ ಪ್ರಕರಣ ಸಂಬಂಧ ಎನ್ ಸಿ ಬಿ ಅಧಿಕಾರಿಗಳ ವಿಚಾರಣೆಗೆ ಒಳಗಾಗಿದ್ದ ಬಹುಭಾಷಾ ನಟಿ ರಕುಲ್ ಪ್ರೀತ್ ಸಿಂಗ್ ಇದೀಗ ಮತ್ತೆ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸೈಲೆಂಟ್ ಆಗಿದ್ದ ರಕುಲ್ ಇದೀಗ ಮತ್ತೆ ಆಕ್ಟೀವ್ ಆಗಿದ್ದಾರೆ.

  ಸದ್ಯ ಮುಂಬೈನಲ್ಲಿರುವ ರಕುಲ್ ಸೈಕಲ್ ರೈಡ್ ಮಾಡಿ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಹೌದು, ನಟಿ ರಕುಲ್ ತನ್ನ ಐಷಾರಾಮಿ ಕಾರು ಬಿಟ್ಟು ಸೈಕಲ್ ನಲ್ಲಿ ಮುಂಬೈ ಬೀದಿ ಸುತ್ತಿದ್ದಾರೆ. ವರ್ಕೌಟ್ ಮುಗಿಸಿ ಕಾರಿನಲ್ಲಿ ಹೊರಟ ರಾಕುಲ್ ಬಳಿಕ ಅರ್ಧದಲ್ಲೇ ಕಾರಿನಿಂದ ಇಳಿದು ಸೈಕಲ್ ಏರಿದ್ದಾರೆ.

  ಎನ್‌ಸಿಬಿ ವಿಚಾರಣೆ ನಂತರ ಮತ್ತೆ ಶೂಟಿಂಗ್ ಆರಂಭಿಸಿದ ರಕುಲ್ ಪ್ರೀತ್ಎನ್‌ಸಿಬಿ ವಿಚಾರಣೆ ನಂತರ ಮತ್ತೆ ಶೂಟಿಂಗ್ ಆರಂಭಿಸಿದ ರಕುಲ್ ಪ್ರೀತ್

  ಅಂದ್ಹಾಗೆ ರಕುಲ್ ಗೆ ಸೈಕಲ್ ರೈಡ್ ಎಂದರೆ ತುಂಬಾ ಪ್ರೀತಿ. ಆಗಾಗ ಸೈಕಲ್ ಏರಿ ಹೊರಟು ಸಖತ್ ಎಂಜಾಯ್ ಮಾಡುತ್ತಾರೆ. ಇದೀಗ ಸ್ಪೋರ್ಟ್ಸ್ ಉಡುಪು ಧರಿಸಿ ಸೈಕಲ್ ನಲ್ಲಿ ಹೊರಟಿರುವ ರಾಕುಲ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  ವರ್ಕೌಟ್, ಡಯಟ್ ಅಂತ ಫಿಟ್ ನೆಸ್ ಕಡೆ ಹೆಚ್ಚು ಗಮನ ಕೊಡುವ ನಟಿ ರಕುಲ್ ಸೈಕ್ಲಿಂಗ್ ಅನ್ನು ತುಂಬಾ ಇಷ್ಟಪಡುತ್ತಾರೆ. ಫಿಟ್ ನೆಸ್ ಗಾಗಿ ಸೈಕಲ್ ರೈಡ್ ಮಾಡುತ್ತಿರುತ್ತಾರೆ. ಡ್ರಗ್ಸ್ ವಿಚಾರಣೆ ಬಳಿಕ ರಕುಲ್ ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಂಡಿರಲಿಲ್ಲ. ಈ ವಿಚಾರವಾಗಿ ಯಾವುದೇ ಪ್ರತಿಕ್ರಿಯೆ ಸಹ ನೀಡಿಲ್ಲ.

  ರಿಯಾ ಚಕ್ರವರ್ತಿ ಹೇಳಿಕೆ ಅನ್ವಯ ರಕುಲ್ ಪ್ರೀತ್ ಸಿಂಗ್ ಗೆ ಎನ್ ಸಿ ಬಿ ನೋಟಿಸ್ ನೀಡಿತ್ತು. ಸುಮಾರು ನಾಲ್ಕು ಗಂಟೆಗಳ ಕಾಲ ರಕುಲ್ ವಿಚಾರಣೆಗೆ ಒಳಪಟ್ಟಿದ್ದರು. ಈ ವಿಚಾರದಲ್ಲಿ ಮಾಧ್ಯಮಗಳು ನನ್ನ ಹೆಸರು ಬಳಸಬಾರದು ಎಂದು ದೆಹಲಿ ಹೈ ಕೋರ್ಟ್‌ನಲ್ಲಿ ತಡೆಯಾಜ್ಞೆ ಸಹ ತಂದಿದ್ದರು.

  ದೊಡ್ಡ ಹೃದಯವಂತ ಬಾಹುಬಲಿ ನಿರ್ದೇಶಕ ರಾಜಮೌಳಿ | filmibeat Kannada

  ರಕುಲ್ ಪ್ರೀತ್ ಸಿಂಗ್ ಸದ್ಯ ಹಿಂದಿ, ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ತಮಿಳಿನಲ್ಲಿ ಕಮಲ್ ಹಾಸನ್ ನಟನೆಯ ಇಂಡಿಯನ್-2 ಸಿನಿಮಾದಲ್ಲಿ ರಕುಲ್ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಕ್ರಿಶ್ ನಿರ್ದೇಶನದ ತೆಲುಗು ಸಿನಿಮಾದ ಶೂಟಿಂಗ್ ನಲ್ಲಿ ರಕುಲ್ ಬ್ಯುಸಿಯಾಗಿದ್ದಾರೆ.

  English summary
  Actress Rakul Preet Singh ditches her car and enjoys a cycle ride in Mumbai city.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X