ಮುಂಬೈ ಬೀದಿಗಳಲ್ಲಿ ಬರಿಗಾಲಲ್ಲಿ ಓಡಾಡಿದ ರಾಮ್ ಚರಣ್: ನಟನ ಸರಳತೆಗೆ ಬಾಲಿವುಡ್ಡಿಗರು ಫಿದಾ
ಗೆಲುವು ಅಹಂಕಾರ ತರುತ್ತದೆ, ಅಹಂ ಅನ್ನು ತಲೆಗೇರಿಸುತ್ತದೆ. ಇದು ಹಲವರ ವಿಷಯದಲ್ಲಿ ನಿಜ ಆದರೆ ನಟ ರಾಮ್ ಚರಣ್ ವಿಷಯದಲ್ಲಲ್ಲ. 'RRR' ಸಿನಿಮಾ ಬಹುದೊಡ್ಡ ಹಿಟ್ ಆಗಿದೆ, ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದೆ. ಸಿನಿಮಾದ ನಾಯಕ ನಟ ರಾಮ್ ಮಾತ್ರ ಗೆಲುವಿನಿಂದ ಎದೆ ಉಬ್ಬಿಸಿಲ್ಲ ಬದಲಿಗೆ ಇನ್ನಷ್ಟು ವಿನೀತರಾಗಿದ್ದಾರೆ.
'RRR' ಪ್ರಚಾರ ಸಮಯದಲ್ಲಿ ಮುಂಬೈನಲ್ಲಿ ಬಹುವಾಗಿ ಓಡಾಡಿದ್ದ ರಾಮ್ ಚರಣ್ ನಿನ್ನೆ (ಏಪ್ರಿಲ್ 05) ಮತ್ತೆ ಮುಂಬೈಗೆ ಭೇಟಿ ನೀಡಿದ್ದರು. ಆದರೆ ಈ ಬಾರಿ ಅವರ ವೇಷ-ಭೂಷಣ ಸಂಪೂರ್ಣ ಭಿನ್ನವಾಗಿತ್ತು.
ಪ್ರಚಾರಕ್ಕೆ ತೆರಳಿದ್ದಾಗ ಸದಾ 'RRR'ನ ಶರ್ಟ್‌ಗಳು, ದುಬಾರಿ ಜೀನ್ಸ್, ಕಣ್ಣಿಗೆ ತಂಪು ಕನ್ನಡಕ ತೊಟ್ಟಿದ್ದ ರಾಮ್ ಚರಣ್ ನಿನ್ನೆ, ಕಪ್ಪು ಬಣ್ಣದ ಸಾಧಾರಣ ಕುರ್ತಾ ಶರ್ಟ್ ಧರಿಸಿ, ಕಪ್ಪು ಬಣ್ಣದ ಪ್ಯಾಂಟು ಧರಿಸಿ, ಒಂದು ಶಾಲು ಕೈಯಲ್ಲಿ ಹಿಡಿದು, ಬರಿಗಾಲಲ್ಲಿ ಮುಂಬೈನಲ್ಲಿ ಓಡಾಡಿದರು. ಅವರನ್ನು ಮುತ್ತಿಕೊಂಡ ಮಾಧ್ಯಮದವರಿಗೆ, ಅಭಿಮಾನಿಗಳಿಗೆ ಪ್ರೀತಿಯಿಂದ ಶುಭಾಶಯ ತಿಳಿಸಿ ಅಲ್ಲಿಂದ ತೆರಳಿದರು. ರಾಮ್ ಚರಣ್ ಸರಳತೆಗೆ ಸಾಕ್ಷಿಯಾದ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
'RRR' ಗೆಲುವಿನ ಬೆನ್ನಲ್ಲೆ ನಟ ರಾಮ್ ಚರಣ್ ತೇಜ ಶಬರಿಮಲೆ ಅಯ್ಯಪ್ಪ ಮಾಲೆ ಧರಿಸಿದ್ದು, ಅದೇ ಕಾರಣಕ್ಕೆ ಮಾಲ ಧಾರಿಯಾಗಿ ಕಪ್ಪು ಬಣ್ಣದ ಸರಳ ಉಡುಪು, ಮಾಲೆ ಧರಿಸಿ, ನಿಯಮದಂತೆ ಚಪ್ಪಲಿಗಳನ್ನು ತ್ಯಜಿಸಿ ಬರಿಗಾಲಲ್ಲಿ ಓಡಾಡುತ್ತಿದ್ದಾರೆ ರಾಮ್ ಚರಣ್.

ರಾಮ್ ಅನ್ನು ಮುತ್ತಿಕೊಂಡ ಅಭಿಮಾನಿಗಳು
ನಿನ್ನೆ ರಾಮ್ ಚರಣ್ ಮುಂಬೈನ ಕೆಲವು ಚಿತ್ರಮಂದಿರಗಳಿಗೆ ಭೇಟಿ ನೀಡಿ ಅಭಿಮಾನಿಗಳನ್ನು ಚಕಿತಗೊಳಿಸಿದರು. ರಾಮ್ ಚರಣ್ ಗೈತೆ ಚಿತ್ರಮಂದಿರದ ಬಳಿ ಬಂದಾಗಂತೂ ಅಭಿಮಾನಿಗಳು ಅವರನ್ನು ಮುತ್ತಿಕೊಂಡರು, ಆದರೆ ಸಮಾಧಾನದಿಂದ ನಗುತ್ತಲೇ ಎಲ್ಲರಿಗೂ ಕೈ ಮುಗಿದು ರಾಮ್ ಚರಣ್ ಅಲ್ಲಿಂದ ಕಾರಿನಲ್ಲಿ ತೆರಳಿದರು.

ಅಯ್ಯಪ್ಪ ಮಾಲಾಧಾರಿ ರಾಮ್ ಚರಣ್
ರಾಮ್ ಚರಣ್ ಕೇವಲ ಒಂದೆರಡು ದಿನಗಳಿಗಾಗಿ ಮಾಲೆ ಧರಿಸಿಲ್ಲ, ಬದಲಿಗೆ ಬರೋಬ್ಬರಿ 41 ದಿನಗಳ ಕಾಲ ಅವರು ಮಾಲಾಧಾರಿಯಾಗಿ ಅಯ್ಯಪ್ಪನ ಸ್ಮರಣೆ ಮಾಡಲಿದ್ದಾರೆ. ಮಾಲಾಧಾರಿ ಪಾಲಿಸಬೇಕಾದ ಕಠಿಣ ನಿಯಮಗಳು 41 ದಿನಗಳ ವರೆಗೆ ಪಾಲಿಸಿ ಬಳಿಕ ಶಬರಿಮಲೆಗೆ ತೆರಳಿ ದೇವರ ದರ್ಶನ ಮಾಡಲಿದ್ದಾರೆ. ರಾಮ್ ಚರಣ್ ಪ್ರತಿವರ್ಷವೂ ಅಯ್ಯಪ್ಪ ದರ್ಶನ ಮಾಡುತ್ತಾರೆ. ಕಳೆದ ವರ್ಷಾಂತ್ಯದಲ್ಲಿ ರಾಮ್ ಚರಣ್ ತಂದೆ ಚಿರಂಜೀವಿ ಸಹ ಅಯ್ಯಪ್ಪ ಮಾಲೆ ಧರಿಸಿದ್ದರು. ಆ ಸಮಯದಲ್ಲಿ ರಾಮ್ ಚರಣ್ ಚಿತ್ರಿಕರಣದಲ್ಲಿ ಬ್ಯುಸಿಯಾಗಿದ್ದ ಕಾರಣ ಈಗ ಚಿತ್ರೀಕರಣ, ಪ್ರಚಾರವೆಲ್ಲ ಮುಗಿದು ಸಿನಿಮಾ ಬಿಡುಗಡೆ ಆದ ಬಳಿಕ ರಾಮ್ ಚರಣ್ ಮಾಲಾಧಾರಣೆ ಮಾಡಿದ್ದಾರೆ.
Recommended Video


ಚಿನ್ನದ ನಾಣ್ಯ ಉಡುಗೊರೆ ನೀಡಿದ ರಾಮ್ ಚರಣ್
'RRR' ಸಿನಿಮಾದ ಯಶಸ್ಸಿನ ಬಳಿಕ ಸಿನಿಮಾಕ್ಕೆ ಕೆಲಸ ಮಾಡಿದ ಯುನಿಟ್ ಸದಸ್ಯರಿಗೆ ಭೋಜನ ಕೂಟ ಆಯೋಜಿಸಿದ್ದ ರಾಮ್ ಚರಣ್ ತೇಜ, ಚಿತ್ರತಂಡದಲ್ಲಿ ಕೆಲಸ ಮಾಡಿದ ಬಹುತೇಕ ಸದಸ್ಯರಿಗೆ ಚಿನ್ನದ ನಾಣ್ಯವನ್ನು ಉಡುಗೊರೆ ನೀಡಿದ್ದಾರೆ. 18 ಲಕ್ಷ ರುಪಾಯಿ ಮೌಲ್ಯದ ಚಿನ್ನದ ನಾಣ್ಯಗಳನ್ನು ರಾಮ್ ಉಡುಗೊರೆಯಾಗಿದ್ದಾರೆ. ನಾಣ್ಯದ ಒಂದು ಕಡೆ 'RRR' ಎಂದು ಮತ್ತೊಂದು ಬದಿಯಲ್ಲಿ ರಾಮ್ ಚರಣ್ ಎಂದು ಬರೆದಿರುವ ಈ ಚಿನ್ನದ ನಾಣ್ಯಗಳು ಒಂದೊಂದು 10 ಗ್ರಾಂ ತೂಕವಿವೆ. ರಾಮ್ ಚರಣ್, ಯುನಿಟ್ ಸದಸ್ಯರಿಗೆ ಚಿನ್ನದ ನಾಣ್ಯ ನೀಡುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ.

'ಆಚಾರ್ಯ' ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ
'RRR' ಸಿನಿಮಾ ಬಳಿಕ ಇದೀಗ ರಾಮ್ ಚರಣ್ ನಟಿಸಿರುವ ಮತ್ತೊಂದು ಸಿನಿಮಾ 'ಆಚಾರ್ಯ' ಬಿಡುಗಡೆಗೆ ಸಜ್ಜಾಗಿದೆ. ಸಿನಿಮಾದಲ್ಲಿ ಮೆಗಾಸ್ಟಾರ್ ಚಿರಂಜೀವಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾಕ್ಕೆ ಬಂಡವಾಳ ಹೂಡಿರುವುದು ಸ್ವತಃ ರಾಮ್ ಚರಣ್. ಸಿನಿಮಾದಲ್ಲಿ ಕಾಜಲ್ ಅಗರ್ವಾಲ್ ಹಾಗೂ ಪೂಜಾ ಹೆಗ್ಡೆ ನಾಯಕಿಯರಾಗಿ ನಟಿಸಿದ್ದು, ಕೊರಟಾಲ ಶಿವ ನಿರ್ದೇಶನ ಮಾಡಿದ್ದಾರೆ. ಇದರ ಜೊತೆಗೆ ತಮಿಳಿನ ಜನಪ್ರಿಯ ನಿರ್ದೇಶಕ ಶಂಕರ್ ನಿರ್ದೇಶನದ ಹೊಸ ಸಿನಿಮಾದಲ್ಲಿ ರಾಮ್ ಚರಣ್ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಕಿಯಾರಾ ಅಡ್ವಾಣಿ ನಾಯಕಿ.


Click it and Unblock the Notifications











