Ram Charan: ಗೇಮ್ ಚೇಂಜರ್ ಬಳಿಕ ಮತ್ತೊಂದು ಚಿತ್ರಕ್ಕೆ ಕೈ ಜೋಡಿಸ್ತಾರಾ ರಾಮ್‌ಚರಣ್ - ಶಂಕರ್?
ತೆಲುಗು ಮೆಗಾಸ್ಟಾರ್ ಚಿರಂಜೀವಿ ಪುತ್ರ ಮೆಗಾಪವರ್‌ಸ್ಟಾರ್ ರಾಮ್ ಚರಣ್ ಇನ್ನೂ ಸಹ ಪರ್ಫೆಕ್ಟ್ ಯಶಸ್ಸಿನ ಹಾದಿಗೆ ಮರಳಲಾಗದೇ ಹಿನ್ನಡೆ ಅನುಭವಿಸಿದ್ದಾರೆ ಎಂದರೆ ತಪ್ಪಾಗಲಾರದು. ಹೌದು, ರಾಮ್‌ಚರಣ್ ಇತ್ತೀಚೆಗೆ ಕೆಲ ದೊಡ್ಡ ಹಿಟ್ ಚಿತ್ರಗಳನ್ನು ನೀಡಿದ್ದಾರಾದರೂ ಅವುಗಳ ಬಳಿಕ ಬಂದಿರುವ ಸಿನಿಮಾಗಳು ಮಕಾಡೆ ಮಲಗಿವೆ. 2018ರಲ್ಲಿ ರಂಗಸ್ಥಲಂ ರೀತಿಯ ಸೂಪರ್ ಬ್ಲಾಕ್‌ಬಸ್ಟರ್ ಚಿತ್ರದಲ್ಲಿ ನಾಯಕನಾಗಿ ನಟಿಸಿ ಗೆದ್ದು ಬೀಗಿದ್ದ ರಾಮ್ ಚರಣ್ 2019ರಲ್ಲಿ ಬಿಡುಗಡೆಯಾದ ವಿನಯ ವಿಧ್ಯೇಯ ರಾಮ ಚಿತ್ರದ ಮೂಲಕ ಹೀನಾಯ ಸೋಲನ್ನು ಕಂಡರು.
ಈ ಸೋಲಿನ ಬಳಿಕ ಮತ್ತೆ ರಾಮ್‌ಚರಣ್ ದೊಡ್ಡ ಮಟ್ಟದಲ್ಲಿ ಕಮ್‌ಬ್ಯಾಕ್ ಮಾಡಿದರು. ಹೌದು, ವಿನಯ ವಿಧ್ಯೇಯ ರಾಮ ಸೋಲಿನ ಬಳಿಕ ಮೂರು ವರ್ಷಗಳ ಗ್ಯಾಪ್ ಕೊಟ್ಟಿದ್ದ ರಾಮ್‌ಚರಣ್ 2022ರಲ್ಲಿ ತೆರೆಗೆ ಬಂದ ಬೃಹತ್ ಸಿನಿಮಾ ಆರ್‌ಆರ್‌ಆರ್ ಮೂಲಕ ದೊಡ್ಡ ಕಮ್‌ಬ್ಯಾಕ್ ಮಾಡಿದರು. ಆರ್‌ಆರ್‌ಆರ್ ತೆಲುಗು ರಾಜ್ಯಗಳಲ್ಲಿ ಹೊಸ ಇಂಡಸ್ಟ್ರಿ ಹಿಟ್ ಸಿನಿಮಾವಾಗಿ ಹೊರಹೊಮ್ಮಿತು.

ಆದರೆ ಈ ಸಿನಿಮಾದ ಬಳಿಕ ಅದೇ ವರ್ಷ ತೆರೆಗೆ ಬಂದ ಆಚಾರ್ಯ ಸಿನಿಮಾ ಅತಿದೊಡ್ಡ ನಷ್ಟವನ್ನು ಉಂಟು ಮಾಡುವ ಮಟ್ಟಕ್ಕೆ ಸೋಲನ್ನು ಅನುಭವಿಸಿತು. ಹೀಗೆ ದೊಡ್ಡ ಸೋಲಿನ ಕಹಿಯನ್ನು ಅನುಭವಿಸಿರುವ ರಾಮ್‌ಚರಣ್ ಸದ್ಯ ತಮಿಳು ನಿರ್ದೇಶಕ ಶಂಕರ್ ಜತೆ ಕೈ ಜೋಡಿಸಿದ್ದಾರೆ. ಹೌದು, ತಮಿಳು ಚಿತ್ರರಂಗದ ಸಿನಿ ರಸಿಕರ ನೆನಪಿನಲ್ಲಿ ಸದಾ ಉಳಿಯುವಂತಹ ಹಲವು ಚಿತ್ರಗಳನ್ನು ನೀಡಿರುವ ಸ್ಟಾರ್ ನಿರ್ದೇಶಕ ಎಸ್ ಶಂಕರ್ 'ಗೇಮ್ ಚೇಂಜರ್' ಎಂಬ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
ಇದು ಶಂಕರ್ ಜೀವನದ ಮೊದಲ ತೆಲುಗು ಸಿನಿಮಾವಾಗಿದ್ದು, ಚಿತ್ರದಲ್ಲಿ ನಾಯಕಿಯಾಗಿ ಕಿಯಾರಾ ಅಡ್ವಾಣಿ ನಟಿಸುತ್ತಿದ್ದಾರೆ. ಚಿತ್ರದ ಚಿತ್ರೀಕರಣ ಇನ್ನೇನು ಮುಕ್ತಾಯದ ಹಂತಕ್ಕೆ ಬಂದು ತಲುಪಿದೆ. ಹೀಗೆ ರಾಮ್ ಚರಣ್ ಹಾಗೂ ಶಂಕರ್ ಕಾಂಬಿನೇಶನ್‌ನ ಚೊಚ್ಚಲ ಚಿತ್ರದ ಚಿತ್ರೀಕರಣ ನಡೆಯುತ್ತಿರುವಾಗಲೇ ಹೊಸ ಸುದ್ದಿಯೊಂದು ಟಾಲಿವುಡ್ ಅಂಗಳದಿಂದ ಕೇಳಿಬಂದಿದ್ದು, ಇದೇ ಕಾಂಬಿನೇಶನ್‌ನಲ್ಲಿ ಮತ್ತೊಂದು ಚಿತ್ರದ ಮಾತುಕತೆ ನಡೆದಿದೆ ಹಾಗೂ ಈ ಚಿತ್ರಕ್ಕೆ ರಾಮ್‌ಚರಣ್ ಯೆಸ್ ಕೂಡ ಹೇಳಿದ್ದಾರೆ ಎನ್ನಲಾಗುತ್ತಿದೆ.
ಹೌದು, ರಾಮ್ ಚರಣ್ ಗೇಮ್ ಚೇಂಜರ್ ಬಳಿಕ ಯಾವುದೇ ಚಿತ್ರವನ್ನು ಘೋಷಿಸದೇ ಸಹ ಇದ್ದು, ಬಹುಶಃ ಈ ಸುದ್ದಿಯಂತೆಯೇ ಶಂಕರ್ ಹಾಗೂ ರಾಮ್ ಚರಣ್ ಕಾಂಬಿನೇಶನ್‌ನಲ್ಲಿ ಎರಡನೇ ಚಿತ್ರ ಗೇಮ್ ಚೇಂಜರ್ ಬಳಿಕವೇ ಸೆಟ್ಟೇರಬಹುದಾ ಎಂಬ ಕುತೂಹಲ ಮೂಡಿದೆ. ಮೂಲಗಳ ಪ್ರಕಾರ ಈ ತಿಂಗಳಲ್ಲಿಯೇ ಈ ಕುರಿತು ಅಧಿಕೃತ ಪ್ರಕಟಣೆ ಸಹ ಹೊರಬೀಳಲಿದೆ ಎಂಬ ಸುದ್ದಿ ಇದೆ.


Click it and Unblock the Notifications










