26 ಕೋಟಿ ಲಾಸ್‌ ಆಗಿದ್ದ ರಾಮ್ ಚರಣ್ ಫ್ಲಾಪ್ ಚಿತ್ರವನ್ನು ರಿರಿಲೀಸ್ ಮಾಡಿದ್ರೆ ಬಂತು ಶಾಕಿಂಗ್ ಕಲೆಕ್ಷನ್!

2007ರಲ್ಲಿ ಬಿಡುಗಡೆಗೊಂಡ ಚಿರುತ ಎಂಬ ಚಿತ್ರದ ಮೂಲಕ ಸಿನಿಮಾ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದ ರಾಮ್ ಚರಣ್ ಮೊದಲ ಚಿತ್ರದಲ್ಲಿ ಸಾಧಾರಣ ಗೆಲುವನ್ನು ಕಂಡಿದ್ದರು. ಚಿರಂಜೀವಿ ಪುತ್ರನ ಚೊಚ್ಚಲ ಚಿತ್ರ ಎಂಬ ಕಾರಣಕ್ಕೆ ಚಿತ್ರಮಂದಿರಗಳಿಗೆ ನುಗ್ಗಿದ್ದ ಸಿನಿ ಅಭಿಮಾನಿಗಳು ಹಾಗೂ ಸಿನಿ ರಸಿಕರು ಚಿತ್ರವನ್ನು ಲಾಭ ಗಳಿಸುವಂತೆ ಮಾಡಿದ್ದರು.

ಮೆಗಾ ಸ್ಟಾರ್ ಚಿರಂಜೀವಿ ಪುತ್ರ ಎಂಬ ಕಾರಣಕ್ಕೆ ಮೊದಲ ಚಿತ್ರಕ್ಕೆ ಜನ ಹರಿದು ಬಂದ ಕಾರಣ ಚಿತ್ರ ಸೋಲದೇ ಗೆಲುವನ್ನು ಕಂಡಿತು. ಆದರೆ ನಂತರದ ಚಿತ್ರಗಳ ಮೇಲೆ ಆ ಪ್ರೀತಿ, ಅಭಿಮಾನ ಪರಿಣಾಮ ಬೀರಲಿಲ್ಲ. ನಂತರದ ದಿನಗಳಲ್ಲಿ ಕೇವಲ ರಾಮ್ ಚರಣ್ ನಟನೆಯ ಒಳ್ಳೆಯ ಸಿನಿಮಾಗಳು ಮಾತ್ರ ಗೆದ್ದವು, ಸಿನಿ ರಸಿಕರು ಮೆಚ್ಚಿಕೊಳ್ಳದ ಸಿನಿಮಾಗಳು ಹೀನಾಯವಾಗಿ ಸೋಲನ್ನು ಅನುಭವಿಸಿದವು.

Ram Charans biggest biggest flop Orange collects 2.12 crore in 3 days after rerelease

ಹೌದು, ರಾಮ್ ಚರಣ್ ಎರಡನೇ ಸಿನಿಮಾ ಮಗಧೀರ ಒಳ್ಳೆಯ ಕಥೆಯನ್ನು ಹೊಂದಿದ್ದ ಕಾರಣ ಹಾಗೂ ಆ ಚಿತ್ರವನ್ನು ಜನ ಮೆಚ್ಚಿಕೊಂಡ ಕಾರಣ ಆ ಚಿತ್ರ ಇಂಡಸ್ಟ್ರಿ ಹಿಟ್ ಆಯಿತು. ಆದರೆ ಇದರ ಬೆನ್ನಲ್ಲೇ ಬಿಡುಗಡೆಗೊಂಡ ರಾಮ್ ಚರಣ್ ನಟನೆಯ ಮೂರನೇ ಸಿನಿಮಾ ಆರೆಂಜ್ ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗಿತ್ತು. ಹೌದು, 2009ರಲ್ಲಿ ರಾಮ್ ಚರಣ್ ನಟನೆಯ ಮಗಧೀರ ಇಂಡಸ್ಟ್ರಿ ಹಿಟ್ ಆಗಿ ರಾಮ್ ಚರಣ್ ತನ್ನದೇ ಆದ ಅಭಿಮಾನಿ ಬಳಗವನ್ನು ಸಂಪಾದಿಸಿದ ಬಳಿಕ 2010ರಲ್ಲಿ ಆರೆಂಜ್ ಬಿಡುಗಡೆಗೊಂಡಿತ್ತು.

ಬಿಡುಗಡೆಗೂ ಮುನ್ನವೇ ತೀರಾ ದೊಡ್ಡ ಮಟ್ಟದ ಹೈಪ್ ಹುಟ್ಟುಹಾಕಿದ್ದ ಈ ಚಿತ್ರ ಬಿಡುಗಡೆಯಾದ ಬಳಿಕ ಅದಕ್ಕೆ ವಿರುದ್ಧವಾದ ಪ್ರತಿಕ್ರಿಯೆಯನ್ನು ಪಡೆದುಕೊಂಡಿತ್ತು. ಚಿತ್ರದ ಹಾಡುಗಳು ದೊಡ್ಡ ಹಿಟ್ ಆದರೂ ಸಹ ಸಿನಿಮಾ ಮಾತ್ರ ಗೆಲ್ಲಲಿಲ್ಲ. ಸುಮಾರು 40 ಕೋಟಿ ಬಜೆಟ್‌ನಲ್ಲಿ ತಯಾರಿಸಲಾಗಿದ್ದ ಈ ಚಿತ್ರವನ್ನು ವಿತರಕರು 46 ಕೋಟಿ ಕೊಟ್ಟು ಖರೀದಿಸಿದ್ದರು. ಆದರೆ ಚಿತ್ರ ಒಟ್ಟಾರೆ 20 ಕೋಟಿ ಗ್ರಾಸ್ ಕಲೆಕ್ಷನ್ ಮಾಡುವಷ್ಟರಲ್ಲಿ ತನ್ನ ಓಟವನ್ನು ನಿಲ್ಲಿಸಿತ್ತು. ಈ ಮೂಲಕ ಆರೆಂಜ್ 26 ಕೋಟಿ ರೂಪಾಯಿ ನಷ್ಟವನ್ನು ಅನುಭವಿಸಿತ್ತು.

ಈ ಮೂಲಕ ಈ ಚಿತ್ರ ರಾಮ್ ಚರಣ್ ಸಿನಿ ಕೆರಿಯರ್‌ನಲ್ಲಿ ಬಂದ ಅತಿದೊಡ್ಡ ಫ್ಲಾಪ್ ಎನಿಸಿಕೊಂಡಿತು, ಇಂದಿಗೂ ಸಹ ಈ ಚಿತ್ರ ಈ ಕೆಟ್ಟ ಹೆಸರನ್ನು ಹೊಂದಿದೆ. ಆದರೆ ಚಿತ್ರ ಬಿಡುಗಡೆಗೊಂಡು ಹಲವು ವರ್ಷಗಳ ಬಳಿಕ ಸಿನಿ ರಸಿಕರಿಂದ ವಿಭಿನ್ನ ಪ್ರತಿಕ್ರಿಯೆಯನ್ನು ಪಡೆದುಕೊಳ್ಳಲು ಆರಂಭಿಸಿತು. ಸಿನಿಮಾ ಚೆನ್ನಾಗಿಯೇ ಇತ್ತು. ಆದರೆ ಆ ಸಮಯಕ್ಕೆ ಚಿತ್ರ ಜನರಿಗೆ ಇಷ್ಟವಾಗಲಿಲ್ಲ ಅಷ್ಟೇ ಎಂಬ ಅಭಿಪ್ರಾಯವನ್ನು ಹಲವು ಸಿನಿ ರಸಿಕರು ವ್ಯಕ್ತಪಡಿಸಿದ್ದರು.

Ram Charans biggest biggest flop Orange collects 2.12 crore in 3 days after rerelease

ಇನ್ನು ಸದ್ಯ ಟಾಲಿವುಡ್ ಅಂಗಳದಲ್ಲಿ ರಿ ರಿಲೀಸ್ ಕ್ರೇಜ್ ಹೆಚ್ಚಿದ್ದು ರಾಮ್ ಚರಣ್ ಅವರ ಈ ಆರೆಂಜ್ ಸಿನಿಮಾವನ್ನು ರಿರಿಲೀಸ್ ಮಾಡಲು ತೀರ್ಮಾನ ಮಾಡಲಾಯಿತು. ಮೊದಲ ಬಾರಿ ಬಿಡುಗಡೆಗೊಂಡಾಗಲೇ ಮಕಾಡೆ ಮಲಗಿದ್ದ ಈ ಚಿತ್ರ ಮರುಬಿಡುಗಡೆಯಾದಾಗಲೂ ಅದೇ ಫಲಿತಾಂಶವನ್ನು ಪಡೆದುಕೊಳ್ಳುತ್ತೆ ಎಂದು ಹಲವರು ಅಭಿಪ್ರಾಯ ತಿಳಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಒಳ್ಳೆ ಚಿತ್ರ ಆಗ ಚೆನ್ನಾಗಿ ಪ್ರದರ್ಶನವಾಗಲಿಲ್ಲ ಎಂದು ಕಾಮೆಂಟ್ ಮಾಡುವವರು ಚಿತ್ರವನ್ನು ನೋಡಲ್ಲ ಎಂದೂ ಸಹ ಮಾತುಗಳು ಕೇಳಿಬಂದವು. ಇನ್ನೂ ಕೆಲವರು ಚಿತ್ರವನ್ನು ಮರು ಬಿಡುಗಡೆ ಮಾಡಿ ಎಂದು ಚಿತ್ರತಂಡಕ್ಕೆ ಬೆಂಬಲ ನೀಡಿದ್ರು.

ಹೀಗೆ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡ ಈ ಚಿತ್ರವನ್ನು ಒಂದಷ್ಟು ಖರ್ಚು ಮಾಡಿ 4ಕೆ ವರ್ಷನ್‌ನಲ್ಲಿ ಮಾರ್ಚ್ 25ರಂದು ಬಿಡುಗಡೆಗೊಂಡಿದೆ. ಕೇವಲ ತೆಲುಗು ರಾಜ್ಯಗಳು ಮಾತ್ರವಲ್ಲದೇ ಪರ ರಾಜ್ಯ ಹಾಗೂ ವಿದೇಶದ ಚಿತ್ರಮಂದಿರಗಳಲ್ಲಿಯೂ ಆರೆಂಜ್ ಮರುಬಿಡುಗಡೆಯಾಗಿದೆ. ಹೀಗೆ ದೊಡ್ಡ ಸಂಖ್ಯೆಯ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡಿರುವ ಆರೆಂಜ್ 3 ದಿನಗಳಲ್ಲಿ 2.12 ಕೋಟಿ ರೂಪಾಯಿಗಳಷ್ಟು ಕಲೆಕ್ಷನ್ ಮಾಡಿದೆ. ಈ ಮೂಲಕ ಮರು ಬಿಡುಗಡೆ ಮಾಡಿದರೆ ಚಿತ್ರಕ್ಕೆ ಕಲೆಕ್ಷನ್ ಆಗಲ್ಲ ಎಂದವರ ಬಾಯಿ ಮುಚ್ಚಿಸಿದೆ.

More from Filmibeat

English summary
Ram Charan's biggest biggest flop Orange collects 2.12 crore in 3 days after rerelease. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X