For Quick Alerts
  ALLOW NOTIFICATIONS  
  For Daily Alerts

  ಎನ್‌ಸಿಬಿ ವಿಚಾರಣೆ ನಂತರ ಮತ್ತೆ ಶೂಟಿಂಗ್ ಆರಂಭಿಸಿದ ರಕುಲ್ ಪ್ರೀತ್

  |

  ಡ್ರಗ್ಸ್ ಪ್ರಕರಣದಲ್ಲಿ ಎನ್‌ಸಿಬಿ ಅಧಿಕಾರಿಗಳಿಂದ ವಿಚಾರಣೆ ಎದುರಿಸಿದ್ದ ನಟಿ ರಕುಲ್ ಪ್ರೀತ್ ಸಿಂಗ್ ಈಗ ಮತ್ತೆ ಚಿತ್ರೀಕರಣ ಆರಂಭಿಸಿದ್ದಾರೆ.

  ಹೈದರಾಬಾದ್‌ನಲ್ಲಿ ಕ್ರಿಶ್ ನಿರ್ದೇಶನದ ತೆಲುಗು ಚಿತ್ರದ ಶೂಟಿಂಗ್‌ನಲ್ಲಿ ರಕುಲ್ ಪ್ರೀತ್ ಭಾಗಿಯಾಗಿದ್ದಾರೆ. ಚಿತ್ರಕ್ಕೆ ಸಂಬಂಧಿಸಿದಂತೆ ಮಳೆಯ ದೃಶ್ಯಗಳನ್ನು ಚಿತ್ರತಂಡ ಚಿತ್ರೀಕರಿಸಿದೆ. ಈ ಚಿತ್ರಗಳನ್ನು ರಕುಲ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ನಿರ್ದೇಶಕ ಕ್ರಿಶ್ ಮತ್ತು ವೈಶವ್ ತೇಜ್ ಮಳೆಯಲ್ಲಿ ಶೂಟಿಂಗ್ ಮಾಡುತ್ತಿರುವ ವಿಡಿಯೋ ಸಹ ಅಪ್‌ಲೌಡ್ ಮಾಡಿದ್ದಾರೆ.

  ರಿಯಾ ಚಕ್ರವರ್ತಿ ಜೊತೆ ಡ್ರಗ್ ಚಾಟ್ ಮಾಡಿರುವುದಾಗಿ NCB ಮುಂದೆ ಒಪ್ಪಿಕೊಂಡ ರಕುಲ್ರಿಯಾ ಚಕ್ರವರ್ತಿ ಜೊತೆ ಡ್ರಗ್ ಚಾಟ್ ಮಾಡಿರುವುದಾಗಿ NCB ಮುಂದೆ ಒಪ್ಪಿಕೊಂಡ ರಕುಲ್

  ಸುಶಾಂತ್ ಸಿಂಗ್ ರಜಪೂತ್ ಸಾವಿನ ತನಿಖೆಗೆ ಸಂಬಂಧಿಸಿದಂತೆ ಡ್ರಗ್ಸ್ ಪ್ರಕರಣದಲ್ಲಿ ರಕುಲ್ ಪ್ರೀತ್ ಸಿಂಗ್‌ಗೆ ಎನ್‌ಸಿಬಿಯಿಂದ ವಿಚಾರಣೆ ಎದುರಿಸಿದ್ದರು. ಸೆಪ್ಟೆಂಬರ್ 25 ರಂದು ಮುಂಬೈನ ಎನ್‌ಸಿಬಿ ಕಚೇರಿಗೆ ಭೇಟಿ ನೀಡಿ ವಿವರಣೆ ನೀಡಿದ್ದರು.

  ರಿಯಾ ಚಕ್ರವರ್ತಿ ಹೇಳಿಕೆ ಅನ್ವಯ ರಕುಲ್ ಪ್ರೀತ್ ಸಿಂಗ್ ಮತ್ತು ಸಾರಾ ಅಲಿ ಖಾನ್‌ಗೆ ಎನ್‌ಸಿಬಿ ನೋಟಿಸ್ ನೀಡಿತ್ತು. ಸುಮಾರು ನಾಲ್ಕು ಗಂಟೆಗಳ ಕಾಲ ರಕುಲ್ ವಿಚಾರಣೆಗೆ ಒಳಪಟ್ಟಿದ್ದರು. ಈ ವಿಚಾರದಲ್ಲಿ ಮಾಧ್ಯಮಗಳು ನನ್ನ ಹೆಸರು ಬಳಸಬಾರದು ಎಂದು ದೆಹಲಿ ಹೈ ಕೋರ್ಟ್‌ನಲ್ಲಿ ತಡೆಯಾಜ್ಞೆ ಸಹ ತಂದಿದ್ದರು.

  ಕೊರೊನ ಭಯ ಇಲ್ದೆ ಸಿಂಗಲ್ ಸ್ಕ್ರೀನ್ ನಲ್ಲಿ ಸಿನಿಮಾ ನೋಡಬಹುದ..? | Filmibeat Kannada

  ರಕುಲ್ ಪ್ರೀತ್ ಸಿಂಗ್ ಸದ್ಯ ಹಿಂದಿಯಲ್ಲಿ ಎರಡು ಸಿನಿಮಾ, ತೆಲುಗಿನಲ್ಲಿ ಎರಡು ಚಿತ್ರ ಹಾಗೂ ತಮಿಳಿನಲ್ಲಿ ಎರಡು ಸಿನಿಮಾವನ್ನು ಮಾಡುತ್ತಿದ್ದಾರೆ.

  English summary
  South actress Rakul Preet Singh resumes shooting after CBI Enquiry.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X