twitter
    For Quick Alerts
    ALLOW NOTIFICATIONS  
    For Daily Alerts

    ಚಿತ್ರರಂಗದಲ್ಲಿ 15 ವರ್ಷ ಪೂರೈಸಿದ ರಾಮ್ ಚರಣ್; ಹಿಟ್ ಎಷ್ಟು, ಫ್ಲಾಪ್ ಎಷ್ಟು? ಪ್ರತಿ ಚಿತ್ರದ ಕಲೆಕ್ಷನ್ ಪಟ್ಟಿ

    |

    ರಾಮ್ ಚರಣ್ ತೇಜಾ ಚಿತ್ರರಂಗಕ್ಕೆ ಕಾಲಿಟ್ಟು ಇಂದಿಗೆ 15 ವರ್ಷ. ಹೌದು, 2007ರ ಸೆಪ್ಟೆಂಬರ್ 28ರಂದು ತೆರೆಕಂಡಿದ್ದ ಚಿರುತ ಚಿತ್ರದ ಮೂಲಕ ರಾಮ್ ಚರಣ್ ತಮ್ಮ ಸಿನಿ ಪಯಣವನ್ನು ಆರಂಭಿಸಿದ್ದರು. ಪುರಿ ಜಗನ್ನಾಥ್ ನಿರ್ದೇಶನವಿದ್ದ ಈ ಚಿತ್ರ ಒಂದು ಕಂಪ್ಲೀಟ್ ಆಕ್ಷನ್ ಎಂಟರ್‌ಟೈನರ್ ಆಗಿತ್ತು. ಮೆಗಾಸ್ಟಾರ್ ಪುತ್ರನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡಲು ಬೇಕಿದ್ದ ಅಂಶಗಳೆಲ್ಲಾ ಈ ಚಿತ್ರದಲ್ಲಿದ್ದವು. ಚಿತ್ರ ಮೆಗಾ ಫ್ಯಾಮಿಲಿ ಅಭಿಮಾನಿಗಳಿಗೆ ಇಷ್ಟವಾಗಿತ್ತು, ಆದರೆ ಸಾಮಾನ್ಯ ಜನ ದೊಡ್ಡ ಮಟ್ಟದಲ್ಲಿ ಚಿತ್ರವನ್ನು ಮೆಚ್ಚಿಕೊಳ್ಳಲಿಲ್ಲ. 30 ಕೋಟಿ ಕಲೆಕ್ಷನ್ ಮಾಡಿದ್ದ ಚಿತ್ರ ಬಾಕ್ಸ್ ಆಫೀಸ್ ಹಿಟ್ ಆಗಿ ಹೊರಹೊಮ್ಮಿತ್ತು ಹಾಗೂ ರಾಮ್ ಚರಣ್ ನಟನಾಗಿ ಗೆದ್ದಿದ್ದರು.

    ನಂತರ 2009ರಲ್ಲಿ ರಾಮ್ ಚರಣ್ ಅಭಿನಯದ ಎರಡನೇ ಸಿನಿಮಾ ಬಿಡುಗಡೆಗೊಂಡು ಚಿರಂಜೀವಿ ಪುತ್ರನಿಗೆ ಸ್ಟಾರ್ ಪಟ್ಟ ತಂದುಕೊಟ್ಟಿತ್ತು. ಅದುವೇ ರಾಜಮೌಳಿ ಅವರ ಮಹಾ ಚಿತ್ರ ಮಗಧೀರ. ಈ ಚಿತ್ರದಲ್ಲಿ ದ್ವಿಪಾತ್ರದಲ್ಲಿ ಅಭಿನಯಿಸಿದ್ದ ರಾಮ್ ಚರಣ್ ತೇಜಾ ನಟನೆಯನ್ನು ಕಂಡ ಅಭಿಮಾನಿಗಳು ಇದಪ್ಪಾ ಚಿರಂಜೀವಿ ಮಗನೆಂದರೆ, ನಟನೆ ರಕ್ತದಲ್ಲೇ ಇದೆ ಎಂದು ಮಾತನಾಡಿಕೊಳ್ಳಲಾರಂಭಿಸಿದರು. ರಾಜಮೌಳಿ ಚಿತ್ರಕತೆಗೆ ಮನಸೋತ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸಿನಿಮಾ ವೀಕ್ಷಿಸಿದ್ದರು. ಪರಿಣಾಮ 150 ಕೋಟಿ ಕಲೆಕ್ಷನ್ ಮಾಡಿದ ಮಗಧೀರ ಸಿನಿಮಾ ಅರುಂಧತಿ ಗಳಿಕೆಯನ್ನು ಹಿಂದಿಕ್ಕಿ ಇಂಡಸ್ಟ್ರಿ ಹಿಟ್ ಎನಿಸಿಕೊಂಡಿತ್ತು. ಈ ಚಿತ್ರದಲ್ಲಿ ಡಾನ್ಸ್, ಫೈಟ್ ಹಾಗೂ ನಟನೆ ಎಲ್ಲದ್ದರಲ್ಲೂ ಸೈ ಎನಿಸಿಕೊಂಡಿದ್ದ ರಾಮ್ ಚರಣ್ ಸ್ಟಾರ್ ಆಗಿಬಿಟ್ಟರು.

    ಆದರೆ ಮಗಧೀರ ಯಶಸ್ಸಿನ ನಂತರ ಬಂದ ಆರೆಂಜ್ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗಿತು. ನಂತರ ಬಂದ ರಚ್ಚ, ನಾಯಕ್ ಹಿಟ್ ಆದವು ಹಾಗೂ ಹಿಂದಿ ಮತ್ತು ತೆಲುಗು ಭಾಷೆಯಲ್ಲಿ ಬಂದ ತೂಫಾನ್ ಕೂಡ ಫ್ಲಾಪ್ ಪಟ್ಟಿ ಸೇರಿತು. ಹೀಗೆ ಸೋಲು ಗೆಲುವುಗಳ ಏರಿಳಿತದಲ್ಲಿದ್ದ ರಾಮ್ ಚರಣ್‌ಗೆ ಮತ್ತೊಮ್ಮೆ ಬ್ರೇಕ್ ಕೊಟ್ಟದ್ದು ಎವಡು ಚಿತ್ರ. ಆದರೆ ಈ ಯಶಸ್ಸಿನ ಬೆನ್ನಲ್ಲೇ ರಾಮ್ ಚರಣ್ ಗೋವಿಂದುಡು ಅಂದರಿವಾಡೆಲೆ ಹಾಗೂ ಬ್ರೂಸ್‌ಲಿ ದ ಫೈಟರ್ ಮೂಲಕ ಸೋತರು. ನಂತರ ತಮಿಳಿನ ತನಿ ಒರುವನ್ ರಿಮೇಕ್ ಧೃವ ಚಿತ್ರದ ಮೂಲಕ ಗೆಲುವಿನ ಟ್ರ್ಯಾಕ್‌ಗೆ ಮರಳಿದ ರಂಗಸ್ಥಲಂ ಮೂಲಕ ಸ್ಪಷ್ಟ ಗೆಲುವು ಕಂಡರು ಹಾಗೂ ನಂತರ ಬಂದ ವಿನಯ ವಿಧೇಯ ರಾಮ ಬಾಕ್ಸ್ ಆಫೀಸ್‌ನಲ್ಲಿ ಗಳಿಕೆ ಕಂಡಿತಾದರೂ ಜನಮನ್ನಣೆ ಗಳಿಸಲಿಲ್ಲ.

    ಇನ್ನು ಈ ವರ್ಷ ರಾಮ್ ಚರಣ್ ಅಭಿನಯದ ಎರಡು ಚಿತ್ರಗಳಾದ ಆರ್ ಆರ್ ಆರ್ ಹಾಗೂ ಆಚಾರ್ಯ ತೆರೆಕಂಡಿದ್ದು, ಆರ್ಆರ್ಆರ್ ಬೃಹತ್ ಬ್ಲಾಕ್ ಬಸ್ಟರ್ ಎನಿಸಿಕೊಂಡರೆ, ಆಚಾರ್ಯ ಅತಿಕೆಟ್ಟ ಸೋಲನ್ನು ಕಂಡಿದೆ. ಹೀಗೆ ತನ್ನ ಕೆರಿಯರ್‌ನಲ್ಲಿ ಸೋಲು ಗೆಲುವುಗಳೆರಡನ್ನೂ ಕಂಡಿರುವ ರಾಮ್ ಚರಣ್ ಅವರ ಇಷ್ಟೂ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಎಷ್ಟು ಕಲೆಕ್ಷನ್ ಮಾಡಿದೆ ಎಂಬುದರ ಕುರಿತಾದ ಮಾಹಿತಿ ಇಲ್ಲಿದೆ.

    ರಾಮ್ ಚರಣ್ ಸಿನಿಮಾಗಳ ಕಲೆಕ್ಷನ್ ಪಟ್ಟಿ

    ರಾಮ್ ಚರಣ್ ಸಿನಿಮಾಗಳ ಕಲೆಕ್ಷನ್ ಪಟ್ಟಿ

    ಚಿರುತ - ಹಿಟ್ - 30 ಕೋಟಿ

    ಮಗಧೀರ - ಇಂಡಸ್ಟ್ರಿ ಹಿಟ್ - 150 ಕೋಟಿ

    ಆರೆಂಜ್ - ಫ್ಲಾಪ್ - 26 ಕೋಟಿ

    ರಚ್ಚ - ಹಿಟ್ - 67 ಕೋಟಿ

    ನಾಯಕ್ - ಹಿಟ್ - 74 ಕೋಟಿ

    ತೂಫನ್/ಜಂಝೀರ್ - ಫ್ಲಾಪ್ - 20 ಕೋಟಿ

    ಎವಡು - ಹಿಟ್ - 62 ಕೋಟಿ

    ಗೋವಿಂದುಡು ಅಂದರಿವಾಡಿಲೆ - ಫ್ಲಾಪ್ - 42 ಕೋಟಿ

    ಬ್ರೂಸ್ ಲಿ - ಫ್ಲಾಪ್ - 55 ಕೋಟಿ

    ಧೃವ - ಹಿಟ್ - 88 ಕೋಟಿ

    ರಂಗಸ್ಥಲಂ - ಬ್ಲಾಕ್‌ಬಸ್ಟರ್ - 216 ಕೋಟಿ

    ವಿನಯ ವಿಧೇಯ ರಾಮ - ಆವರೇಜ್ - 95 ಕೋಟಿ

    ಆರ್ ಆರ್ ಆರ್ - ಬಿಗ್ಗೆಸ್ಟ್ ಬ್ಲಾಕ್‌ಬಸ್ಟರ್ - 1200 ಕೋಟಿ

    ಆಚಾರ್ಯ - ಡಿಸಾಸ್ಟರ್ - 76 ಕೋಟಿ

    ನಿರ್ಮಾಪಕನಾಗಿ ನಾಲ್ಕು ಚಿತ್ರ ನಿರ್ಮಾಣ

    ನಿರ್ಮಾಪಕನಾಗಿ ನಾಲ್ಕು ಚಿತ್ರ ನಿರ್ಮಾಣ

    ಇನ್ನು ರಾಮ್ ಚರಣ್ ತೇಜಾ ನಿರ್ಮಾಪಕನಾಗಿ ತಮ್ಮ ತಂದೆ ಚಿರಂಜೀವಿ ಚಿತ್ರಗಳಾದ ಖೈದಿ ನಂ. 150, ಸೈರಾ ನರಸಿಂಹ ರೆಡ್ಡಿ, ಆಚಾರ್ಯ ಹಾಗೂ ಗಾಡ್‌ಫಾದರ್ ಚಿತ್ರಗಳಿಗೆ ಬಂಡವಾಳ ಹೂಡಿದ್ದಾರೆ.

    ನಟನೆ ಬರಲ್ಲ ಎನಿಸಿಕೊಂಡಿದ್ದ ರಾಮ್ ಚರಣ್ ಇಂದು ಪ್ಯಾನ್ ಇಂಡಿಯಾ ಸ್ಟಾರ್

    ನಟನೆ ಬರಲ್ಲ ಎನಿಸಿಕೊಂಡಿದ್ದ ರಾಮ್ ಚರಣ್ ಇಂದು ಪ್ಯಾನ್ ಇಂಡಿಯಾ ಸ್ಟಾರ್

    ಇನ್ನು ರಾಮ್ ಚರಣ್ ತೇಜಾ ಯಾವುದೇ ರೀತಿಯ ಸಂದರ್ಭವಿದ್ದರೂ ಒಂದೇ ರೀತಿಯ ಎಕ್ಸ್‌ಪ್ರೆಷನ್ ಕೊಡ್ತಾರೆ, ನಟನೆ ಬರುವುದಿಲ್ಲ ಎಂದು ದೊಡ್ಡ ಮಟ್ಟದಲ್ಲಿ ಟ್ರೋಲ್ ಮಾಡಲಾಗಿತ್ತು. ಹಾಗೂ ಜಂಝೀರ್ ಸಿನಿಮಾ ಮೂಲಕ ಬಾಲಿವುಡ್‌ಗೂ ಕಾಲಿಟ್ಟಿದ್ದ ರಾಮ್ ಚರಣ್ ಪೊಲೀಸ್ ಪಾತ್ರವನ್ನು ಟೀಕಿಸಿದ್ದರು. ಇದನ್ನೆಲ್ಲಾ ಮೆಟ್ಟಿ ನಿಂತ ರಾಮ್ ಚರಣ್ ಇಂದು ರಂಗಸ್ಥಲಂ ಚಿತ್ರದಲ್ಲಿ ಮನೋಜ್ಞವಾಗಿ ಅಭಿನಯಿಸಿದ್ದಾರೆ ಹಾಗೂ ಆರ್‌ಆರ್ಆರ್ ಮೂಲಕ ತಿರಸ್ಕರಿಸಿ ಟೀಕಿಸಿದ್ದ ಬಾಲಿವುಡ್‌ನ್ನು ರೂಲ್ ಮಾಡಿದ್ದಾರೆ.

    English summary
    Ram Charan completes 15 years in cinema; his hit and flop movies list with box office collection. Read on
    Wednesday, September 28, 2022, 17:38
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X