twitter
    For Quick Alerts
    ALLOW NOTIFICATIONS  
    For Daily Alerts

    ಸಂಭಾವನೆ ಕಡಿತಗೊಳಿಸಲು ಒಪ್ಪಿದ 3 ತೆಲುಗು ಸ್ಟಾರ್ಸ್: ದಿಲ್ ರಾಜು ಜೊತೆ ಚರ್ಚೆ ಸಕ್ಸಸ್!

    |

    ಕೋವಿಡ್ ಬಳಿಕ ತೆಲುಗು ಚಿತ್ರರಂಗದ ಪರಿಸ್ಥಿತಿ ಬದಲಾಗಿದೆ. ಕೋವಿಡ್ ಬಳಿಕ ಜನರು ಥಿಯೇಟರ್‌ಗೆ ಬರುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ನಿರ್ಮಾಪಕರಿಗೆ ನಷ್ಟ ಆಗುತ್ತಿದೆ. ಇತ್ತ ಸ್ಟಾರ್ ಹೀರೊಗಳು ಸಂಭಾವನೆಯನ್ನು ಮಾತ್ರ ಹೆಚ್ಚಿಗೆ ಮಾಡಿಕೊಂಡಿದ್ದಾರೆ ಎಂಬುದು ಆರೋಪ ಆಗಿತ್ತು.

    ಸೂಪರ್‌ಸ್ಟಾರ್‌ಗಳು ಸಿನಿಮಾದಲ್ಲಿರೋ ಕಾರಣಕ್ಕೆ ಭಾರಿ ಬಂಡವಾಳ ಹಾಕಿದರೂ, ನಿರ್ಮಾಪಕರಿಗೆ ಹಣ ಹಿಂತಿರುಗಿ ಬರುತ್ತಾ? ಇಲ್ಲವಾ ಅನ್ನೋ ಕ್ಲಾರಿಟಿ ಇಲ್ಲ. ಈ ಕಾರಣಕ್ಕೆ ನಿರ್ಮಾಪಕರು ಶೂಟಿಂಗ್ ನಿಲ್ಲಿಸಲು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಆಗಸ್ಟ್ 1ರಿಂದ ಸಿನಿಮಾ ಚಿತ್ರೀಕರಣ ನಿಲ್ಲಿಸಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

    ಆಗಸ್ಟ್ 1 ರಿಂದ ತೆಲುಗು ಸಿನಿಮಾಗಳ ಶೂಟಿಂಗ್ ಸ್ಥಗಿತಆಗಸ್ಟ್ 1 ರಿಂದ ತೆಲುಗು ಸಿನಿಮಾಗಳ ಶೂಟಿಂಗ್ ಸ್ಥಗಿತ

    ಸಿನಿಮಾ ನಿರ್ಮಾಣದ ವೆಚ್ಚವನ್ನು ಕಡಿಮೆ ಮಾಡಲು ನಿರ್ಮಾಪಕರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ನಿರ್ಮಾಣ ವೆಚ್ಚವನ್ನುಹೇಗೆ ಕಡಿಮೆ ಮಾಡಬೇಕು? ಮುಂದೆ ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳಬೇಕು? ಎಂಬ ಬಗ್ಗೆ ನಿರ್ಮಾಪಕ ದಿಲ್ ರಾಜು ಸಾರಥ್ಯದಲ್ಲಿ ಸಭೆ ನಡೆಸಲಾಗಿತ್ತು. ಈ ಸಭೆಯ ಬಳಿಕ ಕೆಲವು ಬದಲಾವಣೆಗಳು ನಡೆದಿವೆ ಮೂವರು ಸ್ಟಾರ್ ಹೀರೊ ಸಂಭಾವನೆಯನ್ನು ಕಡಿಮೆ ಮಾಡಿಕೊಳ್ಳಲು ಮುಂದೆ ಬಂದಿದ್ದಾರೆ ಎನ್ನಲಾಗಿದೆ.

    ಸ್ಟಾರ್ ನಟರ ವಿರುದ್ಧ ತೆಲುಗು ನಿರ್ಮಾಪಕ ಅಸಮಾಧಾನ: ಸಂಭಾವನೆ ಕಡಿತಕ್ಕೆ ಒತ್ತಾಯಸ್ಟಾರ್ ನಟರ ವಿರುದ್ಧ ತೆಲುಗು ನಿರ್ಮಾಪಕ ಅಸಮಾಧಾನ: ಸಂಭಾವನೆ ಕಡಿತಕ್ಕೆ ಒತ್ತಾಯ

    ಮೂರು ನಾಯಕರು ಯಾರು?

    ಮೂರು ನಾಯಕರು ಯಾರು?

    ಆಗಸ್ಟ್ ಒಂದರಿಂದ ನಿರ್ಮಾಪಕರು ಶೂಟಿಂಗ್ ನಿಲ್ಲಿಸಲು ನಿರ್ಧರಿಸಿದ್ದಾರೆ. ಇದೇ ವೇಳೆ ನಿರ್ಮಾಪಕ ದಿಲ್ ರಾಜು ಜೊತೆ ಟಾಲಿವುಡ್‌ನ ಮೂವರು ಟಾಪ್ ಹೀರೊಗಳು ಚರ್ಚೆ ಮಾಡಿದ್ದಾರೆ. ಈಗಾಗಲೇ ನಿರ್ಮಾಪಕ ದಿಲ್ ರಾಜು ಜೊತೆ ರಾಮ್ ಚರಣ್, ಎನ್.ಟಿ.ಆರ್, ಅಲ್ಲು ಅರ್ಜುನ್ ಚರ್ಚಿಸಿದ್ದಾರೆ. ಟಾಲಿವುಡ್‌ ನಿರ್ಮಾಪಕರಿಗೆ ಆಗುತ್ತಿರುವ ನಷ್ಟವನ್ನು ತಗ್ಗಿಸಲು ಸಂಭಾವನೆಯನ್ನು ಕಡಿಮೆ ಮಾಡಿಕೊಳ್ಳಲು ಮೂವರು ನಾಯಕರು ನಿರ್ಧರಿಸಿದ್ದಾರೆ ಎನ್ನಲಾಗಿದೆ.

    ಮೆಗಾಸ್ಟಾರ್ ಎಂಟ್ರಿ

    ಮೆಗಾಸ್ಟಾರ್ ಎಂಟ್ರಿ

    ದಿಲ್ ರಾಜುವಿನಂತೆ ಉಳಿದ ನಿರ್ಮಾಪಕರು ಕೂಡ ತಮ್ಮ ಹೀರೊ ಬಳಿ ಚರ್ಚೆ ಮಾಡಿ ಮುಂದಿನ ನಿರ್ಧಾರ ತೆಗೆದುಕೊಳ್ಳುವಂತೆ ಮನವಿ ಮಾಡಲಾಗಿದೆ ಎನ್ನಲಾಗಿದೆ. ಈ ಕಾರಣಕ್ಕೆ ಯಾವ ಸಿನಿಮಾ ಬಂದ್ ಆಗಬೇಕು? ಯಾವ ಕಾರಣಕ್ಕೆ ತೊಂದರೆಯಾಗುತ್ತಿದೆ? ಎಂಬುದರ ಬಗ್ಗೆ ಗಂಭೀರ ಚರ್ಚೆಯಾಗುತ್ತಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಟಾಲಿವುಡ್‌ನ ಮೆಗಾಸ್ಟಾರ್ ಚಿರಂಜೀವಿ ಮುಂದೆ ಬಂದಿದ್ದಾರೆ ಎನ್ನಲಾಗಿದೆ.

    ದಿಕ್ಕು ಕಳೆದುಕೊಂಡಿದೆ

    ದಿಕ್ಕು ಕಳೆದುಕೊಂಡಿದೆ

    ಟಾಲಿವುಡ್‌ನ ಹಿರಿಯರಾಗಿದ್ದ ದಾಸರಿ ನಾರಾಯಣರಾವ್ ನಿಧನರಾದ ಬಳಿಕ ತೆಲುಗು ಚಿತ್ರರಂಗ ದೊಡ್ಡ ದಿಕ್ಕನ್ನು ಕಳೆದುಕೊಂಡಿದೆ. ಈ ಕಾರಣಕ್ಕೆ ಟಾಲಿವುಡ್‌ನಲ್ಲಿ ಎದುರಾಗಿರುವ ಸಮಸ್ಯೆಗಳೇನು? ನಿರ್ಮಾಪಕರ ಬಾರಿ ಇಳಿಸುವುದು ಹೇಗೆ? ಎಂಬುದರ ಬಗ್ಗೆ ಮೆಗಾಸ್ಟಾರ್ ಚಿರಂಜೀವಿ ಮುಂದೆ ಬಂದಿದ್ದಾರೆ ಎನ್ನಲಾಗಿದೆ. ನಿರ್ಮಾಪಕರ ಸಮಸ್ಯೆಗಳನ್ನು ಪಟ್ಟಿ ಮಾಡುವಂತೆ ಮೆಗಾಸ್ಟಾರ್ ಚಿರಂಜೀವಿ ತಮ್ಮ ಆಪ್ತರಿಗೆ ಹೇಳಿದ್ದಾರೆ ಎನ್ನಲಾಗಿದೆ.

    ದಿಲ್ ರಾಜು ಜೊತೆ ಚರ್ಚೆ

    ದಿಲ್ ರಾಜು ಜೊತೆ ಚರ್ಚೆ

    ಮೆಗಾಸ್ಟಾರ್ ಚಿರಂಜೀವಿನೇ ಅವರ ಚಿರಪರಿಚಿತ ಹೀರೊಗಳೊಂದಿಗೆ ಸಭೆ ನಡೆಸಿ, ಸಂಭಾವನೆಯನ್ನು ಕಡಿತಗೊಳಿಸಿದರೆ ಹೇಗೆ ಎಂಬ ಚರ್ಚೆ ಕೂಡ ನಡೆಯುತ್ತಿದೆ ಎನ್ನಲಾಗಿದೆ. ಟಾಲಿವುಡ್‌ನ ಎಲ್ಲಾ ಹೀರೊಗಳು ಸಂಭಾವನೆ ವಿಷಯದಲ್ಲಿ ಒಂದು ನಿರ್ಧಾರ ತೆಗೆದುಕೊಳ್ಳುವ ಅಗತ್ಯವಿದೆ ಎಂದು ನಿರ್ಮಾಪಕರು ಅಭಿಪ್ರಾಯ ಪಟ್ಟಿದ್ದಾರೆ ಎನ್ನಲಾಗಿದೆ. ಸದ್ಯ ರಾಮ್‌ ಚರಣ್, ಜೂ.ಎನ್‌ಟಿಆರ್ ಹಾಗೂ ಅಲ್ಲು ಅರ್ಜುನ್ ಮೂವರು ಸಂಭಾವನೆ ಕಡಿತಗೊಳಿಸಿಕೊಳ್ಳಲು ಒಪ್ಪಿಗೆ ನೀಡಿದ ವಿಷಯ ಭಾರಿ ಚರ್ಚೆಯಾಗುತ್ತಿದೆ.

    English summary
    Ram Charan, Jr.Ntr, Allu Arjun Agreed to Reduced Remuneration To Producer Dil Raju, Know More.
    Thursday, July 28, 2022, 10:14
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X