ಗರ್ಭಿಣಿ ಉಪಾಸನಾಗೆ ಅಲ್ಲು ಅರ್ಜುನ್ ಸರ್‌ಪ್ರೈಸ್: ಫೋಟೊ ಫುಲ್ ವೈರಲ್

ಟಾಲಿವುಡ್ ಮೆಗಾ ಪವರ್ ಸ್ಟಾರ್ ರಾಮ್‌ಚರಣ್ ಪತ್ನಿ ಉಪಾಸನಾ ಗರ್ಭಿಣಿ ಆಗಿದ್ದು ಚಿರು ಫ್ಯಾಮಿಲಿ ಹೊಸ ಅತಿಥಿಯ ಸ್ವಾಗತಕ್ಕೆ ಕಾಯುತ್ತಿದೆ. ಜೀವನದ ಪ್ರಮುಖ ಘಟ್ಟದಲ್ಲಿ ರಾಮ್ ಚರಣ್ ಪತ್ನಿಯಲ್ಲಿ ಸಂತೋಷವಾಗಿ ನೋಡಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಪಾರ್ಟಿಗಳ ಮೇಲೆ ಪಾರ್ಟಿಗಳು ನಡೆಯುತ್ತಲೇ ಇದೆ. ಇತ್ತೀಚೆಗೆ ದುಬೈನಲ್ಲಿ ಅದ್ದೂರಿಯಾಗಿ ಉಪಾಸನಾ ಕೋನಿದೇಲ ಸೀಮಂತ ಕೂಡ ನಡೆದಿತ್ತು.

3 ವಾರಗಳ ಹಿಂದೆಯಷ್ಟೆ ಚಿರಂಜೀವಿ ಮನೆಯಲ್ಲಿ ರಾಮ್‌ಚರಣ್ ಬರ್ತ್‌ಡೇ ಪಾರ್ಟಿ ಅದ್ದೂರಿಯಾಗಿ ನಡೆದಿತ್ತು. ಎಸ್‌. ಎಸ್ ರಾಜಮೌಳಿ ಸೇರಿದಂತೆ ಚಿತ್ರರಂಗದ ಸಾಕಷ್ಟು ಗಣ್ಯರು ಈ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಅದರ ಬೆನ್ನಲ್ಲೇ ಚರಣ್ ದಂಪತಿ ವಿದೇಶ ಪ್ರವಾಸಕ್ಕೆ ಹೋಗಿ ಎಂಜಾಯ್ ಮಾಡಿ ಬಂದಿದ್ದರು. ದುಬೈನಲ್ಲಿ ಉಪಾಸನಾ ಬೇಬಿ ಶವರ್ ಕಾರ್ಯಕ್ರಮ ಕೂಡ ನಡೆದಿತ್ತು. ಇದರಲ್ಲಿ ಫ್ಯಾಮಿಲಿ ಸದಸ್ಯರು ಹಾಗೂ ಸ್ನೇಹಿತರು ಭಾಗಿ ಆಗಿದ್ದರು. ಇದೀಗ 'ಉಪ್ಸಿ ಆರ್‌ಸಿ ಲೈಫ್' ಹೆಸರಿನಲ್ಲಿ ಮತ್ತೊಂದು ಪಾರ್ಟಿ ಮಾಡಿದ್ದಾರೆ.

Ram Charan and Upasana hosts a party for friends and cosines: Allu Arjun also attended the party

ರಾಮ್‌ಚರಣ್ ನಿವಾಸದಲ್ಲಿ ನಡೆದ ಪಾರ್ಟಿಯಲ್ಲಿ ಕುಟುಂಬ ಸದಸ್ಯರು, ಚರಣ್ ಉಪಾಸನಾ ಕಜೀನ್ಸ್ ಹಾಗೂ ಆತ್ಮೀಯ ಸ್ನೇಹಿತರು ಭಾಗಿ ಆಗಿದ್ದರು. ಅಚ್ಚರಿ ಎಂದರೆ ಅಲ್ಲು ಅರ್ಜುನ್ ಕೂಡ ಭಾಗಿ ಆಗಿ ಸರ್‌ಪ್ರೈಸ್ ನೀಡಿದ್ದಾರೆ. ಅಷ್ಟೇ ಅಲ್ಲ ಉಪಾಸನಾ ಜೊತೆಗಿನ ಫೋಟೊ ಶೇರ್ ಮಾಡಿ "ಸೋ ಹ್ಯಾಪಿ ಫಾರ್ ಮೈ ಸ್ವೀಟೆಸ್ಟ್ ಉಪ್ಸಿ" ಎಂದು ಬರೆದುಕೊಂಡಿದ್ದಾರೆ. ಇದನ್ನು ನೋಡಿ ಮೆಗಾ ಫ್ಯಾನ್ಸ್ ಥ್ರಿಲ್ಲಾಗಿದ್ಧಾರೆ. ಕೆಲ ದಿನಗಳಿಂದ ಚರಣ್- ಅರ್ಜುನ್ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವ ಗುಸುಗುಸು ಶುರುವಾಗಿತ್ತು. ಈ ಪೋಸ್ಟ್‌ನಿಂದ ಅದಕ್ಕೆಲ್ಲಾ ಬ್ರೇಕ್ ಬಿದ್ದಂತಾಗಿದೆ.

ಕೆಲ ದಿನಗಳಿಂದ ಮೆಗಾ ಫ್ಯಾಮಿಲಿ ಹಾಗೂ ಅಲ್ಲು ಫ್ಯಾಮಿಲಿ ನಡುವಿನ ಭಿನ್ನಾಭಿಪ್ರಾಯಗಳಿವೆ ಎನ್ನುವ ಮಾತುಗಳು ಕೇಳಿಬರ್ತಿದೆ. ಅದರಲ್ಲೂ ಮುಖ್ಯವಾಗಿ ಚಿರು ಫ್ಯಾಮಿಲಿಯಿಂದ ಅಲ್ಲು ಅರ್ಜುನ್ ಅಂತಹ ಕಾಯ್ದುಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿತ್ತು. ಇತ್ತೀಚೆಗೆ ರಾಮ್‌ಚರಣ್ ಹುಟ್ಟುಹಬ್ಬಕ್ಕೆ ಬನ್ನಿ ಕಾಟಚಾರಕ್ಕೆ ವಿಶ್ ಮಾಡಿದ್ದರು, ಆದರೆ ಜ್ಯೂ.ಎನ್‌ಟಿಆರ್‌ ಬರ್ತ್‌ಡೇಗೆ ಬಾವ ಅಂತೆಲ್ಲಾ ಸಂಭೋದಿಸಿದ್ದಾರೆ ಏನಿದರ ಅರ್ಥ? ಇಬ್ಬರ ನಡುವೆ ಎಲ್ಲವೂ ಸರಿಯಿಲ್ವಾ? ಅಂತ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ನಡುವೆ ಭಾರೀ ಚರ್ಚೆ ನಡೆದಿತ್ತು.

Ram Charan and Upasana hosts a party for friends and cosines: Allu Arjun also attended the party

ಇದೀಗ ರಾಮ್‌ಚರಣ್ ನೀಡಿದ ಪಾರ್ಟಿಯಲ್ಲಿ ಭಾಗಿ ಆಗಿರೋದು, ಉಪಾಸನಾ ಜೊತೆ ಫೋಟೊ ಕ್ಲಿಕ್ಕಿಸಿ ಫೋಸ್ಟ್ ಮಾಡಿರೋದು ಎಲ್ಲಾ ಅಂತೆಕಂತೆಗಳಿಗೆ ತೆರೆ ಎಳೆದಿದೆ. ಇನ್ನು ಈ ಪಾರ್ಟಿಯಲ್ಲಿ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಕೂಡ ಭಾಗಿ ಆಗಿದ್ದಾರೆ. ಚರಣ್- ಉಪಾಸನಾ ದಂಪತಿಗೆ ಆಕೆ ಬಹಳ ಕ್ಲೋಸ್ ಫ್ರೆಂಡ್. ಇನ್ನು ಜುಲೈನಲ್ಲಿ ಹೆರಿಗೆ ಆಗುತ್ತದೆ ಎಂದು ಇತ್ತೀಚೆಗೆ ಉಪಾಸನಾ ಕೋನಿದೇಲ ಹೇಳಿಕೊಂಡಿದ್ದರು.

ಖ್ಯಾತ ಉದ್ಯಮಿ, 'ಅಪೋಲೋ ಹಾಸ್ಪಿಟಲ್ಸ್' ಗ್ರೂಪ್ ಅಧ್ಯಕ್ಷ ಡಾಕ್ಟರ್ ಪ್ರತಾಪ್ ಸಿ ರೆಡ್ಡಿ ಮೊಮ್ಮಗಳು ಉಪಾಸನ. ರಾಮ್ ಚರಣ್, ಉಪಾಸನಾ ಪ್ರೀತಿಸಿ ಪೋಷಕರನ್ನು ಒಪ್ಪಿಸಿ 2012 ರಲ್ಲಿ ಮದುವೆಯಾದರು. ಶೋಭಾ ಕಾಮನೇನಿ, ಅನಿಲ್ ಕಾಮನೇನಿ ದಂಪತಿ ಎರಡನೇ ಪುತ್ರಿಯಾದ ಉಪಾಸನಾ ಚಿಕ್ಕ ವಯಸ್ಸಿನಿಂದಲೇ ವ್ಯಾಪಾರ ವಹಿವಾಟುಗಳಲ್ಲಿ ತೊಡಗಿಸಿಕೊಂಡರು. ಬಿಸಿನೆಸ್ ಜೊತೆ ಜೊತೆಗೆ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಉಪಾಸನಾ ಒಳ್ಳೆಯ ಹೆಸರು ಗಳಿಸಿದ್ದಾರೆ.

Ram Charan and Upasana hosts a party for friends and cosines: Allu Arjun also attended the party

ಇನ್ನು ಅಲ್ಲು ಅರ್ಜುನ್ ವಿಚಾರಕ್ಕೆ ಬಂದರೆ 'ಪುಷ್ಪ'- 2 ಚಿತ್ರದಲ್ಲಿ ಸದ್ಯ ನಟಿಸುತ್ತಿದ್ಧಾರೆ. ಬನ್ನಿ ಬರ್ತ್‌ಡೇ ಸ್ಪೆಷಲ್ ಆಗಿ ಬಂದ ಚಿತ್ರದ ಫಸ್ಟ್ ಗ್ಲಿಂಪ್ಸ್ ಹಾಗೂ ಪೋಸ್ಟರ್ ವೈರಲ್ ಆಗಿತ್ತು. ಇತ್ತೀಚೆಗೆ ಮೈತ್ರಿಮೂವಿ ಮೇಕರ್ಸ್‌ ಸಂಸ್ಥೆ ಹಾಗೂ ನಿರ್ದೇಶಕ ಸುಕುಮಾರ್ ಮನೆ ಹಾಗೂ ಕಛೇರಿಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದ್ದರು. ಹಾಗಾಗಿ 'ಪುಷ್ಪ'- 2 ಶೂಟಿಂಗ್ ಪೋಸ್ಟ್‌ಪೋನ್ ಆಗಿದೆ.

More from Filmibeat

English summary
Ram Charan and Upasana hosts a party for friends and cosines: Allu Arjun also attended the party. He Shared photo with caption 'So Happy For my sweetest Upsi'. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X