ರಾಮ್‌ಚರಣ್ 'ಪೆದ್ದಿ' ರಿಲೀಸ್ ಡೇಟ್ ಪೋಸ್ಟ್‌ಪೋನ್; ಓಟಿಟಿಯಿಂದ ಭಾರೀ ನಷ್ಟ

ದಿನದಿಂದ ದಿನಕ್ಕೆ ಸಿನಿಮಾ ಮೇಕಿಂಗ್ ಸ್ಟೈಲ್, ಬ್ಯುಸಿನೆಸ್ ಎಲ್ಲವೂ ಬದಲಾಗ್ತಿದೆ. ಪ್ಯಾನ್ ಇಂಡಿಯಾ ಟ್ರೆಂಡ್ ಶುರುವಾದ ಬಳಿಕ ಹೊಸ ಹೊಸ ಸಮಸ್ಯೆಗಳು ಎದುರಾಗ್ತಿದೆ. ಸದ್ಯ ರಾಮ್‌ಚರಣ್ ನಟನೆಯ 'ಪೆದ್ದಿ' ಸಿನಿಮಾ ಈಗ ಸಂಕಷ್ಟಕ್ಕೆ ಸಿಲುಕಿದೆ. ಸಿನಿಮಾ ರಿಲೀಸ್ ತಡವಾಗಿ ನಿರ್ಮಾಪಕರು ನಷ್ಟ ಎದುರಿಸುವಂತಾಗಿದೆ.

ಬುಚ್ಚಿಬಾಬು ನಿರ್ದೇಶನದ 'ಪೆದ್ದಿ' ಚಿತ್ರದಲ್ಲಿ ರಾಮ್‌ಚರಣ್ ಜೊತೆ ಜಾನ್ವಿ ಕಪೂರ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಶಿವಣ್ಣ, ಜಗಪತಿ ಬಾಬು ಕೂಡ ಪ್ರಮುಖ ಪಾತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ಶ್ರೀರಾಮನವಮಿ ಸಂಭ್ರಮದಲ್ಲಿ ಚಿತ್ರದ ಟೀಸರ್ ರಿಲೀಸ್ ಆಗಿ ಧೂಳೆಬ್ಬಿಸಿತ್ತು. ಕುಸ್ತಿ ಪೈಲ್ವಾನ್ ಆಗಿ ಚರಣ್ ಅಬ್ಬರಿಸಿದ್ದರು. ಏಪ್ರಿಲ್ 30ಕ್ಕೆ ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ ಈಗ ಕಷ್ಟ ಕಷ್ಟ ಎನ್ನುವಂತಾಗಿದೆ.

Ram Charan s Peddi Faces Delay OTT Deal with Netflix Puts Producers Pressure

'ಪೆದ್ದಿ' ಸಿನಿಮಾ ಚಿತ್ರೀಕರಣ ಇನ್ನು ಮುಗಿದಿಲ್ಲ. ಎರಡು ಹಾಡುಗಳನ್ನು ಸೆರೆಹಿಡಿಯುವುದು ಬಾಕಿಯಿದೆ. ಜೊತೆಗೆ ಪೋಸ್ಟ್ ಪ್ರೊಡಕ್ಷನ್, ವಿಎಫ್‌ಎಕ್ಸ್ ತಡವಾಗುತ್ತಿದೆ. ಹಾಗಾಗಿ ಅನಿವಾರ್ಯವಾಗಿ ರಿಲೀಸ್ ಡೇಟ್ ಬದಲಿಸಬೇಕಾಗಿದೆ. ಮಾರ್ಚ್ 27ಕ್ಕೆ ಸಿನಿಮಾ ತೆರೆಗೆ ಬರಬೇಕಿತ್ತು. ಬಳಿಕ ಒಂದು ತಿಂಗಳು ತಡವಾಗುತ್ತದೆ ಎಂದು ಚಿತ್ರತಂಡ ಘೋಷಿಸಿತ್ತು. ಇದೀಗ ಮತ್ತೆ 2 ತಿಂಗಳು ಮುಂದೂಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ನಿರ್ಮಾಪಕರಿಗೆ ಭಾರೀ ನಷ್ಟ ಎದುರಾಗುತ್ತಿದೆ.

ಇತ್ತೀಚೆಗೆ ಓಟಿಟಿ ಸಂಸ್ಥೆಗಳು ಸಿನಿಮಾಗಳ ಮೇಲೆ ಹಿಡಿತ ಸಾಧಿಸುತ್ತಿವೆ. ಭಾರೀ ಮೊತ್ತಕ್ಕೆ ರೈಟ್ಸ್ ಕೊಂಡುಕೊಳ್ಳುವ ಸಂಸ್ಥೆಗಳು ದೊಡ್ಡ ಲೆಕ್ಕಾಚಾರ ಮಾಡುತ್ತವೆ. ಯಾವ ದಿನ ಸಿನಿಮಾ ಬಿಡುಗಡೆ ಆಗಬೇಕು, ಆ ಬಳಿಕ ಎಷ್ಟು ದಿನಕ್ಕೆ ಓಟಿಟಿ ಸ್ಟ್ರೀಮಿಂಗ್ ಆರಂಭಿಸಬೇಕು ಎಂದು ಮೊದಲೇ ಮಾತುಕತೆ ನಡೆದು ಒಪ್ಪಂದ ಆಗುತ್ತದೆ. ಆ ದಿನಕ್ಕೆ ಸರಿಯಾಗಿ ಸಿನಿಮಾ ಬಿಡುಗಡೆಯಾಗಿ ಬಳಿಕ ಓಟಿಟಿಗೆ ಬರಬೇಕು. ಕೊಂಚ ಹೆಚ್ಚು ಕಮ್ಮಿ ಆದರೂ ಓಟಿಟಿ ಸಂಸ್ಥೆಗಳು ಉಲ್ಟಾ ಹೊಡೆಯುತ್ತವೆ. ಸದ್ಯ 'ಪೆದ್ದಿ' ಚಿತ್ರಕ್ಕೂ ಇದೇ ಸಮಸ್ಯೆ ಎದುರಾಗಿದೆ.

ಭಾರೀ ಮೊತ್ತಕ್ಕೆ ನೆಟ್‌ಫ್ಲಿಕ್ಸ್ 'ಪೆದ್ದಿ' ಚಿತ್ರದ ರೈಟ್ಸ್ ಕೊಂಡುಕೊಂಡಿದೆ. ಏಪ್ರಿಲ್ 30ಕ್ಕೆ ಸಿನಿಮಾ ಬಿಡುಗಡೆ ಆಗಿ ಜೂನ್ ಮೊದಲ ವಾರದಲ್ಲಿ ಓಟಿಟಿ ಸ್ಟ್ರೀಮಿಂಗ್ ಮಾಡಬೇಕು ಎಂದು ಒಪ್ಪಂದವಾಗಿದೆ. ಆದರೆ ದಿಢಿರನೇ ಜೂನ್‌ನಲ್ಲಿ ಸಿನಿಮಾ ಬಿಡುಗಡೆಗೆ ಚಿತ್ರತಂಡ ಮುಂದಾಗಿದೆ. ಹಾಗಾಗಿ 30%ರಷ್ಟು ಓಟಿಟಿ ರೈಟ್ಸ್ ಹಣ ಕೊಡಲ್ಲ ಎಂದು ನೆಟ್‌ಫ್ಲಿಕ್ಸ್ ಪಟ್ಟು ಹಿಡಿದಿದೆ ಎನ್ನಲಾಗ್ತಿದೆ. ಇದೇ ಕಾರಣಕ್ಕೆ ನಿರ್ಮಾಪಕರು ಪೀಕಲಾಟಕ್ಕೆ ಸಿಲುಕಿದ್ದಾರೆ. ಅಂದುಕೊಂಡ ಸಮಯಕ್ಕೆ ಸಿನಿಮಾ ಬಿಡುಗಡೆ ಸಾಧ್ಯವಾಗ್ತಿಲ್ಲ, ಮತ್ತೊಂದು ಕಡೆ ನಷ್ಟ ಎದುರಿಸಬೇಕಾದ ತಲೆಬಿಸಿ ಶುರುವಾಗಿದೆ. ಹಾಗಾಗಿ ಹೊಸ ಬಿಡುಗಡೆ ದಿನಾಂಕ ಘೋಷಿಸಲು ಮೀನಾಮೇಷ ಎಣಿಸುತ್ತಿದ್ದಾರೆ ಎಂದು ಫಿಲ್ಮ್ ನಗರ್‌ನಲ್ಲಿ ಚರ್ಚೆ ಆಗ್ತಿದೆ.

'ಪೆದ್ದಿ' ಚಿತ್ರದಲ್ಲಿ 80, 90ರ ದಶಕದ ಹಳ್ಳಿ ಹಿನ್ನೆಲೆಯ ಕಥೆ ಹೇಳಲಾಗ್ತಿದೆ. ಹಳ್ಳಿಯ ಕ್ರಿಕೆಟ್ ಆಟಗಾರನಾಗಿ ರಾಮ್‌ಚರಣ್ ನಟಿಸಿದ್ದಾರೆ. ಜೊತೆಗೆ ಕುಸ್ತಿ ಪೈಲ್ವಾನ್ ಆಗಿ ಕೂಡ ಅಬ್ಬರಿಸಿದ್ದಾರೆ. ಮೆಗಾ ಫ್ಯಾನ್ಸ್‌ ಚಿತ್ರಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಪಾತ್ರಕ್ಕಾಗಿ ಚರಣ್ ತನು, ಮನ ಅರ್ಪಿಸಿಕೊಂಡಿದ್ದಾರೆ. ಬರೀ ಸಸ್ಯಹಾರ ಸೇವಿಸಿ ಪೈಲ್ವಾನ್ ಗೆಟಪ್‌ಗಾಗಿ ಸಿಕ್ಸ್ ಪ್ಯಾಕ್ಸ್ ಹ್ಯಾಬ್ಸ್ ಮಾಡಿದ್ದಾರೆ.

ಎ. ಆರ್ ರಹಮಾನ್ ಸಂಗೀತ 'ಪೆದ್ದಿ' ಚಿತ್ರಕ್ಕಿದೆ. ಈಗಾಗಲೇ ಎರಡು ಹಾಡುಗಳು ಬಿಡುಗಡೆಯಾಗಿ ಹಿಟ್ ಆಗಿದೆ. ಶೀಘ್ರದಲ್ಲೇ ಹೊಸ ಬಿಡುಗಡೆ ದಿನಾಂಕ ಘೋಷಣೆ ಆಗಲಿದೆ. ಆ ಬಳಿಕ ಪ್ರಚಾರ ಆರಂಭಿಸಲಾಗುತ್ತದೆ. ಜೂನ್ ಕೊನೆಗೆ ಸಿನಿಮಾ ತೆರೆಮೇಲೆ ಬರುವ ನಿರೀಕ್ಷೆಯಿದೆ.

More from Filmibeat

Read more about: ramcharan shivarajkumar tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X