ಮೈನವಿರೇಳಿಸುವ RRR ಟ್ರೇಲರ್: ರಾಜಮೌಳಿಗೊಂದು ಸಲಾಮ್
ಸಿನಿಮಾ ಹೇಗಿದೆಯೆಂದು ಟ್ರೇಲರ್‌ಗಳು ಹೇಳಿಬಿಡುತ್ತವೆ. ಟ್ರೇಲರ್, ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳಲು ಯಶಸ್ವಿಯಾಯಿತೆಂದರೆ ಸಿನಿಮಾ ಪಕ್ಕಾ ಚೆನ್ನಾಗಿರಲಿದೆಯೆಂದೇ ಅರ್ಥ.
ಭಾರತದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ 'ಆರ್‌ಆರ್‌ಆರ್' ಸಿನಿಮಾದ ಟ್ರೇಲರ್ ಇಂದು ಬಿಡುಗಡೆ ಆಗಿದ್ದು, ಟ್ರೇಲರ್ ಮೈನವಿರೇಳಿಸುವಂತಿದೆ. 3:15 ನಿಮಿಷದ ಟ್ರೇಲರ್ ಇದಾಗಿದ್ದು ಕಣ್ಣ ಮೇಲೆ ರೆಪ್ಪೆ ಹಾಕದಂತೆ ನೋಡಿಸಿಕೊಳ್ಳುತ್ತದೆ.
ಸಿನಿಮಾದಲ್ಲಿ ಅಡಕವಾಗಿರುವ ಭಾವುಕತನ, ದೇಶಪ್ರೇಮ, ಸ್ನೇಹ ಭಾವ, ಪ್ರೀತಿ, ಆಕ್ಷನ್, ಕ್ರೌರ್ಯ ಎಲ್ಲದರ ಝಲಕ್ ಟ್ರೇಲರ್‌ನಲ್ಲಿದೆ. ಆಕ್ಷನ್ ದೃಶ್ಯಗಳಂತೂ ಅತ್ಯದ್ಭುತವಾಗಿವೆ. ಅಲ್ಲಲ್ಲಿ ಪಂಚ್ ಡೈಲಾಗ್‌ಗಳು ಸಹ. ರಾಮ್ ಚರಣ್ ತೇಜ ಬಿಲ್ಲು-ಬಾಣ ಹಿಡಿದು ಬರುವ ದೃಶ್ಯವಂತೂ ಅದ್ಭುತವಾಗಿದೆ.

ಟ್ರೇಲರ್‌ನಲ್ಲಿ ಭಾವುಕ ಅಂಶಗಳು ಸಹ ಇವೆ. ನಾಯಕಿಯರಾದ ಆಲಿಯಾ ಭಟ್, ಒಲಿವಿಯಾ ಮೋರಿಸ್, ಶ್ರೆಯಾ ಶಿರಿನ್ ಅವರುಗಳ ಅಂದವೂ ಇದೆ. ಎಲ್ಲಕ್ಕಿಂತಲೂ ಹೆಚ್ಚಾಗಿ ಗಮನ ಸೆಳೆಯುವುದು ಆಕ್ಷನ್ ದೃಶ್ಯಗಳು.
ಮೊದಲಿಗೆ 'ಆರ್‌ಆರ್‌ಆರ್' ಟ್ರೇಲರ್ ಅನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗಿದೆ. ಅದಾದ ಬಳಿಕ ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಚಿತ್ರಮಂದಿರಗಳಲ್ಲಿಯಂತೂ 'ಆರ್‌ಆರ್‌ಆರ್' ಟ್ರೇಲರ್‌ಗೆ ಅದ್ಧೂರಿ ಸ್ವಾಗತ ದೊರೆತಿದೆ.
ಸಿನಿಮಾದ ಟ್ರೇಲರ್ ತೆಲುಗು, ಕನ್ನಡ, ತಮಿಳು, ಹಿಂದಿ, ಮಲಯಾಳಂ ಭಾಷೆಗಳಲ್ಲಿ ಬಿಡುಗಡೆ ಆಗಿದೆ. ಸಿನಿಮಾವು ಜನವರಿ 07ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.
'ಆರ್‌ಆರ್‌ಆರ್' ಸಿನಿಮಾವು ಅಲ್ಲೂರಿ ಸೀತಾರಾಮ ರಾಜು ಹಾಗೂ ಕೋಮರಂ ಭೀಮ್ ಅವರುಗಳ ಜೀವನ ಮತ್ತು ಹೋರಾಟದ ಕತೆಯನ್ನು ಆಧರಿಸಿದ್ದು, ಸಿನಿಮಾದಲ್ಲಿ ಅಲ್ಲೂರಿ ಸೀತಾರಾಮ ರಾಜು ಪಾತ್ರದಲ್ಲಿ ರಾಮ್ ಚರಣ್ ತೇಜ, ಕೋಮರಂ ಭೀಮ್ ಪಾತ್ರದಲ್ಲಿ ಜೂ ಎನ್‌ಟಿಆರ್ ನಟಿಸಿದ್ದಾರೆ. ಸಿನಿಮಾದಲ್ಲಿ ಬಾಲಿವುಡ್ ಸ್ಟಾರ್ ನಟಿ ಆಲಿಯಾ ಭಟ್, ನಟ ಅಜಯ್ ದೇವಗನ್ ಸಹ ಇದ್ದಾರೆ. ಶ್ರೆಯಾ ಶಿರಿನ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ರಾಜಮೌಳಿ ನಿರ್ದೇಶನದ ಈ ಸಿನಿಮಾಕ್ಕೆ ಎಂಎಂ ಕೀರವಾಣಿ ಸಂಗೀತ ನೀಡಿದ್ದು, ಬಂಡವಾಳ ಹೂಡಿರುವುದು ಡಿವಿವಿ ದಯಾನಂದ.


Click it and Unblock the Notifications











