ಪತ್ನಿ ಉಪಾಸನಾಗೆ ಹೆರಿಗೆ ಮಾಡಿಸುವ ಅಮೆರಿಕಾ ವೈದ್ಯೆಯನ್ನು ಪರಿಚಯಿಸಿದ ರಾಮ್‌ಚರಣ್

By ಫಿಲ್ಮಿಬೀಟ್ ಡೆಸ್ಕ್

ತೆಲುಗು ನಟ ರಾಮ್‌ಚರಣ್ ತೇಜಾ ಹಾಗೂ ಉಪಾಸನಾ ಕೋನಿಡೇಲ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಕೆಲ ದಿನಗಳ ಹಿಂದೆ ನಟ ಚಿರಂಜೀವಿ ಸೊಸೆ ಉಪಾಸನಾ ಗರ್ಭಿಣಿ ಆಗಿರುವ ವಿಚಾರವನ್ನು ಹಂಚಿಕೊಂಡಿದ್ದರು. ಇದೀಗ ಉಪಾಸನಾಗೆ ಹೆರಿಗೆ ಮಾಡಿಸುವ ವೈದ್ಯರು ಯಾರು ಎನ್ನುವುದು ರಿವೀಲ್ ಆಗಿದೆ.

ಕೂಸು ಹುಟ್ಟೋಕೆ ಮುಂದೆ ಕುಲಾವಿ ಎನ್ನಿಸಬಹುದು. ಆದರೆ ಪೋಷಕರಿಗೆ ತಮ್ಮ ಕಂದಮ್ಮನನ್ನ ಭೂಮಿಗೆ ತರುವುದು ವಿಶಿಷ್ಟ ಅನುಭವ. ಯಾವುದೇ ಸಮಸ್ಯೆ ಇಲ್ಲದೇ ಸುಗಮವಾಗಿ ಹೆರಿಗೆ ಆಗಬೇಕು ಎಂದು ಬಯಸುತ್ತಾರೆ. ಅದೇ ರೀತಿ ನಟ ರಾಮ್‌ ಚರಣ್ ತೇಜಾ ಅಮೇರಿಕಾದಲ್ಲಿ ಪತ್ನಿಯ ಹೆರಿಗೆ ಮಾಡಿಸಲು ತೀರ್ಮಾನಿಸಿದ್ದಾರೆ. ಈಗಾಗಲೇ ಆ ವೈದ್ಯರು ಯಾರು ಎನ್ನುವುದನ್ನು ಕೂಡ ಸ್ಪಷ್ಟಪಡಿಸಿದ್ದಾರೆ.

Actor Ram charan introduced American Gynecologist Dr Jennifer Ashton who Going to Take Care of wife Upasanas Delivery

ಮಾರ್ಚ್ 12ರಂದು ನಟನೆಯ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭಕ್ಕಾಗಿ ಈಗಾಗಲೇ ರಾಮ್‌ಚರಣ್ ಅಮೆರಿಕಾ ತಲುಪಿದ್ದಾರೆ. ಬುಧವಾರ ಅಮೇರಿಕಾದ ಜನಪ್ರಿಯ ಟಾಕ್ ಶೋ 'ಗುಡ್ ಮಾರ್ನಿಂಗ್ ಅಮೇರಿಕಾ'ದಲ್ಲಿ ಭಾಗವಹಿಸಿದ್ದರು. ಆರ್‌ಆರ್‌ಆ ಚಿತ್ರದ 'ನಾಟು ನಾಟು' ಹಾಡಿಗೆ ಗೋಲ್ಡನ್‌ ಗ್ಲೋಬ್‌ ಬಂದಿದ್ದು, ಆಸ್ಕರ್‌ ನಾಮಿನೇಟ್‌ ಆಗಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನು ಶೋನಲ್ಲಿ ಚರಣ್ ಸಿನಿಮಾಗಳ ಬಗ್ಗೆ ಮಾತನಾಡುವ ಜೊತೆಗೆ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಕೂಡ ಮಾತನಾಡಿದ್ದಾರೆ.

ಶೋನಲ್ಲಿ ರಾಮ್‌ಚರಣ್ ಶೀಘ್ರದಲ್ಲೇ ತಂದೆಯಾಗುತ್ತಿರುವ ವಿಚಾರವೂ ಪ್ರಸ್ತಾಪ ಆಯಿತು. ಅಮೆರಿಕಾದ ಪ್ರಸಿದ್ಧ ಗೈನಕಾಲಜಿಸ್ಟ್ ಜೆನ್ನಿಫರ್ ಆಸ್ಟನ್ 'ಗುಡ್ ಮಾರ್ನಿಂಗ್ ಅಮೇರಿಕಾ' ಶೋನ ಸಹ ನಿರೂಪಕಿ ಆಗಿದ್ದಾರೆ. ಆಕೆಯನ್ನು ಭೇಟಿ ಆಗುತ್ತಿರುವುದು ಸಂತಸ ತಂದಿದೆ ಎಂದಿರುವ ಚರಣ್ ಫೋನ್ ನಂಬರ್ ತೆಗೆದುಕೊಳ್ಳುವುದಾಗಿಯೂ ಹೇಳಿದ್ದಾರೆ. ತನ್ನ ಪತ್ನಿ (ಉಪಾಸನಾ) ಅಮೆರಿಕಾಗೆ ಬರ್ತಾಳೆ. ಡೆಲಿವರಿಗೆ ನೀವು ಸಿದ್ಧರಿದ್ದರೆ ಚೆನ್ನಾಗಿರುತ್ತದೆ ಎಂದು ಜೆನಿಫರ್ ಆಸ್ಟನ್ ಬಳಿ ಕೇಳಿದ್ದಾರೆ. ಅದಕ್ಕೆ ಜೆನ್ನಿಫರ್ ಓಕೆ ಎಂದಿದ್ದಾರೆ.

''ನಿಮ್ಮ ಜೊತೆ ಟ್ರಾವೆಲ್ ಮಾಡಲು ಸಿದ್ಧ. ನಿಮ್ಮ ಮೊದಲ ಮಗುವನ್ನು ಹೆರಿಗೆ ಮಾಡಿಸುವುದು ನನಗೂ ಹೆಮ್ಮೆ. ಈ ಬಗ್ಗೆ ಖಂಡಿತ ಚರ್ಚಿಸೋಣ" ಎಂದು ಜೆನ್ನಿಫರ್ ಹೇಳಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ರಾಮ್ ಚರಣ್, ಉಪಾಸನಾ ವಿವಾಹ ಜೂನ್ 14, 2012 ರಂದು ನಡೆಯಿತು. ಸಿನಿಮಾ, ರಾಜಕೀಯ ಗಣ್ಯರ ಉಪಸ್ಥಿತಿಯಲ್ಲಿ ವಿವಾಹ ಸಮಾರಂಭ ವೈಭವವಾಗಿ ನೆರವೇರಿತ್ತು. ಮದುವೆಯಾದ 10 ವರ್ಷಗಳ ನಂತರ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಮಗು ಹುಟ್ಟುವ ಸಮಯಕ್ಕೆ ಹೆರಿಗೆಗಾಗಿ ರಾಮ್‌ಚರಣ್- ಉಪಾಸನಾ ದಂಪತಿ ಅಮೆರಿಕಾಗೆ ಹೋದರೂ ಅಚ್ಚರಿ ಪಡಬೇಕಿಲ್ಲ. ಕ್ಯಾಲಿಫೋರ್ನಿಯಾದಲ್ಲಿ ನಡೆದ ಗೋಲ್ಡನ್ ಗ್ಲೋಬ್ 2023 ಅವಾರ್ಡ್ ಸೆರೆಮನಿಯಲ್ಲಿ 'RRR' ಚಿತ್ರದ ಸಂಗೀತ ನಿರ್ದೇಶಕ ಎಂ. ಎಂ ಕೀರವಾಣಿ ಪ್ರಶಸ್ತಿ ಸ್ವೀಕರಿಸಿದ್ದರು. ಕಾರ್ಯಕ್ರಮದಲ್ಲಿ ನಿರ್ದೇಶಕ ರಾಜಮೌಳಿ, ಕೀರವಾಣಿ, ರಾಮ್‌ಚರಣ್, ಜ್ಯೂ. ಎನ್‌ಟಿಆರ್ ದಂಪತಿ ಸಮೇತರಾಗಿ ಭಾಗಿ ಆಗಿ ಸಂಭ್ರಮಿಸಿದ್ದಾರೆ. ಆ ನಂತರ ತಮಗೆ ಹುಟ್ಟುವ ಮಗು ಬಗ್ಗೆ ಮೊದಲ ಬಾರಿಗೆ ಉಪಾಸನಾ ಸ್ಪಂದಿಸಿದ್ದರು.

Actor Ram charan introduced American Gynecologist Dr Jennifer Ashton who Going to Take Care of wife Upasanas Delivery

ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದ ಫೋಟೊಗಳನ್ನು ಶೇರ್ ಮಾಡಿ "RRR' ತಂಡದ ಭಾಗವಾಗಿರುವುದಕ್ಕೆ ಸಂತಸವಾಗುತ್ತಿದೆ. ದೇಶವೇ ಹೆಮ್ಮೆಪಡುವಂತಹ ಗೆಲುವು ಇದು. ಈ ಪ್ರಯಾಣದಲ್ಲಿ ನಾನು ಭಾಗಿ ಆಗುವಂತೆ ಮಾಡಿದ ರಾಮ್‌ಚರಣ್ ಹಾಗೂ ರಾಜಮೌಳಿಗೆ ತುಂಬು ಹೃದಯದ ಧನ್ಯವಾದ" ಎಂದು ಉಪಾಸನಾ ಬರೆದುಕೊಂಡಿದ್ದರು. ಇನ್ನು ಸಿನಿಮಾಗಳ ವಿಚಾರಕ್ಕೆ ಬಂದರೆ ನಟ ರಾಮ್‌ಚರಣ್ ಇನ್ನು ಹೆಸರಿಡದ ಶಂಕರ್ ನಿರ್ದೇಶನದ ಚಿತ್ರದಲ್ಲಿ ನಟಿಸುತ್ತಿದ್ದಾರೆ. ನಂತರ ಬುಚ್ಚಿಬಾಬು ನಿರ್ದೇಶನದ ಚಿತ್ರಕ್ಕೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

More from Filmibeat

English summary
Actor Ram charan introduced American Gynecologist Dr Jennifer Ashton who Going to Take Care of wife Upasana's Delivery. Mega power Star Ram Charan is currently in the america ahead of Oscars 2023.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X