For Quick Alerts
  ALLOW NOTIFICATIONS  
  For Daily Alerts

  RRR :ಜೂ.ಎನ್‌ಟಿಆರ್‌ಗಿಂತ ರಾಮ್ ಚರಣ್ ಪಾತ್ರಕ್ಕೆ ಜಾಸ್ತಿ ಅಂಕ ಕೊಟ್ಟ ರಾಜಮೌಳಿ ತಂದೆ!

  |

  ಟಾಲಿವುಡ್ ನಟ ರಾಮ್‍ಚರಣ್ ತೇಜ ಹಾಗೂ ಜೂ.ಎನ್‌ಟಿಆರ್ ಅಭಿನಯದ ಬಹುನಿರೀಕ್ಷಿತ 'ಆರ್‌ಆರ್‌ಆರ್‌' ಸಿನಿಮಾ ಇಂದು ವಿಶ್ವದಾದ್ಯಂತ ಬಿಡುಗಡೆಯಾಗಿದೆ.

  'ಬಾಹುಬಲಿ' ನಿರ್ದೇಶಕ ರಾಜಮೌಳಿ ಇದೇ ಮೊದಲ ಬಾರಿಗೆ ತೆಲುಗಿನ ಇಬ್ಬರು ಸ್ಟಾರ್ ನಟರಿಗೆ ಒಂದೇ ಸಿನಿಮಾದಲ್ಲಿ ಆ್ಯಕ್ಷನ್ ಕಟ್ ಹೇಳಿದ್ದು, ಸಿನಿಮಾ ನೋಡಲು ಅಭಿಮಾನಿಗಳು ಥಿಯೇಟರ್‌ನತ್ತ ಮುಗಿಬೀಳುತ್ತಿದ್ದಾರೆ.

  RRR Collection: RRR ಕಲೆಕ್ಷನ್ ಟಾರ್ಗೆಟ್ 800 ಕೋಟಿ, ಇದು ಸಾವಿರ ಕೋಟಿ ಆಗುತ್ತಾ?RRR Collection: RRR ಕಲೆಕ್ಷನ್ ಟಾರ್ಗೆಟ್ 800 ಕೋಟಿ, ಇದು ಸಾವಿರ ಕೋಟಿ ಆಗುತ್ತಾ?

  ಅಲ್ಲದೆ ರಾಮ್‍ಚರಣ್ ಹಾಗೂ ಜೂ.ಎನ್‍ಟಿಆರ್ ಕಟೌಟ್‍ಗಳಿಗೆ ಹಾರ ಹಾಕಿ, ಕ್ಷೀರಾಭಿಷೇಕ ಮಾಡಿ, ಪಟಾಕಿ ಸಿಡಿಸಿ ಸಂತಸ ವ್ಯಕ್ತಪಡಿಸಿದ್ದಾರೆ. ಸಿನಿಮಾ ರಿಲೀಸ್ ಆಗಿ ಉತ್ತಮ ಪ್ರದರ್ಶನ ಕಾಣುತ್ತಿರುವ ಬೆನ್ನಲ್ಲೇ ಚಿತ್ರದಲ್ಲಿ ರಾಮ್ ಚರಣ್ ಮತ್ತು ಜೂ.ಎನ್‌ಟಿಆರ್ ಪಾತ್ರದ ಪ್ರಾಮುಖ್ಯತೆ ಬಗ್ಗೆ ರಾಜಮೌಳಿ ತಂದೆ ಹಾಗೂ 'ಆರ್‌ಆರ್‌ಆರ್‌' ಸಿನಿಮಾದ ಬರಹಗಾರ ವಿಜಯೇಂದ್ರ ಪ್ರಸಾದ್ ಮಾತನಾಡಿದ್ದಾರೆ.

  ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್

  ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್

  'ಬಾಹುಬಲಿ 2' ಚಿತ್ರದ ಬಳಿಕ ನಿರ್ದೇಶಕ ಎಸ್​.ಎಸ್​. ರಾಜಮೌಳಿ ‘ಆರ್​ಆರ್​ಆರ್​' ಚಿತ್ರವನ್ನು ಪ್ರೇಕ್ಷಕರ ಎದುರು ಇಟ್ಟಿದ್ದಾರೆ. ಹಲವು ವರ್ಷಗಳ ಪರಿಶ್ರಮದಿಂದ ಸಿದ್ಧಗೊಂಡಿರುವ ಈ ಸಿನಿಮಾ ದೊಡ್ಡ ನಿರೀಕ್ಷೆ ಹುಟ್ಟುಹಾಕಿತ್ತು. ನಿರೀಕ್ಷೆಯಂತೆ ಇಂದು ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಳ್ಳುತ್ತಿದೆ. ಇಂದು ಮುಂಜಾನೆಯ ಶೋ ಗಳನ್ನು ವೀಕ್ಷಿಸಿರು ಸಿನಿಪ್ರಿಯರು ಚಿತ್ರದ ಬಗ್ಗೆ ಉತ್ತಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಜೊತೆಗೆ ರಾಜಮೌಳಿ ನಿರ್ದೇಶನ, ಜೂ.ಎನ್‌ಟಿಆರ್, ರಾಮ್‌ ಚರಣ್ ಸೇರಿದಂತೆ ತಾರಬಳಗದ ಬಗ್ಗೆ ಮೆಚ್ಚುಗೆ ಮಾತುಗಳನ್ನು ಆಡುತ್ತಿದ್ದಾರೆ.

  RRR Twitter Review: ಟ್ವಿಟರ್‌ನಲ್ಲೂ ಬೆಂಕಿ ಹಚ್ಚಿದ ರಾಜಮೌಳಿ 'RRR'RRR Twitter Review: ಟ್ವಿಟರ್‌ನಲ್ಲೂ ಬೆಂಕಿ ಹಚ್ಚಿದ ರಾಜಮೌಳಿ 'RRR'

  ರಾಜಮೌಳಿ ತಂದೆ ಕೊಟ್ಟ ಮಾರ್ಕ್ಸ್ ಎಷ್ಟು?

  ರಾಜಮೌಳಿ ತಂದೆ ಕೊಟ್ಟ ಮಾರ್ಕ್ಸ್ ಎಷ್ಟು?

  ಈ ನಡುವಲ್ಲೇ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್, ರಾಮ್ ಚರಣ್ ಮತ್ತು ಜೂ.ಎನ್‌ಟಿಆರ್ ಪಾತ್ರಕ್ಕೆ ತಾನು ಎಷ್ಟು ಅಂಕ ಕೊಡುವುದಾಗಿ ಮಾತನಾಡಿದ್ದಾರೆ. ರಾಮ್ ಚರಣ್ ಮತ್ತು ಜೂ.ಎನ್‌ಟಿಆರ್ ಪಾತ್ರಗಳು ಚಿತ್ರದಲ್ಲಿ ಸಮಬಲನಾಗಿ ಸಾಗುವಂತೆ ರಾಜಮೌಳಿ ನೋಡಿಕೊಂಡಿದ್ದಾರೆ. ಯಾರ ಅಭಿಮಾನಿಗಳಿಗೂ ನಿರಾಸೆ ಆಗದಂತೆ ಜೋಪಾನ ಮಾಡಿದ್ದಾರೆ. ಇದರ ಜೊತೆಗೆ ತಾನು ರಾಮ್‌ ಚರಣ್ ಪಾತ್ರಕ್ಕೆ ಜೂ. ಎನ್‌ಟಿಆರ್ ಪಾತ್ರಕ್ಕಿಂತಲೂ ಒಂದೆರೆಡು ಅಂಕ ಜಾಸ್ತಿ ಕೊಡುವುದಾಗಿ ವಿಜಯೇಂದ್ರ ಪ್ರಸಾದ್ ಮಾತನಾಡಿದ್ದಾರೆ.

  Recommended Video

  Ram Charan | RRR ಸಿನಿಮಾ ದೊಡ್ಡ ಮಟ್ಟದಲ್ಲಿ ರಿಲೀಸ್ ಈಗಲೇ ಶುವರುವಾಯ್ತು ಲೆಕ್ಕಾಚಾರ!
  ಯಾವ ಕಾರಣಕ್ಕೆ ಹಿಂಗೆ ಹೇಳಿದ್ರು ?

  ಯಾವ ಕಾರಣಕ್ಕೆ ಹಿಂಗೆ ಹೇಳಿದ್ರು ?

  "ಜೂ.ಎನ್‍ಟಿಆರ್ ಪಾತ್ರವು ಬಹಳ ಪ್ರೀತಿಯ ಪಾತ್ರವಾಗಿದೆ ಮತ್ತು ಎಲ್ಲರೂ ತಕ್ಷಣವೇ ಅವರ ಮುಗ್ಧತೆಗೆ ಮಾರುಹೋಗುತ್ತಾರೆ. ಆದರೆ ರಾಮ್ ಚರಣ್ ಅವರ ಪಾತ್ರ ಸಿನಿಮಾದಲ್ಲಿ ಸುಲಭವಾಗಿಲ್ಲ.ರಾಮ್ ಚರಣ್ ಅಭಿನಯ ಮತ್ತು ಪಾತ್ರವು ಸಾಕಷ್ಟು ಕ್ಲಿಷ್ಟಕರವಾಗಿ ಇದೆ. ಹಲವಾರು ಲೇಯರ್‌ಗಳು ರಾಮ್ ಚರಣ್ ಪಾತ್ರಕ್ಕಿದೆ. ಈ ಪಾತ್ರಕ್ಕೆ ರಾಮ್ ಚರಣ್ ಅವರೇ ಸೂಕ್ತ ಎಂದು ರಾಜಮೌಳಿ, ರಾಮ್ ಚರಣ್‌ರನ್ನು ಆಯ್ಕೆ ಮಾಡಿದ್ದಾರೆ. ಹೀಗಾಗಿ ರಾಮ್ ಚರಣ್ ಪಾತ್ರಕ್ಕೆ ನಾನು ಒಂದೆರೆಡು ಅಂಕ ಹೆಚ್ಚು ಕೊಡುತ್ತೇನೆ" ಎಂದು ವಿಜಯೇಂದ್ರ ಪ್ರಸಾದ್ ಹೇಳಿದ್ದಾರೆ.

  RRR First Half Review: RRR ಮೊದಲಾರ್ಧ ಭರಪೂರ ಆಕ್ಷನ್ ಮಸ್ತ್ ಕಾಮಿಡಿRRR First Half Review: RRR ಮೊದಲಾರ್ಧ ಭರಪೂರ ಆಕ್ಷನ್ ಮಸ್ತ್ ಕಾಮಿಡಿ

  ಈ ಸಿನಿಮಾದಿಂದ ಉತ್ತಮ ಪ್ರಸಂಶೆ!

  ಈ ಸಿನಿಮಾದಿಂದ ಉತ್ತಮ ಪ್ರಸಂಶೆ!

  "ಒಂದು ಲೆಕ್ಕದಲ್ಲಿ ಈ ಹಿಂದೆ ರಾಮ್ ಚರಣ್ ಅಭಿನಯ ವಿಚಾರದಲ್ಲಿ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದಾರೆ. ಆದರೆ 'ಆರ್‌ಆರ್‌ಆರ್' ಸಿನಿಮಾದಲ್ಲಿ ರಾಮ್ ಚರಣ್ ಪಾತ್ರ ಎಲ್ಲರಿಗೂ ಹಿಡಿಸಲಿದೆ. ಈ ಸಿನಿಮಾದ ಮೂಲಕ ತನ್ನಮೇಲಿದ್ದ ಟೀಕೆಗಳನ್ನು ರಾಮ್ ಚರಣ್ ಅಳಿಸಿ ಹಾಕಲಿದ್ದಾರೆ." ಎಂದಿದ್ದಾರೆ. 'ಆರ್ಆರ್ಆರ್' ಸಿನಿಮಾ ಕನ್ನಡ, ಹಿಂದಿ,ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ರಿಲೀಸ್‌ ಆಗಿದ್ದು, ಕಲೆಕ್ಷನ್ ವಿಚಾರದಲ್ಲೂ ಸಾಕಷ್ಟು ಸೌಂಡ್ ಮಾಡುತ್ತಿದೆ.

  English summary
  Rajamouli’s father Vijayendra Prasad says that he will give two extra marks to Ram Charan’s role.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X