Ram Charan vs Jr NTR Fans Fight : ಥಿಯೇಟರ್ ಒಳಗೆ ಜೂ.ಎನ್‌ಟಿಆರ್, ರಾಮ್ ಚರಣ್ ಫ್ಯಾನ್ಸ್ ಕಿತ್ತಾಟ!
ಜೂ.ಎನ್‌ಟಿಆರ್ ಮತ್ತು ರಾಮ್ ಚರಣ್ ಇವರಿಬ್ಬರೂ ಉತ್ತಮ ಸ್ನೇಹಿತರು. ಮೊದಲಿನಿಂದಲೂ ಸ್ನೇಹಿತರಾಗಿ ಗುರುತಿಸಿಕೊಂಡಿದ್ದಾರೆ. ಆದರೆ ಜೂ.ಎನ್‌ಟಿಆರ್, ರಾಮ್ ಚರಣ್ ಸ್ಟಾರ್ ಅಭಿಮಾನಿಗಳು ಮಾತ್ರ ಕಿತ್ತಾಡುವುದನ್ನು ಇನ್ನೂ ನಿಲ್ಲಿಸಿಲ್ಲ.
ಇದಕ್ಕೆ ಕಾರಣ ಇದೆ. ಜೂ.ಎನ್‌ಟಿಆರ್ ಮತ್ತು ರಾಮ್ ಚರಣ್ ಟಾಲಿವುಡ್‌ನ ಸೂಪರ್ ಸ್ಟಾರ್‌ಗಳು. ಇವರಿಬ್ಬರೂ ನಟಿಸುವ ಪ್ರತಿ ಸಿನಿಮಾವೂ ಬಾಕ್ಸಾಫೀಸ್‌ನಲ್ಲಿ ಕಮಾಲ್ ಮಾಡುತ್ತೆ. ಅದಕ್ಕೂ ಹೆಚ್ಚಾಗಿ ಇಬ್ಬರೂ ನಟರು ಸ್ಟಾರ್ ನಟರ ಕುಡಿಗಳು. ಹೀಗಾಗಿ ಅವರದ್ದೇ ಅಭಿಮಾನಿ ಬಳಗವಿದೆ.
ಜೂ.ಎನ್‌ಟಿಆರ್ ಮತ್ತು ರಾಮ್ ಚರಣ್ ಎಷ್ಟೇ ಸ್ನೇಹಿತರಾಗಿದ್ರೂ ಕೂಡ ಅಭಿಮಾನಿಗಳು ಮಾತ್ರ ನಮ್ಮ ನಟನೇ ನಮಗೆ ಗ್ರೇಟ್ ಅನ್ನುತ್ತಾರೆ. ಇದೀಗ ಆರ್‌ಆರ್‌ಆರ್ ಸಿನಿಮಾ ಕೂಡ ರಿಲೀಸ್ ಆಗಿದ್ದು, ಸಿನಿಮಾ ನೋಡುವ ಸಂದರ್ಭದಲ್ಲಿ ಜೂ.ಎನ್‌ಟಿಆರ್ ಮತ್ತು ರಾಮ್ ಚರಣ್ ಫ್ಯಾನ್ಸ್ ಕಿತ್ತಾಡಿಕೊಂಡಿದ್ದಾರೆ.

ರಾಮ್ ಚರಣ್-ಜೂ.ಎನ್‌ಟಿಆರ್ ಬೆಸ್ಟ್ ಫ್ರೆಂಡ್ಸ್
ಜೂ.ಎನ್‌ಟಿಆರ್ ಮತ್ತು ರಾಮ್ ಚರಣ್ ಮೊದಲಿನಿಂದಲೂ ಉತ್ತಮ ಸ್ನೇಹಿತರೇ. ಆದರೂ ಆರ್‌ಆರ್‌ಆರ್ ಸಿನಿಮಾ ಬಳಿಕ ಮತ್ತಷ್ಟು ಹತ್ತಿರವಾಗಿದ್ದಾರೆ. ಈ ಸಿನಿಮಾ ಆರಂಭವಾದಗಿನಿಂದಲೂ ಒಟ್ಟಿಗೆ ಎಲ್ಲಾ ಕಡೆ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ನಟರು ಹೇಗೆ ಇರಲಿ ನಮ್ಮ ನೆಚ್ಚಿನ ನಟನೇ ಟಾಪ್ ಅಲ್ಲಿ ಇರಬೇಕು ಅನ್ನೋದು ಅಭಿಮಾನಿಗಳ ಒತ್ತಾಸೆ. ಹೀಗಾಗಿ ಜೂ.ಎನ್‌ಟಿಆರ್ ಮತ್ತು ರಾಮ್ ಚರಣ್ ಫ್ಯಾನ್ಸ್ ವಾರ್ ನಡೆಯುತ್ತಲೇ ಇರುತ್ತೆ.

ಜೂ.ಎನ್‌ಟಿಆರ್ ಮತ್ತು ರಾಮ್ ಚರಣ್ ಫ್ಯಾನ್ಸ್ ಕಿತ್ತಾಟ
ಈ ಫ್ಯಾನ್ಸ್ ವಾರ್ ಸಿನಿಮಾ ಇಂಡಸ್ಟ್ರಿಗೆ ಹೊಸದಲ್ಲ. 'ಆರ್‌ಆರ್‌ಆರ್' ಸಿನಿಮಾ ಆರಂಭ ಆದಾಗಿನಿಂದಲೂ ಟ್ವಿಟ್ಟರ್‌ನಲ್ಲಿ ಜೂ.ಎನ್‌ಟಿಆರ್ ಮತ್ತು ರಾಮ್ ಚರಣ್ ಫ್ಯಾನ್ಸ್ ಕಿತ್ತಾಡುತ್ತಲೇ ಇದ್ದಾರೆ.ಇವತ್ತು ಕೂಡ ಬೆಂಗಳೂರಿನ ಅಂಜನ್ ಚಿತ್ರಮಂದಿರಲ್ಲಿ ಚಿತ್ರ ನೋಡಲು ತೆರಳಿದ್ದ ಜೂ.ಎನ್‌ಟಿಆರ್ ಮತ್ತು ರಾಮ್ ಚರಣ್ ಫ್ಯಾನ್ಸ್ ಕಿಗ್ಗಾ-ಮುಗ್ಗಾ ಹೊಡೆದಾಡಿಕೊಂಡಿದ್ದಾರೆ. ಸಿನಿಮಾ ನೋಡ ನೋಡುತ್ತಲ್ಲೆ ಇಬ್ಬರ ಅಭಿಮಾನಿಗಳು ಕಿತ್ತಾಡಿಕೊಂಡಿದ್ದು ಕಂಡುಬಂದಿದೆ.

ಸಮಾಧಾನ ಮಾಡಿದ ವೀಕ್ಷಕರು
ಸಿನಿಮಾ ನೋಡುವ ಸಂದರ್ಭ ಇಬ್ಬರ ಅಭಿಮಾನಿಗಳು ಕೂಡ ತಮ್ಮ ನೆಚ್ಚಿನ ನಟನಿಗೆ ಜೈಕಾರ ಹಾಕಲು ಶುರುಮಾಡಿದ್ದಾರೆ. ಇದು ಮತ್ತೊಬ್ಬ ನಟನ ಅಭಿಮಾನಿಗಳನ್ನು ಕೆರಳಿಸಿದೆ. ಆಗ ಅವರು ಮತ್ತಷ್ಟು ಜೋರಾಗಿ ಜೈಕಾರ ಹಾಕಲು ಆರಂಭಿಸಿದ್ದಾರೆ. ಹೀಗೆ ಆರಂಭವಾದ ಜೈಕಾರ ಆರ್ಭಟದಲ್ಲಿ ತಾರಕ್ಕೇರಿದೆ. ಬಳಿಕ ಇಬ್ಬರೂ ನಟರ ಅಭಿಮಾನಿಗಳು ಹೊಡೆದಾಟಕ್ಕಿಳಿದಿದ್ದರು. ಅಲ್ಲಿ ನೆರೆದಿದ್ದ ಬೇರೆ ವೀಕ್ಷಕರು ಫ್ಯಾನ್ಸ್‌ಗಳನ್ನು ಸಮಾಧಾನ ಮಾಡಿ ಸುಮ್ಮನಾಗಿಸಿದ್ದಾರೆ. ಹೀಗೆ ಸಿನಿಮಾ ನೋಡಲು ಬಂದಾಗಲು ಅಭಿಮಾನಿಗಳು ಕಿತ್ತಾಡಿದ್ದು ಅತಿರೇಕದ ನಡವಳಿಕೆ ಎನಿಸಿದೆ.

ಯಾವಾಗ ಮುಕ್ತಾಯ ಆಗುತ್ತೆ ಗೊತ್ತಿಲ್ಲಾ
'ಆರ್‌ಆರ್‌ಆರ್' ಸಿನಿಮಾ ಆರಂಭವಾದಾಗಲೇ ಜೂ.ಎನ್‌ಟಿಆರ್ ಮತ್ತು ರಾಮ್ ಚರಣ್ ಅಭಿಮಾನಿಗಳ ಕಿತ್ತಾಟ ಆರಂಭವಾಗಿತ್ತು. ತಮ್ಮ ನಟನಿಂದಲೇ 'ಆರ್‌ಆರ್‌ಆರ್' ಸಿನಿಮಾಗೆ ಇಷ್ಟು ಬೇಡಿಕೆ ಬಂದಿದೆ ಅಂತ ಹೇಳಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಫ್ಯಾನ್ಸ್ ಕಿತ್ತಾಡುತ್ತಿದ್ದರು. ಅಷ್ಟೇ ಅಲ್ಲದೆ 'ಆರ್‌ಆರ್‌ಆರ್' ಸಿನಿಮಾದಲ್ಲಿ ಜೂ.ಎನ್‌ಟಿಆರ್ ಮತ್ತು ರಾಮ್ ಚರಣ್ ಇಬ್ಬರಲ್ಲಿ ಯಾರ ಪಾತ್ರ ಮೇಲು ಎಂಬ ರೀತಿಯಲ್ಲೂ ಒಬ್ಬರಿಗೊಬ್ಬರು ಟ್ವೀಟ್ ಮಾಡಿ ಸುಖಾ ಸುಮ್ಮನೆ ಗದ್ದಲ ಎಬ್ಬಿಸಿದ್ದರು.


Click it and Unblock the Notifications











