For Quick Alerts
  ALLOW NOTIFICATIONS  
  For Daily Alerts

  ಕೃತಿ ಸನೊನ್ ಬಳಿಕ ದುಬಾರಿ ಕಾರು ಖರೀದಿಸಿದ ನಟ ರಾಮ್ ಚರಣ್

  By ಫಿಲ್ಮಿಬೀಟ್ ಡೆಸ್ಕ್
  |

  ಬಾಲಿವುಡ್ ಖ್ಯಾತ ನಟಿ ಕೃತಿ ಸನೊನ್ ಇತ್ತೀಚಿಗಷ್ಟೆ ದುಬಾರಿ ಕಾರು ಖರೀದಿಸಿ ಸುದ್ದಿಯಾಗಿದ್ದರು. ಮಿಮಿ ಸಿನಿಮಾದ ಯಶಸ್ಸಿನ ಬಳಿಕ ಕೃತಿ ಅದೇ ಸಂತಸದಲ್ಲಿ ಐಷಾರಾಮಿ 'ಮರ್ಸಿಡಿಸ್ ಮೇಬ್ಯಾಕ್ ಜಿ ಎಲ್ ಎಸ್ 600' ಕಾರನ್ನು ಖರೀದಿಸಿದ್ದರು. ಕೃತಿ ಕಾರು ಖರೀದಿಯ ಬೆನ್ನಲ್ಲೇ ಅದೇ ಬ್ರಾಂಡ್‌ನ ಕಾರು ಖರೀದಿಸಿ ಸುದ್ದಿಯಾಗಿದ್ದಾರೆ ಟಾಲಿವುಡ್ ಸ್ಟಾರ್ ರಾಮ್ ಚರಣ್.

  ಟಾಲಿವುಡ್ ಸ್ಟಾರ್ ನಟ ರಾಮ್ ಚರಣ್ ಇತ್ತೀಚಿಗಷ್ಟೆ 'ಮರ್ಸಿಡಿಸ್ ಮೇಬ್ಯಾಕ್ ಜಿ ಎಲ್ ಎಸ್ 600' ಕಾರನ್ನು ಖರೀದಿಸಿದ್ದಾರೆ. 4 ಕೋಟಿ ರೂ ಬೆಲೆಬಾಳುವ ಕಾರು ಇದಾಗಿದ್ದು, ರಾಮ್ ಚರಣ್ ತನ್ನ ಹೊಸ ಕಾರಿನ ಜೊತೆ ನಿಂತು ಕ್ಯಾಮರಾಗೆ ಪೋಸ್ ನೀಡಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಳಿಕ ಅದೇ ಕಾರನ್ನು ಏರಿ ತಾವೆ ಮನೆಗೆ ಡ್ರೈವ್ ಮಾಡಿಕೊಂಡು ಹೋಗಿದ್ದಾರೆ. ರಾಮ್ ಚರಣ್ ಹೊಸ ಕಾರಿನ ಫೋಟೋಗಳು ಎಲ್ಲಾ ಕಡೆ ಹರಿದಾಡುತ್ತಿದೆ. ಮುಂದೆ ಓದಿ...

  ರಾಮ್ ಬಳಿ ಇವೆ ಅನೇಕ ಐಷಾರಾಮಿ ಕಾರುಗಳು

  ರಾಮ್ ಬಳಿ ಇವೆ ಅನೇಕ ಐಷಾರಾಮಿ ಕಾರುಗಳು

  ರಾಮ್ ಚರಣ್ ಬಳಿ ಈಗಾಗಲೇ ಅನೇಕ ಐಷಾರಾಮಿ ಕಾರುಗಳಿವೆ. ತನ್ನ ಮನೆಯ ಗ್ಯಾರೇಜ್‌ನಲ್ಲಿ ರಾಮ್ ಅನೇಕ ಕಾರುಗಳನ್ನು ಸಂಗ್ರಹಿಸಿದ್ದಾರೆ. ಆಸ್ಟನ್ ಮಾರ್ಟಿನ್ ವಿ8 ವಾಂಟೇಜ್, ರೇಂಜ್ ರೋವರ್, ರೋಲ್ಸ್ ರಾಯಸ್ ಫ್ಯಾಂಟಮ್, ಮರ್ಸಿಡಿಸ್ ಬೆಂಜ್, ಜಿಎಲ್ 350 ಸೇರಿದಂತೆ ಅನೇಕ ದುಬಾರಿ ಕಾರುಗಳಿವೆ. ಇದೀಗ ಮತ್ತೊಂದು ಐಷಾರಾಮಿ ಕಾರು ರಾಮ್ ಚರಣ್ ಮನೆಯ ಗ್ಯಾರೇಜ್ ಸೇರಿದೆ.

  ಇತ್ತೀಚಿಗಷ್ಟೆ ಹೊಸ ಸಿನಿಮಾದ ಮುಹೂರ್ತ ಮುಗಿಸಿದ ರಾಮ್

  ಇತ್ತೀಚಿಗಷ್ಟೆ ಹೊಸ ಸಿನಿಮಾದ ಮುಹೂರ್ತ ಮುಗಿಸಿದ ರಾಮ್

  ಅಂದ ಹಾಗೆ ರಾಮ್ ಚರಣ್ ಸದ್ಯ ಆರ್ ಆರ್ ಆರ್ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಜೊತೆಗೆ ಆಚಾರ್ಯ ಸಿನಿಮಾವನ್ನು ಮುಗಿಸಿದ್ದಾರೆ. ಇತ್ತೀಚಿಗಷ್ಟೆ ಬಹುನಿರೀಕ್ಷೆಯ ಶಂಕರ್ ನಿರ್ದೇಶನದ 'ಆರ್ ಸಿ15' ಸಿನಿಮಾದ ಮುಹೂರ್ತ ಸಮಾರಂಭ ನೇರವೇರಿಸಿದ್ದಾರೆ. ಈಗಾಗಲೇ ಚಿತ್ರದ ಫೋಟೋಶೂಟ್ ಮುಗಿಸಿದ್ದು, ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭ ಮಾಡಲಿದೆ. ಈ ಚಿತ್ರದಲ್ಲಿ ರಾಮ್ ಚರಣ್ ನಾಯಕಿಯಾಗಿ ಕಿಯಾರಾ ಅಡ್ವಾಣಿ ಕಾಣಿಸಿಕೊಳ್ಳುತ್ತಿದ್ದಾರೆ.

  ಕೃತಿ ಖರೀದಿಸಿದ ಕಾರಿನ ಬೆಲೆ 2.43 ಕೋಟಿ ರೂ.

  ಕೃತಿ ಖರೀದಿಸಿದ ಕಾರಿನ ಬೆಲೆ 2.43 ಕೋಟಿ ರೂ.

  ನಟಿ ಕೃತಿ ಸನೊನ್ ವಿಚಾರಕ್ಕೆ ಬರುವುದಾದರೇ ಕೃತಿ ಸದ್ಯ ಮಿಮಿ ಸಿನಿಮಾದ ಯಶಸ್ಸಿನ ಖುಷಿಯಲ್ಲಿದ್ದಾರೆ. ಇತ್ತೀಚಿಗಷ್ಟೆ ಮಿಮಿ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಿದ್ದು, ಸಿನಿಮಾಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದೇ ಖುಷಿಯಲ್ಲಿ ನಟ ಕೃತಿ ದುಬಾರಿ ಕಾರು ಖರೀದಿ ಮಾಡಿದ್ದಾರೆ. ಅಂದಹಾಗೆ ಕೃತಿ ಖರೀದಿಸಿದ ಹೊಸ ಐಷಾರಾಮಿ ಕಾರು 'ಮರ್ಸಿಡಿಸ್ ಮೇಬ್ಯಾಕ್ ಜಿಎಲ್ ಎಸ್ 600' ಬೆಲೆ 2.43 ಕೋಟಿ ರೂ. ಎಂದು ಹೇಳಲಾಗುತ್ತಿದೆ. ಆದರೆ ರಾಮ್ ಚರಣ್ ಖರೀದಿ ಮಾಡಿದ ಕಾರಿನ ಬೆಲೆ 4 ಕೋಟಿ ರೂ.

  ತನ್ನ ಕನಸಿನ ಕಾರಿನ ಜೊತೆ ಕೃತಿ ಪೋಸ್

  ತನ್ನ ಕನಸಿನ ಕಾರಿನ ಜೊತೆ ಕೃತಿ ಪೋಸ್

  ಕೃತಿ ತನ್ನ ಕನಸಿನ ಕಾರಿನ ಜೊತೆ ನಿಂತು ಫೋಟೋಗೆ ಪೋಸ್ ನೀಡುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ. ಕಪ್ಪು ಬಣ್ಣದ ಕಾರಿನ ಜೊತೆ ನಿಂತು ಪಿಂಕ್ ಬಣ್ಣದ ಟಾಪ್ ಮತ್ತ ಡೆನಿಮ್ ಧರಿಸಿರುವ ಕೃತಿ ಫೋಟೋ ಈಗ ಎಲ್ಲಾ ಕಡೆ ಹರಿದಾಡುತ್ತಿದೆ. ಅಂದಹಾಗೆ ಕೃತಿಗೆ ಮಿಮಿ ಸಿನಿಮಾ ಸಕ್ಸಸ್ ಜೊತೆಗೆ ಟಾಪ್ ನಟಿಯ ಸ್ಥಾನ ತಂದುಕೊಟ್ಟಿದೆ. ಬಾಲಿವುಡ್ ಟಾಪ್ ಸ್ಟಾರ್ ನಟಿಯರ ಸಾಲಿನಲ್ಲೀಗ ಕೃತಿ ಕೂಡ ಸೇರಿದ್ದಾರೆ.

  ಸಂಭಾವನೆ ಹೆಚ್ಚಿಸಿಕೊಂಡ ಕೃತಿ

  ಸಂಭಾವನೆ ಹೆಚ್ಚಿಸಿಕೊಂಡ ಕೃತಿ

  ಮಿಮಿ ಸಿನಿಮಾ ಸಕ್ಸಸ್ ಬಳಿಕ ಕೃತಿಗೆ ಬೇಡಿಕೆ ಕೂಡ ಹೆಚ್ಚಾಗಿದೆ. ಸಾಲು ಸಾಲು ಸಿನಿಮಾಗಳಲ್ಲಿ ಕೃತಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಬಳಿಕ ಸಂಭಾವನೆಯನ್ನು ದುಪ್ಪಟ್ಟು ಮಾಡಿಕೊಂಡಿದ್ದಾರೆ. ಮೂಲಗಳ ಪ್ರಕಾರ ಕೃತಿ ಸಿನಿಮಾಗೆ 2.5 ಕೋಟಿ ರೂ.ಯಿಂದ 3 ಕೋಟಿ ವರೆಗೂ ಸಂಭಾವನೆ ಪಡೆಯುತ್ತಿದ್ದರು. ಮಿಮಿ ಸಕ್ಸಸ್ ಬಳಿಕ 5ರಿಂದ 6 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.

  ಕೃತಿ ಬಳಿ ಇರುವ ಸಿನಿಮಾಗಳು

  ಕೃತಿ ಬಳಿ ಇರುವ ಸಿನಿಮಾಗಳು

  ಸದ್ಯ ಕೃತಿ ಪ್ರಭಾಸ್‌ಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹೌದು ಪ್ರಭಾಸ್ ನಟನೆಯ ಆದಿಪುರುಷ್ ಸಿನಿಮಾದಲ್ಲಿ ಕೃತಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಕೃತಿ ಸೀತೆ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಾಮನಾಗಿ ಪ್ರಭಾಸ್ ಬಣ್ಣ ಹಚ್ಚಿದ್ದಾರೆ. ರಾವಣನಾಗಿ ಬಾಲಿವುಡ್ ನಟ ಸೈಫ್ ಅಲಿ ಖಾನ್ ನಟಿಸುತ್ತಿದ್ದಾರೆ. ಈ ಸಿನಿಮಾದ ಮೇಲೆ ಕೃತಿ ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇನ್ನು ಅಕ್ಷಯ್ ಕುಮಾರ್ ನಟನೆಯ ಬಚ್ಚನ್ ಪಾಂಡೆ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. ಹಮ್ ದೋ ಹಮಾರೆ ದೋ, ಗಣಪತ್ ಸೇರಿದಂತೆ ಇನ್ನು ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

  Read more about: ram charan teja car tollywood
  English summary
  Telugu actor Ram Charan is the proud owner of India's 1st Mercedes Maybach GLS600 customized version.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X