ಮತ್ತೆ ಗುಡ್ ನ್ಯೂಸ್ ಕೊಟ್ಟ ನಟ ರಾಮ್‌ಚರಣ್- ಉಪಾಸನಾ ದಂಪತಿ; ಈ ಬಾರಿ ಅವಳಿ ಮಕ್ಕಳು
ಎಲ್ಲೆಲ್ಲೂ ದೀಪಾವಳಿ ಸಂಭ್ರಮ ಮನೆ ಮಾಡಿದೆ. ಮೆಗಾಸ್ಟಾರ್ ಚಿರಂಜೀವಿ ಮನೆಯಲ್ಲಿ ಹಬ್ಬದ ಸಡಗರ ಡಬಲ್ ಆಗಿದೆ. ನಾಗಾರ್ಜುನ, ವೆಂಕಟೇಶ್, ನಯನತಾರ ಫ್ಯಾಮಿಲಿಯನ್ನು ಮನೆಗೆ ಕರೆದು ಹಬ್ಬ ಆಚರಿಸಿ ಚಿರು ಉಡುಗೊರೆ ನೀಡಿದ್ದಾರೆ. ಇದೇ ಸಂಭ್ರಮದಲ್ಲಿ ರಾಮ್‌ಚರಣ್ ಹಾಗೂ ಪತ್ನಿ ಉಪಾಸನಾ ಗುಡ್ ನ್ಯೂಸ್ ಹಂಚಿಕೊಂಡಿದ್ದಾರೆ.
ಎರಡು ವರ್ಷಗಳ ಹಿಂದೆ ಹೆಣ್ಣು ಮಗುವಿಗೆ ಉಪಾಸನಾ ಜನ್ಮ ನೀಡಿದ್ದರು. ಮಗಳಿಗೆ ಕ್ಲಿಂಕಾರ ಎಂದು ನಾಮಕರಣ ಮಾಡಿದ್ದರು. ಈವರೆಗೆ ಮಗಳ ಮುಖವನ್ನು ಮೆಗಾ ಫ್ಯಾಮಿಲಿ ತೋರಿಸಿಲ್ಲ. ಫೋಟೊಗಳನ್ನು ಮುದ್ದು ಮಗಳ ಮುಖವನ್ನು ಬ್ಲರ್ ಮಾಡಿ ಎಚ್ಚರಿಕೆ ವಹಿಸುತ್ತಿದ್ದಾರೆ. ಇದೆಲ್ಲದರ ನಡುವೆ ಇದೀಗ ಉಪಾಸನಾ ಮತ್ತೆ ಗರ್ಭಿಣಿಯಾಗಿದ್ದು ದೀಪಾವಳಿ ಸಂಭ್ರಮದಲ್ಲಿ ಸೀಮಂತ ಶಾಸ್ತ್ರವೂ ನಡೆದಿದೆ.

ಮೆಗಾ ಫ್ಯಾಮಿಲಿಯಲ್ಲಿ ಹಬ್ಬ ಹರಿದಿನಗಳಲ್ಲಿ ಕುಟುಂಬ ಸದಸ್ಯರೆಲ್ಲಾ ಒಂದೆಡೆ ಸೇರಿ ಸಂಭ್ರಮಿಸುತ್ತಾರೆ. ಇತ್ತೀಚೆಗೆ ಚಿರು ಸಹೋದರ ನಾಗಬಾಬು ಪುತ್ರ ನಟ ವರುಣ್ ತೇಜ್ ಕೂಡ ತಂದೆ ಆಗಿದ್ದರು. ವರುಣ್- ಲಾವಣ್ಯ ದಂಪತಿ ಗಂಡು ಮಗುವನ್ನು ಮನೆಗೆ ಸ್ವಾಗತಿಸಿದ್ದರು. ಇದೀಗ ಉಪಾಸನಾ ಮತ್ತೆ ತಾಯಿಯಾಗುತ್ತಿರುವುದು ಕುಟುಂಬ ಸದಸ್ಯರ ಸಂತಸ ಹೆಚ್ಚಿಸಿದೆ. ಉಪಾಸನಾ ವೀಡಿಯೋ ಶೇರ್ ಮಾಡಿ ಖುಷಿ ಹಂಚಿಕೊಂಡಿದ್ದಾರೆ.
ಚಿರು ಸಹೋದರ ನಾಗಬಾಬು ಕುಟುಂಬ, ಪವನ್ ಕಲ್ಯಾಣ್ ಪತ್ನಿ ಅನ್ನಾ, ನಟ ನಾಗಾರ್ಜುನ ದಂಪತಿ, ನಟ ವೆಂಕಟೇಶ್ ದಂಪತಿ ಹಾಗೂ ನಯನತಾರ- ವಿಘ್ನೇಶ್ ದಂಪತಿ ದೀಪಾವಳಿ ಸಂಭ್ರಮದಲ್ಲಿ ಚಿರು ಮೆಗಾ ಫ್ಯಾಮಿಲಿಯಲ್ಲಿ ನಡೆದ ಸಂಭ್ರಮಾಚರಣೆಯಲ್ಲಿ ಭಾಗಿ ಆಗಿದ್ದಾರೆ. ಅತಿಥಿಗಳು ಸಾಕಷ್ಟು ಉಡುಗೊರೆ ತಂದು ಕೊಟ್ಟಿದ್ದಾರೆ. "ಈ ದೀಪಾವಳಿ ಸಂಭ್ರಮ ಡಬಲ್ ಆಗಿದೆ, ಪ್ರೀತಿ ಹಾಗೂ ಆಶೀರ್ವಾದ ಎಲ್ಲವೂ ಡಬಲ್ ಆಗಿತ್ತು" ಎಂದು ಬರೆದು ಉಪಾಸನಾ ವೀಡಿಯೋ ಹಂಚಿಕೊಂಡಿದ್ದಾರೆ.
ಅವಳಿ ಮಕ್ಕಳು ಎಂದು ರಾಮ್‌ಚರಣ್- ಉಪಾಸನಾ ಹೇಳಿಲ್ಲ. ಆದರೆ ಡಬಲ್ ಎಂದು ಬರೆದಿರುವುದು ವೀಡಿಯೋ ಕೊನೆಯಲ್ಲಿ ಇಬ್ಬರು ಮಕ್ಕಳ ಪಾದದ ಗುರುತು ಹಾಕಿರುವುದು ಉಪಾಸನಾ ಅವಳಿ ಮಕ್ಕಳ ತಾಯಿಯಾಗುತ್ತಿದ್ದಾರಾ? ಎನ್ನುವ ಚರ್ಚೆ ಹುಟ್ಟಾಕ್ಕಿದೆ. ಕೆಲ ಮಾಧ್ಯಮಗಳಲ್ಲಿ ಇದೇ ರೀತಿ ವರದಿಯಾಗಿದೆ. ಇನ್ನು ಸಾಕಷ್ಟುಜನ ಸೆಲೆಬ್ರೆಟಿಗಳು ಹಾಗೂ ಅಭಿಮಾನಿಗಳು ಚರಣ್- ಉಪಾಸನಾ ದಂಪತಿಗೆ ಅಭಿನಂದನೆ ತಿಳಿಸುತ್ತಿದ್ದಾರೆ.
ಮದುವೆಯಾಗಿ ಬಹಳ ವರ್ಷಗಳ ಕಾಲ ರಾಮ್‌ಚರಣ್ ಹಾಗೂ ಪಾಸನಾ ದಂಪತಿ ಮಕ್ಕಳು ಬೇಡ ಎಂದು ನಿರ್ಧರಿಸಿದ್ದರು. 10 ವರ್ಷಗಳ ಬಳಿಕ ಉಪಾಸನಾ ಮೊದಲ ಮಗುವಿಗೆ ಜನ್ಮ ನೀಡಿದ್ದರು. ಇದು ಮೆಗಾ ಫ್ಯಾಮಿಲಿ ಮಾತ್ರವಲ್ಲ ಮೆಗಾ ಫ್ಯಾನ್ಸ್ ಸಂಭ್ರಮಕ್ಕೆ ಕಾರಣವಾಗಿತ್ತು. 2012ರಲ್ಲಿ ರಾಮ್‌ಚರಣ್ ಹಾಗೂ ಉಪಾಸನಾ ಪ್ರೀತಿಸಿ ಮದುವೆ ಆಗಿದ್ದರು. ಅಪೋಲೋ ಆಸ್ಪತ್ರೆ ಸಂಸ್ಥಾಪಕ ಪ್ರತಾಪ್ ರೆಡ್ಡಿ ಮೊಮ್ಮಗಳ ನಿಹಾರಿಕಾ.
ಅಪೊಲೊ ಚಾರಿಟಿಯ ಉಪಾಧ್ಯಕ್ಷೆ ಮತ್ತು ಬಿ ಪಾಸಿಟಿವ್ ಮ್ಯಾಗಜೀನ್ ಮುಖ್ಯ ಸಂಪಾದಕಿ ಆಗಿ ಉಪಾಸನಾ ಗುರ್ತಿಸಿಕೊಂಡಿದ್ದಾರೆ. "ಮಕ್ಕಳನ್ನು ಮಾಡಿಕೊಳ್ಳುವುದು. ತಾಯಿಯಾಗುವುದು 20 ವರ್ಷಗಳ ಪ್ರಾಜೆಕ್ಟ್. ಪೋಷಕರಾಗಲು ಮಾನಸಿಕವಾಗಿ ಮತ್ತು ದೈಹಿಕವಾಗಿ ಸಿದ್ಧರಾಗುವ ಅವಶ್ಯಕತೆ ಇದೆ. ಒಂದು ಜೀವವನ್ನು ಜಗತ್ತಿಗೆ ತರುವುದು ನಮ್ಮ ಮೇಲಿರುವ ದೊಡ್ಡ ಜವಾಬ್ದಾರಿ. ನಮ್ಮ ಮಕ್ಕಳಿಗೆ ಏನು ಬೇಕು? ಹೇಗೆ ಬೆಳೆಸಬೇಕು ? ಹೀಗೆ ಹಲವು ವಿಷಯಗಳ ಬಗ್ಗೆ ಅರಿವಿರಬೇಕು. ನಾವು ನಾಯಿಗಳನ್ನು, ಕುದುರೆಗಳನ್ನು ಎಷ್ಟೋ ಪ್ರೀತಿಯಿಂದ ನೋಡಿಕೊಳ್ಳುತ್ತೇವೆ. ಅಂತಾದ್ದರಲ್ಲಿ ನಮ್ಮ ಮಗುವನ್ನು ಎಷ್ಟು ಜಾಗ್ರತೆಯಿಂದ ನೋಡಿಕೊಳ್ಳುತ್ತೇವೋ ಊಹಿಸಿ" ಎಂದು ಸಂದರ್ಶನವೊಂದರಲ್ಲಿ ಉಪಾಸನಾಹೇಳಿದ್ದರು.
10 ವರ್ಷಗಳ ಹಿಂದೆಯೇ ಉಪಾಸನಾ ಅಂಡಾಣು ಫ್ರೀಜ್ ಮಾಡಿದ್ದಾಗಿಯೂ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಕರಿಯರ್ ಬಗ್ಗೆ ಗಮನ ಹರಿಸಲು ಸದ್ಯಕ್ಕೆ ಮಕ್ಕಳು ಬೇಡ ಎಂದು ಆಗ ನಿರ್ಧರಿಸಿದ್ದೆವು. ಈಗ ನಾವಿಬ್ಬರು ದುಡಿದು ಸಂಪಾದಿಸಿದ ಹಣದಲ್ಲಿ ನಮ್ಮ ಮಗುವಿನ ಆರೈಕೆ ಮಾಡಲು ಸಮರ್ಥರಿದ್ದೇವೆ. ಒಳ್ಳೆ ಜೀವನ ರೂಪಿಸಲು ಸಿದ್ಧರಿದ್ದೇವೆ" ಎಂದು ಉಪಾಸನಾ ವಿವರಿಸಿದ್ದರು.


Click it and Unblock the Notifications











