ಚಿರಂಜೀವಿ 'ಆಚಾರ್ಯ' ಸಿನಿಮಾದಲ್ಲಿ ನಟ ರಾಮ್ ಚರಣ್ ಪಾತ್ರಕ್ಕೆ ಕತ್ತರಿ

By ಫಿಲ್ಮ್ ಡೆಸ್ಕ್

ಮೆಗಾ ಸ್ಟಾರ್ ಚಿರಂಜೀವಿ ಅಭಿನಯದ ಬಹು ನಿರೀಕ್ಷೆಯ ಆಚಾರ್ಯ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೆ ಚಿತ್ರೀಕರಣ ಪ್ರಾರಂಭವಾಗಿದ್ದು, ಕೆಲವು ಪ್ರಮುಖ ಭಾಗದ ಚಿತ್ರೀಕರಣ ಮಾಡಿ ಮುಗಿಸಿದ್ದಾರೆ. ಆದರೆ ಆಗಲೆ ಲಾಕ್ ಡೌನ್ ಆದ ಪರಿಣಾಮ ಚಿತ್ರೀಕರಣ ಸ್ಥಗಿತವಾಗಿದೆ. ಇತ್ತೀಚಿಗೆ ಆಚಾರ್ಯ ಸಿನಿಮಾ ನಾಯಕಿ ವಿಚಾರವಾಗಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿತ್ತು.

Recommended Video

French Biriyani Movie Review | Danish Sait | PuneethRajkumar | Filmibeat Kannada

ನಟಿ ತ್ರಿಷಾ ಮೊದಲ ನಾಯಕಿಯಾಗಿ ಆಯ್ಕೆಯಾಗಿದ್ದರು. ಆದರೆ ತ್ರಿಷಾ ಸಿನಿಮಾದಿಂದ ಹೊರಬಂದ ಬಳಿಕ ನಾಯಕಿ ಯಾರಗಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇತ್ತು. ಆದರೀಗ ತ್ರಿಷಾ ಜಾಗಕ್ಕೆ ನಟಿ ಕಾಜಲ್ ಅಗರವಾಲ್ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ವಿಶೇಷ ಅಂದರೆ ಚಿತ್ರದಲ್ಲಿ ನಟ ರಾಮ್ ಚರಣ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಾಮ್ ಚರಣ್ ಅಭಿನಯದ ಜೊತೆಗೆ ನಿರ್ಮಾಣ ಕೂಡ ಮಾಡುತ್ತಿದ್ದಾರೆ. ಇದೀಗ ಸಿನಿಮಾದಿಂದ ಮತ್ತೊಂದು ಸುದ್ದಿ ಕೇಳಿ ಬರುತ್ತಿದೆ. ನಿರ್ದೇಶಕ ಕೊರಟಾಲ ಶಿವ ರಾಮ್ ಚರಣ್ ಪಾತ್ರದ ಬಗ್ಗೆ ಮತ್ತೊಂದು ನಿರ್ಧಾರ ತೆಗೆದುಕೊಂಡಿದ್ದಾರೆ.

Ram Charan Role In Acharya Movie Starring Chiranjeevi To Be Cut Short By Koratala Shiva

ಚಿತ್ರದಲ್ಲಿ ನಟ ರಾಮ್ ಚರಣ್ ಪಾತ್ರಕ್ಕೆ ಕತ್ತರಿ ಹಾಕಿದ್ದಾರಂತೆ. ಪಾತ್ರದ ಅವದಿ ಕಡಿಮೆ ಮಾಡಲು ಕತ್ತರಿ ಪ್ರಯೋಗ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಅಂದ್ಮೇಲೆ ಸಿನಿಮಾದ ಕಥೆಯಲ್ಲಿ ಕೊಂಚ ಬದಲಾವಣೆ ಮಾಡಲಾಗಿದೆಯಂತೆ. ರಾಮ್ ಚರಣ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು, ಮೊದಲೆ ಪಾತ್ರದ ಅವಧಿ ಕಡಿಮೆ ಇರುತ್ತೆ. ಹೀಗಿರುವಾಗ ಪಾತ್ರಕ್ಕೆ ಕತ್ತರಿ ಹಾಕಿರುವುದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

ರಾಮ್ ಚರಣ್ ಸದ್ಯ ರಾಮಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಜೂ.ಎನ್ ಟಿ ಆರ್ ಮತ್ತೋರ್ವ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಜಯ್ ದೇವಗನ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

More from Filmibeat

English summary
Ram Charan role in Acharya movie starring Chiranjeevi to be cut short by koratala Shiva.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X