ದ್ವಿಪಾತ್ರದಲ್ಲಿ ರಾಮ್‌ಚರಣ್ ತೇಜ: ಯಾವ ಸಿನಿಮಾ ಗೊತ್ತಾ?

ನಟ ರಾಮ್ ಚರಣ್ ತೇಜ ಮುಂದಿನ ಚಿತ್ರಕ್ಕೆ ಸಜ್ಜಾಗಿದ್ದಾರೆ. ಈಗಾಗಲೇ RRR ಚಿತ್ರದ ರಿಲೀಸ್ ದಿನಾಂಕ ಫಿಕ್ಸ್ ಆಗಿದೆ. ಮತ್ತೊಂದು ಕಡೆ ಆಚಾರ್ಯ ಸಿನಿಮಾ ಕೂಡ ಬಹುತೇಕ ಸಂಪೂರ್ಣಗೊಂಡಿದೆ. ಇನ್ನೇನಿದ್ದರು ರಾಮ್‌ ಚರಣ್ ತಮ್ಮ 15 ಸಿನಿಮಾದ ಕೆಲಸದಲ್ಲಿ ಬ್ಯೂಸಿ ಅಗಲಿದ್ದಾರೆ. ಈ ಚಿತ್ರದ ಬಗ್ಗೆ ವಿಶೇಷವಾದ ಮಾಹಿತಿ ಒಂದು ಹೊಸ ಬಂದಿದೆ.

ನಟ ರಾಮ್‌ ಚರಣ್ ತೇಜ ಈ ಚಿತ್ರದಲ್ಲಿ ದ್ವಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಈ ವಿಚಾರ ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಲಿದೆ. ರಾಮ್‌ ಚರಣ್ ಎರಡು ವಿಭಿನ್ನ ಪಾತ್ರಗಳಲ್ಲಿ ಈ ಚಿತ್ರದ ಮೂಲಕ ತೆರೆಯ ಮೇಲೆ ರಾರಾಜಿಸಲಿದ್ದಾರಂತೆ. ಇದು ಸದ್ಯ ರಾಮ್‌ ಚರಣ್ ಅಭಿನಯದ 15 ಚಿತ್ರದ ಬಗ್ಗೆ ಸಂಚಲನ ಮೂಡಿಸಿರುವ ಹೊಸ ಸುದ್ದಿ.

ಹೆಸರಾಂತ ನಿರ್ದೇಶಕ ಶಂಕರ್ ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಇದರಲ್ಲಿ ಅವರು ಕಿಯಾರಾ ಅಡ್ವಾಣಿ ನಾಯಕಿಯಾಗಿ ರಾಮ್‌ ಚರಣ್ ಜೊತೆಗೆ ತೆರೆ ಹಂಚಿಕೊಳ್ಳುತ್ತಾ ಇದ್ದಾರೆ. ಈ ಚಿತ್ರಕ್ಕೆ ತಾತ್ಕಾಲಿಕವಾಗಿ RC15 ಎಂದು ಟೈಟಲ್ ಫಿಕ್ಸ್ ಮಾಡಾಗಿದೆ. ಇದು ಒಂದು ದೊಡ್ಡ ಬಜೆಟ್‌ನ ಸಿನಿಮಾ ಆಗಿದೆ. ಕತೆಯಲ್ಲಿ ರಾಜಕೀಯದ ಥ್ರಿಲ್ಲರ್ ಅಂಶಗಳು ಅಡಗಿವೆ. ಹಾಗಾಗಿ ರಾಮ್‌ ಚರಣ್ ಯಾವ ಯಾವ ಪಾತ್ರಗಳಲ್ಲಿ ಕಾಣಿಸಕೊಳ್ಳುತ್ತಾರೆ ಎನ್ನುವ ಕುತೂಹಲ ಹುಟ್ಟಿಕೊಂಡಿದೆ. ಅದರಲ್ಲೂ ನಿರ್ದೇಶಕ ಶಂಕರ್ ಡ್ಯೂಯಲ್ ರೋಲ್‌ಗಳನ್ನು ಕಟ್ಟಿ ಕೊಡುವುದರಲ್ಲಿ ನಿಸ್ಸೀಮರು. ಹಾಗಾಗಿ ಅವರು ನಿರೀಕ್ಷೆ ಮತ್ತಷ್ಟು ಹೆಚ್ಚಿದೆ.

Ram Charam Playing Dual Role In Upcoming Movie

ಸದ್ಯ ಹರಿದಾಡುತ್ತಿರುವ ಸುದ್ದಿಯ ಪ್ರಕಾರ ರಾಮ್ ಚರಣ್ ಒಂದು ಪಾತ್ರದಲ್ಲಿ ಅಧಿಕಾರಿಯಾಗಿ ಕಾಣಿಸಿಕೊಂಡರೆ, ಇನ್ನೊಂದು ಪಾತ್ರದಲ್ಲಿ ಕಾರ್ಮಿಕನಾಗಿ ಕಾಣಿಸಿಕೊಳ್ಳಲಿದ್ದಾರಂತೆ ಎನ್ನಲಾಗಿದೆ. ಅದರೆ ಇದು ಚಿತ್ರ ತಂಡದ ಅಧಿಕೃತ ಮಾಹಿತಿ ಅಲ್ಲ. ಹಾಗಾಗಿ ರಾಮ್‌ ಚರಣ್ ಹೇಗೆ ಇರಲಿದ್ದಾರೆ ಎನ್ನು ಪ್ರಶ್ನೆಗಳು ಮೂಡಿವೆ. ಇದಕ್ಕೆಲ್ಲಾ ಚಿತ್ರ ತಂಡ ಸದ್ಯದಲ್ಲೇ ಉತ್ತರ ನೀಡಲಿದೆ.

RC15 ಪ್ಯಾನ್-ಇಂಡಿಯಾ ಚಿತ್ರವಾಗಿದ್ದು, ಇದನ್ನು ದಿಲ್ ರಾಜು ನಿರ್ಮಿಸುತ್ತಿದ್ದಾರೆ. ಮುಂದಿನ ವರ್ಷ ಸಂಕ್ರಾಂತಿಯಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಪ್ಲ್ಯಾನ್ ಮಾಡಿದೆ ಚಿತ್ರತಂಡ. ಅದಕ್ಕೂ ಮುನ್ನ RRR ಮತ್ತು ಆಚಾರ್ಯ ಚಿತ್ರಗಳ ಮೂಲಕ ನಟ ರಾಮ್‌ ಚರಣ್ ತೇಜ ಬೆಳ್ಳಿ ಪರದಗೆ ಎಂಟ್ರಿ ಕೊಡಲಿದ್ದಾರೆ.

More from Filmibeat

English summary
Ram Charam Playing Dual Role In His Upcomming Movie RC15,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X