ರಕುಲ್ ಬೇಡ ಎಂದ ಆ ಚಿತ್ರ ರಶ್ಮಿಕಾ ಮಾಡಿದ್ರು: ಆಮೇಲೆ ಸ್ಟಾರ್ ಆದ್ರು! ಯಾವುದು ಚಿತ್ರ?
Recommended Video
'ಕಿರಿಕ್ ಪಾರ್ಟಿ' ಯಶಸ್ಸಿನ ಬಳಿಕ ತೆಲುಗಿನಲ್ಲಿ ಅದೃಷ್ಟ ಗಿಟ್ಟಿಸಿಕೊಂಡ ರಶ್ಮಿಕಾ ಮಂದಣ್ಣ ಈಗ ಟಾಲಿವುಡ್ ಟಾಪ್ ನಟಿ. ತೆಲುಗಿನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರನ್ನು ಹಿಂದಿಕ್ಕಿ ಇಂಡಸ್ಟ್ರಿ ರೂಲ್ ಮಾಡ್ತಿದ್ದಾರೆ.
ವಿಜಯ್ ದೇವರಕೊಂಡ ಜೊತೆ ನಟಿಸಿದ ಗೀತಾ ಗೋವಿಂದಂ ಸಿನಿಮಾ ರಶ್ಮಿಕಾಗೆ ಟಾಲಿವುಡ್ ಇಂಡಸ್ಟ್ರಿಯಲ್ಲಿ ದೊಡ್ಡ ಮಟ್ಟದ ಬ್ರೇಕ್ ನೀಡಿತ್ತು. ಈ ಚಿತ್ರದ ಬಳಿಕ ಸಾಲು ಸಾಲು ಸಿನಿಮಾಗಳು ರಶ್ಮಿಕಾ ಕೈ ಸೇರಿದವು.
ಈಗ ವಿಷ್ಯ ಏನಪ್ಪಾ ಅಂದ್ರೆ, ರಶ್ಮಿಕಾಗೆ ಸಕ್ಸಸ್ ಕೊಟ್ಟಿದ್ದ ಚಿತ್ರವನ್ನ ಸೌತ್ ಸುಂದರಿ ರಿಜೆಕ್ಟ್ ಮಾಡಿದ್ದರಂತೆ. ರಶ್ಮಿಕಾಗೂ ಮೊದಲು ಈ ಚಿತ್ರ ರಕುಲ್ ಅವರಿಗೆ ಹೋಗಿತ್ತು. ಆದರೆ, ಡೇಟ್ ಸಮಸ್ಯೆಯಿಂದ ರಕುಲ್ ಆ ಚಿತ್ರವನ್ನ ಒಪ್ಪಿಕೊಂಡಿರಲಿಲ್ಲ. ಬಳಿಕ, ರಶ್ಮಿಕಾಗೆ ಈ ಚಾನ್ಸ್ ಸಿಕ್ಕಿತ್ತು.

ಸಕ್ಸಸ್ ಹಾದಿಯಲ್ಲಿದ್ದ ರಕುಲ್ ಪ್ರೀತ್ ಸಿಂಗ್ ಬಳಿ ಗೀತಾ ಗೋವಿಂದಂ ಸಿನಿಮಾ ಹೋದಾಗ, ಅವ್ರು ಹಿಂದಿ ಚಿತ್ರವೊಂದಕ್ಕೆ ಕಾಲ್ ಶೀಟ್ ಕೊಟ್ಟಿದ್ದರು. ಅದೇ ಸಮಯದಲ್ಲಿ ಈ ಸಿನಿಮಾ ಬಂದ ಕಾರಣ, ಡೇಟ್ ಹೊಂದಾಣಿಕ ಮಾಡಲು ಕಷ್ಟವಾಯಿತಂತೆ. ಹೀಗಂತ ಸ್ವತಃ ರಕುಲ್, ಬಾಲಿವುಡ್ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಪರುಶರಾಮ್ ನಿರ್ದೇಶನ ಮಾಡಿದ್ದ ಈ ಚಿತ್ರ ಬಾಕ್ಸ್ ಆಫೀಸ್ ನಲ್ಲೂ ಸಕ್ಸಸ್ ಆಗಿತ್ತು. 100 ಕೋಟಿ ಕಲೆಕ್ಷನ್ ಮಾಡಿತ್ತು. ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಜೋಡಿ ಬಗ್ಗೆ ಭಾರಿ ಮೆಚ್ಚುಗೆ ವ್ಯಕ್ತವಾಯ್ತು. ಈ ಸಿನಿಮಾದಿಂದಲೇ ರಶ್ಮಿಕಾ ಟಾಲಿವುಡ್ ಜರ್ನಿ ಅದೃಷ್ಟ ತಂದುಕೊಡ್ತು ಎಂದರೂ ತಪ್ಪಲ್ಲ.


Click it and Unblock the Notifications











