For Quick Alerts
  ALLOW NOTIFICATIONS  
  For Daily Alerts

  ಜ್ಯೂ. ಎನ್‌ಟಿಆರ್- ರಾಮ್‌ಚರಣ್ ಫ್ಯಾನ್ಸ್‌ ಮಧ್ಯೆ ಬೆಂಕಿ ಹಚ್ಚಿದ ಆಸ್ಕರ್ ಅವಾರ್ಡ್!

  |

  ಪ್ರತಿಷ್ಠಿತ ವೆರೈಟಿ ಡಾಟ್ ಕಾಮ್ ಮ್ಯಾಗಜೀನ್ ಆಸ್ಕರ್ ಅವಾರ್ಡ್ಸ್‌ಗೆ ನಾಮಿನೇಷನ್ ಆಗಲಿರುವ ಸಿನಿಮಾಗಳು ಹಾಗೂ ಕಲಾವಿದರ ಸಂಭಾವ್ಯ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಮುಂದಿನ ವರ್ಷ ಮಾರ್ಚ್ ತಿಂಗಳಿನಲ್ಲಿ ನಡೆಯಲಿರುವ ವಿಶ್ವದ ಪ್ರತಿಷ್ಟಿತ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಈ ಬಾರಿ ಭಾರತದಿಂದ 'RRR' ಚಿತ್ರಗಳಲ್ಲಿ ನಾಮಿನೇಟ್ ಆಗುವ ಸಾಧ್ಯತೆಯಿದೆ. ಇದೇ ವಿಚಾರ ಈಗ ತಾರಕ್- ಚರಣ್ ಫ್ಯಾನ್ಸ್ ನಡುವೆ ಕಚ್ಚಾಟಕ್ಕೆ ಕಾರಣವಾಗಿದೆ.

  ಎಸ್. ಎಸ್ ರಾಜಮೌಳಿ ನಿರ್ದೇಶನದ ಬ್ಲಾಕ್ ಬಸ್ಟರ್ ಸಿನಿಮಾ 'RRR'. ಇಬ್ಬರು ಸ್ವಾತಂತ್ರ್ಯ ಹೋರಾಟಗಾರರ ಪಾತ್ರಗಳನ್ನ ಆಧರಿಸಿ ಒಂದು ಕಾಲ್ಪನಿಕ ಕಥೆಯನ್ನು ಕಟ್ಟಿಕೊಟ್ಟು ಮೌಳಿ ಅಂಡ್ ಟೀಂ ಸಕ್ಸಸ್ ಕಂಡಿತ್ತು. ಸಿನಿಮಾ 1000 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಬಾಕ್ಸಾಫೀಸ್‌ ಶೇಕ್ ಮಾಡಿತ್ತು. ಇತ್ತೀಚಿಗೆ ಓಟಿಟಿ ಮೂಲಕ ವಿಶ್ವದ ಮೂಲೆಮೂಲೆಗೆ ಸಿನಿಮಾ ತಲುಪಿತ್ತು. ಹಾಲಿವುಡ್ ಪ್ರೇಕ್ಷಕರು ಅಷ್ಟೇ ಅಲ್ಲ, ಅಲ್ಲಿ ಫಿಲ್ಮ್ ಮೇಕರ್ಸ್‌ ಕೂಡ ಸಿನಿಮಾ ನೋಡಿ ನೋಡಿ ಹುಬ್ಬೇರಿಸಿದ್ದರು.

  ಚರಣ್‌- NTR ಇಬ್ಬರ ಪಾತ್ರಕ್ಕೂ ನ್ಯಾಯ ಒದಗಿಸಿದ್ದೀನಿ: ಮುಂದಿನ ಚಿತ್ರದಲ್ಲಿ ಪ್ರಪಂಚವೆಲ್ಲಾ ಸುತ್ತುವ ಕಥೆ!ಚರಣ್‌- NTR ಇಬ್ಬರ ಪಾತ್ರಕ್ಕೂ ನ್ಯಾಯ ಒದಗಿಸಿದ್ದೀನಿ: ಮುಂದಿನ ಚಿತ್ರದಲ್ಲಿ ಪ್ರಪಂಚವೆಲ್ಲಾ ಸುತ್ತುವ ಕಥೆ!

  ಹಲವು ವಿಭಾಗಗಳಲ್ಲಿ 'RRR' ಸಿನಿಮಾ ಈ ಬಾರಿ ಆಸ್ಕರ್‌ಗೆ ನಾಮನಿರ್ದೇಶನಗೊಳ್ಳುವ ಸುಳಿವು ಸಿಕ್ತಿದೆ. ಈ ಪ್ರತಿಷ್ಟಿತ ಪ್ರಶಸ್ತಿಗೆ ದೊಡ್ಡ ಮಟ್ಟದಲ್ಲಿ ಚಿತ್ರಗಳು ವಿವಿಧ ಕೆಟಗರಿಯಲ್ಲಿ ಪ್ರವೇಶ ಪಡೆದುಕೊಳ್ಳಲಿದ್ದು, ಈ ಚಿತ್ರಗಳಿಗೆ ಆಸ್ಕರ್ ಸದಸ್ಯರ ವೋಟಿಂಗ್ ನಡೆಸಿ ಅತಿಹೆಚ್ಚು ವೋಟ್ ಪಡೆದ ಚಿತ್ರ ಹಾಗೂ ಕಲಾವಿದರ ಕಿರುಪಟ್ಟಿಯನ್ನು ತಯಾರು ಮಾಡಲಾಗುತ್ತದೆ. ಈ ಪ್ರಕ್ರಿಯೆಯ ಮೂಲಕ ನಾಮಿನೇಷನ್ ಶಾರ್ಟ್ ಲಿಸ್ಟ್‌ ಪ್ರಕಟಗೊಳ್ಳಲಿದೆ.

   ಎನ್‌ಟಿಆರ್‌ಗೆ ಆಸ್ಕರ್?

  ಎನ್‌ಟಿಆರ್‌ಗೆ ಆಸ್ಕರ್?

  ಇತ್ತೀಚೆಗಷ್ಟೆ ಯಾವೆಲ್ಲಾ ವಿಭಾಗಗಳಲ್ಲಿ ಯಾವೆಲ್ಲಾ ಸಿನಿಮಾಗಳು, ಕಲಾವಿದರು ಆಸ್ಕರ್‌ಗೆ ನಾಮಿನೇಟ್ ಆಗಬಹುದು ಎನ್ನುವ ಲಿಸ್ಟ್‌ ಅನ್ನು ವೆರೈಟಿ ಮ್ಯಾಗಜೀನ್ ಬಿಡುಗಡೆ ಮಾಡಿತ್ತು. ಲಿಸ್ಟ್‌ನಲ್ಲಿ ಅತ್ಯುತ್ತಮ ನಟ ಪ್ರಶಸ್ತಿಗೆ ಎನ್‌ಟಿಆರ್‌ ನಾಮಿನೇಟ್ ಆಗಬಹುದು ಎಂದು ಹೆಸರು ಸೇರಿಸಿದ್ದರು. ಈ ಸುದ್ದಿ ಕೇಳಿ ತಾರಕ್ ಅಭಿಮಾನಿಗಳು ಖುಷಿಯಾಗಿದ್ದರು. ರಾಮ್‌ಚರಣ್‌ಗಿಂತ ನಮ್ಮ ನೆಚ್ಚಿನ ನಟ ಎನ್‌ಟಿಆರ್‌ ಗ್ರೇಟ್ ಆಕ್ಟರ್ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದರು.

  ನಾಲ್ಕು ಆಸ್ಕರ್ ಬರುವ ಸಾಧ್ಯತೆ; ಯಾರು ಯಾರಿಗೆ ಎಂದು ಭವಿಷ್ಯ ನುಡಿದ ವೆರೈಟಿ ಡಾಟ್ ಕಾಮ್!ನಾಲ್ಕು ಆಸ್ಕರ್ ಬರುವ ಸಾಧ್ಯತೆ; ಯಾರು ಯಾರಿಗೆ ಎಂದು ಭವಿಷ್ಯ ನುಡಿದ ವೆರೈಟಿ ಡಾಟ್ ಕಾಮ್!

   ಆಸ್ಕರ್‌ ರೇಸ್‌ನಲ್ಲಿ ರಾಮ್‌ಚರಣ್?

  ಆಸ್ಕರ್‌ ರೇಸ್‌ನಲ್ಲಿ ರಾಮ್‌ಚರಣ್?

  ವೆರೈಟಿ ವೆಬ್‌ಸೈಟ್ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಈಗ ರಾಮ್‌ಚರಣ್ ಹೆಸರು ಕೂಡ ಸೇರಿಕೊಂಡಿದೆ. ಇದನ್ನು ನೋಡಿ ಅವರ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಸಿನಿಮಾ ರಿಲೀಸ್ ಆದ ದಿನದಿಂದಲೂ ಚಿತ್ರದಲ್ಲಿ ಯಾರ ಪಾತ್ರಕ್ಕೆ ಹೆಚ್ಚು ಮಹತ್ವ ಸಿಕ್ಕಿದೆ? ಯಾರು ತುಂಬಾ ಚೆನ್ನಾಗಿ ನಟಿಸಿದ್ದಾರೆ ? ಎನ್ನುವ ವಿಚಾರಕ್ಕೆ ಇಬ್ಬರ ಅಭಿಮಾನಿಗಳ ನಡುವೆ ಗಲಾಟೆ ನಡೀತಾನೆ ಇತ್ತು. ರಾಮ್‌ಚರಣ್‌ನ ನಾಯಕನಂತೆ ಬಿಂಬಿಸಿ, ತಾರಕ್‌ನ ಪೋಷಕ ಕಲಾವಿದನಂತೆ ತೋರಿಸಲಾಗಿದೆ ಎಂದು ಅವರ ಅಭಿಮಾನಿಗಳು ನಿರ್ದೇಶಕ ರಾಜಮೌಳಿ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಮತ್ತೆ ಇದೇ ಚರ್ಚೆ ಶುರುವಾಗಿದೆ. ಇದೀಗ ಯಾರಿಗೆ ಆಸ್ಕರ್ ಸಿಗುತ್ತೆ ಅನ್ನುವ ವಿಚಾರದಲ್ಲೂ ಇಬ್ಬರು ಅಭಿಮಾನಿಗಳ ನಡುವೆ ಭಾರೀ ಗಲಾಟೆ, ಗದ್ದಲ ನಡೀತಿದೆ.

   ಇಬ್ಬರಿಗೂ ಸರಿಸಮನಾಗಿ ನ್ಯಾಯ ಒದಗಿಸಿದ್ದೀನಿ

  ಇಬ್ಬರಿಗೂ ಸರಿಸಮನಾಗಿ ನ್ಯಾಯ ಒದಗಿಸಿದ್ದೀನಿ

  ಚಿತ್ರದಲ್ಲಿ ತಾರಕ್‌ಗೆ ಹೆಚ್ಚು ಸ್ಕೋಪ್ ಸಿಕ್ಕಿಲ್ಲ ಎನ್ನುವ ಕಾರಣಕ್ಕೆ ಅವರ ಅಭಿಮಾನಿಗಳು ಜಕ್ಕಣ್ಣನನ್ನು ಟ್ರೋಲ್ ಮಾಡಿದ್ದರು. ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಇದೇ ಪ್ರಶ್ನೆಯನ್ನು ರಾಜಮೌಳಿ ಮುಂದಿಡಲಾಗಿತ್ತು. ಇದಕ್ಕೆ ಉತ್ತರಿಸಿದ ಮೌಳಿ "ಯಾರೋ ಒಬ್ಬರಿಗೆ ಹೆಚ್ಚು, ಮತ್ತೊಬ್ಬರಿಗೆ ಕಮ್ಮಿ ನ್ಯಾಯ ಒದಗಿಸಿದ್ದರೆ ಸಿನಿಮಾ ಅಷ್ಟು ದೊಡ್ಡಮಟ್ಟದಲ್ಲಿ ಹಿಟ್ ಆಗುತ್ತಿರಲಿಲ್ಲ. ನಾನು ಇಬ್ಬರಿಗೂ ಸರಿಸಮವಾಗಿ ನ್ಯಾಯ ಒದಗಿಸಿದ್ದೇನೆ" ಎಂದಿದ್ದರು.

   ವಿದೇಶಿಗರ ಮೆಚ್ಚುಗೆಗೆ ಬೆರಗಾದ ಮೌಳಿ

  ವಿದೇಶಿಗರ ಮೆಚ್ಚುಗೆಗೆ ಬೆರಗಾದ ಮೌಳಿ

  ಇನ್ನು ಆಸ್ಕರ್ ಪ್ರಶಸ್ತಿಯ ಅತ್ಯುತ್ತಮ ನಿರ್ದೇಶಕ ವಿಭಾಗದಲ್ಲಿ ರಾಜಮೌಳಿ ನಾಮ ನಿರ್ದೇಶನಗೊಳ್ಳುವ ಸಾಧ್ಯತೆ ಇದೆ ಎಂದು ವೆರೈಟಿ ವೆಬ್‌ಸೈಟ್ ತಿಳಿಸಿದೆ. ಟೊರೆಂಟೋ ಫಿಲ್ಮ್ ಫೆಸ್ಟಿವಲ್‌ನಲ್ಲಿ ಮಾತನಾಡಿದ್ದ ಮೌಳಿ 'RRR' ಚಿತ್ರಕ್ಕೆ ವಿಶ್ವದಾದ್ಯಂತ ಸಿಕ್ಕ ರೆಸ್ಪಾನ್ಸ್‌ಗೆ ಫಿದಾ ಆಗಿದ್ದಾಗಿ ಹೇಳಿದ್ದರು. ವಿದೇಶಿಗಳು ಓಟಿಟಿಯಲ್ಲಿ ಸಿನಿಮಾ ಚೆನ್ನಾಗಿದೆ ಎಂದರು. ಮೊದಲಿಗೆ ಕೆಲವರು ಹೇಳಿದಾಗ ಸರಿ ಯಾರೋ ಕೆಲವರು ಅಂದುಕೊಂಡೆ. ನೋಡ ನೋಡುತ್ತಲೇ ಈ ಸಂಖ್ಯೆ 100, 100 ಹೀಗೆ ಏರುತ್ತಾ ಹೋಯಿತು. ಹಾಲಿವುಡ್ ಫಿಲ್ಮ್ ಮೇಕರ್ಸ್ ಕೂಡ ಮೆಚ್ಚಿಕೊಂಡಿದ್ದು ನೋಡಿ ಅಚ್ಚರಿಯಾಯ್ತು ಎಂದು ಹೇಳಿದ್ದರು.

  English summary
  Ram Charan Also Oscars 2023 Best Actor Contender This is great news for Charan fans. Know More.
  Saturday, September 17, 2022, 12:17
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X