For Quick Alerts
  ALLOW NOTIFICATIONS  
  For Daily Alerts

  Wake Up Dil Raju: ನಿರ್ಮಾಪಕ ದಿಲ್ ರಾಜುಗೆ ರಾಮ್‌ ಚರಣ್ ಫ್ಯಾನ್ಸ್‌ ಮಾಸ್ ವಾರ್ನಿಂಗ್!

  |

  ಮೆಗಾ ಕುಟುಂಬದ ಕುಡಿ ರಾಮ್‌ ಚರಣ್ ತೇಜಾ ಟಾಲಿವುಡ್‌ನಲ್ಲಿ ಟಾಪ್ ಹೀರೊಗಳಲ್ಲಿ ಒಬ್ಬರು. ಅತೀ ಕಡಿಮೆ ಸಮಯದಲ್ಲಿ ರಾಮ್‌ ಚರಣ್ ಟಾಲಿವುಡ್‌ನ ಟಾಪ್ ಪಟ್ಟಕ್ಕೇರಿದ್ದಾರೆ. ಆರಂಭದಲ್ಲೇ ಯಶಸ್ಸುಕಂಡ ಮೆಗಾ ಪವರ್‌ಸ್ಟಾರ್ ಸದ್ಯ ತೆಲುಗಿನ ಬೇಡಿಕೆಯ ನಟ. ತಂದೆಯಂತೇ ಇವರೂ ಕೂಡ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿದ್ದಾರೆ.

  ರಾಮ್‌ ಚರಣ್ ತೇಜಾಗೆ ಇತ್ತೀಚೆಗಷ್ಟೇ ಮೆಗಾ ಹಿಟ್ ಸಿನಿಮಾ ಸಿಕ್ಕಿದೆ. RRR ರಾಮ್ ಚರಣ್ ಕರಿಯರ್‌ಗೆ ಅತೀ ದೊಡ್ಡ ಹಿಟ್ ಕೊಟ್ಟ ಸಿನಿಮಾ. ಟಾಲಿವುಡ್ ಟಾಪ್ ನಿರ್ದೇಶಕ ರಾಜಮೌಳಿ ನಿರ್ದೇಶಿಸಿದ ಈ ಚಿತ್ರ ಇಂಡಸ್ಟ್ರಿಗೆ ದೊಡ್ಡ ಹಿಟ್ ಕೊಟ್ಟಿತ್ತು. ಆದರೆ, RRR ಬಳಿಕ ತೆರೆಕಂಡ ರಾಮ್ ಚರಣ್ ತೇಜಾ ಅಭಿನಯದ ಮತ್ತೊಂದು ಸಿನಿಮಾ 'ಆಚಾರ್ಯ' ಪ್ಲಾಪ್ ಲಿಸ್ಟ್ ಸೇರಿದೆ. ಹೀಗಾಗಿ ರಾಮ್ ಚರಣ್ ಕರಿಯರ್‌ನಲ್ಲಿ ಒಂದು ಸೂಪರ್ ಹಿಟ್, ಇನ್ನೊಂದು ಸೂಪರ್ ಫ್ಲಾಪ್ ಸಿನಿಮಾ ಸಿಕ್ಕಂತಾಗಿದೆ.

  ರೀ-ರಿಲೀಸ್ ಆಗಿದ್ದ ಮಹೇಶ್ ಬಾಬು ಸಿನಿಮಾ ಮಸ್ತ್ ರೆಸ್ಪಾನ್ಸ್: 'ಪೋಕಿರಿ' ಕಲೆಕ್ಷನ್ ಸೂಪರ್!ರೀ-ರಿಲೀಸ್ ಆಗಿದ್ದ ಮಹೇಶ್ ಬಾಬು ಸಿನಿಮಾ ಮಸ್ತ್ ರೆಸ್ಪಾನ್ಸ್: 'ಪೋಕಿರಿ' ಕಲೆಕ್ಷನ್ ಸೂಪರ್!

  ರಾಮ್ ಚರಣ್ ಸದ್ಯಕ್ಕೀಗ ರೋಬೊ ನಿರ್ದೇಶಕ ಎಸ್. ಶಂಕರ್ ನಿರ್ದೇಶನದ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ದಿಲ್ ರಾಜು ನಿರ್ಮಾಣ ಮಾಡುತ್ತಿರುವ ಆರ್‌ಸಿ 15 ಹಲವು ದಿನಗಳಿಂದ ಸದ್ದು ಮಾಡುತ್ತಲೇ ಇದೆ. ಈ ಬೆನ್ನಲ್ಲೇ ಮೆಗಾ ಅಭಿಮಾನಿಗಳು ನಿರ್ಮಾಪಕ ದಿಲ್ ರಾಜು ಮೇಲೆ ಟಾರ್ಗೆಟ್ ಮಾಡಿ ಎಚ್ಚರಿಕೆ ನೀಡುತ್ತಿದ್ದಾರೆ. ಅಸಲಿಗೆ ದಿಲ್ ರಾಜು ಅಂತಹದ್ದೇನು ಮಾಡಿದ್ರು? ಟ್ರೋಲ್ ಮಾಡುತ್ತಿರೋದೇಕೆ? ಎಂದು ತಿಳಿಯಲು ಮುಂದೆ ಓದಿ.

  ರಾಮ್‌ ಚರಣ್ ಅದ್ಧೂರಿ ಸಿನಿಮಾ

  ರಾಮ್‌ ಚರಣ್ ಅದ್ಧೂರಿ ಸಿನಿಮಾ

  ರಾಮ್‌ ಚರಣ್ 15ನೇ ಸಿನಿಮಾಗೆ ಶಂಕರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾವನ್ನು ಅದ್ಧೂರಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ದಿಲ್ ರಾಜು ನಿರ್ಮಿಸುತ್ತಿರೋ ಈ ಸಿನಿಮಾದಲ್ಲಿ ರಾಮ್‌ ಚರಣ್ ಜೊತೆ ಕಿಯಾರಾ ಅಡ್ವಾಣಿ ಹೀರೊಯಿನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ರಾಮ್‌ ಚರಣ್ ಜೊತೆ ಶ್ರೀಕಾಂತ್, ಅಂಜಲಿ ಹಾಗೂ ಜಯರಾಮ್ ಕೂಡ ಪ್ರಮುಖ ಪಾತ್ರಗಳಲ್ಲಿಯೇ ಕಾಣಿಸಿಕೊಳ್ಳುತ್ತಿದ್ದು, ಎಸ್. ಥಮನ್ ಈ ಚಿತ್ರಕ್ಕೆ ಟ್ಯೂನ್ ಹಾಕುತ್ತಿದ್ದಾರೆ.

  ಸಮಂತಾ ಎದುರು ಸಿಕ್ಕರೆ ಏನು ಮಾಡುತ್ತೀರಿ? ಆಸಕ್ತಿಕರ ಉತ್ತರ ನೀಡಿದ ನಾಗ ಚೈತನ್ಯಸಮಂತಾ ಎದುರು ಸಿಕ್ಕರೆ ಏನು ಮಾಡುತ್ತೀರಿ? ಆಸಕ್ತಿಕರ ಉತ್ತರ ನೀಡಿದ ನಾಗ ಚೈತನ್ಯ

  ಬೇಗನೇ ಶೂಟಿಂಗ್ ಮುಗಿಸಿದ ಶಂಕರ್

  ಬೇಗನೇ ಶೂಟಿಂಗ್ ಮುಗಿಸಿದ ಶಂಕರ್

  ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ರಾಮ್ ಚರಣ್ ಹಾಗೂ ಶಂಕರ್ ಸಿನಿಮಾ ಸೆಟ್ಟೇರಿತ್ತು. ಇದೂವರೆಗೂ ಶಂಕರ್ ಮೂರು ಹಂತಗಳಲ್ಲಿ ಶೂಟಿಂಗ್ ಮಾಡಿದ್ದಾರೆ. ಮೊದಲ ಶೆಡ್ಯೂಲ್‌ನಲ್ಲಿ ಅದ್ಧೂರಿ ಸಾಹಸ ಸನ್ನಿವೇಶಗಳನ್ನು ಶೂಟ್ ಮಾಡಿದ್ದರು. ಎರಡನೇ ಹಂತವನ್ನು ರಾಜಮಹೇಂದ್ರವರಂನಲ್ಲಿ ನಡೆದರೆ, ಮೂರನೇ ಹಂತದ ಶೂಟಿಂಗ್ ವೈಜಾಗ್‌ನಲ್ಲಿ ಇತ್ತೀಚೆಗೆ ಚಿತ್ರೀಕರಣ ನಡೆದಿತ್ತು. ಈ ಮೂಲಕ ಟಾಕಿ ಪೋಷನ್ ಬಹುತೇಕ ಮುಗಿದಿದೆ ಎನ್ನಲಾಗಿದೆ.

  ಬಿಗ್ ಬಜೆಟ್.. ಬಿಗ್ ಕ್ಲೈಮ್ಯಾಕ್ಸ್

  ಬಿಗ್ ಬಜೆಟ್.. ಬಿಗ್ ಕ್ಲೈಮ್ಯಾಕ್ಸ್

  ಆರ್‌ಸಿ 15 ಸಿನಿಮಾಗೆ ಶಂಕರ್ ಇನ್ನೂ ಟೈಟಲ್ ಫಿಕ್ಸ್ ಮಾಡಿಲ್ಲ. ಆಗಲೇ ಈ ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ದಿಲ್ ರಾಜು ಈ ಸಿನಿಮಾವನ್ನು ದುಬಾರಿ ಬಜೆಟ್‌ನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ ಎನ್ನಲಾಗಿದೆ. ಹೇಳಿ-ಕೇಳಿ ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿರೋದ್ರಿಂದ ಅದ್ಧೂರಿ ದೃಶ್ಯಗಳಿವೆ ಎನ್ನಲಾಗಿದೆ. ಅಲ್ಲದೆ ಕ್ಲೈಮ್ಯಾಕ್ಸ್ ದೃಶ್ಯವನ್ನು ದುಬಾರಿ ವೆಚ್ಚದಲ್ಲಿಯೇ ನಿರ್ಮಾಣ ಮಾಡಲಾಗುತ್ತಿದೆ. ಕೇವಲ ಕ್ಲೈಮ್ಯಾಕ್ಸ್‌ಗೆ ಸುಮಾರು 20 ಕೋಟಿ ರೂ. ಮೀಸಲಿಟ್ಟಿದ್ದಾರೆ ಎನ್ನಲಾಗಿದೆ. ನಿರ್ಮಾಪಕ ದಿಲ್ ರಾಜು ಇಷ್ಟೆಲ್ಲಾ ಹಣ ಸುರಿಯುತ್ತಿದ್ದರೂ, ಮೆಗಾ ಫ್ಯಾನ್ಸ್ ಮಾತ್ರ ಖುಷಿಯಾಗಿಲ್ಲ. ಅವರ ಕಣ್ಣುಗಳು ಕೆಂಪಾಗಿವೆಯಂತೆ.

  ದಿಲ್ ರಾಜು ವಿರುದ್ಧ ಮೆಗಾ ಫ್ಯಾನ್ಸ್ ಗರಂ

  ದಿಲ್ ರಾಜು ವಿರುದ್ಧ ಮೆಗಾ ಫ್ಯಾನ್ಸ್ ಗರಂ

  ಅದ್ಧೂರಿ ಬಜೆಟ್‌ನಲ್ಲಿ ನಿರ್ಮಾಣ ಆಗುತ್ತಿರುವ ಸಿನಿಮಾದ ಮೇಲೆ ನಿರೀಕ್ಷೆ ದುಪ್ಪಟ್ಟಾಗಿದೆ. ಬಹಳ ದಿನಗಳಿಂದ ಈ ಸಿನಿಮಾ ಶೂಟ್ ಮಾಡುತ್ತಿದ್ದು, ಚಿತ್ರತಂಡದಿಂದ ಒಂದೇ ಒಂದು ಅಪ್‌ಡೇಟ್ ನೀಡಲ್ಲ. ಇದೂವರೆಗೂ ದಿಲ್ ರಾಜು ಅಪ್‌ಡೇಟ್‌ ನೀಡದೇ ಇದ್ದಿದ್ದರಿಂದ ಫ್ಯಾನ್ಸ್ ಗರಂ ಆಗಿದ್ದಾರೆ. ಫಸ್ಟ್ ಲುಕ್ ಮತ್ತು ಟೈಟಲ್ ಪೋಸ್ಟರ್ ಬರುತ್ತೆ ಅಂತ ಕಾದು ಕೂತಿದ್ದರು. ಆದ್ರೀಗ ತಾಳ್ಮೆ ಕಳೆದುಕೊಂಡ ಫ್ಯಾನ್ಸ್ ದಿಲ್ ರಾಜು ವಿರುದ್ಧ ಮುಗಿಬಿದ್ದಿದ್ದಾರೆ.

  ದಿಲ್ ರಾಜು ಟ್ರೋಲ್

  ದಿಲ್ ರಾಜು ಟ್ರೋಲ್

  ರಾಮ್‌ ಚರಣ್, ಶಂಕರ್ ಹಾಗೂ ದಿಲ್ ರಾಜು ಈ ಮೂವರದ್ದೂ ಕ್ರೇಜಿ ಕಾಂಬಿನೇಷನ್‌ ಅನ್ನೋದ್ರಲ್ಲಿ ಡೌಟೇ ಇಲ್ಲ. ಈ ಕಾರಣಕ್ಕೆ ಅದ್ಧೂರಿ ಚಿತ್ರಕ್ಕಾಗಿ ಮೆಗಾ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಆದರೆ, ಇದೂವರೆಗೂ ಯಾವುದೇ ಅಪ್ ಡೇಟ್ ಸಿಗದ ಇದ್ದಿದ್ದರಿಂದ ಅಭಿಮಾನಿಗಳು ಕೆಂಡಕಾರಿದ್ದಾರೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಸಿನಿಮಾದ ನಿರ್ಮಾಪಕ ದಿಲ್ ರಾಜುರನ್ನು ಟ್ರೋಲ್ ಮಾಡುತ್ತಿದ್ದಾರೆ. WAKE UP DILRAJU ಅನ್ನೋ ಕಿಡಿಕಾರಿದ್ದರು.

  ಮೆಗಾ ಫ್ಯಾನ್ಸ್ ಎಚ್ಚರಿಕೆ

  ಮೆಗಾ ಫ್ಯಾನ್ಸ್ ಎಚ್ಚರಿಕೆ

  ದಿಲ್ ರಾಜು ಸದ್ಯ ಎರಡು ಬಿಗ್ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದರಲ್ಲಿ ದಳಪತಿ ವಿಜಯ್ ಅಭಿನಯದ 'ವಾರಸುಡು' ಸಿನಿಮಾ ಕೂಡ ಒಂದು. ಈ ಸಿನಿಮಾ ಬಗ್ಗೆ ದಿಲ್ ರಾಜು ಸತತ ಅಪ್‌ಡೇಟ್‌ಗಳನ್ನು ನೀಡುತ್ತಿರುವುದರಿಂದ ದಿಲ್ ರಾಜುಗೆ ಎಚ್ಚರಿಕೆ ನೀಡಿದ್ದಾರೆ. ಈ ಸಿನಿಮಾ ಬಗ್ಗೆನೂ ಮಾಹಿತಿ ನೀಡಬೇಕು ಎಂದು ಎಚ್ಚರಿಸಿದ್ದಾರೆ. 'ವಿ ವಾಂಟ್ ಆರ್‌ ಸಿ 15 ಅಪ್‌ಡೇಡ್' ಎಂದು ಪಟ್ಟು ಹಿಡಿದು ಕೂತಿದ್ದಾರೆ.

  Recommended Video

  ಟಿಕೆಟ್ ಸಿಗಲಿಲ್ಲ ಅಂದಾಗ ಬಹಳ ಬೇಜಾರಾಯ್ತು!! | Filmibeat Kannada
  English summary
  Ram Charan Fans Trolls Wake Up Dil Raju For Not Updating RC 15, Know More

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X