10 ವರ್ಷ ಮಕ್ಳು ಬೇಡ ಅಂತ ಒಪ್ಪಂದವಾಗಿತ್ತು.. ಅದ್ಕೆ ಮಕ್ಳು ಮಾಡಿಕೊಳ್ಲಿಲ್ಲ: ಉಪಾಸನಾ ಸ್ಪಷ್ಟನೆ

ತೆಲುಗು ನಟ ರಾಮ್‌ಚರಣ್ ಹಾಗೂ ಉಪಾಸನಾ ದಂಪತಿ ಮದುವೆಯಾಗಿ 10 ವರ್ಷಗಳ ನಂತರ ಮನೆಗೆ ಹೊಸ ಅತಿಥಿಯನ್ನು ಸ್ವಾಗತಿಸಲು ನಿರ್ಧರಿಸಿದ್ದಾರೆ. ಇಷ್ಟ ವರ್ಷಗಳಲ್ಲಿ ಪದೇ ಪದೇ ಗುಡ್‌ ನ್ಯೂಸ್ ಇಲ್ವಾ? ಎನ್ನುವ ಪ್ರಶ್ನೆ ದಂಪತಿಗೆ ಎದುರಾಗುತ್ತಲೇ ಇತ್ತು. ಆದರೆ ಎಂದಿಗೂ ಆ ಬಗ್ಗೆ ಮಾತನಾಡುವ ಗೋಜಿಗೆ ಹೋಗಲಿಲ್ಲ. ಇದೇ ಮೊದಲ ಬಾರಿಗೆ ಉಪಾಸನಾ ಈ ಬಗ್ಗೆ ಸಂದರ್ಶನವೊಂದರಲ್ಲಿ ಪ್ರತಿಕ್ರಿಯಿಸಿದ್ದಾರೆ.

ಮದುವೆ, ಮಕ್ಕಳು ಅನ್ನೋದೆಲ್ಲಾ ವೈಯಕ್ತಿಕ ವಿಚಾರ. ಆದರೂ ಸಮಾಜದಲ್ಲಿ ಈ ವಿಚಾರಗಳ ಬಗ್ಗೆ ಪ್ರಶ್ನೆ ಎದುರಾಗುತ್ತಲೇ ಇರುತ್ತದೆ. ಸಮಾಜ ಬೇಕು ಅಂದಾಗ ನಾವು ಮಕ್ಕಳು ಮಾಡಿಕೊಳ್ಳಿಲಿಲ್ಲ. ನಮಗೆ ಬೇಕು ಎನಿಸಿದಾಗ ಮಾಡಿಕೊಳ್ಳುತ್ತಿದ್ದೇವೆ ಎಂದು ಉಪಾಸನಾ ಹೇಳಿದ್ದಾರೆ. ಕೆಲವೇ ದಿನಗಳ ಹಿಂದೆಯಷ್ಟೆ ಚಿರಂಜೀವಿ ತಮ್ಮ ಮನೆಗೆ ಹೊಸ ಅತಿಥಿ ಬರುತ್ತಿರುವ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಆ ನಂತರ ಉಪಾಸನಾ ಒಂದೆರಡು ಪೋಸ್ಟ್‌ಗಳಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ್ದರು. 'ನಾಟು ನಾಟು' ಗೀತೆಗೆ ಆಸ್ಕರ್ ಬಂದಾಗ ವಿದೇಶದ ಮಾಧ್ಯಮದ ಜೊತೆ ಚರಣ್ ಈ ವಿಚಾರ ಹಂಚಿಕೊಂಡಿದ್ದರು.

Ram Charans wife Upasana opens up on pregnancy 10 years after marriage

ಉಪಾಸನಾ ಸದ್ಯ ಈಗ 26 ವಾರಗಳ ಗರ್ಭಿಣಿ ಆಗಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡುತ್ತಾ "ಮದುವೆ ಆದಾಗಲೇ ನಾನು ಚರಣ್ 10 ವರ್ಷಗಳ ಕಾಲ ಮಕ್ಕಳು ಬೇಡ ಎಂದು ನಿರ್ಧರಿಸಿದ್ದೆವು. ನಾವು ತೆಗೆದುಕೊಂಡ ನಿರ್ಧಾರಕ್ಕೆ ಬದ್ದರಾಗಿ ಇದ್ದೆವು. ಈಗ ಇಬ್ಬರೂ ನಮ್ಮ ನಮ್ಮ ಕ್ಷೇತ್ರದಲ್ಲೇ ಉನ್ನತಮಟ್ಟದಲ್ಲಿ ಇದ್ದೇವೆ. ಆರ್ಥಿಕವಾಗಿ ಸ್ಥಿರಗೊಂಡಿದ್ದೇವೆ. ನಮ್ಮ ಮಕ್ಕಳನ್ನು ಯಾವುದೇ ಕೊರತೆ ಇಲ್ಲದೇ ಪೋಷಿಸಲು ಸಿದ್ಧರಿದ್ದೇವೆ. ಹಾಗಾಗಿ ಈಗ ಮಕ್ಕಳು ಮಾಡಿಕೊಳ್ಳುತ್ತಿದ್ದೇವೆ" ಎಂದಿದ್ದಾರೆ.

"ಮಕ್ಕಳ ವಿಷಯದಲ್ಲಿ ಸಮಾಜ, ಕುಟುಂಬದ ಸದಸ್ಯರ ಒತ್ತಡಕ್ಕೆ ನಾವು ಜಗ್ಗಲಿಲ್ಲ. ಇದು ನಬ್ಬಿಬ್ಬರ ನಡುವಿನ ಬಂಧ ಹಾಗೂ ಅರಿವನ್ನು ಹೆಚ್ಚು ಬಲಗೊಳಿಸಿದೆ. ಸಮಾಜದ ಬಗ್ಗೆ ತಲೆ ಕೆಡಿಸಿಕೊಳ್ಳದೇ ನಮಗೆ ಬೇಕು ಎನಿಸಿದಾಗ ತಂದೆ ತಾಯಿ ಆಗುತ್ತಿದ್ದೀವಿ" ಎಂದು ಹೇಳಿದ್ದಾರೆ. ಈ ಹಿಂದೆ ಕೂಡ ಉಪಾಸನಾ ಇದೇ ರೀತಿಯ ಕಾಮೆಂಟ್ಸ್ ಮಾಡಿದ್ದರು. ಮಕ್ಕಳನ್ನು ಹೆರುವುದು ದೊಡ್ಡ ಜವಾಬ್ದಾರಿ. ಅವರನ್ನು ಈ ಪ್ರಪಂಚಕ್ಕೆ ತಂದರೆ ಸಾಕಾಗದು. ಮಕ್ಕಳನ್ನು ಬೆಳೆಸಿ ದೊಡ್ಡವರನ್ನಾಗಿ ಮಾಡಲು, ಅವರು ಯಾವುದೇ ಕೊರತೆ ಇಲ್ಲದಂತೆ ಬೆಳೆಯಲು ಎಲ್ಲವನ್ನು ಹೊಂದಿಸಲು ಸಿದ್ಧವಾಗಿರಬೇಕು ಎಂದಿದ್ದರು.

ಸಾವಿರಾರು ಕೋಟಿ ರೂ. ಆಸ್ತಿ ಇರುವ ಉಪಾಸನಾ ಈ ರೀತಿ ಮಕ್ಕಳನ್ನು ಮಾಡಿಕೊಳ್ಳಲು ಅರ್ಥಿಕ ಕಾರಣ ನೀಡುತ್ತಿರುವುದು ಸಿಲ್ಲಿಯಾಗಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಈ 10 ವರ್ಷಗಳಲ್ಲಿ ದಂಪತಿಯ ಆಸ್ತಿ ಮೌಲ್ಯ ಸಾವಿರ ಕೋಟಿ ಹೆಚ್ಚಾಗಿರುವ ಅಂದಾಜಿದೆ. ಅದನ್ನು ಮುನ್ನ ಕೂಡ ಇವರು ಬಡವರಾಗಿರಲಿಲ್ಲ. ಉಪಾಸನೆ ದೃಷ್ಟಿಯಲ್ಲಿ ಮಕ್ಕಳ ಬೇಡಿಕೆ ಪೂರೈಸಲು ಉತ್ತಮ ಭವಿಷ್ ನೀಡಲು ಇನ್ನೆಷ್ಟು ಕೋಟಿ ಬೇಕಿತ್ತು. ಆ ಲೆಕ್ಕ ಹಾಕಿದತೆ ಜನ ಸಾಮಾನ್ಯರು ಮಕ್ಕಳನ್ನು ಹೆರುವ ಅರ್ಹತೆ ಕೂಡ ಇಲ್ಲ ಎನ್ನುವಂತಿದೆ. ಜೀವನದ ಗುರಿ ಸಾಧನೆಗಾಗಿ ಫ್ಯಾಮಿಲಿ ಪ್ಲಾನಿಂಗ್ ಅಂದರೆ ನಂಬಬಹುದು. ಆದರೆ ಆರ್ಥಿಕವಾಗಿ ಸಧೃಡರಾಗಲು ಎಂದರೆ ಮಾತ್ರ ನಗು ಬರುತ್ತದೆ ಎನ್ನುತ್ತಿದ್ದಾರೆ.

Ram Charans wife Upasana opens up on pregnancy 10 years after marriage

ಉಪಾಸನಾ ಈ 10 ವರ್ಷಗಳಲ್ಲಿ ಮಕ್ಕಳು ಮಾಡಿಕೊಳ್ಳದೇ ಇದ್ದಿದ್ದಕ್ಕೆ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಯಿತು. ಸಾಕಷ್ಟು ಟೀಕೆಗಳು, ವದಂತಿಗಳನ್ನು ಎದುರಿಸಬೇಕಾಯಿತು. ಸೋಶಿಯಲ್ ಮೀಡಿಯಾದಲ್ಲಂತೂ ಬೇರೆ ಸ್ಟಾರ್‌ ನಟ ಅಭಿಮಾನಿಗಳು ಇದೇ ವಿಚಾರವನ್ನಿಟ್ಟುಕೊಂಡು ಕೆಟ್ಟದಾಗಿ ಟ್ರೋಲ್ ಮಾಡುತ್ತಿದ್ದರು. ಸದ್ಯ ದಂಪತಿ ಅಭಿಮಾನಿಗಳಿಗೆ ಗುಡ್‌ ನ್ಯೂಸ್ ನೀಡಿದ್ದಾರೆ. ಶೀಘ್ರದಲ್ಲೇ ಉಪಾಸನಾ ಮಡಿಲಲ್ಲಿ ಮುದ್ದಾದ ಕಂದಮ್ಮ ಕಿಲ ಕಿಲ ನಗಲಿದೆ.

ಇನ್ನು ಉಪಾಸನಾ ಬಾಡಿ ಶೇಮಿಂಗ್ ಬಗ್ಗೆ ಸಂದರ್ಶನದಲ್ಲಿ ಮಾತನಾಡಿದ್ದರು. "ಮದುವೆಯಾದಾಗ ದಪ್ಪ ಇದ್ದೀನಿ, ಸುಂದರವಾಗಿ ಇಲ್ಲ ಎಂದು ಟೀಕೆ ಮಾಡಿದರು. ಮತ್ತೆ ಕೆಲವರು ರಾಮ್‌ಚರಣ್ ಕೇವಲ ಹಣಕ್ಕಾಗಿ ನನ್ನನ್ನು ಮದುವೆ ಆಗಿದ್ದಾನೆ ಎಂದು ಕೂಡ ಹೇಳಿದ್ದರು. ಅಂತಹವರ ಬಗ್ಗೆ ನಾನು ಮಾತನಾಡಲ್ಲ. ಯಾಕಂದರೆ ನಮ್ಮ ಬಗ್ಗೆ ಅವರಿಗೆ ಏನು ಗೊತ್ತೇಯಿಲ್ಲ. ಈಗ ಅವರ ಅಭಿಪ್ರಾಯ ಬದಲಾಗಿದೆ. ಆ ಸಮಯದಲ್ಲಿ ನಾನು ಕುಗ್ಗಲಿಲ್ಲ. ಧೈರ್ಯವಾಗಿ ಎಲ್ಲವನ್ನು ಎದುರಿಸಿದೆ. ಅದೇ ಟೀಕೆಗಳು ನನ್ನಲ್ಲಿ ಸಾಕಷ್ಟು ಧೈರ್ಯ ತುಂಬಿದೆ" ಎಂದಿದ್ದರು.

More from Filmibeat

English summary
Ram Charan's wife Upasana opens up on pregnancy 10 years after marriage. She Said 'I am very, very proud that I decided to become a mother when we wanted to, not when society wanted to'. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X