'RRR' ಚಿತ್ರದ ಮೇನ್ ಹೀರೊ ತಾರಕ್ ಅಥವಾ ಚರಣ್? ರಾಜಮೌಳಿ ಏನಂದ್ರು?

ರಾಜಮೌಳಿ ನಿರ್ದೇಶನದ ಮಲ್ಟಿಸ್ಟಾರರ್ ಸಿನಿಮಾ 'RRR' ಬ್ಲಾಕ್‌ಬಸ್ಟರ್ ಹಿಟ್ ಆಗಿದ್ದು ಗೊತ್ತೇಯಿದೆ. ಇದೀಗ ಈ ಚಿತ್ರದ ಮೇಕಿಂಗ್ ಬಗ್ಗೆ ಒಂದು ಡಾಕ್ಯುಮೆಂಟರಿ ನಿರ್ಮಾಣವಾಗಿದೆ. ಶೀಘ್ರದಲ್ಲೇ ಅದು ಆಯ್ದ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳಲಿದೆ. ಅಂದಹಾಗೆ ಈ ಚಿತ್ರದಲ್ಲಿ ನಿಜವಾದ ಹೀರೊ ಯಾರು? ಎನ್ನುವ ಪ್ರಶ್ನೆ ಕೆಲವರನ್ನು ಕಾಡುತ್ತಿದೆ.

'RRR' ಸಿನಿಮಾ ಬಂದೋಗಿ 3 ವರ್ಷ ಕಳೆದರೂ ಇದೊಂದು ಚರ್ಚೆಗೆ ಬ್ರೇಕ್ ಬಿದ್ದಿಲ್ಲ. ಚಿತ್ರದಲ್ಲಿ ರಾಮ್‌ಚರಣ್ ಹಾಗೂ ಜ್ಯೂ. ಎನ್‌ಟಿಆರ್ ಇಬ್ಬರಿಗೂ ಸಮಾನವಾದ ಪಾತ್ರಗಳನ್ನು ಜಕ್ಕಣ್ಣ ಕೊಟ್ಟಿದ್ದರು. ಇಬ್ಬರೂ ಅಷ್ಟೇ ಸೊಗಸಾಗಿ ನಟಿಸಿದ್ದಾರೆ. ಆದರೆ ಮೇಲ್ನೋಟಕ್ಕೆ ಚರಣ್ ಹೀರೊ ರೀತಿ ಕಂಡರೆ ಆತನಿಗೆ ಸಹಾಯ ಮಾಡುವ ಪೋಷಕ ಪಾತ್ರದಲ್ಲಿ ತಾರಕ್ ಇದ್ದಾರಾ? ಎನಿಸುತ್ತದೆ.

Ram Charan or Jr NTR who is main hero in RRR Movie Rajamouli issue clarification

ಯಂಗ್ ಟೈಗರ್ ಅಭಿಮಾನಿಗಳು ಕೂಡ 'RRR' ಚಿತ್ರ ನೋಡಿ ಬೇಸರಗೊಂಡಿದ್ದರು. ತಾರಕ್ ಅಭಿನಯ ಸೂಪರ್. ಆದರೆ ನೆಚ್ಚಿನ ನಟ ಚಿತ್ರದಲ್ಲಿ ಕೊಂಚ ಸೈಡ್ ಆದಂತೆ ಕಾಣುತ್ತದೆ ಎನ್ನುವುದು ಅಭಿಮಾನಿಗಳ ಆರೋಪ. ಮತ್ತೊಂದು ಕಡೆ ಚರಣ್ ಅಭಿಮಾನಿಗಳು ಕಾಲರ್ ಎಗರಿಸಿ ಇದೇ ವಿಚಾರದ ಬಗ್ಗೆ ಕಾಮೆಂಟ್ ಮಾಡುತ್ತಾ ಬರ್ತಿದ್ದಾರೆ. ನಮ್ಮ ಹೀರೊನೇ ಚಿತ್ರದ ನಾಯಕ, ನಿಮ್ಮ ಹೀರೋ ಸೈಡ್ ರೋಲ್ ಪ್ಲೇ ಮಾಡಿರೋದು ಎಂದು ಟ್ರೋಲ್ ಮಾಡುತ್ತಿದ್ದಾರೆ.

ರಾಜಮೌಳಿ ನೆಚ್ಚಿನ ನಟ ತಾರಕ್. ಸಹೋದರನ ಸಮಾನ. ಆದರೆ ನಂಬಿಸಿ ಕೋಮುರಂ ಭೀಮ್ ಪಾತ್ರ ಕೊಟ್ಟು ಮೋಸ ಮಾಡಿಬಿಟ್ಟರು ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಲೇ ಇದ್ದಾರೆ. ಸ್ವತಃ ರಾಜಮೌಳಿ ಈ ಅಸಮಾಧಾನದ ಬಗ್ಗೆ ಮಾತನಾಡಿದ್ದ ಹಳೇ ವೀಡಿಯೋ ಈಗ ವೈರಲ್ ಆಗುತ್ತಿದೆ. ಬಾಲಿವುಡ್ ಹಂಗಾಮ ಯೂಟ್ಯೂಬ್ ಸಂದರ್ಶನದಲ್ಲಿ ಜಕ್ಕಣ್ಣ ಈ ಬಗ್ಗೆ ಮಾತನಾಡಿದ್ದರು.

ಚಿತ್ರದಲ್ಲಿ ಚರಣ್ ಹಾಗೂ ತಾರಕ್ ಇಬ್ಬರೂ ಅದ್ಭುತವಾಗಿ ನಟಿಸಿದ್ದಾರೆ. ಅದರಲ್ಲಿ ಎರಡೂ ಮಾತಿಲ್ಲ. ನಿರ್ದೇಶಕನಾಗಿ ಅವರಿಬ್ಬರ ಬಗ್ಗೆ ಇಂತಹ ಮಾತುಗಳು ಬಂದಿದ್ದು ನನಗೆ ಇಷ್ಟವಾಗಲಿಲ್ಲ. ಯಾರಿಗಿಂತ ಯಾರು ಹೆಚ್ಚು ಎನ್ನುವುದು ನೀವು ನೋಡುವುದರಲ್ಲಿ ಇರುತ್ತದೆ. ನೀವು ಯಾವ ಕೋನದಲ್ಲಿ ನೋಡುತ್ತೀರೋ, ಹಾಗೆ ಕಾಣುತ್ತದೆ ಎಂದು ಜಕ್ಕಣ್ಣ ಹೇಳಿದ್ದಾರೆ.

ನಿಜ ಹೇಳಬೇಕು ಅಂದರೆ ಕ್ಲೈಮ್ಯಾಕ್ಸ್‌ನಲ್ಲಿ ಚರಣ್‌ಗೆ ಹೆಚ್ಚಿನ ಸ್ಕ್ರೀನ್‌ಸ್ಪೇಸ್ ಸಿಕ್ಕಿದೆ. ಆತನ ಕೊನೆಯಲ್ಲಿ ಹೆಚ್ಚು ಗಮನ ಸೆಳೆಯುತ್ತಾನೆ. ಆದರೆ ನಾನು 'ಕೊಮುರಂ ಭೀಮುಡೋ' ಹಾಡಿಗೆ ಚಿತ್ರವನ್ನು ನಿಲ್ಲಿಸಿದ್ದರೆ, ಚರಣ್‌ ಪೋಷಕ ನಟನಂತೆ, ತಾರಕ್ ಹೀರೋ ರೀತಿ ಕಾಣುತ್ತಿದ್ದರು. ಒಬ್ಬ ಕಥೆಗಾರನಾಗಿ ಆ ರೀತಿ ನೋಡೋಕೆ ಆಗಲ್ಲ ಎಂದು ರಾಜಮೌಳಿ ಸ್ಪಷ್ಟನೆ ಕೊಟ್ಟಿದ್ದಾರೆ.

ನೀವು ಕಥೆ ನೋಡಿದರೆ ಚರಣ್‌ನ ತಾರಕ್ ಎರಡು ಬಾರಿ ಕಾಪಾಡುತ್ತಾನೆ. ಆದರೆ ಚರಣ್ ಒಮ್ಮೆ ತಾರಕ್‌ನ ರಕ್ಷಿಸುತ್ತಾನೆ. ಒಂದು ಹಂತದಲ್ಲಿ ಚರಣ್ ಹೇಳ್ತಾನೆ ಕಳೆದ 15 ವರ್ಷದಲ್ಲಿ ನನ್ನ ಗುರಿ ಏನು ಎನ್ನವುದು ನನಗೆ ಗೊತ್ತಿರಲಿಲ್ಲ. ತಾರಕ್ ಒಂದು ಹಾಡಿನಲ್ಲಿ ನನಗೆ ತೋರಿಸಿಕೊಟ್ಟ, ನಾನು ಶಸ್ತ್ರಾಸ್ತ್ರ ಆಯುಧ ಅಂದುಕೊಂಡಿದ್ದೆ. ಆದರೆ ತಾರಕ್ ನಮ್ಮ ಭಾವೋದ್ವೇಗ ಆಯುಧ ಎಂದು ತೋರಿಸಿಕೊಟ್ಟ. ಹೀಗೆ ಹೇಳಬಹುದು ಎಂದು ಮೌಳಿ ವಿವರಿಸಿದ್ದಾರೆ.

ಇಲ್ಲಿ ಯಾರು ಹೀರೋ, ಯಾರು ಪೋಷಕ ನಟ ಎನ್ನುವುದು ಬರಲ್ಲ, ಆ ಕಥೆಯನ್ನು ಪಾತ್ರವನ್ನು ಪ್ರೇಕ್ಷಕರು ಹೇಗೆ ನೋಡುತ್ತಾರೆ ಎನ್ನುವುದು ಮುಖ್ಯ ಎಂದು ಜಕ್ಕಣ್ಣ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ತಾರಕ್ ಅದ್ಭುತ ನಟ. ಚರನ್ ಒಳ್ಳೆ ನಟ. ಆದರೆ ಇಷ್ಟು ಅದ್ಭುತವಾಗಿ ನಟಿಸುವುದನ್ನು ಜನ ನೋಡಿರಲಿಲ್ಲ ಎಂದು ರಾಜಮೌಳಿ ಎಲ್ಲಾ ಚರ್ಚೆಗೆ ತೆರೆ ಎಳೆದಿದ್ದಾರೆ.

More from Filmibeat

English summary
Director SS Rajamouli clarifies Jr NTR and Ram Charan's role, screen space in RRR movie.;
Read more about: ntr ramcharan rajamouli
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X